Rain News: ಮುಂದಿನ ಒಂದು ವಾರ ಭರ್ಜರಿ ಮಳೆ, ಯಾವ ಯಾವ ಜಿಲ್ಲೆಗಳಲ್ಲಿ ?ಇಲ್ಲಿದೆ ಮಾಹಿತಿ

IMG 20240704 WA0002

ಕರ್ನಾಟಕದಲ್ಲಿ ಮಳೆರಾಯನ (Rain) ಅಬ್ಬರ, ಮುಂದಿನ 168 ಗಂಟೆ ಭರ್ಜರಿ ಮಳೆಯಾಗುವ ಸಾಧ್ಯತೆ!

2024 ರಲ್ಲಿ ಮಳೆಯ ಪ್ರಮಾಣ ಅತೀ ಕಡಿಮೆ ಆಗಿದ್ದು, ರೈತರು(farmers), ಬೆಳೆಗಾರರು ಬಹಳ ಕಷ್ಟ ಎದುರುಸುತ್ತಿದ್ದಾರೆ.  ರಾಜ್ಯದಲ್ಲಿ ಹಲವಾರು ಕಡೆ ಅಲ್ಪ ಸ್ವಲ್ಪ ಮಳೆಯಾಗಿದೆ ಹೊರತು, ಇನ್ನುಳಿದ ಪ್ರದೇಶಗಳಲ್ಲಿ ಬೇಸಿಗೆಯ ವಾತವಾರಣ (summer season) ಸೃಷ್ಟಿಯಾಗಿದೆ. ಎಲ್ಲರೂ ಮಳೆ ಬರುವಿಕೆಗಾಗಿ ಕಾಯುತ್ತಿದ್ದಾರೆ. ಕುಡಿಯಲು, ಬೆಳೆ ಬೆಳೆಯಲು ಎಲ್ಲರೂ ಕಂಗಾಲಾಗಿದ್ದಾರೆ. ಇನ್ನು ನೋಡುವುದಾದರೆ, ಹಲವಾರು ಕಡೆಗಳಲ್ಲಿ ಮುಂಗಾರಿನ ಹೊಡೆತಕ್ಕೆ ಜನರು ತತ್ತರಿಸಿದ್ದಾರೆ, ಮಳೆಗೆ ಜನ ಜೀವನ ಅಸ್ತವ್ಯಸ್ತವಾಗಿದೆ. ಮಳೆ ನಿಲ್ಲುವಿಕೆಗಾಗಿ ಕಾಯುತ್ತಿದ್ದಾರೆ. ಆದರೆ ಇದೀಗ ಮುಂದಿನ 7 ದಿನಗಳ (7days) ಕಾಲ ಕರ್ನಾಟಕದಲ್ಲಿ ಮಳೆಯ ಅಬ್ಬರ ಇರಲಿದ್ದು, ಭರ್ಜರಿ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

168 ಗಂಟೆ ಕರ್ನಾಟಕದಲ್ಲಿ ಮಳೆರಾಯನ ಅಬ್ಬರ :

ಈಗಾಗಲೇ ಹೇಳಿದಂತೆ ಮಳೆ ಈ ವರ್ಷದಲ್ಲಿ ಮಳೆ ಕಡಿಮೆಯಾಗಿದ್ದು, ಎಲ್ಲೆಲ್ಲೂ ಮಳೆಯ ಮಾತುಕತೆ ನಡೆದಿದೆ. ಮಳೆ ಯಾವಾಗ ಬರುತ್ತದೆ ಎಂದು ಕಾತುರದಿಂದ ಕಾಯುತ್ತಿದ್ದಾರೆ. ಮುಂದಿನ 168 ಗಂಟೆ ಕರ್ನಾಟಕದಲ್ಲಿ ಮಳೆರಾಯನ ಅಬ್ಬರ ಕಂಡು ಬರಲಿದೆ. ಭರ್ಜರಿಯಾಗಿ ಮಳೆಯಾಗುವ ಸಾಧ್ಯತೆ ಹೆಚ್ಚಿದೆ. ಮಳೆ, ಬೆಳೆ ಇಲ್ಲದೆ ಇಷ್ಟು ದಿನ ಒಣಗಿ ಹೋಗಿದ್ದ, ಬರಡು ಭೂಮಿ ಹಚ್ಚ ಹಸುರಿನಿಂದ ಕಂಗೊಳಿಸಲಿದೆ. ಮಳೆ ಬಂದರೆ, ಕರ್ನಾಟಕದ ಜಲಾಶಯಗಳಿಗೆ ಇದೀಗ ಭರ್ಜರಿ ನೀರು ಹರಿದು ಬರುತ್ತದೆ. ಬತ್ತಿ ಹೋಗಿದ್ದ ನದಿಗಳು ಮೈದುಂಬಿ ಹರಿಯುತ್ತವೆ.

ಕರ್ನಾಟಕದಲಲ್ಲಿ ಮುಂಗಾರಿನ ಮಳೆಗೆ (monsoon rain) ತತ್ತರಿಸಿದ ಜನಜೀವನ :

ಕರ್ನಾಟಕದಲ್ಲಿ ಈಗಾಗಲೇ ಮುಂಗಾರು ಮುತ್ತಿಗೆ ಹಾಕಿದ್ದು ಕರಾವಳಿ, ಮಲೆನಾಡು ಸೇರಿದಂತೆ ಹಲವು ಕಡೆ ಭಾರಿ ಮಳೆಯಾಗಿದೆ. ಕಳೆದ ಹಲವು ದಿನಗಳಿಂದ ನಿರಂತರವಾಗಿ ಮಳೆ ಬೀಳುತ್ತಿರುವ ಕಾರಣ ಜನರು ಕೂಡ ಕಂಗಾಲಾಗಿದ್ದಾರೆ. ಜನಜೀವನ ಭಾರಿ ಮಳೆಗೆ ಅಸ್ತವ್ಯಸ್ತವಾಗಿ ಹೋಗಿದೆ. ಈ ಸಮಯದಲ್ಲೇ ಮಳೆ ನಿಲ್ಲಬಹುದು ಅಂತಾ ಕಾಯುತ್ತಿದ್ದ ಜನರಿಗೆ ಇದೀಗ ಮತ್ತೊಂದು ಸುದ್ದಿ ಸಂಚಲನ ಸೃಷ್ಟಿಯಾಗಿದೆ.

ಕರ್ನಾಟಕದ ಹಲವು ಜೆಲ್ಲೆಗಳಿಗೆ ಮಳೆಯ ಬಗ್ಗೆ ಮುನ್ಸೂಚನೆ (forecast) ನೀಡಲಾಗಿದೆ :

ಕರ್ನಾಟಕದ ಹಲವು ಕಡೆ ಭಾರಿ ಮಳೆಯಾಗಲಿದ್ದು, ಹೀಗಾಗಿ ಮುಂದಿನ 168 ಗಂಟೆ ಕಾಲ ಅಂದ್ರೆ ಬರೋಬ್ಬರಿ 7 ದಿನ ಕಾಲ ನಿರಂತರವಾಗಿ ಭಾರಿ ಮಳೆ ಬಗ್ಗೆ ಮುನ್ಸೂಚನೆ ನೀಡಲಾಗಿದೆ. ಕರ್ನಾಟಕದ  ಯಾವೆಲ್ಲ ಜಿಲ್ಲೆಗಳಲ್ಲಿ ಮಳೆಯಾಗುತ್ತದೆ ಎಂಬುದರ ಬಗ್ಗೆ ಮಾಹಿತಿಯನ್ನು ಈ ಕೆಳಗೆ ತಿಳಿದು ಕೊಳ್ಳೋಣ ಬನ್ನಿ.

ಹವಾಮಾನ ಇಲಾಖೆಯಿಂದ (weather department) ಮುನ್ಸೂಚನೆ ನೀಡಿದ್ದು, ಯೆಲ್ಲೋ ಅಲರ್ಟ್ (yellow alert) ಘೋಷಣೆ :

ಹವಾಮಾನ ಇಲಾಖೆ ಈಗ ಕರಾವಳಿ ಕರ್ನಾಟಕ ಸೇರಿದಂತೆ ಮಲೆನಾಡು, ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭರ್ಜರಿ ಮಳೆ ಬೀಳಲಿದೆ ಎಂಬ ಮುನ್ಸೂಚನೆ ನೀಡಿದೆ. ಮುಂದಿನ 7 ದಿನಗಳು ನಿರಂತರವಾಗಿ ಕರಾವಳಿ & ಮಲೆನಾಡು ಭಾಗದಲ್ಲಿ ಮಳೆ ಆಗಲಿದೆ ಎಂದು ಹವಾಮಾನ ತಜ್ಞರು ಎಚ್ಚರಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಈ ಸಮಯದಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.

ಈ ಮಾಹಿತಿಗಳನ್ನು ಓದಿ

 


ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!