ರಾಜ್ಯದಲ್ಲಿ ಕೆಲ ದಿನ ಸತತವಾಗಿ ಅಬ್ಬರಿಸಿದ ಮಳೆ ಇದೀಗ ಎಲ್ಲಾ ಭಾಗಗಳಲ್ಲಿ ಕಡಿಮೆಯಾಗಿದೆ. ಆದರೆ ಕೆಲವು ಜಿಲ್ಲೆಗಳಲ್ಲಿ ಮತ್ತೆ ಮಳೆ ಅಬ್ಬರ ಆರಂಭವಾಗಲಿದೆ. ರಾಜ್ಯದ ಬಹುತೇಕ ಕಡೆಗಳಲ್ಲಿ ಬರುವ ಡಿಸೆಂಬರ್ 17ರಿಂದ ಮೂರು ದಿನ ಮತ್ತೆ ಜೋರಾಗಿ ಮಳೆ ಬೀಳುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ಕೊಟ್ಟಿದೆ.
Karnataka weather Updates : ಕರ್ನಾಟಕ ಹವಾಮಾನ ವರದಿ
ರಾಜ್ಯದಲ್ಲಿ ಮುಂದಿನ ಎರಡು ದಿನಗಳ ಕಾಲ ಆರು ಜಿಲ್ಲೆಗಳಲ್ಲಿ ಊರುದಿಂದ ಸಾಧಾರಣ ಮಳೆ ಆಗಲಿದೆ ನಂತರ ಕೆಲವು ದಿನ ತಣ್ಣಗಾಗುವ ಮಳೆ, ಇದೇ ಡಿಸೆಂಬರ್ 17 ರಿಂದ ಮತ್ತೆ ವರುಣನ ಆರ್ಭಟ ಶುರುವಾಗಲಿದೆ ಎಂದು ಐಎಂಡಿ ಮಾಹಿತಿ ನೀಡಿದೆ.
ಎಲ್ಲೆಲ್ಲಿ ಮಳೆಯ ಅಬ್ಬರ :
ದಕ್ಷಿಣ ಒಳನಾಡು ಜಿಲ್ಲೆಗಳಾದ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆ, ಚಾಮರಾಜನಗರ, ಚಿಕ್ಕಮಗಳೂರು, ಮೈಸೂರು ಹಾಸನ ರಾಮನಗರ ಜಿಲ್ಲೆಗಳಲ್ಲಿ ಮಳೆ ಆಗಲಿದೆ. ಕೆಲವು ಕಡೆಗಳಲ್ಲಿ ಸಾಧಾರಣಕ್ಕಿಂತ ಅತ್ಯಧಿಕ ಪ್ರಮಾಣದ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ. ರಾಜ್ಯದಲ್ಲಿ ಅಲ್ಲಲ್ಲಿ ಹಿಂಗಾರು ಮಳೆಯ ಜೊತೆಗೆ ಚಳಿ ಹೆಚ್ಚಾಗುವ ಮುನ್ಸೂಚನೆ ದೊರೆತಿದೆ ಉತ್ತರ ಒಳನಾಡಿನಲ್ಲಿ ಈ ವಾರ ಪೂರ್ತಿ ಶುಷ್ಕ ವಾತಾವರಣವೇ ಇರಲಿದೆ. ಆದರೂ ಸಹಿತ ಈ ಭಾಗಗಳಲ್ಲಿ ಚಳಿಯ ಪ್ರಮಾಣ ಹೆಚ್ಚಾಗಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ರಾಜ್ಯದಲ್ಲಿ ಚಳಿಯ ಪ್ರಮಾಣ ಹೆಚ್ಚಳ :
ಕರ್ನಾಟಕದಲ್ಲಿ ಇನ್ನೇನು ಬಹು ಭಾಗಗಳಲ್ಲಿ ಚಳಿಯ ವಾತಾವರಣ ಕಂಡು ಬಂದಿದ್ದು. ಹಾವೇರಿ ಧಾರವಾಡ ವಿಜಯಪುರ ಗದಗ ಕೊಪ್ಪಳ ರಾಯಚೂರು ಭಾಗಗಳಲ್ಲಿ 17 ಡಿಗ್ರಿ ಸೆಲ್ಸಿಯಸ್ ಗಿಂತಲೂ ಕಡಿಮೆ ತಾಪಮಾನ ದಾಖಲಾಗಿದ್ದು. ಚಿಕ್ಕಮಗಳೂರಿನಲ್ಲಿ 15 ಡಿಗ್ರಿ ಸೆಲ್ಸಿಯಸ್ ಮತ್ತು ವಿಜಯಪುರದಲ್ಲಿ 12 ಡಿಗ್ರಿ ಸೇಲ್ಸಿಯಸ್ ದಾಖಲಾಗಿದೆ ಈ ಮೂಲಕ ಬೆಂಗಳೂರಿನ ರಾಜ್ಯದ ಒಳನಾಡು ಭಾಗಗಳಲ್ಲಿ ಚಳಿ ಬರುತ್ತಿದೆ ವಾತಾವರಣದಲ್ಲಿ ತಂಪು ಹೆಚ್ಚಾಗುತ್ತಿದೆ ಎಂದು ವರದಿ ತಿಳಿಸಿದೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
11.12.23 ರ 08.30 AM ನಿಂದ 12.12.23 ರ 08.30 AM ವರೆಗಿನ ಜಿಲ್ಲಾವಾರು ಸರಾಸರಿ ಕನಿಷ್ಠ ಮತ್ತು ಗರಿಷ್ಠ ಆರ್ದ್ರತೆ (%) ಕೋಷ್ಟಕ.
District-wise Average Minimum and Maximum Relative Humidity (%) table with maps from 08.30 AM of 11.12.23 to 08.30 AM of 12.12.23. pic.twitter.com/uZ9Y3DgDKg— Karnataka State Natural Disaster Monitoring Centre (@KarnatakaSNDMC) December 12, 2023
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.