ರಾಜ್ಯದ ಈ ವರ್ಗದವರಿಗೆ ಎಲ್ಲಾ ಜಿಲ್ಲೆಗಳಲ್ಲಿ ಪಡಿತರ ಚೀಟಿ ವಿತರಣೆ ಆರಂಭ.! ಇಲ್ಲಿದೆ ಮಾಹಿತಿ

IMG 20241106 WA0000

ಹೊಸ ರೇಷನ್ ಕಾರ್ಡ್​(New Ration Card) ಮಾಡಿಸಲು ಕಾಯುತ್ತಿದ್ದೀರಾ? ಅರ್ಜಿ ಹೇಗೆ ಸಲ್ಲಿಸಬೇಕು ಇಲ್ಲಿದೆ ಸಂಪೂರ್ಣ ಮಾಹಿತಿ.

ಇಂದು ನಾವು ಯಾವುದೇ ಯೋಜನೆಯ ಲಾಭ ಪೆಡದುಕೊಳ್ಳಬೇಕು ಎಂದರೆ ರೇಷನ್ ಕಾರ್ಡ್ ಮುಖ್ಯವಾಗಿ ಬೇಕಾಗಿರುವ ದಾಖಲೆ(Document). ಹಲವಾರು ರೀತಿಯ ಪ್ರಯೋಜನಗಳನ್ನು ರೇಷನ್ ಕಾರ್ಡ್( Ration Card) ಮೂಲಕ ಪಡೆಯುತೇವೆ. ಇಂದು ಎಲ್ಲರ ಮನೆಗಳಲ್ಲೂ  ಪಡಿತರ ಚೀಟಿ ಗಳನ್ನು (Ration card) ಕಾಣಬಹುದು. ಪಡಿತರ ಚೀಟಿ ಒಂದು ಆಧಾರ್(Adhar) ಆಧಾರಿತ ರಾಷ್ಟ್ರೀಯ ಪಡಿತರ ಕಾರ್ಡ್ ಪೋರ್ಟಬಿಲಿಟಿ (national ration card portability) ಯೋಜನೆಯಾಗಿದೆ. ಇನ್ನು ಭಾರತದಲ್ಲಿ ವಾಸಿಸುವ ಎಲ್ಲರಿಗೂ ಆಹಾರದ ಕೊರತೆಯನ್ನು ನೀಗಿಸುವ ಸಲುವಾಗಿ ರೇಷನ್ ಕಾರ್ಡ್ ಗಳನ್ನು ನೀಡಲಾಗಿದೆ. ಆದರೆ ಕೆಲವರ ಬಳಿ ರೇಷನ್ ಕಾರ್ಡ್ ಇಲ್ಲ ಅಂತವರು ರೇಷನ್ ಕಾರ್ಡ್ ಮಾಡಿಸಲು ಕಾಯುತ್ತಿರುತ್ತಾರೆ. ಈ ಬಾರಿ ಸರ್ಕಾರವು ಕಾರ್ಮಿಕರಿಗೆ ಗುಡ್ ನ್ಯೂಸ್ ತಿಳಿಸಿದೆ. ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವುದು ಹೇಗೆ? ಯಾವೆಲ್ಲ ದಾಖಲೆಗಳು ಬೇಕು ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಕಾರ್ಮಿಕರಿಗೆ ರೇಷನ್ ಕಾರ್ಡ್ ಪಡೆಯಲು ಅವಕಾಶ :

ಇಂದು ಸಾಕಷ್ಟು ಜನರು ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಹಾಕಲು ಕಾಯುತ್ತಿದ್ದಾರೆ. ಈಗಾಗಲೇ ರೇಷನ್ ಕಾರ್ಡ್ ತಿದ್ದುಪಡಿಗೆ ಸುಧೀರ್ಘವಾದ ಅವಕಾಶವನ್ನು ಸರ್ಕಾರ ನೀಡಿತ್ತು. ಆದರೆ ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಹಾಕಲು ಅವಕಾಶ ನೀಡಿರಲಿಲ್ಲ ಹಾಗಾಗಿ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕಲು ಅರ್ಹ ಇ – ಶ್ರಮ್ ನೊಂದಾಯಿತ ಕಾರ್ಮಿಕರಿಗೆ ಆದ್ಯತಾ ಪಡಿತರ ಚೀಟಿ ವಿತರಣೆ ಕಾರ್ಯ ಆರಂಭಗೊಂಡಿದೆ. ರಾಜ್ಯದ ಎಲ್ಲಾ ಜಿಲ್ಲೆಯ ಕಾರ್ಮಿಕರು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ದಾಖಲೆಗಳು (Documents) :

ಇ – ಶ್ರಮ್ ಕಾರ್ಡ್
ಜಾತಿ ಪ್ರಮಾಣ ಪತ್ರ(caste certificate).
ಆದಾಯ ಪ್ರಮಾಣ ಪತ್ರ(Income certificate).
ಜನನ ಪ್ರಮಾಣ ಪತ್ರ(Birth Certificate).
ಆಧಾರ್ ಕಾರ್ಡ್(Adhar card).
ಪಾಸ್ಪೋರ್ಟ್ ಸೈಜ್ ಫೋಟೋ.
ಮನೆಯ ಸದಸ್ಯರ ಬಗ್ಗೆ ಮಾಹಿತಿ.
ಮತದಾರರ ಗುರುತಿನ ಚೀಟಿ(Voter ID).
ಖಾಯಂ ನಿವಾಸದ ಪತ್ರ.
ಮೊಬೈಲ್ ಸಂಖ್ಯೆ.
ಡ್ರೈವಿಂಗ್ ಲೈಸೆನ್ಸ್.

ರೇಷನ್ ಕಾರ್ಡ್ ಪಡೆಯುವುದು ಹೇಗೆ?: 

ಅರ್ಹ ಕಾರ್ಮಿಕರು ಆದ್ಯತಾ ಪಡಿತರ ಚೀಟಿ ಪಡೆಯಲು ನಿಮ್ಮ ಹತ್ತಿರದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯನ್ನು ಸಂಪರ್ಕಿಸಿ.

ಗಮನಿಸಿ:

ಅರ್ಜಿದಾರನಿಗೆ ಈ ಕುರಿತಂತೆ ಯಾವುದೇ  ರೀತಯ ಗೊಂದಲಗಳು ಇದ್ದರೆ ಕರ್ನಾಟಕ ಪಡಿತರ ಚೀಟಿ ಇಲಾಖೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ, ಕರ್ನಾಟಕ ಪಡಿತರ ಚೀಟಿ ಸಹಾಯವಾಣಿ ಸಂಖ್ಯೆ ಟೋಲ್ ಫ್ರೀ  : 18004259339 ಮತ್ತು ಸಹಾಯವಾಣಿ ಸಂಖ್ಯೆ: 1967 ಗೆ ಕರೆ ಮಾಡಬಹುದು.

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

 

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!