ಫೆಬ್ರವರಿ 15ರಿಂದ ಇ-ಕೆವೈಸಿ(E-KYC) ಇಲ್ಲದ ಫಲಾನುಭವಿಗಳಿಗೆ ರೇಷನ್ ಸಿಗುವುದಿಲ್ಲ: ಲಕ್ಷಾಂತರ ಜನರಿಗೆ ಶಾಕ್
ಭಾರತ ಸರ್ಕಾರವು ಹಸಿವು ನಿವಾರಣೆಗಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ಜನರ ಬದುಕನ್ನು ಬೆಂಬಲಿಸುವ ಉದ್ದೇಶದಿಂದ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಇವುಗಳಲ್ಲಿ ಪ್ರಮುಖವಾದದು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (National Food Security Act, NFSA). ಈ ಕಾಯ್ದೆ ಮೂಲಕ, ದೇಶದ ಕೋಟ್ಯಂತರ ಜನರು ಕಡಿಮೆ ದರದಲ್ಲಿ ಮತ್ತು ಕೆಲವೊಮ್ಮೆ ಉಚಿತವಾಗಿ ಆಹಾರ ಧಾನ್ಯಗಳನ್ನು ಪಡೆಯುತ್ತಿದ್ದಾರೆ. ಈ ಯೋಜನೆಯ ಲಾಭವನ್ನು ಆರ್ಥಿಕವಾಗಿ ಬಡತನ ರೇಖೆಗೆ ಕೆಳಗಿರುವ ಕುಟುಂಬಗಳು ಮತ್ತು ಹಿಂದುಳಿದ ವರ್ಗಗಳು ಪಡೆದುಕೊಳ್ಳುತ್ತಿವೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಆದರೆ, ಈ ಯೋಜನೆಯ ದುರೋಪಯೋಗವನ್ನು ತಡೆಯಲು ಮತ್ತು ಸಹಾಯವನ್ನು ಅರ್ಹ ಫಲಾನುಭವಿಗಳಿಗೆ ಮಾತ್ರ ನೀಡುವ ಉದ್ದೇಶದಿಂದ ಸರ್ಕಾರವು ಹೊಸ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇವುಗಳಲ್ಲಿ ಇತ್ತೀಚಿನ ಮಾರ್ಗಸೂಚಿಯ ಪ್ರಕಾರ, ಪಡಿತರ ಚೀಟಿ ಹೊಂದಿರುವ ಫಲಾನುಭವಿಗಳು ಇ-ಕೆವೈಸಿ (e-KYC) ಪ್ರಕ್ರಿಯೆ ಕಡ್ಡಾಯವಾಗಿ ಪೂರ್ಣಗೊಳಿಸಬೇಕಾಗಿದೆ. ಇ-ಕೆವೈಸಿ (e-KYC) ಪ್ರಕ್ರಿಯೆಯನ್ನು ಹೇಗೆ ಮಾಡುವುದು? ಇ-ಕೆವೈಸಿ (e-KYC) ಮಾಡಿಸಲು ಕೊನೆಯ ದಿನಾಂಕ ಯಾವಾಗ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಇ-ಕೆವೈಸಿ ಮಾಡಿಸುವುದು ಕಡ್ಡಾಯ:
ಫಲಾನುಭವಿಗಳಿಗೆ ನಿಗದಿತ ದಿನಾಂಕದೊಳಗೆ ಇ-ಕೆವೈಸಿ ಮಾಡಿಸಿಕೊಳ್ಳಬೇಕು. ಇ-ಕೆವೈಸಿ ಮಾಡಿಸದಿದ್ದಲ್ಲಿ ಪಡಿತರ ವಿತರಣೆ ಸ್ಥಗಿತಗೊಳ್ಳಲಿದೆ. ಫೆಬ್ರವರಿ 15, 2025(February 15, 2025) ರಿಂದ ಇ-ಕೆವೈಸಿ ಪ್ರಕ್ರಿಯೆ ಪೂರೈಸದ ಫಲಾನುಭವಿಗಳಿಗೆ ಪಡಿತರ ವಿತರಣೆ ಸ್ಥಗಿತಗೊಳ್ಳಲಿದೆ. ಈ ನಿಯಮವು ರಾಷ್ಟ್ರೀಯ ಮಟ್ಟದಲ್ಲಿ ಅನ್ವಯವಾಗಲಿದ್ದು, ಫಲಾನುಭವಿಗಳಲ್ಲಿ ಆತಂಕವನ್ನು ಉಂಟುಮಾಡಿದೆ. ಸರ್ಕಾರವು ಪಡಿತರ ಚೀಟಿದಾರರಿಗೆ ಈಗಾಗಲೇ ಮುನ್ನೋಟ ಸೂಚನೆಗಳನ್ನು ನೀಡಿದ್ದು, ಇ-ಕೆವೈಸಿ ಪ್ರಕ್ರಿಯೆಯನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ಒತ್ತಾಯಿಸಿದೆ.
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಮತ್ತು ಇ-ಕೆವೈಸಿ ಮಹತ್ವವೇನು?:
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ(National Food Security Act) ದೇಶದ ಸುಮಾರು 67% ಜನಸಂಖ್ಯೆಯನ್ನು ಒಳಗೊಂಡಿದೆ. ಈ ಯೋಜನೆಯಡಿ ಬಡ ಕುಟುಂಬಗಳಿಗೆ ತಿಂಗಳಿಗೆ ತಲಾ 5 ಕಿಲೋ ಆಹಾರ ಧಾನ್ಯಗಳನ್ನು ಕೇವಲ 1-3 ರೂ. ದರದಲ್ಲಿ ನೀಡಲಾಗುತ್ತಿದೆ. ಈ ಲಾಭವನ್ನು ಸರಿಯಾಗಿ ಬಡ ಜನರಿಗೂ, ಅರ್ಹ ಫಲಾನುಭವಿಗಳಿಗೂ ಮಾತ್ರ ವಿತರಿಸಲು ಇ-ಕೆವೈಸಿ ಒಂದು ತಂತ್ರಜ್ಞಾನದ ನವೀನ ಪ್ರಯೋಗವಾಗಿದೆ. ಇದು ಫಲಾನುಭವಿಗಳ ದತ್ತಾಂಶವನ್ನು ಆಧಾರ್ ಕಾರ್ಡ್(Adhar card) ಜೊತೆ ಸಂಪರ್ಕಿಸಲು ಮತ್ತು ವೈಯಕ್ತಿಕ ವಿವರಗಳನ್ನು ನಿಖರವಾಗಿ ಪರಿಶೀಲಿಸಲು ಸಹಾಯ ಮಾಡುತ್ತದೆ.
ಇ-ಕೆವೈಸಿ ಪ್ರಕ್ರಿಯೆ ಹೇಗೆ ಮಾಡುವುದು?:
ಇ-ಕೆವೈಸಿ ಪ್ರಕ್ರಿಯೆ ಅನುಸರಿಸಲು ಫಲಾನುಭವಿಗಳು ಹತ್ತಿರದ ಪಡಿತರ ಕೇಂದ್ರ ಅಥವಾ ಅಹಾರ ಪೂರೈಕೆ ಇಲಾಖೆ ಕಚೇರಿಗೆ ಭೇಟಿ ನೀಡಬಹುದು. ಪ್ರಕ್ರಿಯೆಗಾಗಿ ನಿಮಗೆ ಆಧಾರ್ ಕಾರ್ಡ್ ಹಾಗೂ ಪಡಿತರ ಚೀಟಿಯ ವಿವರಗಳು ಅಗತ್ಯವಿರುತ್ತದೆ. ಅಥವಾ ಆನ್ಲೈನ್(online) ಮುಖಾಂತರವೂ ಇ-ಕೆವೈಸಿ ಮಾಡಿಸಬಹುದು.
ಆನ್ಲೈನ್ ಪ್ರಕ್ರಿಯೆ:
1. ಪ್ರತಿ ರಾಜ್ಯ ಸರ್ಕಾರದ ಆಹಾರ ಮತ್ತು ಪಡಿತರ ಇಲಾಖೆಯ https://uidai.gov.in/en/ಅಧಿಕೃತ ವೆಬ್ಸೈಟ್ಗೆ ಲಾಗಿನ್ ಮಾಡಿ.
2. e-KYC Link ಕ್ಲಿಕ್ ಮಾಡಿ.
3. ಪಡಿತರ ಚೀಟಿಯ ಸಂಖ್ಯೆ ಮತ್ತು ಆಧಾರ್ ಸಂಖ್ಯೆ ನಮೂದಿಸಿ.
4. ಒಟಿಪಿ(otp) ದೃಢೀಕರಣದ ಮೂಲಕ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ತಿಗೊಳಿಸಿ.
ಇ-ಕೆವೈಸಿ ಪ್ರಕ್ರಿಯೆ ಅಗತ್ಯವಿದ್ದರೂ, ಹಲವಾರು ಗ್ರಾಮೀಣ ಪ್ರದೇಶಗಳಲ್ಲಿ(rural areas) ಜನರು ತಾಂತ್ರಿಕ ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಇದನ್ನು ಮನಗಂಡು ಸರ್ಕಾರ ಸ್ಥಳೀಯ ಕಾರ್ಯಕರ್ತರ ಸಹಾಯದಿಂದ ಪ್ರಕ್ರಿಯೆಯನ್ನು ಸುಗಮಗೊಳಿಸಲು ಮುಂದಾಗಿದೆ. ಇನ್ನು, ಫಲಾನುಭವಿಗಳು ಫೆಬ್ರವರಿ 15ರ ಗಡುವಿಗೆ ಮುನ್ನ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಮೂಲಕ ಸರ್ಕಾರದ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು.
ಭಾರತ ಸರ್ಕಾರದ ಹೊಸ ಮಾರ್ಗಸೂಚಿ ಬಡವರ ಕಲ್ಯಾಣಕ್ಕಾಗಿ ನಡೆಸಲಾಗುತ್ತಿರುವ ಮುಖ್ಯ ಪ್ರಯತ್ನಗಳಲ್ಲಿ ಒಂದಾಗಿದೆ. ಆದಾಗ್ಯೂ, ಫಲಾನುಭವಿಗಳು ಸರ್ಕಾರದ ಸೂಚನೆಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸದೇ ಇದ್ದರೆ, ಅವರಿಗೆ ಪಡಿತರ ಸಿಗುವುದಿಲ್ಲ. ಈ ಕಾರಣದಿಂದಾಗಿ ಫಲಾನುಭವಿಗಳು ಈ ಮಾರ್ಗಸೂಚಿಯನ್ನು ಗಂಭೀರವಾಗಿ ತೆಗೆದುಕೊಳ್ಳಿ ಮತ್ತು ಇ-ಕೆವೈಸಿ ಪ್ರಕ್ರಿಯೆಯನ್ನು(E-KYC process) ಶೀಘ್ರವಾಗಿ ಪೂರ್ಣಗೊಳಿಸಿ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.