ರೇಷನ್ ಕಾರ್ಡ್ (Ration card) ತಿದ್ದುಪಡಿಗೆ ಮತ್ತೊಂದು ಅವಕಾಶ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವಾಗ?
ಕೇಂದ್ರ ಸರ್ಕಾರ (central government) ಅಥವಾ ರಾಜ್ಯ ಸರ್ಕಾರದಿಂದ (state government) ಯಾವುದೇ ಯೋಜನೆಯ ಪ್ರಯೋಜನವನ್ನು ಪಡೆಯಬೇಕೆಂದರೆ ರೇಷನ್ ಕಾರ್ಡ್ ಬಹಳ ಮುಖ್ಯವಾಗಿರುವ ದಾಖಲೆಗಳಲ್ಲಿ ಒಂದು. ಸಾಕಷ್ಟು ಮನೆಗಳಲ್ಲಿ ರೇಷನ್ ಕಾರ್ಡ್ ಗಳಲ್ಲಿ ಕೆಲವೊಂದು ತಪ್ಪುಗಳು ಆಗಿರಬಹುದು ಉದಾಹರಣೆಗೆ ಅವರ ಹೆಸರು, ಊರು, ಈ ರೀತಿಯಾದಂತಹ ದೋಷಗಳನ್ನು ತಿದ್ದುಪಡಿ ಮಾಡಿಕೊಳ್ಳಲು ಇದೀಗ ಸರ್ಕಾರ ಅವಕಾಶವನ್ನು ಕಲ್ಪಿಸಿಕೊಟ್ಟಿದೆ. ಇಷ್ಟು ದಿನ ಹಲವರು ಪಡಿತರ ಚೀಟಿ ತಿದ್ದುಪಡಿಗಾಗಿ ( Ration card correction ) ಕಾಯುತ್ತಿದ್ದರು. ಅಂತವರಿಗೆ ಇದು ಶುಭ ಸುದ್ದಿಯಾಗಿದೆ. ನಿಮ್ಮ ಪಡಿತರ ಚೀಟಿಯಲ್ಲಿ ಹೊಸ ಸದಸ್ಯರ ಸೇರ್ಪಡೆ, ವಿಳಾಸ ಬದಲಾವಣೆ (address change) ಸೇರಿದಂತೆ ಎಲ್ಲಾ ರೀತಿಯಲ್ಲಿ ತಿದ್ದುಪಡಿ ಮಾಡಲು ಇದೀಗ ಅವಕಾಶ ಕಲ್ಪಿಸಲಾಗಿದೆ. ಪಡಿತರ ಚೀಟಿಯಲ್ಲಿ ತಿದ್ದುಪಡಿ ಮಾಡಲು ಅರ್ಜಿಯನ್ನು ಹೇಗೆ ಸಲ್ಲಿಸಬೇಕು? ಇದಕ್ಕೆ ಬೇಕಾಗುವ ದಾಖಲೆಗಳು ಯಾವುವು? ಕೊನೆಯ ದಿನಾಂಕ ಯಾವಾಗ? ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ರೇಷನ್ ಕಾರ್ಡ ಹೊಂದಿರುವ ಗ್ರಾಹಕರು ಅರ್ಜಿ ಸಲ್ಲಿಸುವ ಮೂಲಕ ತಿದ್ದುಪಡಿ ಮಾಡಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ. ಡಿಸೆಂಬರ್ 31 (December 31) ರವರೆಗೆ ಅರ್ಜಿಗಳನ್ನು ಸಲ್ಲಿಸಲು ಅವಕಾಶವಿದೆ. ಹೊಸ ಪಡಿತರ ಚೀಟಿ(New Ration Card)ಯಲ್ಲಿ ವಿಳಾಸ ಬದಲಾವಣೆ, ಹೊಸ ಸದಸ್ಯರ ಸೇರ್ಪಡೆ, ಸೇರಿದಂತೆ ಯಾವುದೇ ರೀತಿಯಲ್ಲಿ ಅಪ್ಡೇಟ್ ಮಾಡಲು ಇದೀಗ ರಾಜ್ಯ ಸರ್ಕಾರ ಅವಕಾಶ ಮಾಡಿಕೊಟ್ಟಿದೆ.
ತಿದ್ದುಪಡಿ ಮಾಡಬಹುದಾದ ವಿಷಯಗಳು:
ಹೊಸ ಸದಸ್ಯರ(new members) ಸೇರ್ಪಡೆ: ಕುಟುಂಬದಲ್ಲಿ ಹೊಸದಾಗಿ ಜನಿಸಿದ ಮಕ್ಕಳು, ಮದುವೆಯಾದ ವ್ಯಕ್ತಿಗಳು ಅಥವಾ ಇತರ ಸದಸ್ಯರನ್ನು ಪಡಿತರ ಚೀಟಿಗೆ ಸೇರಿಸಬಹುದು.
ಹೆಸರು ತೆಗೆದುಹಾಕುವುದು: ಮರಣ ಹೊಂದಿದ ಸದಸ್ಯರು, ಮದುವೆಯಾಗಿ ಬೇರೆ ಮನೆಗೆ ಹೋಗಿರುವವರು ಅಥವಾ ಕುಟುಂಬದಿಂದ ಬೇರ್ಪಟ್ಟವರು ಇದ್ದರೆ, ಅವರ ಹೆಸರನ್ನು ಪಡಿತರ ಚೀಟಿಯಿಂದ ತೆಗೆದುಹಾಕಬಹುದು.
ವಿಳಾಸ ಬದಲಾವಣೆ: ಹೊಸ ಸ್ಥಳಕ್ಕೆ ಸ್ಥಳಾಂತರವಾದಲ್ಲಿ, ಪಡಿತರ ಚೀಟಿಯಲ್ಲಿರುವ ವಿಳಾಸವನ್ನು ಬದಲಾಯಿಸಬಹುದು.
ನ್ಯಾಯಬೆಲೆ ಅಂಗಡಿ ಬದಲಾವಣೆ: ಪಡಿತರ ಪಡೆಯುವ ಅಂಗಡಿಯನ್ನು ಬದಲಾಯಿಸಲು ಅವಕಾಶವಿದೆ.
ಇದರ ಜೊತೆಯಲ್ಲಿ ಆಧಾರ್ ಇ -ಕೆವೈಸಿ ಹಾಗೂ ಹೆಸರು ತಿದ್ದುಪಡಿಗೂ ಅವಕಾಶ ಕಲ್ಪಿಸಲಾಗಿದೆ.
ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲಾತಿಗಳು:
ಅರ್ಜಿದಾರರ ಅಧಾರ್ ಕಾರ್ಡ (adhar card)ಪ್ರತಿ.
ಹೊಸ ಹೆಸರು ಸೇರ್ಪಡೆಗೆ ಜಾತಿ ಮತ್ತು ಅದಾಯ
ಪ್ರಮಾಣ ಪತ್ರ.
ಮೊಬೈಲ್ ಸಂಖ್ಯೆ.
ಹಾಲಿ ಪಡಿತರ ಚೀಟಿ/ರೇಷನ್ ಕಾರ್ಡ.
6 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಜನನ ಪ್ರಮಾಣಪತ್ರ.
ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವುದು ಹೇಗೆ?:
ಮೊದಲಿಗೆ https://ahara.kar.nic.in/home ಲಾಗಿನ್ ಆಗಬೇಕು.
ನಂತರ ಅಲ್ಲಿ ಇರುವ ಸೆಲೆಕ್ಟ್ ಬಟನ್ ಮೇಲೆ ಕ್ಲಿಕ್ ಮಾಡಬೇಕು.
ಹೊಸ ಪೇಜ್ ನಲ್ಲಿ ಕಾಣುವ ಫಾರ್ಮ್‌ನಲ್ಲಿ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ.
ನಂತರ ಅಲ್ಲಿ ತಿಳಿಸಲಾಗಿರುವ ಎಲ್ಲಾ ದಾಖಲೆಗಳ ಸ್ಕ್ಯಾನ್ ಪ್ರತಿಯನ್ನು ಅಪ್‌ಲೋಡ್ ಮಾಡಬೇಕು.
ಅಪ್‌ಲೋಡ್ ಮಾಡಿದ ನಂತರ ಫಾರ್ಮ್ ಅನ್ನು ಸಬ್‌ಮಿಟ್ ಮಾಡಬೇಕು.
ಇನ್ನು ನೀವು ನೀಡಿರುವ ಎಲ್ಲಾ ದಾಖಲೆಗಳು ಸರಿಯಾಗಿಯಿದ್ದರೆ, ಅರ್ಜಿದಾರನ ಹೊಸ ಪಡಿತರಚೀಟಿಯನ್ನು ಅವರ ಮನೆಗೆ ಕಳುಹಿಸಿಕೊಡಲಾಗುತ್ತದೆ.
ಎಲ್ಲಿ ಅರ್ಜಿ ಸಲ್ಲಿಸಬೇಕು?
ಪಡಿತರ ಚೀಟಿಯಲ್ಲಿ ಯಾವುದೇ ರೀತಿಯಲ್ಲಿ ತಿದ್ದುಪಡಿಯನ್ನು ಮಾಡಲು ನಿಮ್ಮ ಹತ್ತಿರದ ಯಾವುದೇ ಸಿಎಸ್ಸಿ ಕೇಂದ್ರ, ಗ್ರಾಮಒನ್() ಕೇಂದ್ರ, ಕರ್ನಾಟಕ ಒನ್, ಕೇಂದ್ರಕ್ಕೆ ಭೇಟಿ ನೀಡಿ ಅಥವಾ ನಾಡ ಕಚೇರಿಗೆ ಭೇಟಿ ನೀಡಿ ಅಗತ್ಯ ದಾಖಲೆಗಳೊಂದಿಗೆ ಬೆಳಿಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ಮಾಡಿಕೊಳ್ಳಬಹುದಾಗಿದ್ದು, ನೇರವಾಗಿ ಭೇಟಿ ಮಾಡಿ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಅವಧಿ (Ration card correction date)
ರೇಷನ್ ಕಾರ್ಡ್ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಡಿಸೆಂಬರ್ 31, 2024ರ ವರೆಗೆ ಪ್ರತಿ ದಿನ ಬೆಳ್ಳಗೆ 10-00 ಗಂಟೆಯಿಂದ ಸಂಜೆ 5-00 ಗಂಟೆ ವರೆಗೆ ಅವಕಾಶ ಮಾಡಿಕೊಡಲಾಗಿದೆ. ಕರ್ನಾಟಕದಲ್ಲಿ 31 ಜಿಲ್ಲೆಗಳಿಗೂ ಕೂಡ ರೇಷನ್ ಕಾರ್ಡ್ ತಿದ್ದುಪಡಿ ಅರ್ಜಿ ಸಲ್ಲಿಸಲು (New Ration card Karnataka)ಅವಕಾಶವಿದೆ.
ಗಮನಿಸಿ :
ತಿದ್ದುಪಡಿ ಅಥವಾ ಸೇರ್ಪಡೆಗಾಗಿ ಡಿಸೆಂಬರ್ 31, 2024 ರವರೆಗೆ ಮಾತ್ರ ಅವಕಾಶವಿದೆ.
ಅರ್ಜಿಯನ್ನು ಶೀಘ್ರವಾಗಿ ಸಲ್ಲಿಸುವುದು ಉತ್ತಮ.
ಅರ್ಜಿಯ ಸ್ಥಿತಿಯನ್ನು ನೋಂದಣಿ ಸಂಖ್ಯೆಯ ಮೂಲಕ ಟ್ರ್ಯಾಕ್ ಮಾಡಬಹುದು.
ಈ ಅವಕಾಶವನ್ನು ಬಳಸಿಕೊಂಡು, ನಿಮ್ಮ ಪಡಿತರ ಚೀಟಿಯನ್ನು ನವೀಕರಿಸಿ, ಸರಿಯಾದ ಮಾಹಿತಿಯನ್ನು ಹೊಂದಿಸಿ, ಸರ್ಕಾರದ ಸೌಲಭ್ಯಗಳನ್ನು ಪಡೆಯಿರಿ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.