ರಾಜ್ಯ ಸರ್ಕಾರವು ಬಿಪಿಎಲ್ (Below Poverty Line) ಪಡಿತರ ಚೀಟಿಗೆ ಹೊಸ ಅರ್ಜಿ ಸಲ್ಲಿಕೆ ಮತ್ತು ತಿದ್ದುಪಡಿ ಪ್ರಕ್ರಿಯೆಯನ್ನು ಸುಧಾರಿಸಲು ಜನವರಿ 31, 2025ರವರೆಗೆ ಅವಧಿಯನ್ನು ವಿಸ್ತರಿಸಿದೆ. ಈ ನಿರ್ಧಾರವು ಹತ್ತಾರು ಜನರಿಗೆ ಅನುಕೂಲಕರವಾಗಿದ್ದು, ತಮ್ಮ ಪಡಿತರ ಚೀಟಿಗಳನ್ನು ನವೀಕರಿಸಲು ಮತ್ತು ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಒಂದು ಮಹತ್ವದ ಅವಕಾಶವನ್ನು ಒದಗಿಸಿದೆ.
ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಪಡಿತರ ಚೀಟಿಗೆ ತಿದ್ದುಪಡಿ ಮಾಡಲು ಅವಕಾಶ:
ನಿಮ್ಮ ಪಡಿತರ ಚೀಟಿಗೆ ತಿದ್ದುಪಡಿ(Ration card correction) ಮಾಡುವ ಪ್ರಕ್ರಿಯೆವು ಹಲವಾರು ಅಂಶಗಳನ್ನು ಒಳಗೊಂಡಿದೆ:
ಕುಟುಂಬದ ಮುಖ್ಯಸ್ಥರ ಬದಲಾವಣೆ (Change of family head): ಪ್ರಸ್ತುತ ಪಡಿತರ ಚೀಟಿನಲ್ಲಿರುವ ಮುಖ್ಯಸ್ಥರ ವಿವರವನ್ನು ಬದಲಾಯಿಸಬಹುದು.
ವಿಳಾಸ ಬದಲಾವಣೆ (Change of address): ನಿವಾಸ ಸ್ಥಳಾಂತರವಾದವರಿಗೆ ವಿಳಾಸ ತಿದ್ದುಪಡಿ ಮಾಡಬಹುದು.
ನ್ಯಾಯಬೆಲೆ ಅಂಗಡಿ ಬದಲಾವಣೆ (Ration shop change): ಪಡಿತರ ಚೀಟಿಗೆ ಹೊಂದಿದ ಅಂಗಡಿಯನ್ನು ಬದಲಾಯಿಸಲು ಅವಕಾಶ.
ಹೊಸ ಸದಸ್ಯರ ಸೇರ್ಪಡೆ (Addition of new members): ಹೊಸ ಕುಟುಂಬ ಸದಸ್ಯರನ್ನು ಪಡಿತರ ಚೀಟಿಗೆ ಸೇರಿಸಬಹುದು.
ಸದಸ್ಯರನ್ನು ತೆಗೆದುಹಾಕುವುದು (Removing a member): ಪಡಿತರ ಚೀಟಿನಿಂದ ಅನಾವಶ್ಯಕ ಸದಸ್ಯರನ್ನು ತೆಗೆದುಹಾಕಬಹುದು.
ಈ-ಕೆವೈಸಿ ಪ್ರಕ್ರಿಯೆ (E-KYC process): ಪಡಿತರ ಚೀಟಿಗೆ ಸಂಬಂಧಿಸಿದ ಈ-ಕೆವೈಸಿ ಪ್ರಕ್ರಿಯೆ ನಡೆಸಬಹುದು.
ಆಧಾರ್ ಲಿಂಕ್(Aadhar link): ಪಡಿತರ ಚೀಟಿನ ಸದಸ್ಯರ ವಿವರಗಳನ್ನು ಆಧಾರ್ ಕಾರ್ಡ್‌ಗೆ ಲಿಂಕ್ ಮಾಡಬಹುದು.
ಇತರ ತಿದ್ದುಪಡಿಗಳು (Other amendments): ಪಡಿತರ ಚೀಟಿನಲ್ಲಿರುವ ಇತರ ಮಾಹಿತಿ ಬದಲಾವಣೆ ಸಾಧ್ಯ.
ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ:
ಹೊಸ ಪಡಿತರ ಚೀಟಿಗಾಗಿ(New Ration card) ಅರ್ಜಿ ಸಲ್ಲಿಸಲು ಈ ಹಂತಗಳನ್ನು ಅನುಸರಿಸಬಹುದು:
ಅಧಿಕೃತ ವೆಬ್‌ಸೈಟ್(Official website) ahara.karnataka.gov.in ಭೇಟಿ ಮಾಡಿ.
Public Use ವಿಭಾಗದಲ್ಲಿ Apply for New Ration Card ಆಯ್ಕೆಮಾಡಿ.
ಅಗತ್ಯ ಮಾಹಿತಿಯನ್ನು ಫಾರ್ಮ್‌ನಲ್ಲಿ ಭರ್ತಿ ಮಾಡಿ.
ಬೇಕಾದ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
ಅರ್ಜಿ ಸಲ್ಲಿಸಿದ ನಂತರ ಪರಿಶೀಲನೆ ನಡೆಸಿ, ಪಡಿತರ ಚೀಟಿ ಪಡೆಯಿರಿ.
ತಿದ್ದುಪಡಿ ಅಥವಾ ಅರ್ಜಿಗೆ ಅಗತ್ಯ ದಾಖಲೆಗಳು:
ಹೊಸ ಪಡಿತರ ಚೀಟಿ ಅಥವಾ ತಿದ್ದುಪಡಿ ಪ್ರಕ್ರಿಯೆಗೆ ಈ ಕೆಳಗಿನ ದಾಖಲೆಗಳನ್ನು ಒದಗಿಸಬೇಕು:
ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್(Adhar card of all the family members)
ಜಾತಿ ಪ್ರಮಾಣ ಪತ್ರ(Caste Certificate)
ಆದಾಯ ಪ್ರಮಾಣ ಪತ್ರ (Income Certificate)
ಮಕ್ಕಳ ಜನನ ಪ್ರಮಾಣ ಪತ್ರ (Childrens birth certificate)
ಮೊಬೈಲ್ ನಂಬರ್ (Mobile number)
ಈಗಿನ ಪಡಿತರ ಚೀಟಿ (present Ration Card)
ಇತರ ಪ್ರಾಮಾಣಿಕ ದಾಖಲೆಗಳು (Other certified Documents)
ಸರ್ವರ್ ಸಮಸ್ಯೆಗೆ ಪರಿಹಾರ (Solution to server problem) :
ಡಿಸೆಂಬರ್ 2024ರಲ್ಲಿ ಹಲವಾರು ಸರ್ವರ್ ಸಮಸ್ಯೆಯಿಂದ (From many server issues) ತಮ್ಮ ಪಡಿತರ ಚೀಟಿಗೆ ತಿದ್ದುಪಡಿ ಮಾಡಲು ವಿಫಲರಾದರು. ಈ ಹಿನ್ನೆಲೆಯಲ್ಲಿ ಸರ್ಕಾರವು ಜನವರಿ 31, 2025ರವರೆಗೆ ಅವಧಿ ವಿಸ್ತರಿಸುವ ಮೂಲಕ ಮತ್ತೊಮ್ಮೆ ಅವಕಾಶ ಕಲ್ಪಿಸಿದೆ.
ಸೌಲಭ್ಯಗಳು ಮತ್ತು ಸಮಯ (Facilities and time) :
ಪಡಿತರ ಚೀಟಿ ತಿದ್ದುಪಡಿ ಅಥವಾ ಹೊಸ ಅರ್ಜಿಗಾಗಿ ಹತ್ತಿರದ ಗ್ರಾಮ್ ಒನ್ (Gram One), ಕರ್ನಾಟಕ ಒನ್(Karnataka One), ಅಥವಾ ಬೆಂಗಳೂರು ಒನ್(Bangalore One) ಕೇಂದ್ರಗಳಿಗೆ ಭೇಟಿ ನೀಡಿ. ಬೆಳಿಗ್ಗೆ 10:00 ರಿಂದ ಸಂಜೆ 5:30ರವರೆಗೆ ಈ ಸೇವೆ ಲಭ್ಯವಿದೆ.
ನಿಮ್ಮ ಪಡಿತರ ಚೀಟಿಗೆ ಸದುಪಯೋಗ ಪಡೆಯಿರಿ (Make use of your ration card ):
ರಾಜ್ಯ ಸರ್ಕಾರವು ಪಡಿತರ ಚೀಟಿನ ಪ್ರಕ್ರಿಯೆಯನ್ನು ಸುಗಮಗೊಳಿಸಲು ನೂತನ ಕ್ರಮಗಳನ್ನು ಕೈಗೊಂಡಿದ್ದು, ಎಲ್ಲಾ ಅರ್ಹರು ಇದರ ಸದುಪಯೋಗ ಪಡೆಯಬಹುದು. ತಮ್ಮ ಪಡಿತರ ಚೀಟಿಗೆ ಸಂಬಂಧಿಸಿದ ತಿದ್ದುಪಡಿ ಮತ್ತು ಹೊಸ ಚೀಟಿ ಪ್ರಕ್ರಿಯೆಯನ್ನು ಶೀಘ್ರದಲ್ಲೇ ಪೂರ್ಣಗೊಳಿಸಲು ಈ ಮಾರ್ಗಸೂಚಿಯನ್ನು ಅನುಸರಿಸಿ.ಮತ್ತು ಇಂತಹ ಉತ್ತಮವಾದ ಮಾಹಿತಿ ಹೊಂದಿದ ಈ ವರದಿಯನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.