Ration Card : ಪಡಿತರ ಚೀಟಿ ತಿದ್ದುಪಡಿಗೆ ಮತ್ತೇ  ಅವಕಾಶ, ಆನ್ಲೈನ್ ಮೂಲಕ ಹೀಗೆ ಅರ್ಜಿ ಸಲ್ಲಿಸಿ.!

Picsart 25 02 16 18 18 05 660

WhatsApp Group Telegram Group

ಪಡಿತರ ಚೀಟಿ ತಿದ್ದುಪಡಿ: ಆನ್‌ಲೈನ್ ಮೂಲಕ ಸುಲಭ ಸೇವೆ, ಈ ತಿಂಗಳ ಕೊನೆಯವರೆಗೆ ಅವಕಾಶ!

ಪಡಿತರ ಚೀಟಿ (Ration Card) ಭಾರತದ ಆಹಾರ ಸುರಕ್ಷತಾ ವ್ಯವಸ್ಥೆಯಲ್ಲಿ ಮಹತ್ವದ ದಾಖಲೆಗಳಲ್ಲಿ ಒಂದಾಗಿದೆ. ಇದು ಪಡಿತರ ಧಾನ್ಯ ಪಡೆಯಲು ಅಗತ್ಯವಿರುವ ಸರ್ಕಾರಿ ಮಾನ್ಯತೆ ಪಡೆದ ಗುರುತಿನ ಚೀಟಿಯಾಗಿದೆ. ಆದರೆ, ಪಡಿತರ ಚೀಟಿಯಲ್ಲಿನ ತಪ್ಪು ಅಥವಾ ಅಪೂರ್ಣ ಮಾಹಿತಿಯಿಂದಾಗಿ ಅನೇಕ ನಾಗರಿಕರು ಸಮಸ್ಯೆ ಅನುಭವಿಸುತ್ತಿದ್ದಾರೆ. ಈ ಸಮಸ್ಯೆಗೆ ಪರಿಹಾರ ನೀಡಲು, ಕರ್ನಾಟಕ ಸರ್ಕಾರದ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ (Department of Food and Civil Supplies) ಸಾರ್ವಜನಿಕರಿಗೆ ಪಡಿತರ ಚೀಟಿಯ ತಿದ್ದುಪಡಿ ಸೇವೆಯನ್ನು ಆನ್ಲೈನ್ ಮೂಲಕ ಲಭ್ಯವಿರುವಂತೆ ಮಾಡಿದೆ. ಪಡಿತರ ಚೀಟಿ ತಿದ್ದುಪಡಿಗೆ ಕೊನೆಯ ದಿನಾಂಕ ಯಾವಾಗ? ಹೇಗೆ ಅರ್ಜಿ ಸಲ್ಲಿಸಬೇಕು ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಹೌದು, ಕರ್ನಾಟಕ ರಾಜ್ಯ ಸರ್ಕಾರದ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ (Food and Civil Supplies Department) ಸಾರ್ವಜನಿಕರಿಗಾಗಿ ಮಹತ್ವದ ಸೂಚನೆ ನೀಡಿದೆ. ಪಡಿತರ ಚೀಟಿಯಲ್ಲಿನ ಮಾಹಿತಿಯಲ್ಲಿ ತಿದ್ದುಪಡಿ ಮಾಡಿಕೊಳ್ಳಲು, ಈಗ ಆನ್ಲೈನ್ ಮೂಲಕ ಸುಲಭ ಮತ್ತು ಸೌಕರ್ಯಯುತ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಇದರಿಂದ, ಫಲಾನುಭವಿಗಳು ತಮ್ಮ ವಿಳಾಸ, ಸದಸ್ಯರ ಹೆಸರು, ವಯಸ್ಸು, ಪಡಿತರ ಅಂಗಡಿ ಬದಲಾವಣೆ ಸೇರಿದಂತೆ ವಿವಿಧ ತಿದ್ದುಪಡಿಗಳನ್ನು ಮಾಡಿಸಿಕೊಳ್ಳಬಹುದು.

ಆನ್ಲೈನ್ ಮೂಲಕ ಪಡಿತರ ಚೀಟಿ ತಿದ್ದುಪಡಿಯ ಸುಲಭ ಪ್ರಕ್ರಿಯೆ:

ಈಗ, ಗ್ರಾಮ ಒನ್ (Grama One) ಕೇಂದ್ರಗಳಲ್ಲಿ ಬೆಳಿಗ್ಗೆ 10:00 ರಿಂದ ಸಂಜೆ 5:00ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಅಗತ್ಯ ದಾಖಲೆಗಳನ್ನು ಒಟ್ಟುಗೂಡಿಸಿಕೊಂಡು ಗ್ರಾಮ ಒನ್ ಕೇಂದ್ರಕ್ಕೆ ಭೇಟಿ ನೀಡಿದರೆ, ಅಲ್ಲಿನ ಅಧಿಕಾರಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಭರ್ತಿ ಮಾಡಿ, ಅದನ್ನು ಸರ್ಕಾರದ ಪೋರ್ಟ್‌ಲ್‌ಗೆ (Official Website) ಸಲ್ಲಸುತ್ತಾರೆ.
ಅರ್ಜಿಯನ್ನು ಸಲ್ಲಿಸಿದ ನಂತರ, ಫುಡ್ ಅಂಡ್ ಸಿವಿಲ್ ಸಪ್ಲೈಸ್ ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿ (Ration Card Status Check Online) ಅರ್ಜಿಯ ಸ್ಥಿತಿಯನ್ನು ಕಾಣಬಹುದು. .

ಯಾವ ಯಾವ ತಿದ್ದುಪಡಿಗಳನ್ನು ಮಾಡಿಸಿಕೊಳ್ಳಬಹುದು?: 

ನಿಮ್ಮ ಪಡಿತರ ಚೀಟಿಯಲ್ಲಿನ ಈ ಕೆಳಗಿನ ತಿದ್ದುಪಡಿಗಳನ್ನು ಸರಿಪಡಿಸಿಕೊಳ್ಳಲು ಅವಕಾಶವಿದೆ:
ಹೊಸ ಕುಟುಂಬ ಸದಸ್ಯರ ಸೇರ್ಪಡೆ (ಹುಟ್ಟಿದ ಮಕ್ಕಳನ್ನು ಅಥವಾ ಹೊಸ ಸದಸ್ಯರನ್ನು ಪಡಿತರ ಚೀಟಿಗೆ ಸೇರಿಸುವುದು).
ವಿಳಾಸ ಬದಲಾವಣೆಗೂ ಅವಕಾಶ ಕಲ್ಪಿಸಿಕೊಡಲಾಗಿದೆ (ಹೊಸ ಸ್ಥಳಕ್ಕೆ ಸ್ಥಳಾಂತರವಾದಾಗ, ವಿಳಾಸವನ್ನು ಸರಿಪಡಿಸುವ ಅಗತ್ಯವಿದೆ
ಪಡಿತರ ಚೀಟಿ ವರ್ಗ ಬದಲಾವಣೆ (APL, BPL ಅಥವಾ ಅಂತರ್ಯೋದಯ ಕಾರ್ಡ್ ಪರಿವರ್ತನೆ).
ನ್ಯಾಯಬೆಲೆ ಅಂಗಡಿ ಬದಲಾವಣೆ (ಪುನರ್ವಿಂಗಡನೆ ಅಥವಾ ಊರು ಬದಲಾದಾಗ).
ಇ-ಕೆವೈಸಿ (e-KYC) ಪರಿಶೀಲನೆ.

ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು ಹೀಗಿವೆ :

ತಿದ್ದುಪಡಿ ಅರ್ಜಿ ಸಲ್ಲಿಸುವ ಮೊದಲು, ಈ ಕೆಳಗಿನ ದಾಖಲೆಗಳನ್ನು ಒಟ್ಟುಗೂಡಿಸಿಕೊಳ್ಳುವುದು ಅಗತ್ಯ:

ಆಧಾರ್ ಕಾರ್ಡ್ (Aadhaar Card) – ಎಲ್ಲಾ ಕುಟುಂಬ ಸದಸ್ಯರದ್ದು.
ಪಡಿತರ ಚೀಟಿ ಪ್ರತಿ (Ration Card Copy).
ನೋಂದಾಯಿತ ಮೊಬೈಲ್ ಸಂಖ್ಯೆ (Registered Mobile Number) – OTP ದೃಢೀಕರಣಕ್ಕಾಗಿ.
ಸಂಬಂಧಿತ ದಾಖಲೆಗಳು (ಮರಣ ಪ್ರಮಾಣಪತ್ರ, ವಿಳಾಸ ಪೂರೈಕೆ ದಾಖಲೆ, ಪಾವತಿ ಚೀಟಿ, ಹಳೆಯ ಪಡಿತರ ಚೀಟಿ, ಇತರ ಮಾನ್ಯತೆ ಪಡೆದ ದಾಖಲೆಗಳು).

ತಿದ್ದುಪಡಿಗೆ ಅರ್ಜಿ ಸಲ್ಲಿಸುವುದು ಹೇಗೆ (How to Apply for Amendment) ? 

ಗ್ರಾಹಕರು ತಮ್ಮ ಪಡಿತರ ಚೀಟಿಯ ತಿದ್ದುಪಡಿಗೆ ಅಥವಾ ಹೊಸ ಸದಸ್ಯರ ಸೇರ್ಪಡೆಗೆ ಸಂಬಂಧಿಸಿದಂತೆ ತಮ್ಮ ಹತ್ತಿರದ ಗ್ರಾಮ ಒನ್ (Grama One), ಕರ್ನಾಟಕ ಒನ್ (Karnataka One), ಅಥವಾ ಬೆಂಗಳೂರು ಒನ್ (Bangalore One) ಕೇಂದ್ರಗಳಿಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಆನ್‌ಲೈನ್‌ (Online) ನಲ್ಲಿ ಪಡಿತರ ಚೀಟಿಯ ತಿದ್ದುಪಡಿ ಅರ್ಜಿಯ ಸ್ಥಿತಿಯನ್ನು ಹೇಗೆ ಪರಿಶೀಲಿಸುವುದು :

ಅರ್ಜಿ ಸಲ್ಲಿಸಿದ ನಂತರ, ಗ್ರಾಹಕರು ತಮ್ಮ ಪಡಿತರ ಚೀಟಿಯ ತಿದ್ದುಪಡಿ ಸ್ಥಿತಿಯನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸಬಹುದು.

Step-1: ಅಧಿಕೃತ ಆಹಾರ ಇಲಾಖೆಯ ಜಾಲತಾಣ (Food Department Website) ಪ್ರವೇಶಿಸಬೇಕು.
Step-2: ನಂತರ ಜಾಲತಾಣದಲ್ಲಿ Menu → e-Status → Amendment Requests Status ಆಯ್ಕೆ ಮಾಡಬೇಕು.
Step-3: ನಂತರ ನಿಮ್ಮ ಜಿಲ್ಲೆಯ ಆಯ್ಕೆಯನ್ನು (Bangalore Region / Mysore Region / Kalaburagi Region) ಮಾಡಿಕೊಳ್ಳಿ.
Step-4: “Ration Card Amendment Request Status” ವಿಭಾಗದಲ್ಲಿ RC No (Ration Card Number) ನಮೂದಿಸಿ.
Step-5: ನಿಮ್ಮ ಅರ್ಜಿಗೆ ಸಂಬಂಧಿಸಿದ Acknowledgment Number ನಮೂದಿಸಿ ಮತ್ತು Go ಬಟನ್ ಮೇಲೆ ಕ್ಲಿಕ್ ಮಾಡಿ, ತಿದ್ದುಪಡಿ ಅರ್ಜಿಯು ಯಾವ ಹಂತದಲ್ಲಿದೆ ಎನ್ನುವ ಮಾಹಿತಿಯನ್ನು ಪಡೆದುಕೊಳ್ಳಬಹುದು.

ಈ ತಿಂಗಳ ಅಂತ್ಯವರೆಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ :


ಈ ಸುಲಭ ಆನ್ಲೈನ್ (Online) ಪ್ರಕ್ರಿಯೆಯಿಂದ ನಿಮ್ಮ ಪಡಿತರ ಚೀಟಿಯನ್ನು ಅಪ್ಡೇಟ್ ಮಾಡಿ, ಸರಿಯಾದ ಮಾಹಿತಿಯೊಂದಿಗೆ ಸರ್ಕಾರದಿಂದ ಪಡಿತರ ಚೀಟಿಯ ಉಪಯೋಗ ಪಡೆಯಲು ಈಗಲೇ ಅರ್ಜಿ ಸಲ್ಲಿಸಿ!

ಈ ಮಾಹಿತಿಗಳನ್ನು ಓದಿ

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!