Ration card e-KYC: ರೇಷನ್ ಕಾರ್ಡ್ e-KYC ಕಡ್ಡಾಯ, ಅಗಸ್ಟ್ 31 ಕೊನೆಯ ದಿನ, ಇಲ್ಲಾಂದ್ರೆ ನಿಮ್ಮ ರೇಷನ್ ಕಾರ್ಡ್ ಬಂದ್ ಆಗುತ್ತೆ

WhatsApp Image 2023 08 25 at 7.09.03 AM

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ಇ-ಕೆವೈಸಿ ಮಾಡಿಸದಿರುವ ಪಡಿತರ ಚೀಟಿದಾರರಿಗೆ ಆಗಸ್ಟ್ ತಿಂಗಳಿನಿಂದ ಆಹಾರಧಾನ್ಯ ಮತ್ತು ಅನ್ನಭಾಗ್ಯ ಯೋಜನೆಯ ಹಣವನ್ನು ಸ್ಥಗಿತಗೊಳಿಸಲಿರುವ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಸರ್ಕಾರವು ಹೊಸ ಮಾರ್ಗ ಸೊಚಿಯನ್ನು ಬಿಡುಗಡೆ ಮಾಡಿದೆ. ಆ ಮಾರ್ಗ ಸೂಚಿಗಳು ಯಾವುವು?, ಕೆವೈಸಿ ಮಾಡದಿದ್ದರೆ ಹಣ ಮತ್ತು ಆಹಾರ ಧಾನ್ಯಗಳು ಏಕೆ ದೊರೆಯುವುದಿಲ್ಲ ಎಂಬುವುದರ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು ಈ ಲೇಖನವನ್ನು ಪೂರ್ಣವಾಗಿ ಓದಿ. ಇದೇ ರೀತಿಯ  ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಇ-ಕೆವೈಸಿಯನ್ನು ಮಾಡಿಸದೇ ಇರುವ ಪಡಿತರ ಚೀಟಿದಾರರಿಗೆ ಬಿಗ್ ಶಾಕ್ :

image 870x 64e550cc0aa4e 2

ಆಗಸ್ಟ್ 31, 2023 ರ ಒಳಗೆ ರಾಜ್ಯದ ಎಲ್ಲಾ ಜನತೆಯು ಪಡಿತರ ಚೀಟಿಯ ಇ -ಕೆವೈಸಿ ಯನ್ನು ಮಾಡಿಸುವುದು ಕಡ್ಡಾಯವಾಗಿದೆ. ಈ ಕೆ ವೈ ಸಿ ಆಗದ ಪಡಿತರ ಚೀಟಿದಾರರ ಹೆಸರನ್ನು ಆಯಾ ನ್ಯಾಯಬೆಲೆ ಅಂಗಡಿಯ ಮುಂದೆ ಹಾಕಲಾಗುವುದು. ಪಡಿತರ ಚೀಟಿ ಫಲಾನುಭವಿಗಳ ಇ -ಕೆವೈಸಿ ಸಂಗ್ರಹಣೆಯನ್ನು ದಿನಾಂಕ 31,8,2023 ರ ಒಳಗಾಗಿ ಪೂರ್ಣಗೊಳಿಸದೆ ಇದ್ದಲ್ಲಿ ಅಂತಹ ಪಡಿತರ ಚೀಟಿಗಳ ಸದಸ್ಯರುಗಳನ್ನು ಪಡಿತರ ಚೀಟಿಯಿಂದ ಅಮಾನತುಗೊಳಿಸಲಾಗುವುದು. ಒಮ್ಮೆ ಪಡಿತರ ಚೀಟಿ ರದ್ದಾದರೆ ಫಲಾನುಭವಿಗಳಿಗೆ ಆಹಾರಧಾನ್ಯ ಮತ್ತು ಡಿಬಿಟಿ ನಗದು ಸೌಲಭ್ಯಗಳು ಸೆಪ್ಟೆಂಬರ್ ತಿಂಗಳಿನಿಂದ ದೊರೆಯುವುದಿಲ್ಲ. ನಿಮಗೇನಾದರೂ ಬೆರಳಚ್ಚು ಪಡೆಯಲು ಆಗದೆ ಇದ್ದರೆ ಅಂತಹ ಪಡಿತರ ಚೀಟಿಗಳಿಗೆ ವಿನಾಯಿತಿ ನೀಡಲಾಗಿದೆ. ಅವರುಗಳ ಬೆರಳಚನ್ನು ಪುನಹ ತೆಗೆದುಕೊಳ್ಳಲು ಪ್ರಯತ್ನಿಸಲಾಗುವುದು ಸಾಧ್ಯವಾಗದಿದ್ದಲ್ಲಿ, IRIS ತಂತ್ರಾಂಶವನ್ನು ಜೋಡಣೆ ಮಾಡಲಾಗುವುದು. ಅದಕ್ಕಾಗಿ ಕಾಯಬೇಕಾಗುತ್ತದೆ.

ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ

 

app download

ಸರ್ಕಾರದಿಂದ ಹೊರಡಿಸಿರುವ ಈ ಮಾರ್ಗಸೂಚಿಗಳನ್ನು ಎಲ್ಲರೂ ತಿಳಿದುಕೊಳ್ಳುವುದು ಅವಶ್ಯಕವಾಗಿದೆ.

ಆನ್‌ಲೈನ್‌ನಲ್ಲಿ ನಿಮ್ಮ ಆಧಾರ್ ಕಾರ್ಡ್ ಅನ್ನು ಪಡಿತರ ಚೀಟಿಗೆ ಲಿಂಕ್ ಮಾಡಲು ಈ ಕೆಳಗಿನ ಹಂತಗಳನ್ನು ಅನುಸರಿಸಿ:

ಇ – ಕೆವೈಸಿ ಸ್ಥಿತಿ ಚೆಕ್ ಮಾಡುವುದು ಹೇಗೆ ?

ಹಂತ 1: ಮೊದಲಿಗೆ ಆಹಾರ ಸರಬರಾಜು ಇಲಾಖೆಯ ಅಧಿಕೃತ ವೆಬ್ ಸೈಟ್ ಗೆ ತೆರಳಬೇಕು ಅದಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

https://ahara.kar.nic.in/lpg/

ಇಲ್ಲಿ ನಿಮ್ಮ ವಿಭಾಗದ ಜಿಲ್ಲೆಯ ಲಿಂಕ್ ಮೇಲೆ ಕ್ಲಿಕ್ ಮಾಡಿ, ಉದಾಹರಣೆಗೆ ನಿಮ್ಮ ಜಿಲ್ಲೆ ಹಾವೇರಿ ಆಗಿದ್ದಲ್ಲಿ ಮೂರನೇ ಲಿಂಕನ್ನು ಸೆಲೆಕ್ಟ್ ಮಾಡಿಕೊಳ್ಳಬೇಕು. ಕೆಳಗಡೆ ತೋರಿಸಿದ ಹಾಗೆ

 

ras1

ಹಂತ 2-  ಇಲ್ಲಿ ಎಡಗಡೆ ಭಾಗದಲ್ಲಿ ‘ಪಡಿತರ ಚೀಟಿ ವಿವರ’ ಆಪ್ಷನ್ ಸೆಲೆಕ್ಟ್ ಮಾಡಿಕೊಳ್ಳಿ

ras2

ಹಂತ 3- ನಂತರ ಇಲ್ಲಿ ನಿಮಗೆ ಎರಡು ಆಪ್ಶನ್ ಕಾಣಿಸಿಕೊಳ್ಳುತ್ತೆ with out OTP ಆಪ್ಷನ್ ಅನ್ನು ಸೆಲೆಕ್ಟ್ ಮಾಡಿಕೊಳ್ಳಿ ನಂತರ ನಿಮ್ಮ ರೇಷನ್ ಕಾರ್ಡ್ ನಂಬರ್ ಹಾಕಿ Go ಮೇಲೆ ಕ್ಲಿಕ್ ಮಾಡಿ

ras3

Picsart 23 07 16 14 24 41 584 transformed 1 ras5

 

ಹಂತ 4- ಇಲ್ಲಿ ನಿಮ್ಮ ರೇಷನ್ ಕಾರ್ಡ್ ನ ಸಂಪೂರ್ಣವಾದ ಸ್ಥಿತಿ ಕಾಣಿಸಿಕೊಳ್ಳುತ್ತದೆ, ಇಲ್ಲಿ ನೀವು ಗಮನಿಸಬಹುದು ekyc Remaining ಜಾಗದಲ್ಲಿ ನಿಮ್ಮ ಮನೆಯ ಸದಸ್ಯರ ekyc ಆಗದೆ ಇದ್ದಲ್ಲಿ ನಂಬರ್ ತೋರಿಸುತ್ತದೆ.

whatss

ಆನ್ಲೈನ್ ನಲ್ಲಿ ಆಧಾರ್- ರೇಷನ್ ಕಾರ್ಡ್ ಲಿಂಕ್ ಮಾಡುವ ವಿಧಾನ :

ಹಂತ 1: ಮೊದಲಿಗೆ ಆಹಾರ ಸರಬರಾಜು ಇಲಾಖೆಯ ಅಧಿಕೃತ ವೆಬ್ ಸೈಟ್ ಗೆ ತೆರಳಬೇಕು ಅದಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

01

ಹಂತ 2: ನಂತರ ಪುಟ ತೆರೆದ ಮೇಲೆ ಇ-ಸೇವೆಗಳು ಎಂಬ ಆಯ್ಕೆಯನ್ನು ಮಾಡಿ ನಂತರ ಇ -ಪಡಿತರ ಚೀಟಿಯಲ್ಲಿ ಯು ಐ ಡಿ ಲಿಂಕ್ ಮಾಡಿ ಎಂಬ ಆಯ್ಕೆಯನ್ನು ಮಾಡಿ.

02

ಹಂತ 3: ನಂತರ ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡು, UID ಲಿಂಕಿಂಗ್ ಫಾರ್ RC ಮೆಂಬರ್ಸ್ ಎಂಬ ಆಯ್ಕೆಯನ್ನು ಮಾಡಿಕೊಳ್ಳಿ.

03

08

ಹಂತ 4: ನಂತರ ನಿಮ್ಮ ಆಧಾರ್ ಕಾರ್ಡ್ ನಂಬರನ್ನು ನಮೂದಿಸಿ ಗೋ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ

09

ಹಂತ 5: ಮುಂದುವರೆದು ನೀವು ನೋಂದಾಯಿಸಿದ ಮೊಬೈಲ್ ನಂಬರಿಗೆ ಓಟಿಪಿಯು ಬರುತ್ತದೆ ಅದನ್ನು ಹಾಕಿ ಗೋ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ.

10

ಹಂತ 6: ನಂತರ ನಿಮ್ಮ ರೇಷನ್ ಕಾರ್ಡ್ ನಂಬರ್ ಅನ್ನು ನಮೂದಿಸಿ ಸಬ್ಮಿಟ್ ಮಾಡಿ

ಹಂತ 7: ಹೀಗೆ ಮಾಡುವುದರಿಂದ ಕೊನೆಯದಾಗಿ ನಿಮಗೆ ಲಿಂಕ್ ಆಗಿರುವ ನೋಟಿಫಿಕೇಶನ್ ಬರುತ್ತದೆ.

ಇಷ್ಟು ಮಾಡಿದರೆ ನಿಮ್ಮ ration card ಆಧಾರ್ ಕಾರ್ಡ್ ಗೆ ಆನ್ ಲೈನ್ ಮೂಲಕ ಲಿಂಕ್ ಮಾಡುವದು ಪೂರ್ಣವಾಗುತ್ತದೆ.

tel share transformed

ಆಫ್ ಲೈನ್ ಮೂಲಕ ನಿಮ್ಮ ಆಧಾರ್ ಕಾರ್ಡ್ ಅನ್ನು ಪಡಿತರ ಚೀಟಿಗೆ ಲಿಂಕ್ ಮಾಡಲು ಈ ಕೆಳಗಿನ ಹಂತಗಳನ್ನು ಅನುಸರಿಸಿ:

ಹಂತ 1: ಹತ್ತಿರದ PDS ಕೇಂದ್ರ ಅಥವಾ ಪಡಿತರ ಅಂಗಡಿ/ಸ್ಥಳೀಯ ಪಡಿತರ ಕಚೇರಿಗೆ ಭೇಟಿ ನೀಡಿ

ಹಂತ 2: ನಿಮ್ಮ ಎಲ್ಲಾ ಕುಟುಂಬ ಸದಸ್ಯರ ಆಧಾರ್ ಕಾರ್ಡ್‌ನ ನಕಲುಗಳ ಜೊತೆಗೆ ನಿಮ್ಮ ಪಡಿತರ ಚೀಟಿಯ ನಕಲು ಪ್ರತಿಗಳನ್ನು ತೆಗೆದುಕೊಳ್ಳಬೇಕು. ಅಲ್ಲದೆ, ಕುಟುಂಬದ ಮುಖ್ಯಸ್ಥರ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರವನ್ನು ತೆಗೆದುಕೊಳ್ಳಿ.

ಹಂತ 3: ನಿಮ್ಮ ಬ್ಯಾಂಕ್ ಖಾತೆಯು ಆಧಾರ್‌ನೊಂದಿಗೆ ಲಿಂಕ್ ಮಾಡದಿದ್ದರೆ, ನಿಮ್ಮ ಬ್ಯಾಂಕ್ ಪಾಸ್‌ಬುಕ್‌ನ ನಕಲನ್ನು ಸಹ ನೀವು ಸಲ್ಲಿಸಬೇಕಾಗುತ್ತದೆ.

ಹಂತ 4: ಈ ಎಲ್ಲಾ ದಾಖಲೆಗಳನ್ನು ನಿಮ್ಮ ಆಧಾರ್‌ನ ಪ್ರತಿಯೊಂದಿಗೆ PDS ಅಂಗಡಿಯಲ್ಲಿ ಸಲ್ಲಿಸಿ.

ಹಂತ 5: ಪಡಿತರ ಅಂಗಡಿಯಲ್ಲಿ ಲಭ್ಯವಿರುವ ಪ್ರತಿನಿಧಿಯು ಮೊದಲ ಬಾರಿಗೆ ಆಧಾರ್ ದೃಢೀಕರಣಕ್ಕಾಗಿ ಫಿಂಗರ್‌ಪ್ರಿಂಟ್ ದೃಢೀಕರಣಕ್ಕಾಗಿ ನಿಮ್ಮನ್ನು ಕೇಳಬಹುದು.

ದಾಖಲೆಗಳನ್ನು ಸಲ್ಲಿಸಿದ ನಂತರ, ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ SMS ಅಧಿಸೂಚನೆಯನ್ನು ಕಳುಹಿಸಲಾಗುತ್ತದೆ. ಎರಡು ಡಾಕ್ಯುಮೆಂಟ್‌ಗಳನ್ನು ಯಶಸ್ವಿಯಾಗಿ ಲಿಂಕ್ ಮಾಡಿದಾಗ ನೀವು ಇನ್ನೊಂದು SMS ಅಧಿಸೂಚನೆಯನ್ನು ಸ್ವೀಕರಿಸುತ್ತೀರಿ.

ಆಗ ನೀವು ಸಂಪೂರ್ಣವಾಗಿ ಆಫ್ ಲೈನ್ ಮೂಲಕ ration card ಆಧಾರ್ ಕಾರ್ಡ್ ಗೆ ಆನ್ ಲೈನ್ ಮೂಲಕ ಲಿಂಕ್ ಮಾಡುವದು ಪೂರ್ಣವಾಗುತ್ತದೆ.

Ration card ಆಧಾರ್ ಲಿಂಕ್ ಗೆ ಅವಶ್ಯಕ ದಾಖಲೆಗಳು ಈ ಕೆಳಗಿನಂತೆ ಇವೆ :

ರೇಷನ್ ಕಾರ್ಡ್ ಆಧಾರ್ ಲಿಂಕ್ ಮಾಡಲು ಅಪ್ಲೋಡ್ ಮಾಡಬೇಕಾದ ದಾಖಲೆಗಳನ್ನು ಕೆಳಗೆ ನೀಡಲಾಗಿದೆ:
ಮೂಲ ಪಡಿತರ ಚೀಟಿಯ ನಕಲು ಪ್ರತಿ
ನಿಮ್ಮ ಎಲ್ಲಾ ಕುಟುಂಬ ಸದಸ್ಯರ ಆಧಾರ್ ಕಾರ್ಡ್‌ನ ಫೋಟೋಕಾಪಿಗಳು
ಕುಟುಂಬದ ಮುಖ್ಯಸ್ಥರ ಆಧಾರ್ ಕಾರ್ಡ್‌ನ ಫೋಟೋಕಾಪಿ
ಬ್ಯಾಂಕ್ ಪಾಸ್ ಬುಕ್ ನ ಪ್ರತಿ
ಕುಟುಂಬದ ಮುಖ್ಯಸ್ಥನ ಎರಡು ಪಾಸ್‌ಪೋರ್ಟ್ ಅಳತೆಯ ಫೋಟೋಗಳು.

ಇಂತಹ ಉತ್ತಮವಾದ ಕುರಿತು ಮಾಹಿತಿ ಹೊಂದಿದ ಈ ಲೇಖನವನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.

ಇದನ್ನೂ ಓದಿ: 5 ನಿಮಿಷದಲ್ಲಿ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿ : How to link Aadhaar with Pan card

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ಲೇಖನ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube 

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

app download

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!