Ration Card- ಗುಡ್ ನ್ಯೂಸ್ – ಹೊಸ ರೇಷನ್ ಕಾರ್ಡ್ ವಿತರಣೆ ಪ್ರಾರಂಭ, ನಿಮ್ಮ ಅರ್ಜಿ ಸ್ಥಿತಿ ಚೆಕ್ ಮಾಡುವ ಡೈರೆಕ್ಟರ್ ಲಿಂಕ್ ಇಲ್ಲಿದೆ

WhatsApp Image 2023 08 06 at 5.20.05 AM

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ಹೊಸ ಪಡಿತರ ಚೀಟಿಯ ವಿತರಣೆಯ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಈಗಾಗಲೇ ಬಿಪಿಎಲ್ ಪಡಿತರ ಚೀಟಿಗೆ(BPL Ration Card) ಅರ್ಜಿಯನ್ನು ಸಲ್ಲಿಸಿದ ಜನರಿಗೆ, ಸರ್ಕಾರವು ರೇಷನ್ ಕಾರ್ಡ್ ಗಳನ್ನು ವಿತರಣೆ ಮಾಡಲು ಪ್ರಾರಂಭಿಸಿದೆ. ಯಾವಾಗಿನಿಂದ ಈ ರೇಷನ್ ಕಾರ್ಡ್ ಗಳನ್ನು ಇದರನ್ನು ಮಾಡುತ್ತಾರೆ?, ಅರ್ಜಿ ಸಲ್ಲಿಸಿದ ಯಾರೆಲ್ಲ ಜನರಿಗೆ ರೇಷನ್ ಕಾರ್ಡ್ಗಳನ್ನು ವಿತರಣೆ ಮಾಡಲಾಗುತ್ತದೆ? ಎಂಬುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಸಿಕೊಡಲಾಗುತ್ತದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು ಈ ಲೇಖನವನ್ನು ಪೂರ್ಣವಾಗಿ ಓದಿ. ಇದೇ ರೀತಿಯ  ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಹೊಸ ಪಡಿತರ ಚೀಟಿಯ ವಿತರಣೆ ಪ್ರಾರಂಭ :

ರಾಜ್ಯದಲ್ಲಿ ಹೊಸದಾಗಿ ಪಡಿತರ ಚೀಟಿಗೆ ಅರ್ಜಿಯನ್ನು ಸಲ್ಲಿಸಿದ ಜನರಿಗೆ ವಿಧಾನಸಭಾ ಚುನಾವಣೆಯ ನೀತಿ ಸಂಹಿತೆಯ ಕಾರಣದಿಂದಾಗಿ ರೇಷನ್ ಕಾರ್ಡ್ ಗಳನ್ನು ವಿತರಿಸಲಿಲ್ಲ. ಈಗ ಹೊಸದಾಗಿ ಅರ್ಜಿಯನ್ನು ಸಲ್ಲಿಸಿದ ಅರ್ಹ ಫಲಾನುಭವಿಗಳಿಗೆ ಪಡಿತರ ಚೀಟಿಯನ್ನು ವಿತರಿಸಿರುವಂತೆ ಅಧಿಕಾರಿಗಳಿಗೆ ಮಾಹಿತಿಯನ್ನು ನೀಡಿರುವುದಾಗಿ ಆಹಾರ ಸಚಿವ ಕೆ ಹೆಚ್ ಮುನಿಯಪ್ಪನವರು ಸುದ್ದಿಗೋಷ್ಠಿ ಒಂದರಲ್ಲಿ ತಿಳಿಸಿದ್ದಾರೆ.

whatss

ಈಗಾಗಲೇ ಮೂರು ಲಕ್ಷಕ್ಕೆ ಹತ್ತಿರದ ಪಡಿತರ ಚೀಟಿಗಳ ಅರ್ಜಿಗಳು ಬಂದಿದ್ದು, ಅವುಗಳಲ್ಲಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿ ಬಿಪಿಎಲ್ ಕಾರ್ಡ್ಗಳನ್ನು ವಿತರಣೆ ಮಾಡಲಾಗುವುದು. ಇನ್ನೇನು ಒಂದು ತಿಂಗಳ ಒಳಗಾಗಿ ಅರ್ಜಿಯನ್ನು ಸಲ್ಲಿಸಿದ ಎಲ್ಲಾ ಜನರಿಗೆ ರೇಷನ್ ಕಾರ್ಡ್ ಗಳು ಬರುತ್ತವೆ. ನೀವೇನಾದರೂ ಬಿಪಿಎಲ್ ಕಾರ್ಡ್ಗಳನ್ನು ಪಡೆಯಲು ಅರ್ಹತೆಯನ್ನು ಉಲ್ಲವರಾಗಿದ್ದಾರೆ ಮಾತ್ರ ಅರ್ಜಿಯನ್ನು ಸಲ್ಲಿಸಿದವರಿಗೆ ಬಿಪಿಎಲ್ ಕಾರ್ಡ್ ಗಳನ್ನು  ವಿತರಿಸಲಾಗುತ್ತದೆ.

ಬಿಪಿಎಲ್ ಕಾರ್ಡ್ ಗಳನ್ನು ಪಡೆಯಲು ಬೇಕಾಗಿರುವ ಅರ್ಹತೆಗಳು :

ಬಿಪಿಎಲ್ ಕಾರ್ಡ್ ಅನ್ನು ಪಡೆಯುವ ಮುಖ್ಯ ಮಾನದಂಡವೆಂದರೆ, ವ್ಯಕ್ತಿಯು ತಿಂಗಳಿಗೆ ಗ್ರಾಮೀಣ ಪ್ರದೇಶಗಳಲ್ಲಿ ರೂ.6,400/- ಕ್ಕಿಂತ ಕಡಿಮೆ ಮತ್ತು ನಗರ ಪ್ರದೇಶಗಳಲ್ಲಿ ರೂ.11,850/- ಗಿಂತ ಕಡಿಮೆ ಗಳಿಸಿದರೆ .

ಈ ಆದಾಯ ಮಿತಿಯನ್ನು ಮೀರಿದ ಮತ್ತು ನಂತರ ಆ ವ್ಯಕ್ತಿಯು BPL ಕಾರ್ಡ್ ಹೊಂದಲು ಅರ್ಹರಾಗಿರುವುದಿಲ್ಲ. ಹಾಗೆಯೇ ವೈಟ್ ಬೋರ್ಡ್ ಕಾರುಗಳನ್ನು  ಹೊಂದಿದ್ದರೆ ಬಿಪಿಎಲ್ ಕಾರ್ಡ್ ದೊರೆಯುವುದಿಲ್ಲ.

ಅಭ್ಯರ್ಥಿಯು ಆದಾಯ ತೆರಿಗೆ ಪಾವತಿದಾರರಾಗಿರಬಾರದು
ಯಾವುದೇ ರೀತಿಯ ಸರ್ಕಾರಿ ನೌಕರರಿಗೆ ಅವಕಾಶವಿಲ್ಲ.

ಸಹಕಾರಿ ಸಂಸ್ಥೆಗಳ ಖಾಯಂ ಉದ್ಯೋಗಿಗಳು, ಆಸ್ಪತ್ರೆಗಳಲ್ಲಿನ ವೈದ್ಯರು ಮತ್ತು ಉದ್ಯೋಗಿಗಳು, ವಕೀಲರು ಮತ್ತು ಲೆಕ್ಕಪರಿಶೋಧಕರು, (ಸಣ್ಣ ಅಂಗಡಿಗಳು, ಸೈಕಲ್‌ಗಳು ಅಥವಾ ತಳ್ಳುಗಾಡಿಗಳನ್ನು ಹೊರತುಪಡಿಸಿ) ವ್ಯಾಪಾರಿಗಳು ಅಥವಾ ವ್ಯಾಪಾರಸ್ಥರು ಬಿಪಿಎಲ್ ಪಡಿತರ ಚೀಟಿಯನ್ನು ಪಡೆದುಕೊಳ್ಳಲು ಅರ್ಹರಲ್ಲ.

ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ

app download

ಹೊಸ ರೇಷನ್ ಸ್ಥಿತಿ ಚೆಕ್ ಮಾಡುವುದು ಹೇಗೆ?

ಸೂಚನೆ – ರೇಷನ್ ಕಾರ್ಡ್ ಸ್ಥಿತಿಯನ್ನು ತಿಳಿದುಕೊಳ್ಳಲು ನೀವು ಬೆಳಿಗ್ಗೆ 10:00 ಗಂಟೆ ಮೇಲೆ ಪ್ರಯತ್ನ ಮಾಡಿ. ಈಗ ಸ್ಥಿತಿ ಚೆಕ್ ಮಾಡುವುದನ್ನು ಬಂದ್ ಮಾಡಿರುತ್ತಾರೆ

ನಿಮ್ಮ ಹೆಸರು ಚೆಕ್ ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ

ಹಂತ 1: ಕೆಳಗಿನ ಡೈರೆಕ್ಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ,ಫಲಾನುಭವಿಗಳ ಪಟ್ಚಿಯಲ್ಲಿ ನಿಮ್ಮ ಹೆಸರು ಚೆಕ್ ಮಾಡಿ

https://ahara.kar.nic.in/Home/EServices

ನಂತರ ಮುಖಪುಟದ ಎಡಭಾಗದಲ್ಲಿರುವ 3 ಗೆರೆಗಳ ಮೇಲೆ ಕ್ಲಿಕ್ ಮಾಡಿ, ನಂತರ ಕೆಳಗಡೆ e-Status ಮೇಲೆ ಕ್ಲಿಕ್ ಮಾಡಿ. ನಂತರ ಕೆಳಗಡೆ New/Existing RC Request Status ಮೇಲೆ ಕ್ಲಿಕ್ ಮಾಡಿ

rcc1

ಹಂತ 2: ಹಂತ 1 – ನಿಮ್ಮ ಜಿಲ್ಲೆಯನ್ನು ಸೆಲೆಕ್ಟ್ ಮಾಡಿ

rcc2

ಹಂತ 3 – ನಂತರ ಹೊಸ ಪಡಿತರ ಚೀಟಿ ಸಲ್ಲಿಸಲಾದ ಅರ್ಜಿಯ ಸ್ಥಿತಿ ಮೇಲೆ ಕ್ಲಿಕ್ ಮಾಡಿ

rrc3

ನಂತರ ನಿಮ್ಮದು ಸಿಟಿ ಆಗಿದ್ದಲ್ಲಿ urban IRA ಸೆಲೆಕ್ಟ್ ಮಾಡಿ ಅಥವಾ ಹಳ್ಳಿ ಆಗಿದ್ರೆ RURAL ಸೆಲೆಕ್ಟ್ ಮಾಡಿ ನಂತರ ನಿಮ್ಮ ತಾಲೂಕು, ಗ್ರಾಮ ಪಂಚಾಯತಿ & ಊರು ಸೆಲೆಕ್ಟ್ ಮಾಡಿ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದ ಸ್ವೀಕೃತಿ ಸಂಖ್ಯೆ ಹಾಕಿ GO ಮೇಲೆ ಕ್ಲಿಕ್ ಮಾಡಿ. ಇಲ್ಲಿ ನಿಮ್ಮ ಅರ್ಜಿಯ ಸ್ಥಿತಿ ಕಾಣಿಸುತ್ತದೆ

rrc5

 

ಇಂದಿನ ದಿನಗಳಲ್ಲಿ ಬಿಪಿಎಲ್ ಕಾರ್ಡ್ ಮುಖ್ಯವಾಗಿ ಬೇಕೇ ಬೇಕಾಗುತ್ತದೆ. ಯಾವುದೇ ಯೋಜನೆಗಳ ಫಲವನ್ನು ಪಡೆದುಕೊಳ್ಳಲು ಅಥವಾ ಆಸ್ಪತ್ರೆಗಳಿಗೆ, ಹೀಗೆ ಇತ್ಯಾದಿ ಸಂದರ್ಭದಲ್ಲಿ ಬಿಪಿಎಲ್ ಕಾರ್ಡ್ ನಮಗೆ ಉಪಯೋಗಕ್ಕೆ ಬರುತ್ತದೆ. ಹಾಗಾಗಿ ನೀವೇನಾದರೂ ಬಿಪಿಎಲ್ ಕಾರ್ಡನ್ನು ಪಡೆಯಲು ಅರ್ಹರಿದ್ದರೆ ಕೂಡಲೇ ಅರ್ಜಿಗಳನ್ನು ಸಲ್ಲಿಸಿ. ಇಂತಹ ಉತ್ತಮ ಮಾಹಿತಿಯನ್ನು ಹೊಂದಿರುವ ಈ ಲೇಖನವನ್ನು ಕೂಡಲೇ ನಿಮ್ಮ ಎಲ್ಲಾ ಸ್ನೇಹಿತ ಮಿತ್ರರಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.

Picsart 23 07 16 14 24 41 584 transformed 1

ಇದನ್ನೂ ಓದಿ: 5 ನಿಮಿಷದಲ್ಲಿ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿ : How to link Aadhaar with Pan card

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ಲೇಖನ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube 

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

tel share transformed

 

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!