ಸರ್ಕಾರದಿಂದ ರೇಷನ್ ಕಾರ್ಡನ್ನು(Ration card) ತಿದ್ದುಪಡಿ ಮಾಡಿಸಲು ಮತ್ತೆ ಅವಕಾಶವನ್ನು ಕಲ್ಪಿಸಿಕೊಡಲಾಗಿದೆ. ಹೌದು, ನೀವೇನಾದರೂ ಇನ್ನೂ ಕೂಡ ನಿಮ್ಮ ರೇಷನ್ ಕಾರ್ಡ್ ಗಳಲ್ಲಿ ತಪ್ಪುಗಳಿದ್ದು ಅವುಗಳನ್ನು ತಿದ್ದುಪಡಿ ಮಾಡಿಸಿಲ್ಲವೆಂದರೆ ಮತ್ತೆ ನಿಮಗೆ ಸರ್ಕಾರದ ವತಿಯಿಂದ ಒಂದು ಗುಡ್ ನ್ಯೂಸ್ ಅಂತಾನೇ ಹೇಳಬಹುದು. ಏಕೆಂದರೆ, ಸರ್ಕಾರವು ಮತ್ತೆ ರೇಷನ್ ಕಾರ್ಡ್ ತಿದ್ದುಪಡಿ(Ration card correction)ಗೆ ಅವಕಾಶವನ್ನು ನೀಡಿದೆ. ಎಷ್ಟು ದಿನಗಳ ಕಾಲ ಈ ಅವಕಾಶ ಇರುತ್ತದೆ?, ಯಾವ ದಿನ ಶುರುವಾಗುತ್ತದೆ?, ಎಲ್ಲಿ ಈ ಕರೆಕ್ಷನ್ಗಳನ್ನು ಮಾಡಿಸುವುದು ಎಂಬುದರ ಸಂಪೂರ್ಣವಾದ ಮಾಹಿತಿಯನ್ನು ನಿಮಗೆ ಈ ವರದಿಯ ಮೂಲಕ ತಿಳಿಸಿಕೊಡಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಎಲ್ಲೆಲ್ಲಿ ಹಾಗೂ ಎಷ್ಟು ದಿನಗಳ ಕಾಲ ರೇಷನ್ ಕಾರ್ಡ್ ಕರೆಕ್ಷನ್ ಲಭ್ಯ :
ಆಹಾರ ಇಲಾಖೆಯ ಆದೇಶದ ಮೇರೆಗೆ ಇಂದು ಅಂದರೆ ಫೆಬ್ರವರಿ 7 ರಿಂದ ರೇಷನ್ ಕಾರ್ಡ್ಗಳ ತಿದ್ದುಪಡಿಯನ್ನು ಮಾಡಿಸಬಹುದಾಗಿದೆ. ಈ ಬಾರಿ ರೇಷನ್ ಕಾರ್ಡ್ ತಿದ್ದುಪಡಿಗಾಗಿ ಕೇವಲ ಒಂದು ದಿನದ ಕಾಲಾವಕಾಶವನ್ನು ನೀಡುತ್ತಿದ್ದಾರೆ. ಫೆಬ್ರವರಿ ಏಳು ಅಂದರೆ ಇಂದು ಮಾತ್ರ ರೇಷನ್ ಕಾರ್ಡಿನ ತಿದ್ದುಪಡಿಕೆಯ ಅವಕಾಶವಿದೆ. ರೇಷನ್ ಕಾರ್ಡ್ ತಿದ್ದುಪಡಿಗೆ ಬಯೋಮೆಟ್ರಿಕ್ ಸೌಲಭ್ಯ ಇರುವ ಕಂಪ್ಯೂಟರ್ ಕೇಂದ್ರಗಳಿಗೆ ಮಾತ್ರ ತೆರಳಬೇಕಾಗುತ್ತದೆ. ಅವುಗಳೆಂದರೆ, ಬೆಂಗಳೂರು ಒನ್(Bengaluru one), ಗ್ರಾಮ ಒನ್(Gram one), ಕರ್ನಾಟಕ ಒನ್ ಸೇವಾ ಕೇಂದ್ರದಲ್ಲಿ ತಿದ್ದುಪಡಿ ಮಾಡಿಸಬಹುದಾಗಿದೆ. ಮಧ್ಯಾಹ್ನ 1 ಗಂಟೆಯಿಂದ ಹಿಡಿದು ಸಂಜೆ 4 ಗಂಟೆಗಳವರೆಗೂ ನಿಮ್ಮ ಬಿಪಿಎಲ್ ಅಥವಾ ಎಪಿಎಲ್ ಕಾರ್ಡ್(BPL and APL card) ಗಳಲ್ಲಿ ತಪ್ಪುಗಳಿದ್ದರೆ ಅವುಗಳನ್ನು ತಿದ್ದುಪಡಿ ಮಾಡಿಸಿಕೊಳ್ಳಲು ಅವಕಾಶವನ್ನು ಕಲ್ಪಿಸಿಕೊಡಲಾಗಿದೆ. ಈ ಹಿಂದೆ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ ನೀಡಲಾಗಿತ್ತು ಆದರೆ ಸರ್ವರ್ ಡೌನ್ ಹಾಗೂ ಅನೇಕ ಕಾರಣಗಳಿಂದಾಗಿ ಅನೇಕ ಜನರಿಗೆ ರೇಷನ್ ಕಾರ್ಡ್ ಕರೆಕ್ಷನ್ ಗಳನ್ನು ಮಾಡಿಸಿಕೊಳ್ಳಲು ಅವಕಾಶ ದೊರೆತ್ತಿಲ್ಲ. ಹಾಗಾಗಿ ಸರ್ಕಾರವು ಮತ್ತೆ ತಿದ್ದುಪಡಿಗೆ ಅವಕಾಶವನ್ನು ನೀಡಿದೆ.
ಬೇಕಾದ ದಾಖಲೆಗಳು:
ಕುಟುಂಬ ಸದಸ್ಯರ ಆಧಾರ್ ಕಾರ್ಡ್.
ಐದು ವರ್ಷದ ಒಳಗಿನ ಮಕ್ಕಳನ್ನು ಸೇರ್ಪಡೆ ಮಾಡಬೇಕಾಗಿದ್ದಲ್ಲಿ ಅವರ ಆಧಾರ್ ಕಾರ್ಡ್ ಹಾಗೂ ಜನನ ಪ್ರಮಾಣ ಪತ್ರ.
ರೇಷನ್ ಕಾರ್ಡ್ ತಿದ್ದುಪಡಿಯ ಡೈರೆಕ್ಟ್ ಲಿಂಕ್:
https://ahara.kar.nic.in/rcamend/
ಯಾವ ಜಿಲ್ಲೆಗಳಲ್ಲಿ ಹಾಗೂ ಯಾವ ತಿದ್ದುಪಡಿಗಳನ್ನು ಮಾಡಿಸಬಹುದು :
ಬಾಗಲಕೋಟಟೆ, ಬೆಳಗಾವಿ, ಚಾಮರಾಜನಗರ, ಚಿಕ್ಕಮಂಗಳೂರು, ದಕ್ಷಿಣ ಕನ್ನಡ, ಧಾರವಾಡ, ಗದಗ, ಹಾಸನ, ಹಾವೇರಿ, ಕೊಡಗು, ಮಂಡ್ಯ ಮೈಸೂರು, ಉಡುಪಿ, ಉತ್ತರ ಕನ್ನಡ, ವಿಜಯಪುರ. ಇತರೆ ಇಲ್ಲೆಯವರು ನಿಮ್ಮ ಹತ್ತಿರದ ಗ್ರಾಮ ಒನ್, ಕರ್ನಾಟಕ ಒನ್ ಕೇಂದ್ರದಲ್ಲಿ ತಿದ್ದುಪಡಿಯನ್ನು ಮಾಡಿಸಲು ಅವಕಾಶವಿದೆ.
ಹೆಸರು ಬದಲಾವಣೆ (Name Change)
ಆಧಾರ್ ಕಾರ್ಡ್‌ನಲ್ಲಿರುವ ಹೆಸರು ಸೇರ್ಪಡೆ(Ration Card Correction)
ಹೊಸ ಸದಸ್ಯರ ಸೇರ್ಪಡೆ(New Member Add)
ಮೃತರ ಹೆಸರು ಡಿಲೀಟ್
ಬೇರೆ ಜಿಲ್ಲೆಗೆ ವರ್ಗಾವಣೆ (Ration Card Transfer)
ವಿಳಾಸ ಪರಿಷ್ಕರಣೆ (Ration Card Address Change)
ಮೇಲೆ ತಿಳಿಸಲಾದ ಎಲ್ಲಾ ತಿದ್ದುಪಡಿಗಳನ್ನು ನೀವು ಇಂದು ರೇಷನ್ ಕಾರ್ಡ್ ನಲ್ಲಿ ಮಾಡಿಸಿಕೊಳ್ಳಲು ಅವಕಾಶವಿದೆ. ಗೃಹಲಕ್ಷ್ಮಿ(Gruhalakshmi), ಅನ್ನ ಭಾಗ್ಯ(Annabhagya) ಯೋಜನೆಗಳಂತಹ ಫಲಾನುಭವಿಗಳಾಗಲು ನಿಮ್ಮ ಪಡಿತರ ಚೀಟಿಯಲ್ಲಿ ಏನಾದರೂ ತಪ್ಪುಗಳಿದ್ದರೆ ಅದನ್ನು ಸರಿಪಡಿಸಿಕೊಳ್ಳಲು ಇದು ಒಂದು ಒಳ್ಳೆಯ ಅವಕಾಶ ಇರಬಹುದು. ಹಾಗಾಗಿ ತಡ ಮಾಡದೆ ಇಂದೇ ಭೇಟಿ ನೀಡಿ. ಇಂತಹ ಉತ್ತಮವಾದ ಮಾಹಿತಿಯನ್ನು ಹೊಂದಿರುವ ಈ ವರದಿಯನ್ನು ಕೂಡಲೇ ನಿಮ್ಮ ಎಲ್ಲಾ ಸ್ನೇಹಿತನಿತ್ರರಿಗೂ ಹಾಗೂ ಬಂಧುಗಳಿಗೂ ಶೇರ್ ಮಾಡಿ, ಧನ್ಯವಾದಗಳು.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
- ಇದುವರೆಗೂ ಒಂದು ಕಂತಿನ ಹಣ ಬರದೇ ಇದ್ದವರಿಗೆ ಹೊಸ ಮಾರ್ಗಸೂಚಿ ಪ್ರಕಟ, ಹೀಗೆ ಮಾಡಿ ₹2000/- ಬರುತ್ತೆ
- ಗೃಹಲಕ್ಷ್ಮಿ ಯೋಜನೆಯ 6ನೇ ಕಂತಿನ ಹಣ ಈ ದಿನ ಜಮಾ! ಈ ಮಹಿಳೆಯರಿಗೆ ಮಾತ್ರ
- ಮಹಿಳೆಯರಿಗೆ ಗುಡ್ ನ್ಯೂಸ್! ಉಚಿತ ಗ್ಯಾಸ್ ಸಂಪರ್ಕಕ್ಕೆ ಅರ್ಜಿ ಆಹ್ವಾನ
- ಇನ್ನೂ ಮುಂದೆ 2000/- ರೂ. ಇವರಿಗೆ ಬರುವುದಿಲ್ಲ, ಜನವರಿ ತಿಂಗಳ ಅಕ್ರಮ ಬಿಪಿಎಲ್ ಕಾರ್ಡ್ ಪತ್ತೆ, ರದ್ದಾದ ಪಟ್ಟಿ ಬಿಡುಗಡೆ.!
- ರೈತರ ಖಾತೆಗೆ ಬರ ಪರಿಹಾರದ ಮೊದಲನೇ ಕಂತಿನ ಹಣ ₹2000 ಜಮಾ, ಸ್ಟೇಟಸ್ ಹೀಗೆ ಚೆಕ್ ಮಾಡಿ
- ಬೆಳೆಹಾನಿ ಪರಿಹಾರದ ಹಣ ಇನ್ನೂ ಬಂದಿಲ್ವಾ? ಆಧಾರ್ ಲಿಂಕ್ ಆಗದೇ ಇರುವ ಪಟ್ಟಿ ಬಿಡುಗಡೆ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
I am granite fitting &artist worker so iam interested registration for labour card