CRPF ನಲ್ಲಿ ಸಹಾಯಕ ಕಮಾಂಡೆಂಟ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟ.! ಇಲ್ಲಿದೆ ವಿವರ 

Picsart 25 03 19 23 22 40 086

WhatsApp Group Telegram Group

ಈ ವರದಿಯಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ನೇಮಕಾತಿ 2025 ( CRPF Recruitment 2025)  ಹುದ್ದೆಗಳ  ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಲಾಗಿದೆ.ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಕೇಂದ್ರ ಮೀಸಲು ಪೊಲೀಸ್ ಪಡೆ (CRPF) 2025 ನೇಮಕಾತಿಯ ಅಧಿಸೂಚನೆ ಪ್ರಕಟಗೊಂಡಿದ್ದು, ಸಹಾಯಕ ಕಮಾಂಡಂಟ್ (GD) ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಇದು ಸಶಸ್ತ್ರ ಸೇನಾ ಸೇವೆಗೆ ಆಸಕ್ತಿ ಇರುವ ಅಭ್ಯರ್ಥಿಗಳಿಗೆ ಅದ್ಬುತ ಅವಕಾಶವಾಗಿದ್ದು, ಅರ್ಹ ಅಭ್ಯರ್ಥಿಗಳು 2025 ಫೆಬ್ರವರಿ 27 ರಿಂದ ಮಾರ್ಚ್ 21ರವರೆಗೆ ಅರ್ಜಿಗಳನ್ನು ಸಲ್ಲಿಸಬಹುದು.

ಹುದ್ದೆಗಳ ವಿವರ:

ಹುದ್ದೆ ಹೆಸರು: ಸಹಾಯಕ ಕಮಾಂಡಂಟ್ (GD)
ಒಟ್ಟು ಹುದ್ದೆಗಳು: 76 ಹುದ್ದೆಗಳು
ಉದ್ಯೋಗ ಸ್ಥಳ: ಭಾರತಾದ್ಯಂತ

ನಿಗದಿತ ಹಂಚಿಕೆ:
BSF: 08
CRPF: 55
ITBP: 02
SSB: 11
NOTE: ಮೀಸಲಾತಿ ನಿಯಮಗಳ ಪ್ರಕಾರ ಹುದ್ದೆಗಳ ಹಂಚಿಕೆ ಇರುತ್ತದೆ.

ಶೈಕ್ಷಣಿಕ ಅರ್ಹತೆ & ಸೇವಾ ಅನುಭವ:

ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ (Graduation) ಪೂರೈಸಿರಬೇಕು.

ಅನುಭವ: ಕನಿಷ್ಠ 5 ವರ್ಷಗಳ ಸಬ್ ಇನ್ಸ್‌ಪೆಕ್ಟರ್ ಅಥವಾ ಇನ್ಸ್‌ಪೆಕ್ಟರ್ ಹುದ್ದೆಯಲ್ಲಿ ಸೇವೆ ಅನುಭವ ಬೇಕಾಗಿರುತ್ತದೆ.

ಪ್ರಶಿಕ್ಷಣ ಅವಧಿಯು ಸೇವಾ ಅವಧಿಗೆ ಸೇರಿಸಲಾಗುತ್ತದೆ.

ವಯೋಮಿತಿ (Age Limit)

ಗರಿಷ್ಠ ವಯಸ್ಸು: 35 ವರ್ಷ
ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ: 5 ವರ್ಷ ಸಡಿಲಿಕೆ
ಒಬಿಸಿ ಅಭ್ಯರ್ಥಿಗಳಿಗೆ: 3 ವರ್ಷ ಸಡಿಲಿಕೆ

ವೇತನ ಶ್ರೇಣಿ (Salary Details)

ರೂ. 56,100 – 1,77,500 (7ನೇ ವೇತನ ಆಯೋಗ, Level-10)

ಹೊಂದುವ ಇತರ ಸೌಲಭ್ಯಗಳು:

ಮಹಂಗಾಯಿ ಭತ್ಯೆ (DA)
ಮನೆ ಬಾಡಿಗೆ ಭತ್ಯೆ (HRA)
ನಗರ ಸಂಯೋಜಿತ ಭತ್ಯೆ (CCA)
ಉಚಿತ ವೈದ್ಯಕೀಯ ಸೌಲಭ್ಯ(free medical facility)

ಅರ್ಜಿ ಶುಲ್ಕ (Application Fees)

ಸಾಮಾನ್ಯ/ಒಬಿಸಿ ಅಭ್ಯರ್ಥಿಗಳು: ರೂ. 200
ಎಸ್ಸಿ/ಎಸ್ಟಿ/ಅಂಗವಿಕಲ ಅಭ್ಯರ್ಥಿಗಳಿಗೆ: ಶುಲ್ಕವಿಲ್ಲ

ಆಯ್ಕೆ ಪ್ರಕ್ರಿಯೆ (Selection Process):

ಲಿಖಿತ ಪರೀಕ್ಷೆ (Written Test)
ಪೇಪರ್ 1: ಸಾಮಾನ್ಯ ಜ್ಞಾನ & ಬುದ್ಧಿಮತ್ತೆ – 100 ಅಂಕ
ಪೇಪರ್ 2: ವೃತ್ತಿಪರ ಕೌಶಲ್ಯ (Professional Ability) – 100 ಅಂಕ
ಪೇಪರ್ 3: ಪ್ರಬಂಧ, ನಿಖರ ಬರಹ, ಓದು ಮತ್ತು ಅರ್ಥಗ್ರಹಣ – 100 ಅಂಕ
ಕನಿಷ್ಟ ಅಂಕ: ಸಾಮಾನ್ಯ: 50%, SC/ST/OBC: 45%

ದೈಹಿಕ ಸಾಮರ್ಥ್ಯ ಪರೀಕ್ಷೆ (Physical Test)
100 ಮೀ ಓಟ: ಪುರುಷರು – 16 ಸೆಕೆಂಡು, ಮಹಿಳೆಯರು – 18 ಸೆಕೆಂಡು
800 ಮೀ ಓಟ: ಪುರುಷರು – 3 ನಿಮಿಷ 45 ಸೆಕೆಂಡು, ಮಹಿಳೆಯರು – 4 ನಿಮಿಷ 45 ಸೆಕೆಂಡು
ಲಾಂಗ್ ಜಂಪ್: ಪುರುಷರು – 3.50 ಮೀ, ಮಹಿಳೆಯರು – 3.00 ಮೀ
ಶಾಟ್ ಪುಟ್: ಪುರುಷರು – 4.50 ಮೀ (ಮಹಿಳೆಯರಿಗೆ ಅನ್ವಯಿಸುವುದಿಲ್ಲ)

ಸಂದರ್ಶನ (Interview) – 100 ಅಂಕ

ವೈದ್ಯಕೀಯ ಪರೀಕ್ಷೆ (Medical Test) – SHAPE-1 ಪ್ರಮಾಣಿತತೆ ಅಗತ್ಯ

ಪರೀಕ್ಷಾ ಕೇಂದ್ರಗಳು :
ಡೆಲ್ಲಿ NCR
ಮುಂಬೈ
ಕೋಲ್ಕತ್ತಾ
ಲಕ್ನೋ
ಚೆನ್ನೈ
ಬೆಂಗಳೂರು
ಗುವಾಹಾಟಿ

ಅಗತ್ಯ ದಾಖಲೆಗಳು:

ಅರ್ಜಿ ನಮೂನೆ (Application Form)
ಪಾಸ್‌ಪೋರ್ಟ್ ಗಾತ್ರದ ಫೋಟೋ
ವಿದ್ಯಾರ್ಹತಾ ಪ್ರಮಾಣಪತ್ರ
ಜನ್ಮ ಪ್ರಮಾಣಪತ್ರ
ಸರ್ಕಾರಿ ಸೇವಾ ದಾಖಲೆಗಳು
SHAPE-1 ವೈದ್ಯಕೀಯ ಪ್ರಮಾಣಪತ್ರ

ಅರ್ಜಿ ಸಲ್ಲಿಸುವುದು ಹೇಗೆ?


ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಈ ಹಂತಗಳನ್ನು ಅನುಸರಿಸುವ ಮೂಲಕ ಅರ್ಜಿ ಸಲ್ಲಿಸಬಹುದು:

ಹಂತ 1: ಮೊದಲು, ಅಧಿಕೃತ ವೆಬ್‌ಸೈಟ್ ಗೆ (Official Website) ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ
https://rect.crpf.gov.in

ಹಂತ 2: ನಂತರ ನೋಂದಣಿಯನ್ನು ಮಾಡಿಕೊಳ್ಳಿ. ನಂತರ ಅರ್ಜಿ ನಮೂನೆಯನ್ನು ಭರ್ತಿ ಮಾಡಿ.

ಹಂತ 3: ಅಭ್ಯರ್ಥಿಗಳು ಫೋಟೋ, ಸಹಿ, ಹುಟ್ಟಿದ ದಿನಾಂಕದ ದಾಖಲೆ,  ಗುರುತಿನ ಪುರಾವೆ, ಅಗತ್ಯ ಅರ್ಹತೆಯ ಮಾರ್ಕ್‌ಶೀಟ್, ವರ್ಗ ಪ್ರಮಾಣಪತ್ರ (ಅನ್ವಯಿಸಿದರೆ). ಹೀಗೆ ಕೇಳಲಾದ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು

ಹಂತ 4: ಅರ್ಜಿ ಶುಲ್ಕವನ್ನು ಪಾವತಿಸಿ.(ಅನ್ವಯಿಸಿದಲ್ಲಿ)

ಹಂತ 5: ಸಂಪೂರ್ಣ ಅರ್ಜಿ ನಮೂನೆಯನ್ನು ಪೂರ್ವವೀಕ್ಷಿಸಲು ಮತ್ತು ಪರಿಶೀಲಿಸಲು ಪೂರ್ವವೀಕ್ಷಣೆ ಟ್ಯಾಬ್ ಮೇಲೆ ಕ್ಲಿಕ್ ಮಾಡಿ

ಹಂತ 6: ಅಂತಿಮ ಸಲ್ಲಿಕೆ ಮೊದಲು, ಅಗತ್ಯವಿದ್ದಲ್ಲಿ ವಿವರಗಳನ್ನು ಮಾರ್ಪಡಿಸಿ ಮತ್ತು ನೀವು ಭರ್ತಿ ಮಾಡಿದ ಫೋಟೋ, ಸಹಿ ಮತ್ತು ಇತರ ವಿವರಗಳನ್ನು ಪರಿಶೀಲಿಸಿದ ನಂತರ ಮತ್ತು ಖಚಿತಪಡಿಸಿದ ನಂತರವೇ ಅಂತಿಮ ಸಲ್ಲಿಕೆ ಮಾಡಿ.

ಪ್ರಮುಖ ದಿನಾಂಕಗಳು :

ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: 27 ಫೆಬ್ರುವರಿ 2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 21 ಮಾರ್ಚ್ 2025

ಪ್ರಮುಖ ಲಿಂಕುಗಳು :

ನೋಟಿಫಿಕೇಶನ್ ಡೌನ್ಲೋಡ್: ಇಲ್ಲಿ ಕ್ಲಿಕ್ ಮಾಡಿ

ಅರ್ಜಿ ಸಲ್ಲಿಸಲು: ಇಲ್ಲಿ ಕ್ಲಿಕ್ ಮಾಡಿ

ಈ ಎಲ್ಲಾ ಅಂಶಗಳನ್ನು ಗಮನಿಸಿ, ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು! ಇದು ಭಾರತೀಯ ಭದ್ರತಾ ಪಡೆಗಳಲ್ಲಿ ಉದ್ಯೋಗ ಸಾಧಿಸಲು ಅತಿ ದೊಡ್ಡ ಅವಕಾಶಗಳಲ್ಲೊಂದಾಗಿದೆ.ಇನ್ನೂ ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ಸೈಟ್ ಭೇಟಿಯಾಗಿ – https://rect.crpf.gov.in ಈ ಉದ್ಯೋಗ ಅವಕಾಶವನ್ನು ಬಳಸಿಕೊಳ್ಳಿ ಮತ್ತು ನಿಮ್ಮ ಭವಿಷ್ಯವನ್ನು ನಿರ್ಮಿಸಿಕೊಳ್ಳಿ.ಮತ್ತು ಇಂತಹ ಉತ್ತಮವಾದ  ಮಾಹಿತಿಯನ್ನು ನೀವು ತಿಳಿದಮೇಲೆ  ಈ ಮಾಹಿತಿಯನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!