ಆದಾಯ ತೆರಿಗೆ ಇಲಾಖೆಯಲ್ಲಿ ಉದ್ಯೋಗ – ₹81,100 ವೇತನ | ಅರ್ಜಿ ಸಲ್ಲಿಸಲು ನಾಳೆಯೇ ಕೊನೆಯ ದಿನ!
ಬೆಂಗಳೂರು, ಏಪ್ರಿಲ್ 04:
ಆದಾಯ ತೆರಿಗೆ ಇಲಾಖೆ (Income Tax Department) ಸ್ಟೆನೋಗ್ರಾಫರ್, ತೆರಿಗೆ ಸಹಾಯಕ ಮತ್ತು ಮಲ್ಟಿ-ಟಾಸ್ಕಿಂಗ್ ಸ್ಟಾಫ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದ್ದು, ಒಟ್ಟು 56 ಹುದ್ದೆಗಳ ಭರ್ತಿ ನಡೆಯಲಿದೆ. ಅರ್ಜಿ ಸಲ್ಲಿಸಲು ಏಪ್ರಿಲ್ 05 (ನಾಳೆ) ಕೊನೆಯ ದಿನವಾಗಿರುವುದರಿಂದ, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ತಕ್ಷಣವೇ ಅರ್ಜಿ ಸಲ್ಲಿಸಬೇಕು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ನೇಮಕಾತಿ ವಿವರ:
1. ನಿಯುಕ್ತಿ ಸಂಸ್ಥೆ: ಆದಾಯ ತೆರಿಗೆ ಇಲಾಖೆ (Income Tax Department)
2. ಒಟ್ಟು ಹುದ್ದೆಗಳು: 56 ಹುದ್ದೆಗಳು
3. ಹುದ್ದೆಗಳ ಹೆಸರು:
– ಸ್ಟೆನೋಗ್ರಾಫರ್ ಗ್ರೇಡ್-II – 2 ಹುದ್ದೆ
– ತೆರಿಗೆ ಸಹಾಯಕ (Tax Assistant) – 28 ಹುದ್ದೆ
– ಮಲ್ಟಿ-ಟಾಸ್ಕಿಂಗ್ ಸ್ಟಾಫ್ (MTS) – 26 ಹುದ್ದೆ
4. ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್
5. ಅರ್ಜಿ ಸಲ್ಲಿಸಲು ಕೊನೆಯ ದಿನ: ಏಪ್ರಿಲ್ 05, 2025
ವೇತನ ವಿವರ:
▪️ ಸ್ಟೆನೋಗ್ರಾಫರ್ ಗ್ರೇಡ್-II ಮತ್ತು ತೆರಿಗೆ ಸಹಾಯಕ ಹುದ್ದೆ: ₹25,500 – ₹81,100
▪️ ಮಲ್ಟಿ-ಟಾಸ್ಕಿಂಗ್ ಸ್ಟಾಫ್ (MTS): ₹18,000 – ₹56,900
ವಿದ್ಯಾರ್ಹತೆ :
– ಸ್ಟೆನೋಗ್ರಾಫರ್ & ತೆರಿಗೆ ಸಹಾಯಕ:
ಕನಿಷ್ಠ ಪದವಿ (Degree) ಪಡೆದಿರಬೇಕು
– ಮಲ್ಟಿ-ಟಾಸ್ಕಿಂಗ್ ಸ್ಟಾಫ್ (MTS):
ಕನಿಷ್ಠ ಎಸ್‌ಎಸ್‌ಎಲ್‌ಸಿ (SSLC) ಪಾಸಾದವರು ಅರ್ಜಿ ಸಲ್ಲಿಸಬಹುದು.
ವಯೋಮಿತಿ:
– ಸ್ಟೆನೋಗ್ರಾಫರ್ & ತೆರಿಗೆ ಸಹಾಯಕ: 18 ರಿಂದ 27 ವರ್ಷ
– ಮಲ್ಟಿ-ಟಾಸ್ಕಿಂಗ್ ಸ್ಟಾಫ್: 18 ರಿಂದ 25 ವರ್ಷ
– ಮೀಸಲಾತಿ ಶ್ರೇಣಿಗೆ ಸರ್ಕಾರದ ನಿಯಮಾನುಸಾರ ವಯೋಮಿತಿಯಲ್ಲಿ ಸಡಿಲಿಕೆ.
ಆಯ್ಕೆ ವಿಧಾನ:
– ಲೇಖಿತ ಪರೀಕ್ಷೆ ಇಲ್ಲ
– Typing Test / Skill Test ಆಧಾರಿತ ಆಯ್ಕೆ ಪ್ರಕ್ರಿಯೆ
ಅರ್ಜಿ ಸಲ್ಲಿಕೆ ಪ್ರಕ್ರಿಯೆ:
ಸ್ಟೆಪ್-ಬೈ-ಸ್ಟೆಪ್ ಅರ್ಜಿ ಸಲ್ಲಿಕೆ ವಿಧಾನ:
1. ಅಧಿಕೃತ ವೆಬ್‌ಸೈಟ್ incometax.gov.in ಗೆ ಭೇಟಿ ನೀಡಿ
2. “Recruitment” ವಿಭಾಗದಲ್ಲಿ ಅಧಿಸೂಚನೆಯನ್ನು ಓದಿ
3. ಅರ್ಜಿ ಡೌನ್‌ಲೋಡ್ ಮಾಡಿ ಎಲ್ಲ ವಿವರಗಳನ್ನು ಭರ್ತಿ ಮಾಡಿ
4. ಅಗತ್ಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಮತ್ತು ಅಪ್ಲೋಡ್ ಮಾಡಿ
5. ಅರ್ಜಿ ಸಲ್ಲಿಸಿ ಮತ್ತು ಕಾನ್ಫರ್ಮೇಶನ್ ಕಾಪಿ ಉಳಿಸಿಕೊಳ್ಳಿ.
ತಡ ಮಾಡಬೇಡಿ – ನಾಳೆಯೇ ಕೊನೆಯ ದಿನ!
▪️ ಅರ್ಜಿ ಸಲ್ಲಿಸಲು ಏಪ್ರಿಲ್ 05, 2025 (ನಾಳೆ) ಕೊನೆಯ ದಿನವಾಗಿದೆ.
▪️ ಅರ್ಜಿ ಸಲ್ಲಿಸಲು ಇನ್ನು ಕೆಲವೇ ಗಂಟೆಗಳ ಕಾಲಾವಕಾಶ ಉಳಿದಿದೆ!
▪️ ಆಸಕ್ತರು ತಡಮಾಡದೆ ತಕ್ಷಣವೇ ಅರ್ಜಿ ಸಲ್ಲಿಸಿ!
ನಿಮ್ಮ ಕನಸಿನ ಸರ್ಕಾರಿ ಉದ್ಯೋಗವನ್ನು ಖಾತ್ರಿಗೊಳಿಸಿಕೊಳ್ಳಲು ಈ ಅವಕಾಶವನ್ನು ಕೈಚೆಲ್ಲಿಸಬೇಡಿ!
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.