ಮಹತ್ವದ ಮಾಹಿತಿ: ರಾಜ್ಯದ ವಸತಿ ಶಾಲೆಗಳಲ್ಲಿ 6ನೇ ತರಗತಿಗೆ ಪ್ರವೇಶಾತಿಗೆ ಅರ್ಜಿ ಆಹ್ವಾನ!
ವಿದ್ಯಾಭ್ಯಾಸವು (Education) ಮಕ್ಕಳ ಭವಿಷ್ಯ ರೂಪಿಸುವ ಪ್ರಮುಖ ಹಂತವಾಗಿದ್ದು, ಈ ದೃಷ್ಟಿಯಿಂದ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳು (KREIS) 2025-26ನೇ ಶೈಕ್ಷಣಿಕ ಸಾಲಿಗೆ 6ನೇ ತರಗತಿಗೆ ಪ್ರವೇಶಾತಿಗೆ ಸಂಬಂಧಿಸಿದಂತೆ ಅರ್ಜಿ ಆಹ್ವಾನಿಸಿದೆ. 2025-26ನೇ ಶೈಕ್ಷಣಿಕ ಸಾಲಿನ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ (Karnataka Residential Educational Institutions) 6ನೇ ತರಗತಿಗೆ ಪ್ರವೇಶಕ್ಕಾಗಿ ಅಗತ್ಯವಾದ ಪ್ರವೇಶ ಪರೀಕ್ಷೆ (Entrance Exam) ಮತ್ತು ಆನ್ಸೆಟ್ ಕೌನ್ಸಿಲಿಂಗ್ (Onset counselling) ಪ್ರಕ್ರಿಯೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಲಿದೆ. ಈ ಪ್ರವೇಶ ಪರೀಕ್ಷೆ ಮೂಲಕ ವಿದ್ಯಾರ್ಥಿಗಳಿಗೆ ರಾಜ್ಯದ ವಿವಿಧ ವಸತಿ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯಲು ಅವಕಾಶ ಒದಗಿಸಲಾಗುವುದು. ಅರ್ಹ ಅಭ್ಯರ್ಥಿಗಳು ಪ್ರವೇಶ ಪರೀಕ್ಷೆಗೆ ನೋಂದಾಯಿಸಿಕೊಳ್ಳಬೇಕು.ಹೇಗೆ ನೋಂದಾಯಿಸಿಕೊಳ್ಳುವುದು ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಪ್ರವೇಶ ಪ್ರಕ್ರಿಯೆ ಹೇಗಿರುತ್ತದೆ :
ಪ್ರವೇಶಾತಿ ಪ್ರಕ್ರಿಯೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ನೇತೃತ್ವದಲ್ಲಿ ನಡೆಯಲಿದ್ದು, 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಪೋಷಕರು ತಮ್ಮ ಮಕ್ಕಳ ಪ್ರವೇಶಾತಿಗಾಗಿ ಅರ್ಜಿ (Application) ಸಲ್ಲಿಸಬಹುದು. ಅರ್ಜಿ ಸಲ್ಲಿಕೆಗೆ ಅಗತ್ಯ ಮಾಹಿತಿಗಳನ್ನು “ಮಾಹಿತಿ ಪುಸ್ತಕ-2025” ಮೂಲಕ ನೀಡಲಾಗಿದ್ದು, ಈ ಪುಸ್ತಕವನ್ನು KEA ಮತ್ತು KREIS ಸಂಸ್ಥೆಗಳ ವೆಬ್‌ಸೈಟ್‌ಗಳಲ್ಲಿ ಲಭ್ಯವಾಗಿಸುತ್ತದೆ.
ಅರ್ಜಿಯ ಮುಖ್ಯ ದಿನಾಂಕಗಳು (Dates) ಹೀಗಿವೆ :
ಅರ್ಜಿಯ ಪ್ರಾರಂಭ ಮತ್ತು ಕೊನೆಯ ದಿನಾಂಕ:
ದಿನಾಂಕ 11-01-2025 ರಂದು ಮಧ್ಯಾಹ್ನ 4:00 ಗಂಟೆಗೆ ಪ್ರಾರಂಭವಾಗಿ 25-01-2025 ರ ಸಂಜೆ 5:30 ಗಂಟೆಗೆ ಕೊನೆಯಾಗಲಿದೆ.
ಪ್ರವೇಶ ಪರೀಕ್ಷೆಯ ದಿನಾಂಕ:
ಪ್ರವೇಶ ಪತ್ರವನ್ನು 06-02-2025 ರಿಂದ ಡೌನ್‌ಲೋಡ್ ಮಾಡಬಹುದು. ದಿನಾಂಕ 15-02-2025 (ಶನಿವಾರ)ದಂದು ಪ್ರವೇಶ ಪರೀಕ್ಷೆಯನ್ನು ನಡೆಸಲಾಗುತ್ತದೆ.
ಅರ್ಜಿಯ ಪ್ರಮುಖ ವಿವರಗಳು ಕೆಳಗಿನಂತಿವೆ (Other important informations) :
ಅರ್ಜಿ ಸಲ್ಲಿಸಲು ಅಭ್ಯರ್ಥಿಯು 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರಬೇಕು.
SATS ಸಂಖ್ಯೆ, ಇತ್ತೀಚಿನ ಭಾವಚಿತ್ರ ಮತ್ತು ಮೀಸಲಾತಿಗೆ ಸಂಬಂಧಿಸಿದ ದಾಖಲಾತಿಗಳನ್ನು ಅರ್ಜಿ ಸಲ್ಲಿಸುವಾಗ ಹಾಜರುಪಡಿಸಬೇಕು.
ಪೋಷಕರು ತಮ್ಮ ಮಕ್ಕಳ ಸೀಟು ಹಂಚಿಕೆಗಾಗಿ ಆಯಾ ವಸತಿ ಶಾಲೆಗಳ ಆಯ್ಕೆಯನ್ನು ಆದ್ಯತಾ ಕ್ರಮದಲ್ಲಿ ಸಲ್ಲಿಸಬೇಕು.
ಅರ್ಜಿ ಸಲ್ಲಿಕೆ ಆನ್‌ಲೈನ್‌ನಲ್ಲಿ ನಡೆಯಲಿದ್ದು, ಅರ್ಜಿಯ ದೃಢೀಕರಣ ಸಂಬಂಧಿತ ವಿಷಯಗಳು ವಸತಿ ಶಾಲೆಗಳ ಮುಖ್ಯಸ್ಥರ ಮೂಲಕ ನಡೆಯುತ್ತದೆ.
ಅರ್ಜಿದಾರರ ಆದಾಯ (Income) ಮಿತಿ ಹೇಗಿರಬೇಕು :
ವಿಭಿನ್ನ ಮೀಸಲಾತಿ ವರ್ಗಗಳಿಗೆ ಆಯ್ಕೆಯಾದ ವಾರ್ಷಿಕ ಆದಾಯ ಮಿತಿಯ ವಿವರಗಳನ್ನು “ಮಾಹಿತಿ ಪುಸ್ತಕ-2025” ನಲ್ಲಿ ವಿವರಿಸಲಾಗಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ಮಿತಿಗಳ ಪ್ರಕಾರ ಅರ್ಹತೆ ಹೊಂದಿರಬೇಕು.
ಸೀಟು ಹಂಚಿಕೆ ಪ್ರಕ್ರಿಯೆ ಹೇಗಿರುತ್ತದೆ :
ಪ್ರವೇಶ ಪರೀಕ್ಷೆಯಲ್ಲಿ ಪಡೆದ ಮೆರಿಟ್ ಅಂಕಗಳು, ಮೀಸಲಾತಿಯ ಪ್ರಕಾರದ ಅರ್ಹತೆ, ಮತ್ತು ಅಭ್ಯರ್ಥಿಯ ಆಯಾ ವಸತಿ ಶಾಲೆಗಳ ಆದ್ಯತಾ ಆಯ್ಕೆಯ ಮೇಲೆ ಸೀಟು ಹಂಚಿಕೆ Computerized Auto Selection ಮೂಲಕ ನಡೆಯಲಿದೆ.
ಅರ್ಜಿದಾರರಿಗೆ ಮಹತ್ವದ ಸೂಚನೆ (Notice) :
ಅಭ್ಯರ್ಥಿಗಳು ತಮ್ಮ ಪ್ರಸ್ತುತ ಶಾಲೆಯಿಂದ ಪಡೆದ SATS ಸಂಖ್ಯೆ, ಇತ್ತೀಚಿನ ಭಾವಚಿತ್ರ, ಮತ್ತು ಮೀಸಲಾತಿ ಸಂಬಂಧಿತ ದಾಖಲೆಗಳನ್ನು ಸೇರಿಸಿಕೊಂಡು ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಹಾಜರುಪಡಿಸಬೇಕು. ಸಂಬಂಧಿತ ಮಾಹಿತಿಗಾಗಿ KEA ವೆಬ್‌ಸೈಟ್: https://kea.kar.nic.in ಹಾಗೂ KREIS ವೆಬ್‌ಸೈಟ್: https://krels.kar.nic.in ಭೇಟಿ ನೀಡಿಬಹುದು.
ಈ ಅವಕಾಶದ ಸದುಪಯೋಗವನ್ನು ಮಾಡಿಕೊಳ್ಳಿ ಮತ್ತು ಉತ್ತಮ ಶೈಕ್ಷಣಿಕ ಭವಿಷ್ಯಕ್ಕಾಗಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ!
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.