ಮಾರುಕಟ್ಟೆಗೆ ಲಗ್ಗೆ ಇಟ್ಟ ಸ್ಯಾಮ್‌ಸಂಗ್ ಗ್ಯಾಲಕ್ಸಿಯ (Samsung Galaxy) ಪ್ರೀಮಿಯಂ ಸ್ಮಾರ್ಟ್‌ಫೋನ್ ಎಫ್ 55 5ಜಿ (F55 5 G).
ಇಂದು ಮಾರುಕಟ್ಟೆಯಲ್ಲಿ ಹಲವಾರು ಸ್ಮಾರ್ಟ್ ಫೋನ್ ಗಳನ್ನು ನಾವು ನೋಡುತ್ತೇವೆ. ಅದರಲ್ಲೂ ಇದೀಗ ಸ್ಮಾರ್ಟ್ ಫೋನ್ ಕಂಪನಿಗಳು ತಮ್ಮ ಹೊಸ ಹೊಸ ಸ್ಮಾರ್ಟ್ ಫೋನ್ ಗಳನ್ನು ಬಿಡುಗಡೆ ಮಾಡುತ್ತಲೇ ಇರುತ್ತಾರೆ. ಸ್ಮಾರ್ಟ್ ಫೋನ್ ತಯಾರಿಕಾ ಕಂಪನಿಗಳ ನಡುವೆ ಪೈಪೋಟಿ ಅಂತು ಇದ್ದೇ ಇರುತ್ತದೆ. ಇನ್ನು ಜನಗಳಂತೂ ಹೇಳುವುದೇ ಬೇಡ ಉತ್ತಮ ಬೆಲೆಯ ಉತ್ತಮ ಫಿಚರ್ಸ್ ಗಳ ಸ್ಮಾರ್ಟ್ ಫೋನ್ ಗಳನ್ನು ಖರೀದಿ ಮಾಡಲು ಇಚ್ಚಿಸುತ್ತಾರೆ. ಹಾಗೆ ಇದೀಗ ಸ್ಯಾಮ್ ಸಂಗ್ ಗ್ಯಾಲಕ್ಸಿ ಕಂಪನಿಯ ಗ್ರಾಹಕರಿಗೆ ಗುಡ್ ನ್ಯೂಸ್ ತಿಳಿದು ಬಂದಿದೆ. ಸ್ಯಾಮ್ಸಂಗ್ ಗ್ಯಾಲಕ್ಸಿ ತನ್ನ ಹೊಸ ಸ್ಮಾರ್ಟ್ ಫೋನನ್ನು ಬಿಡುಗಡೆ ಮಾಡಿದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.
ವೀಗನ್ ಲೆದರ್ ವಿನ್ಯಾಸ ಹೊಂದಿದ ಎಫ್55 5ಜಿ ಪ್ರೀಮಿಯಂ ಸ್ಮಾರ್ಟ್ ಫೋನ್ :
ಸ್ಯಾಮ್ ಸಂಗ್ ಎಫ್ ಸರಣಿಯಲ್ಲಿಯೇ (Samsung F series) ಮೊದಲ ಬಾರಿಗೆ ಸ್ಯಾಡಲ್ ಸ್ಟಿಚ್ ಮಾದರಿಯ ಕ್ಲಾಸಿ ವೀಗನ್ ಲೆದರ್ ವಿನ್ಯಾಸವನ್ನು ನೀಡಲಾಗುತ್ತಿದ್ದು, ಇದೀಗ ಬಿಡುಗಡೆ ಆಗಿರುವ ಸ್ಯಾಮ್ ಸಂಗ್ ಗ್ಯಾಲಕ್ಸಿಯ ಎಫ್55 5ಜಿ(Samsung Galaxy F55 5 G) ಪ್ರೀಮಿಯಂ ಸ್ಮಾರ್ಟ್ ಫೋನ್ ಬ್ಯಾಕ್ ವೀಗನ್ ಲೆದರ್ ಫಿನಿಶ್ ಬ್ಯಾಕ್ ಪ್ಯಾನೆಲ್ (back panel) ಅನ್ನು ಹೊಂದಿದ್ದು, ಇದು ಅತ್ಯಾಕರ್ಷಕವಾಗಿ ಕಾಣಿಸುತ್ತದೆ. ಗ್ಯಾಲಕ್ಸಿ ಎಫ್55 5ಜಿ ಮೂಲಕ ಸ್ಯಾಮ್ ಸಂಗ್ ಎಫ್ ಸೀರೀಸ್ ಉತ್ಪನ್ನಗಳಲ್ಲಿಯೇ ಮೊದಲ ಬಾರಿಗೆ ಕ್ಲಾಸಿ ವೀಗನ್ ಲೆದರ್ ವಿನ್ಯಾಸದ (classy vegan leather style) ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ.
ಈ ಸ್ಮಾರ್ಟ್ ಫೋನ್ ನ ಬಣ್ಣ (color) ಮತ್ತು ತೂಕ (weight) :
ಏಪ್ರಿಕಾಟ್ ಕ್ರಶ್ ಮತ್ತು ರೈಸಿನ್ ಬ್ಲ್ಯಾಂಕ್ ಎಂಬ ಎರಡು ಮನಮೋಹಕ ಬಣ್ಣಗಳ ಆಯ್ಕೆಗಲ್ಲಿ ಲಭ್ಯವಿದೆ. ಹಾಗೂ ಈ ಸ್ಮಾರ್ಟ್‌ಫೋನ್ ಕೇವಲ 180 ಗ್ರಾಂ ತೂಗುತ್ತದೆ ಮತ್ತು 7.8 ಎಂಎಂ ಅಗಲ ಹೊಂದಿದ್ದು, ನಯವಾದ ಮತ್ತು ಅದ್ಭುತ ಅನುಭವ ನೀಡುತ್ತದೆ.
ಎಫ್55 5ಜಿ ಪ್ರೀಮಿಯಂ ಸ್ಮಾರ್ಟ್ ಫೋನ್ ನ ಫಿಚರ್ಸ್ (features) :
ಡಿಸ್ಪ್ಲೇ (display) :
ಸ್ಯಾಮ್ ಸಂಗ್ ಗ್ಯಾಲಕ್ಸಿಯ ಎಫ್55 5ಜಿ ಯು 6.7″ ಫುಲ್ ಎಚ್ಡಿ+ ಸೂಪರ್ ಅಮೋಲ್ಡ್+ ಡಿಸ್‌ಪ್ಲೇ ಅನ್ನು ಹೊಂದಿದೆ. ಈ ಒಂದು ದೊಡ್ಡ ಡಿಸ್‌ಪ್ಲೇಯು 1000 ನಿಟ್‌ಗಳ ಸಾಮರ್ಥ್ಯದ ಹೆಚ್ಚಿನ ಬ್ರೈಟ್‌ನೆಸ್ ಹೊಂದಿದೆ ಮತ್ತು ವಿಷನ್ ಬೂಸ್ಟರ್ ತಂತ್ರಜ್ಞಾನದಿಂದಾಗಿ ಪ್ರಕಾಶಮಾನವಾದ ಸೂರ್ಯನ ಬೆಳಕಿನಲ್ಲಿಯೂ ಬಳಸಬಹುದಾಗಿದೆ.
ಪ್ರೊಸೆಸರ್ (processor) :
ಗ್ಯಾಲಕ್ಸಿಯ ಎಫ್55 5ಜಿ ಸ್ಮಾರ್ಟ್ ಫೋನ್ 4ಎನ್ಎಂ ಕ್ವಾಲ್ಕಮ್ ಸ್ನ್ಯಾಪ್ ಡ್ರಾಗನ್ 7 ಜೆನ್ 1 ಪ್ರೊಸೆಸರ್ ಹೊಂದಿದ್ದು, ಇದು 5ಜಿಯ ಅಪ್ರತಿಮ ವೇಗ ಮತ್ತು ಸಂಪರ್ಕ ಮತ್ತು ಹೈಸ್ಪೀಡ್ ಕನೆಕ್ಟಿವಿಟಿ ಹೊಂದಿದೆ.
ನೈಟೋಗ್ರಫಿ ಕ್ಯಾಮೆರಾ (nytography camera) :
ಗ್ಯಾಲಕ್ಸಿ ಎಫ್55 5ಜಿ ಹೆಚ್ಚಿನ ರೆಸೆಲ್ಯೂಶನ್ ಹೊಂದಿರುವ ಮತ್ತು ಶೇಕ್-ಫ್ರೀ (shake Free) ಅಂದರೆ ಕೈ ಅಲುಗಾಡಿದರೂ ಸ್ಪಷ್ಟವಾದ ವೀಡಿಯೋ ಮತ್ತು ಫೋಟೋಗಳನ್ನು ಶೂಟ್ ಮಾಡಬಹುದಾದ 50 ಎಂಪಿ (ಓಐಎಸ್) ನೋ ಶೇಕ್ ಕ್ಯಾಮೆರಾವನ್ನು ಹೊಂದಿದೆ. ಈ ಕ್ಯಾಮೆರಾ ಸೆಟಪ್ 8ಎಂಪಿ ಅಲ್ಟ್ರಾ-ವೈಡ್ ಸೆನ್ಸರ್ ಅನ್ನು ಸಹ ಒಳಗೊಂಡಿದೆ. ವಿಶೇಷವಾಗಿ ಗ್ಯಾಲಕ್ಸಿ ಎಫ್55 5ಜಿ ನೈಟೋಗ್ರಫಿ ಫೀಚರ್ ಜೊತೆಗೆ ಬರುತ್ತದೆ, ಈ ಫೀಚರ್ ಕಡಿಮೆ-ಬೆಳಕಿನ ಫೋಟೋಗಳು ಮತ್ತು ವೀಡಿಯೊಗಳನ್ನು ಸೆರೆಹಿಡಿಯಲು ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ.
ಹಾಗೆಯೇ ಗ್ಯಾಲಕ್ಸಿ ಎಫ್55 5ಜಿ ಯು ತೀಕ್ಷ್ಣವಾದ ಸೆಲ್ಫಿ ತೆಗೆಯಲು 50ಎಂಪಿ ಸಾಮರ್ಥ್ಯದ ಹೈ ರೆಸಲ್ಯೂಶನ್ ಫ್ರಂಟ್ ಕ್ಯಾಮೆರಾವನ್ನು (high resolution front camera) ಹೊಂದಿದೆ.
ಬ್ಯಾಟರಿ (battery) :
ಈ ಸ್ಮಾರ್ಟ್ ಫೋನ್ ನಲ್ಲಿ 5000 ಎಂಎಎಚ್ ಬ್ಯಾಟರಿ ಹೊಂದಿದ್ದು, ಕಡಿಮೆ ಸಮಯದಲ್ಲಿ ಹೆಚ್ಚಿನ ಚಾರ್ಜ್ ಮಾಡಬಹುದಾದ 45ಡಬ್ಲ್ಯೂ ಸೂಪರ್-ಫಾಸ್ಟ್ ಚಾರ್ಜಿಂಗ್ ವ್ಯವಸ್ಥೆ ಇದರಲ್ಲಿದೆ.
ಗ್ಯಾಲಕ್ಸಿ ಎಫ್55 5ಜಿ, ಹಲವಾರು ಹೊಸ ಆವಿಷ್ಕಾರಗಳನ್ನು ಹೊಂದಿದೆ. ಇದರ ವಾಯ್ಸ್ ಫೋಕಸ್ ಫೀಚರ್ (voice focus feature) , ಕ್ವಿಕ್ ಶೇರ್ (quick share) ನಂತಹ ಉತ್ತಮ ಫಿಚರ್ಸ್ ಗಳನ್ನು ನೀಡಿದೆ. ಹಾಗೂ ನಾಲ್ಕು ಜನರೇಷನ್‌ಗಳ ಓಎಸ್ ಅಪ್‌ಡೇಟ್‌ಗಳು ಮತ್ತು ಐದು ವರ್ಷಗಳ ಸೆಕ್ಯೂರಿಟಿ ಅಪ್ ಡೇಟ್‌ಗಳನ್ನು ಒದಗಿಸುತ್ತಿದ್ದು, ಬಳಕೆದಾರರು ಮುಂಬರುವ ವರ್ಷಗಳಲ್ಲಿ ಹೊಸ ವೈಶಿಷ್ಟ್ಯಗಳನ್ನು ನೀಡುತ್ತಿದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ