ವಂಚನೆ ತಡೆಗೆ ಸರ್ಕಾರದ ಮಹತ್ವದ ಹೆಜ್ಜೆ: `ಸಂಚಾರಿ ಸಾಥಿ’ ಆಪ್ ಬಿಡುಗಡೆ, ನಿಮ್ಮ ಮೊಬೈಲ್ ಕಳೆದುಹೋಗಿದ್ರೆ ಹೀಗೆ ಪತ್ತೆಹಚ್ಚಿ!
ದೇಶದ ದೂರಸಂಪರ್ಕ (Telecommunication) ಸೇವೆಗಳಲ್ಲಿ ಭದ್ರತೆ ಹಾಗೂ ಜನಸಾಮಾನ್ಯರ ಸುರಕ್ಷತೆಯನ್ನು ಹೆಚ್ಚಿಸುವ ಉದ್ದೇಶದಿಂದ, ಭಾರತ ಸರ್ಕಾರದ ದೂರಸಂಪರ್ಕ ಇಲಾಖೆ (DoT) ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದು, ‘ಸಂಚಾರಿ ಸಾಥಿ’ (Sanchar Saathi) ಎಂಬ ನೂತನ ಅಪ್ಲಿಕೇಶನ್ ಅನ್ನು ಪರಿಚಯಿಸಿದೆ. ಜನರ ಆನ್‌ಲೈನ್ ಮತ್ತು ಮೊಬೈಲ್ ವಂಚನೆ ತಡೆಗಟ್ಟುವ ಮೂಲಕ, ಕಳೆದುಹೋದ ಮೊಬೈಲ್ ಪತ್ತೆಹಚ್ಚಲು, ಕಳ್ಳತನಗೊಂಡ ಫೋನ್‌ಗಳ ಬಗ್ಗೆ ದೂರು ದಾಖಲಿಸಲು, ಹಾಗೂ ಅನಧಿಕೃತ ನಕಲಿ ಕರೆಗಳ ವಿರುದ್ಧ ಕ್ರಮ ಕೈಗೊಳ್ಳಲು ಈ ಆಪ್ ಒಂದು ಬಲಿಷ್ಠ ವೇದಿಕೆ ಆಗಲಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಈ ಹೊಸ ಅಪ್ಲಿಕೇಶನ್‌ನ ಮಹತ್ವವೇನು ?:
ಈ ಹೊಸ ಸಂಚಾರಿ ಸಾಥಿ ಅಪ್ಲಿಕೇಶನ್‌ನ ಪರಿಚಯದಿಂದ, ಮೊಬೈಲ್ ಬಳಕೆದಾರರು ತಕ್ಷಣದ ದೂರುಗಳನ್ನು ದಾಖಲಿಸುವುದು, ಕಳೆದುಹೋದ ಫೋನ್‌ಗಳನ್ನು ಟ್ರಾಕ್ (Phones track) ಮಾಡುವುದು, ಮತ್ತು ಕಳ್ಳತನದ ವಿವರಗಳನ್ನು ಕಾನೂನು ಪ್ರಾಧಿಕಾರಗಳಿಗೆ ಒದಗಿಸುವುದಕ್ಕೆ ನೆರವಾಗಲಿದೆ. ಮೊದಲು, ಈ ಸೇವೆಗಳಿಗಾಗಿ ಬಳಕೆದಾರರು ಡಾಟ್‌ನ ಅಧಿಕೃತ ವೆಬ್‌ಸೈಟ್‌ಗೆ (Website) ಭೇಟಿ ನೀಡಬೇಕಾಗಿತ್ತು. ಆದರೆ ಈಗ, ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಆಪ್ ಸ್ಟೋರ್ ಮೂಲಕ ಸಂಚಾರಿ ಸಾಥಿ ಆಯಪ್ ಅನ್ನು ಡೌನ್‌ಲೋಡ್ ಮಾಡಬಹುದಾಗಿದೆ, ಜೊತೆಗೆ ಮೊಬೈಲ್‌ನಲ್ಲಿ ನೇರವಾಗಿ ಉಪಯೋಗಿಸಬಹುದಾಗಿದೆ.
ಆಯಪ್ (App) ಬಿಡುಗಡೆ ಮತ್ತು ಅದರ ಉದ್ದೇಶವೇನು (Purpose) :
ಈ ಅಪ್ಲಿಕೇಶನ್ ಬಿಡುಗಡೆ ಸಂದರ್ಭದಲ್ಲಿ ಕೇಂದ್ರ ಕಾನೂನು ಮತ್ತು ಐಟಿ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಮಾತನಾಡಿ, ಸಂಚಾರಿ ಸಾಥಿ ಉಪಕ್ರಮವು (Sanchari Sathi initiative) ದೇಶದ ಜನರ ಗೌಪ್ಯತೆ ಮತ್ತು ಭದ್ರತೆಯನ್ನು ಉತ್ತೇಜಿಸುವ ಪ್ರಯತ್ನವಾಗಿದೆ. ಈ ತಂತ್ರಜ್ಞಾನದ (technology) ಸಹಾಯದಿಂದ ಜನರು ಮೋಸಕ್ಕೆ ಗುರಿಯಾಗುವುದನ್ನು ತಡೆಯಬಹುದು ಮತ್ತು ಕಳೆದುಹೋದ ಫೋನ್‌ಗಳನ್ನು ಸುಲಭವಾಗಿ ಪತ್ತೆಹಚ್ಚಬಹುದು,” ಎಂದು ಹೇಳಿದರು.
2023ರಲ್ಲಿ ಆರಂಭಗೊಂಡ ‘ಸಂಚಾರ್ ಸಥಿ’ (Sanchari Sathi) ವೇದಿಕೆಯ ಯಶಸ್ಸು:
ಈಗ ಜಾರಿಗೆ ಬರುವ ಸಂಚಾರಿ ಸಾಥಿ ಅಪ್ಲಿಕೇಶನ್ 2023ರಲ್ಲಿ ಪರಿಚಯಿಸಲಾದ ‘ಸಂಚಾರ್ ಸಥಿ’ ಪೋರ್ಟಲ್ ಯೋಜನೆಯ ಅಭಿವೃದ್ಧಿ ಹಂತವಾಗಿದೆ. ಈ ವೇದಿಕೆಯು ಮೊಬೈಲ್ ವಂಚನೆ ಮತ್ತು ಕಳ್ಳತನವನ್ನು ತಡೆಗಟ್ಟಲು ಪ್ರಾಮಾಣಿಕ ಪ್ರಯತ್ನ ಮಾಡಿದೆ. ಹೊಸ ಆಯಪ್‌ನೊಂದಿಗೆ, ಈ ಪ್ರಯತ್ನಗಳು ಇನ್ನಷ್ಟು ದೃಢವಾಗಲಿವೆ.
ಆಯಪ್ ಹೇಗೆ ಕಾರ್ಯನಿರ್ವಹಿಸುತ್ತದೆ ?:
1. ಮೊಬೈಲ್ ಕಳೆದುಹೋದಾಗ ಹೀಗೆ ಮಾಡಬೇಕು:
ಮೊದಲು ಸಂಚಾರಿ ಸಾಥಿ ಪೋರ್ಟಲ್ ಅಥವಾ ಆಪ್‌ನಲ್ಲಿ ಲಾಗಿನ್ ಆಗಬೇಕು.
ನಿಮ್ಮ ನೊಂದಾಯಿತ ಮೊಬೈಲ್ ಸಂಖ್ಯೆಗೆ ಬರುವ OTP ಬಳಸಿ ಲಾಗಿನ್ ಮಾಡಿ.
ನಂತರ, ನಿಮ್ಮ ಮೊಬೈಲ್ ಸೇವಾ ಪ್ರೊವೈಡರ್ (ಎಯರ್‌ಟೆಲ್, ವೊಡಾಫೋನ್ ಐಡಿಯಾ, ಅಥವಾ ಇತರರು) ಆಯ್ಕೆಮಾಡಿ.
ಈ ಮಾಹಿತಿಯೊಂದಿಗೆ, ಅಪ್ಲಿಕೇಶನ್ ಅಥವಾ ಪೋರ್ಟಲ್‌ನಲ್ಲಿ (Portal) ನಿಮ್ಮ ಫೋನ್‌ನ ಸ್ಥಳವನ್ನು ಪತ್ತೆಹಚ್ಚಲು ಸಹಾಯ ಮಾಡುತ್ತದೆ.
2. ನಕಲಿ ಕರೆಗಳು (fake calls) ಮತ್ತು ವಂಚನೆಗಳ ಬಗ್ಗೆ ದೂರು ದಾಖಲಿಸಬಹುದು :
ಅಪ್ಲಿಕೇಶನ್ ಮೂಲಕ ನಕಲಿ ಕರೆಗಳು ಅಥವಾ ಹ್ಯಾಂಡ್‌ಸೆಟ್‌ನ ದುರುಪಯೋಗದ ಬಗ್ಗೆ ದೂರು ದಾಖಲಿಸಬಹುದು.
ನಿಮ್ಮ ದೂರುಗಳು ನೇರವಾಗಿ ಸಂಬಂಧಿತ ಅಧಿಕಾರಿಗಳಿಗೆ ಹೋಗುವ ಮೂಲಕ, ತ್ವರಿತ ಕ್ರಮ ಕೈಗೊಳ್ಳುವ ವ್ಯವಸ್ಥೆ ಇರಲಿದೆ.
ಇನ್ನು, ಈ ಆಯಪ್ ತಂತ್ರಜ್ಞಾನವನ್ನು (app technology) ಬಳಸಿಕೊಂಡು ಜನಸಾಮಾನ್ಯರಿಗೆ ಶೀಘ್ರ ನೆರವನ್ನು ನೀಡಲಾಗುತ್ತದೆ. ಆನ್‌ಲೈನ್ ವಂಚನೆಗಳು, ಕಳೆದುಹೋದ ಅಥವಾ ಕಳ್ಳತನಗೊಂಡ ಫೋನ್‌ಗಳ ಸಮಸ್ಯೆಗೆ ಒಂದು ನೈಜ ಪರಿಹಾರವನ್ನು ಒದಗಿಸುತ್ತಿದ್ದು, ಈ ನೂತನ ಉಪಕ್ರಮವು ದೇಶದ ಪ್ರಜಾಪ್ರಭುತ್ವ ಹಾಗೂ ತಂತ್ರಜ್ಞಾನ ವಲಯದ ಭದ್ರತೆಗೆ ನೇರವಾಗಲಿದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.