ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 10(Biggboss season 10) ನ ವಾರದ ಕಥೆ ಕಿಚ್ಚನ ಜೊತೆಗೆ ಎಲ್ಲಾ ವೀಕ್ಷಕರು ನಿರೀಕ್ಷೆಯಿಂದ ಕಾಯುತಿದ್ದಿದ್ದು ನಿಜವೇ ಸರಿ. ಏಕೆಂದರೆ ಈ ವಾರದ ಟಾಸ್ಕ್ ನಲ್ಲಿ ಮನೆಯ ಎಲ್ಲಾ ಸದಸ್ಯರು ಅತಿರೇಖಕ್ಕೆ ತೆರಳಿದ್ದು ನಿಜ. ರಾಕ್ಷಸರು ಹಾಗೂ ಗಂಧರ್ವರ ಟಾಸ್ಕಿನಲ್ಲಿ ಜಗಳಗಳು, ಕಿತ್ತಾಟಗಳು ಹಾಗೂ ಹಲವಾರು ಗಾಯಗಳು ಆಗಿವೆ. ಅದರ ಜೊತೆಗೆ ಸಂಗೀತ ಹಾಗೂ ಪ್ರತಾಪ್ ಆಸ್ಪತ್ರೆಗೆ ಕೂಡ ಹೋಗಿ ಬಂದಿದ್ದಾರೆ. ಹಾಗಾಗಿ ಇಂದಿನ ಶನಿವಾರದ ಸಂಚಿಕೆಯಲ್ಲಿ ಏನೆಲ್ಲ ನಡೆದಿದೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಈ ವರದಿಯಲ್ಲಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ವಾರದ ಕಥೆ ಕಿಚ್ಚನ ಜೊತೆ :
ಶನಿವಾರದ ಸಂಚಿಕೆ ಶುರುವಾದ ತಕ್ಷಣ ಕಿಚ್ಚ ಸುದೀಪ್ ಅವರು ಡೈನಿಂಗ್ ಹಾಲಿನಿಂದ ಒಂದು ಖುಷಿಯನ್ನು ಧರಿಸಿ ಅದರಲ್ಲಿ ಒಬ್ಬೊಬ್ಬರನ್ನೇ ಕೂರಿಸಿ ಏನನ್ನಿಸುತ್ತಿದೆ ಹೇಳಿ ಎಂದು ಹೇಳಿದರು. ವಿನಯ್, ಕಾರ್ತಿಕ್, ತನಿಷಾ ಹಾಗೂ ತುಕಾಲಿ ಸಂತೋಷ ಅವರು ಮನೆಯಲ್ಲಿ ನಡೆದಿದ್ದನು ಹೇಳುತ್ತಿದ್ದರು ಅದಕ್ಕೆ ಸುದೀಪ್ ಅವರು ನಿಲ್ಲಿಸಿ ನಾನು ಮನೆಯ ಎಪಿಸೋಡನ್ನು ನೋಡಿದ್ದೇನೆ ನೀವು ಮತ್ತೆ ಅದನ್ನೇ ಹೇಳಬೇಕಾಗಿಲ್ಲ, ನಿಮ್ಮ ಅನಿಸಿಕೆಗಳನ್ನು ಅಥವಾ ನಿಮ್ಮ ವ್ಯಕ್ತಿತ್ವದ ಬಗ್ಗೆ ಹೇಳಿ ಎಂದು ಹೇಳಿದರು. ಮುಂದುವರೆದು ಸಿರಿ, ನಮ್ರತಾ, ಹಾಗೂ ಇನ್ನಿತರರು ತಾವು ಮಾಡಿದ ತಪ್ಪುಗಳನ್ನು ಒಪ್ಪಿಕೊಂಡರು ಹಾಗೂ ಮನೆಯೊ ಈ ವಾರ ಅಸಮಾಧಾನದಿಂದ ಕೂಡಿತ್ತು ಎಂದು ಹೇಳಿದರು.
ಸಂಗೀತನ ಕಣ್ಣು ಸರಿಯಾಗಿ ಕಾಣಿಸುತ್ತಿಲ್ಲವಂತೆ :
ಆಸ್ಪತ್ರೆಯಿಂದ ಸಂಗೀತ ಹಾಗೂ ಪ್ರತಾಪ್ ಮನೆಗೆ ಬಂದಿದ್ದಾರೆ. ಇಬ್ಬರು ಕಪ್ಪು ಕನ್ನಡಕವನ್ನು ಧರಿಸಿ ಮನೆಯ ಒಳಗೆ ಬಂದಿದ್ದಾರೆ. ಸಂಗೀತ ಅವರು ಈಗ ನಿಮ್ಮ ಕಣ್ಣು ಹೇಗಿದೆ ಎಂದು ಸುದೀಪ್ ಅವರು ಕೇಳಿದಾಗ : ಮನೆಯಿಂದ ನಾನು ಹೋದಾಗ ಕಣ್ಣಿನ ತುಂಬಾ ಡಿಟರ್ಜೆಂಟ್ ಪೌಡರ್ ತುಂಬಿಕೊಂಡಿತ್ತು ಕಣ್ಣನ್ನು ತೆರೆಯಲು ಆಗುತ್ತಿರಲಿಲ್ಲ, ಮೊದಲಿಗೆ ಕಣ್ಣಿನ ಡೆಟಾರ್ಜೆಂಟನ್ನು ತೆಗೆಯಲು ಪ್ರಯತ್ನಿಸಿದರು ಆದರೆ ಅದು ನೊರೆ ಬರುತ್ತಿತ್ತು, ಎಷ್ಟು ಹೊತ್ತಾದರೂ ಅದನ್ನು ತೆಗೆಯಲು ಆಗುತ್ತಿರಲಿಲ್ಲ ನಂತರ ಆಸ್ಪತ್ರೆಗೆ ತೆರಳಿ ಲಿಕ್ವಿಡನ್ನು ಕಣ್ಣಿಗೆ ಹಾಕಿ ನಂತರ ತೆಗೆದರು. ನಾನು ತುಂಬಾ ಕಿರಿಚಿಕೊಳ್ಳುತ್ತಿದ್ದೆ, ಅನಸ್ತೇಶಿಯ ಕೊಟ್ಟು ಸರಿ ಮಾಡಿ ಎಂದು ಬೇಡಿಕೊಳ್ಳುತ್ತಿದ್ದೆ ಏಕೆಂದರೆ ಅದರ ನೋವನ್ನು ತಡೆಯಲು ಆಗುತ್ತಿರಲಿಲ್ಲ. 48 ಗಂಟೆಗಳ ಕಾಲ ಕಣ್ಣು ಊದಿಕೊಂಡಿತ್ತು ಈಗಲೂ ಕೂಡ ಸ್ವಲ್ಪ ಊದಿದೆ. ಟಿಶುಗಳು(Tissues) ಸ್ವಲ್ಪ ಡ್ಯಾಮೇಜ್ ಆಗಿದೆ. ಈಗಲೂ ಕೂಡ ಕಣ್ಣು ಸರಿಯಾಗಿ ಕಾಣುತ್ತಿಲ್ಲ. ತುಂಬಾ ದೂರದ್ದು ಹಾಗೂ ಹತ್ತಿರದೂ ಕೂಡ ಸರಿಯಾಗಿ ಕಾಣಿಸುತ್ತಿಲ್ಲ, ಎಂದು ಹೇಳಿದರು. ಪ್ರತಾಪರ ಕಣ್ಣಿಗೂ ಕೂಡ ಒಂದು ಕಡೆ ಗಾಯ ಆಗಿದೆ ಎಂದು ಡಾಕ್ಟರ್ ತಿಳಿಸಿದ್ದಾರೆ. ಒಂದು ವಾರ ಮಾತ್ರೆಗಳನ್ನು ತೆಗೆದುಕೊಳ್ಳಲು ಹೇಳಿದ್ದಾರೆ ಎಂದರು.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಸ್ನೇಹಿತ್ ಗೆ ಕ್ಲಾಸ್ ತೆಗೆದುಕೊಂಡ ಸುದೀಪ್ :
ಸ್ನೇಹಿತ ಅವರು ನಿಮ್ಮ ಕ್ಯಾಪ್ಟನ್ಸಿ ನಿಯತ್ತಾಗಿ ಇತ್ತ ಎಂದು ಕೇಳಿದಾಗ ಅವರು ಇಲ್ಲ ನಾನು ಬಯಾಸ್ದ್ ಆಗಿ ಆಡಿದ್ದೇನೆ ಎಂದು ಒಪ್ಪಿಕೊಂಡರು. ಇವತ್ತು ಬಿಗ್ ಬಾಸ್ ಮನೆಯಲ್ಲಿ ಏನೆಲ್ಲಾ ಅನಾಹುತಗಳು ಆಗಿದ್ದೀಯೋ ಅದಕ್ಕೆ ನೀವೇ ಮುಖ್ಯ ಅಡಿಪಾಯ ಎಂದು ಸುದೀಪ್ ಅವರು ನಿಂದಿಸಿದರು. ಡಿಟರ್ಜೆಂಟ್ ಪುಡಿಯನ್ನು ಕಳಸಿ ನೀರನ್ನು ಎರಚುವಾಗ ನೀವು ಯಾವುದೇ ರೀತಿಯ ಕ್ರಮ ಕೈಗೊಳ್ಳಲಿಲ್ಲ, ಎರಡು ಗುಂಪುಗಳನ್ನು ಮಾಡುವಾಗ ಕೂಡ ಸಹ ಒಬ್ಬರ ಗುಂಪಿಗೆ ಬಲಿಷ್ಠರನ್ನು ಕೊಟ್ಟು ಇನ್ನೊಬ್ಬರ ಗುಂಪಿಗೆ ಮೋಸ ಮಾಡಿದ್ದೀರಾ ಎಂದರು. ನಾಯಕರು ನೀವಾಗಿದ್ದರೂ ಕೂಡ ನಮ್ರತ ಮಾತುಗಳನ್ನು ಕೇಳಿ ಒಪ್ಪಿಗೆಗಳನ್ನು ಹಾಗೂ ನಿರ್ಧಾರಗಳನ್ನು ತೆಗೆದುಕೊಂಡಿದ್ದೀರಾ ಎಂದು ಹೇಳಿದಾಗ ಸ್ನೇಹಿತ್ ಅವರು ಒಪ್ಪಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಸ್ನೇಹಿತ್ ಅವರಿಗೆ ವಿನಯ್, ನಮ್ರತಾ ಅಥವಾ ಮೈಕಲ್ ಕ್ಯಾಪ್ಟನ್ ಆಗಬೇಕಾಗಿತ್ತಂತೆ. ಇದನ್ನು ಅವರು ಸ್ವತಹ ಒಪ್ಪಿಕೊಂಡಿದ್ದಾರೆ.
ಕಾರ್ತಿಕ್ ಗೆ ಕಿಚ್ಚನ ಚಪ್ಪಾಳೆ :
ಈ ವಾರ ಕಿಚ್ಚನ ಚಪ್ಪಾಳೆ ದೊರೆಯುತ್ತದೆಯೋ ಇಲ್ಲವೋ ಎಂಬ ಕುತೂಹಲ ಜನರಲ್ಲಿ ಇದ್ದಿದ್ದಂತೂ ನಿಜ. ಕಾರ್ತಿಕ್ ಮಹೇಶ್ ಅವರು ಈ ಆಟವನ್ನು ತುಂಬಾ ಫನ್ ವೇಯಲ್ಲಿ ತೆಗೆದುಕೊಂಡು ಹೋಗಲು ಪ್ರಯತ್ನಿಸಿದರು. ರಾಕ್ಷಸರಾಗಿದ್ದರು ಸಹ ಇವರು ಮನೆಯನ್ನು ಎಂಟರ್ಟೈನ್ಮೆಂಟ್ ಆಗಿ ಇರಿಸಲು ಪ್ರಯತ್ನಿಸಿದರು. ಇದು ಜನರಲ್ಲಿ ಮೆಚ್ಚುಗೆಯನ್ನು ಸೂಚಿಸಿದೆ. ಕಾರ್ತಿಕ್ ಅವರು ವಿನಯ್ ಅವರು ಮಾಡಿದ ಆರೋಪಗಳನ್ನು ಹಾಗೂ ಜಗಳಗಳನ್ನು ತುಂಬಾ ಹೊತ್ತು ಸಹಿಸಿಕೊಂಡು ಬಂದಿದ್ದರು, ಆದರೆ ಕೊನೆಯಲ್ಲಿ ಚಪ್ಪಲಿಯ ವಿಷಯವೇ ಒಂದು ತಪ್ಪಾಗಿತ್ತು. ಸುದೀಪ್ ಅವರು ಚಪ್ಪಲಿಯ ಬದಲು ಬೇರೆ ಯಾವುದು ಆ ಕ್ಷಣಕ್ಕೆ ನಿಮಗೆ ಸಿಗಲಿಲ್ಲವೇ ಎಂದು ಕೇಳಿದರು. ಕೊನೆಗೂ ಕಿಚ್ಚನ ಚಪ್ಪಾಳೆ ಕಾರ್ತಿಕ ಅವರಿಗೆ ದೊರೆತಿದ್ದು ತುಂಬಾ ಸಂತಸವನ್ನು ಕೊಟ್ಟಿದೆ. ಕಿಚ್ಚನ ಚಪ್ಪಾಳೆಯಿಂದ ಕಾರ್ತಿಕ್ ಅವರು ಖುಷಿಯಿಂದ ಕಣ್ತುಂಬಿಕೊಂಡರು.
ಕ್ಯಾಪ್ಟನ್ ರೂಮಿಗೆ ಬೀಗ :
ಬಿಗ್ ಬಾಸ್ ಮನೆಯಲ್ಲಿ ನೆನ್ನೆ ಕ್ಯಾಪ್ಟನ್ಸಿ ಟಾಸ್ಕ್ ನೀಡಿದ್ದರು, ಅದರಲ್ಲಿ ವರ್ತೂರ್ ಸಂತೋಷ ಅವರು ನಿನಗೆ ಆಟ ಆಡಿದ್ದಾರೆ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಕುರ್ಚಿಯಲ್ಲಿ ಕುಳಿತುಕೊಂಡು, ಮನೆಯವರೆಲ್ಲ ಡಿಸ್ಟರ್ಬ್ ಮಾಡಿದರೂ ಸಹಿತ 13 ನಿಮಿಷಗಳನ್ನು ಎಣಿಸಬೇಕಾಗಿತ್ತು. ಅದರಲ್ಲಿ ವಿನಯವರ ಸಹಾಯವನ್ನು ಪಡೆದು ವರ್ತುರವರು ಗೆದ್ದಿದ್ದಾರೆ. ಆದ್ದರಿಂದ ಈ ಅನ್ಯಾಯಕ್ಕಾಗಿ ಹಾಗೂ ಸ್ನೇಹಿತ್ ಅವರು ಕಳಪೆಯಾಗಿ ನಾಯಕತ್ವವನ್ನು ವಹಿಸಿಕೊಂಡಿದ್ದಕ್ಕಾಗಿ, ಮನೆಯಲ್ಲಿ ಎಲ್ಲರಿಗೂ ಕ್ಯಾಪ್ಟನ್ಸಿ ಜವಾಬ್ದಾರಿ ಬರುವವರೆಗೂ ಕ್ಯಾಪ್ಟನ್ ರೂಮಿಗೆ ಬೀಗವನ್ನು ಹಾಕಲಾಗಿದೆ ಎಂದು ಸುದೀಪ್ ಅವರು ಘೋಷಿಸಿದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ವರದಿ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ