ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India-SBI) ತನ್ನ ಗ್ರಾಹಕರಿಗೆ ಖುಷಿಯ ಸುದ್ದಿ ನೀಡಿದೆ. 2 ಕೋಟಿ ರೂಪಾಯಿಗಿಂತ ಕಡಿಮೆ ಮೊತ್ತದ ಸ್ಥಿರ ಠೇವಣಿಗಳ (Fixed Deposits) ಮೇಲಿನ ಬಡ್ಡಿದರ(Interest rates)ಗಳನ್ನು ಇತ್ತೀಚೆಗೆ ಹೆಚ್ಚಿಸಲಾಗಿದೆ. ಬನ್ನಿ ಹಾಗಿದ್ರೆ, ಇತ್ತೀಚಿನ SBI FD ಗಳ ಬಡ್ಡಿದರದ ವಿವರ ಹೇಗಿದೆ ಎಂದು ತಿಳಿದುಕೊಳ್ಳೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
SBI ಕೆಲವು ಸ್ಥಿರ ಠೇವಣಿಗಳ(FD) ಬಡ್ಡಿದರಗಳನ್ನು ಹೆಚ್ಚಿಸಿದೆ!
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) 2 ಕೋಟಿ ರೂಪಾಯಿವರೆಗಿನ ಚಿಲ್ಲರೆ ಠೇವಣಿಗಳ ಮೇಲಿನ ಸ್ಥಿರ ಠೇವಣಿ (FD) ಬಡ್ಡಿ ದರಗಳನ್ನು ಹೆಚ್ಚಿಸಿದೆ! ಹೊಸ ದರಗಳು ಮೇ 15, 2024 ರಿಂದ ಜಾರಿಗೆ ಬಂದಿವೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಈ ಬದಲಾವಣೆಯ ಪ್ರಕಾರ, 46 ರಿಂದ 179 ದಿನಗಳು, 180 ರಿಂದ 210 ದಿನಗಳು ಮತ್ತು 211 ರಿಂದ ಒಂದು ವರ್ಷದ ಅವಧಿಗಿಂತ ಕಡಿಮೆ ಅವಧಿಯ ನಿಶ್ಚಿತ ಠೇವಣಿ (FD) ಖಾತೆಗಳ ಮೇಲಿನ ಬಡ್ಡಿ ದರಗಳನ್ನು ಬ್ಯಾಂಕ್ 25 ರಿಂದ 75 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಿದೆ. ಒಂದು ವರ್ಷಕ್ಕಿಂತ ಹೆಚ್ಚು ಅವಧಿಯ FD ಗಳ ಮೇಲಿನ ಬಡ್ಡಿ ದರಗಳಲ್ಲಿ ಯಾವುದೇ ಬದಲಾವಣೆಗಳಿಲ್ಲ.
ಹಿರಿಯ ನಾಗರಿಕರಿಗೆ ಹೆಚ್ಚುವರಿ ಪ್ರಯೋಜನ: ನಿಯಮಗಳ ಪ್ರಕಾರ, ಹಿರಿಯ ನಾಗರಿಕರು ಪರಿಷ್ಕೃತ ಬಡ್ಡಿ ದರಗಳಿಗಿಂತ ಹೆಚ್ಚುವರಿ 50 ಬೇಸಿಸ್ ಪಾಯಿಂಟ್‌ಗಳ ಬಡ್ಡಿ ದರಕ್ಕೆ ಅರ್ಹರಾಗಿದ್ದಾರೆ.
SBI ಸ್ಥಿರ ಠೇವಣಿಗಳ ಹೊಸ ಬಡ್ಡಿದರ:
ಅಲ್ವಾವಧಿ ಠೇವಣಿಗಳು
ಎಸ್‌ಬಿಐ ಈಗ ಅಲ್ಪಾವಧಿ ಠೇವಣಿಗಳ ಮೇಲೆ ಆಕರ್ಷಕ ಬಡ್ಡಿದರಗಳನ್ನು ನೀಡುತ್ತಿದೆ. 7 ದಿನಗಳಿಂದ ಒಂದು ವರ್ಷದವರೆಗಿನ ಅವಧಿಗಳಿಗೆ ಠೇವಣಿ ಮಾಡುವ ಮೂಲಕ ನೀವು ಉತ್ತಮ ಲಾಭಗಳನ್ನು ಪಡೆಯಬಹುದು.
ಹೊಸ ಬಡ್ಡಿದರಗಳು:
7 ದಿನಗಳಿಂದ 45 ದಿನಗಳು: ಶೇಕಡಾ 3.50
46 ದಿನಗಳಿಂದ 179 ದಿನಗಳು: ಶೇಕಡಾ 5.50
180 ದಿನಗಳಿಂದ 210 ದಿನಗಳು: ಶೇಕಡಾ 6.00
211 ದಿನಗಳಿಂದ ಒಂದು ವರ್ಷ: ಶೇಕಡಾ 6.25
ಒಂದು ವರ್ಷ ಮೇಲ್ಪಟ್ಟ ಸ್ಥಿರ ಠೇವಣಿಗಳು
1 ವರ್ಷದಿಂದ 2 ವರ್ಷ ತನಕ – ಶೇ 6.8
2 ವರ್ಷದಿಂದ 3 ವರ್ಷದೊಳಗಿನ ಠೇವಣಿ- ಶೇ 7
3 ವರ್ಷದಿಂದ 5 ವರ್ಷದೊಳಗಿನ ಠೇವಣಿ – ಶೇ 6.7
5 ವರ್ಷ ಮೇಲ್ಪಟ್ಟು 10 ವರ್ಷ ತನಕ – ಶೇ 6.5
SBI ಹಿರಿಯ ನಾಗರಿಕರ (Senior Citizen)ಸ್ಥಿರ ಠೇವಣಿಗಳ ಹೊಸ ಬಡ್ಡಿದರ
SBI ತನ್ನ ಹಿರಿಯ ನಾಗರಿಕ ಗ್ರಾಹಕರಿಗೆ ಖುಷಿಯ ಸುದ್ದಿ ನೀಡಿದೆ. ಈಗ ಅವರು ತಮ್ಮ ಸ್ಥಿರ ಠೇವಣಿಗಳ ಮೇಲೆ 50 ಅಂಶಗಳ ಹೆಚ್ಚುವರಿ ಬಡ್ಡಿ ಪಡೆಯಬಹುದು! ಈ ಸೌಲಭ್ಯವು 7 ದಿನಗಳಿಂದ 10 ವರ್ಷಗಳವರೆಗಿನ ಅವಧಿಯ ಎಲ್ಲಾ ಎಫ್‌ಡಿಗಳಿಗೆ ಅನ್ವಯಿಸುತ್ತದೆ.
ಅಲ್ಪಾವಧಿ ಸ್ಥಿರ ಠೇವಣಿಗಳು(Short term fixed deposits)
7 ದಿನಗಳಿಂದ 10 ವರ್ಷ ತನಕದ ಸ್ಥಿರ ಠೇವಣಿಗಳ ಬಡ್ಡಿದರ – ಶೇ 4 ರಿಂದ ಶೇಕಡ 7.5ರ ನಡುವೆ ಇದೆ
7 ದಿನಗಳಿಂದ 45 ದಿನಗಳ ತನಕ – ಶೇ 4
46 ದಿನಗಳಿಂದ 179 ದಿನಗಳ ತನಕ – ಶೇ 6
180 ದಿನಗಳಿಂದ 210 ದಿನಗಳ ತನಕ ಶೇ 6.5
211 ದಿನಗಳಿಂದ ಒಂದು ವರ್ಷ ತನಕ ಶೇ6.75
ಒಂದು ವರ್ಷ ಮೇಲ್ಪಟ್ಟ ಸ್ಥಿರ ಠೇವಣಿಗಳು
1 ವರ್ಷದಿಂದ 2 ವರ್ಷ ತನಕ – ಶೇ 7.3
2 ವರ್ಷದಿಂದ 3 ವರ್ಷದೊಳಗಿನ ಠೇವಣಿ- ಶೇ 7.5
3 ವರ್ಷದಿಂದ 5 ವರ್ಷದೊಳಗಿನ ಠೇವಣಿ – ಶೇ 7.25
5 ವರ್ಷ ಮೇಲ್ಪಟ್ಟು 10 ವರ್ಷ ತನಕ – ಶೇ 7.50
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.