SBI ಬ್ಯಾಂಕ್‌ನಲ್ಲಿ(SBI Bank) ಉಳಿತಾಯ ಖಾತೆ ಇದ್ಯಾ?! ಹಾಗಿದ್ದರೆ ರಿವಾರ್ಡ್ಸ್ ಮೆಸೇಜ್ ಗೆ(rewards message) ರಿಯಾಕ್ಟ್ ಮಾಡಬೇಡಿ.
ಜೀವನದಲ್ಲಿ ಮುಂದೆ ಬರಬೇಕೆಂಬ ಆಸೆ ಎಲ್ಲರಿಗೂ ಇದ್ದೇ ಇರುತ್ತದೆ. ಈ ನಿಟ್ಟಿನಲ್ಲಿ ಮೋಸ ಮಾಡಿಯಾದರೂ ದುಡ್ಡನ್ನು ಸಂಪಾದಿಸಬೇಕೆಂದು ಹಲವು ದಾರಿಗಳನ್ನು ಹುಡುಕಿಕೊಂಡಿರುತ್ತಾರೆ. ಸೈಬರ್ ವಂಚನೆ ಪ್ರಕರಣಗಳು(Cyber fraud cases) ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸಂಸ್ಥೆಗಳು ಅಥವಾ ವ್ಯಕ್ತಿಗಳ ಹೆಸರಿನಲ್ಲಿ ಮೆಸೇಜ್ ಗಳನ್ನು ಕಳುಹಿಸಿ ಹಣವನ್ನು ಪಡೆಯುವ ಮಾರ್ಗವನ್ನು ಹುಡುಕಿಕೊಂಡಿದ್ದಾರೆ. ಅದೇ ರೀತಿಯಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India) ಹೆಸರು ಬಳಸಿಕೊಂಡು ವಂಚಿಸುತ್ತಿರುವ ಪ್ರಕರಣಗಳು ಇತ್ತೀಚೆಗೆ ಬೆಳಕಿಗೆ ಬಂದಿವೆ. ಎಸ್ ಬಿಐ ಬ್ಯಾಂಕ್ನಿಂದ ರಿವಾರ್ಡ್ಸ್(Rewards from SBI Bank) ಬಂದಿರುವ ರೀತಿ ಮೆಸೇಜ್ ಕಳುಹಿಸಿ ವಂಚಕರು ವಂಚಿಸುತ್ತಿದ್ದಾರೆ. ಈ ಮೆಸೇಜ್ ಗೆ ರಿಯಾಕ್ಟ್ ಮಾಡಿದರೆ ಏನಾಗುತ್ತದೆ? ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಹೌದು, ಇತ್ತೀಚಿಗೆ ಹಲವು ಎಸ್‌ಬಿಐ ಬ್ಯಾಂಕ್ ಖಾತೆದಾರರಿಗೆ(SBI Bank account holders) ಸಂದೇಶ ಬರುತ್ತಿದ್ದು, ಆ ಸಂದೇಶದಲ್ಲಿ ನಿಮ್ಮ ರಿವಾರ್ಡ್ಸ್ ಪಾಯಿಂಟ್ಸ್ ಅವಧಿ ಅಂತ್ಯಗೊಳ್ಳುತ್ತಿದೆ. ಅವಧಿ ಅಂತ್ಯಗೊಳ್ಳುವ ಮೊದಲು ಪಾಯಿಂಟ್ಸ್ ರಿಡೀಮ್ ಮಾಡಿಕೊಳ್ಳಿ ಎಂದು ಲಿಂಕ್ ಕಳುಹಿಸಿ ರಿಯಾಕ್ಟ್ ಮಾಡುವಂತೆ ಆ ಸಂದೇಶ ಪ್ರೇರೇಪಿಸುತ್ತದೆ.
ಇತ್ತೀಚಿಗೆ ಈ ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣವೇನು?:
ವಂಚಕರ ಈ ಹೊಸ ಮಾರ್ಗದಿಂದ ಹಲವರು ತಮ್ಮ ಖಾತೆಯಲ್ಲಿರುವ ಹಣವನ್ನು ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಈ ಪ್ರಕರಣಗಳು ಇತ್ತೀಚಿಗೆ ಹೆಚ್ಚಾಗುತ್ತಿರುವ ಕಾರಣ ನವೆಂಬರ್ 1 ರಿಂದ(November ಯುಪಿಐ(UPI) ಪಾವತಿ ಸೇರಿದಂತೆ ಬ್ಯಾಂಕಿಂಗ್‌ನ ಕೆಲ ನಿಯಮಗಳು ಬದಲಾಗಿದ್ದು, ನಿನ್ನೆ ಯಿಂದ ಅಂದರೆ ಡಿಸೆಂಬರ್ 1 ರಿಂದ(December 1) ಕ್ರಿಡಿಟ್ ಕಾರ್ಡ್(Credit card) ನಿಯಮದಲ್ಲೂ ಬದಲಾವಣೆಯಾಗಿರುವ ಕಾರಣ ಗ್ರಾಹಕರಿಗೆ ಈ ರೀತಿ ಸ್ಕ್ರಾಮ್ ಮೆಸೇಜ್(Scam message) ಕಳುಹಿಸಲಾಗುತ್ತಿದೆ.
ಎಸ್‌ಬಿಐ ಬ್ಯಾಂಕ್ನ ಖಾತೆದಾರರಿಗೆ ಎಚ್ಚರಿಸಿದೆ :
ಇನ್ನು ಎಸ್‌ಬಿಐ ತನ್ನ ಅಧಿಕೃತ ಪ್ರಕಟಣೆಯಲ್ಲಿ ರಿವಾರ್ಡ್ಸ್ ಮೆಸೇಜ್ ಬಗ್ಗೆ ಎಚ್ಚರಿಕೆ ನೀಡಿದ್ದು, ಎಸ್‌ಬಿಐ ಬ್ಯಾಂಕ್ನಿಂದ ರಿವಾರ್ಡ್ಸ್ ಬಂದಿರುವ ರೀತಿ ಮೆಸೇಜ್ ಕಳುಹಿಸಿ ವಂಚಿಸುತ್ತಿದ್ದಾರೆ. ಪ್ರೆಸ್ ಇನ್ಫರ್ಮೇಷನ್ ಬ್ಯೂರೋ (PIB) ಕೂಡ ಗ್ರಾಹಕರು ಈ ಬಗ್ಗೆ ಎಚ್ಚರ ವಹಿಸಬೇಕು ಎಂದು ಸೂಚಿಸಿದೆ. ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಪಿಐಬಿ, ಅಪರಿಚಿತರಿಂದ ಬಂದಂತಹ ಸಂದೇಶಗಳಿಗೆ ಎಂದಿಗೂ ರಿಯಾಕ್ಟ್ ಮಾಡಬೇಡಿ ಎಂದು ಎಚ್ಚರಿಕೆ ನೀಡಿದೆ.
ರಿವಾರ್ಡ್ಸ್ ಮೆಸೇಜ್ ಗೆ ರಿಯಾಕ್ಟ್ ಮಾಡಿದರೆ ಏನಾಗುತ್ತದೆ?:
ರಿವಾರ್ಡ್ಸ್ ಮೆಸೇಜ್ ಗೆ ರಿಯಾಕ್ಟ್ ಮಾಡುವುದರಿಂದ ಗ್ರಾಹಕರ ಖಾತೆಯಲ್ಲಿ ಹಣವಿದ್ದರೆ ಆ ಹಣವನ್ನು ಪಡೆದುಕೊಳ್ಳಲು ಸಹಾಯವಾಗುತ್ತದೆ. ಒಂದು ವೇಳೆ ನಿಮ್ಮ ಖಾತೆಯಲ್ಲಿ ಹಣವಿಲ್ಲದಿದ್ದರೂ ಕೂಡ ಬ್ಯಾಂಕ್ ವಿವರ, ಪಾನ್ ಕಾರ್ಡ್(Pan card) ವಿವರ ಸೇರಿದಂತೆ ಇತರ ವೈಯುಕ್ತಿ ಮಾಹಿತಿ ಕದ್ದು ಭಾರಿ ಮೋಸ ಮಾಡುವ ಸಾಧ್ಯತೆಗಳು ಹೆಚ್ಚಾಗಿ ಇರುತ್ತದೆ ಆದ್ದರಿಂದ ಗ್ರಾಹಕರು ಎಚ್ಚರಿಕೆಯಿಂದ ಜಾಗರೂಕರಾಗಿ ಮುಂದುವರೆಯಬೇಕು.
ಎಸ್‌ಬಿಐ ಬ್ಯಾಂಕ್ ಎಂದಿಗೂ ಎಸ್ಎಂಎಸ್(SMS) ಅಥವಾ ವಾಟ್ಸಾಪ್(WhatsApp) ಮೂಲಕ ಲಿಂಕ್ಗಳನ್ನು ಅಥವಾ ಎಪಿಕೆ ಫೈಲ್ಗಳನ್ನು(apk files) ಡೌನ್ಲೋಡ್ ಅಥವಾ ಇನ್ಸ್ಟಾಲ್ ಮಾಡಲು ಕಳುಹಿಸುವುದಿಲ್ಲ. ಅಪರಿಚಿತ ಫೈಲ್ಗಳನ್ನು ಎಂದಿಗೂ ಡೌನ್ಲೋಡ್ ಮಾಡಬೇಡಿ ಅಥವಾ ಅಂತಹ ಲಿಂಕ್ಗಳ ಮೇಲೆ ಕ್ಲಿಕ್ ಮಾಡಬೇಡಿ ಎಂದು ಬ್ಯಾಂಕ್ ಗ್ರಾಹಕರಿಗೆ ಸೂಚನೆ ನೀಡಿದೆ.
ಈ ವಂಚನೆ ತಡೆಯಲು ಎಐ ಪರಿಚಯ :
ಈ ರೀತಿಯ ವಂಚನೆಯ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (Reserve Bank of India) ಗ್ರಾಹಕರಿಗೆ ಎಚ್ಚರಿಕೆಯನ್ನು ನೀಡಲು ಕೃತಕ ಬುದ್ಧಿಮತ್ತೆ (Artificial intelligence) ಸಿಸ್ಟಮ್ ಪರಿಚಯಿಸಲು ಮುಂದಾಗಿದೆ. ಎಐ (AI) ಪ್ರಮುಖವಾಗಿ ಈ ರೀತಿಯ ವಂಚನೆಗಳು ನಡೆಯದಂತೆ ನೋಡಿಕೊಳ್ಳಲು ಸಹಾಯ ಮಾಡುತ್ತದೆ. ಹಾಗೂ ಗ್ರಾಹಕರ ಖಾತೆಗಳ ಸುರಕ್ಷತೆಗೆ ಹೆಚ್ಚಿನ ಆದ್ಯತೆಯನ್ನು ನೀಡಲಿದೆ.
ಗಮನಿಸಿ :
ರಿವಾರ್ಡ್ಸ್ ಮೆಸೇಜ್ ಗೆ ರಿಯಾಕ್ಟ್ ಮಾಡುವ ಬದಲು ನೇರವಾಗಿ ಬ್ಯಾಂಕ್ ಕಸ್ಟಮರ್ ಕೇರ್‌ಗೆ(Bank Customer Care) ಕರೆ ಮಾಡಿ ಅಥವಾ ಅದಿಕೃತ ಆ್ಯಪ್, ವೆಬ್‌ಸೈಟ್ ಮೂಲಕ ಪರಿಶೀಲಿಸಿ. ಬ್ಯಾಂಕ್ ಖಾತೆಗೆ ಟು ಫ್ಯಾಕ್ಟರ್ ಅಥೆಂಟಿಕೇಶನ್ ಭದ್ರತೆ ನೀಡಿ. ಇದರಿಂದ ವಹಿವಾಟು ನಡೆಸುವಾಗ ಪಿನ್ ಮಾತ್ರವಲ್ಲೂ, ಒಟಿಪಿ ಕೋಡ್(OTP code) ಕೂಡ ಅವಶ್ಯಕವಾಗಲಿದೆ. ಈ ಎರಡು ರೀತಿಯಲ್ಲಿ ನೀವು ನಿಮ್ಮ ಖಾತೆಯನ್ನು ಸ್ವಲ್ಪಮಟ್ಟಿನಲ್ಲಿ ಭದ್ರತೆಯಿಂದ ಇಟ್ಟುಕೊಳ್ಳಬಹುದು.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.