Scolarship 2025 : ಈ ವಿದ್ಯಾರ್ಥಿಗಳಿಗೆ‌ ಸಿಗಲಿದೆ 25 ಸಾವಿರ ರೂ. ಸ್ಕಾಲರ್ಶಿಪ್. ಇಲ್ಲಿದೆ ವಿವರ 

Picsart 25 02 02 12 20 51 541

ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಯಂಗ್ ರಿಸರ್ಚ್ ಫೆಲೋಶಿಪ್(Dr. A.P.J. Abdul Kalam Young Research Fellowship): ಪಿಯುಸಿ ಪಾಸ್‌ ಮಾಡಿದ ವಿದ್ಯಾರ್ಥಿಗಳಿಗೆ 25,000 ರೂಪಾಯಿ ಸ್ಕಾಲರ್‌ಶಿಪ್

ಭಾರತದ ಮಾಜಿ ರಾಷ್ಟ್ರಪತಿ, ವಿಜ್ಞಾನಿ ಹಾಗೂ ಯುವಕರ ಪ್ರೇರಕ ಶಕ್ತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ(Dr. A.P.J. Abdul Kalam) ಅವರ ಸ್ಮರಣಾರ್ಥವಾಗಿ ವಿದ್ಯಾರ್ಥಿಗಳಿಗಾಗಿ “APJ ಯಂಗ್ ರಿಸರ್ಚ್ ಫೆಲೋಶಿಪ್” ಸ್ಕಾಲರ್‌ಶಿಪ್ ಪ್ರಾರಂಭಿಸಲಾಗಿದೆ. ಈ ಫೆಲೋಶಿಪ್ ಅನ್ನು ಗ್ರಾಜುಯೇಟ್ ಟೆಕ್ನಾಲಜಿ, ಎಜುಕೇಶನ್, ರಿಸರ್ಚ್ ಅಂಡ್ ರಿಹ್ಯಾಬಲಿಟೇಶನ್ ಫಾರ್ ನ ಎನ್ವೈರ್ನಮೆಂಟ್ (TERRE) ಪಾಲಿಸಿ ಸೆಂಟರ್ ನೀಡುತ್ತಿದೆ. ಈ ಸ್ಕಾಲರ್‌ಶಿಪ್ ಉದ್ದೇಶವು ಪರಿಸರ ಸಂಶೋಧನೆಗೆ(environmental research) ತೊಡಗಿರುವ ವಿದ್ಯಾರ್ಥಿಗಳನ್ನು ಉತ್ತೇಜಿಸುವುದಾಗಿದೆ. ಸ್ಕಾಲರ್‌ಶಿಪ್ ಪಡೆಯಲು ಯಾರೆಲ್ಲ ಅರ್ಹರು? ಸ್ಕಾಲರ್‌ಶಿಪ್ ಗೆ ಅರ್ಜಿ ಸಲ್ಲಿಸವುದು ಹೇಗೆ? ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವಾಗ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಅರ್ಜಿ ಸಲ್ಲಿಸಲು ವಿದ್ಯಾರ್ಹತೆ:

ಈ ಫೆಲೋಶಿಪ್‌ಗಾಗಿ ಭಾರತದ ಯಾವುದೇ ಭಾಗದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಅಂಡರ್‌ಗ್ರಾಜುಯೇಟ್ (UG) – ಪದವಿ ಮಟ್ಟದ ವಿದ್ಯಾರ್ಥಿಗಳು, ಪೋಸ್ಟ್‌ಗ್ರಾಜುಯೇಟ್ (PG) – ಸ್ನಾತಕೋತ್ತರ ಶಿಕ್ಷಣ(Post Graduate Education) ಪಡೆಯುವವರು ಹಾಗೂ ಪಿ.ಎಚ್.ಡಿ (PhD) – ಸಂಶೋಧನೆ ನಡೆಸುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಅರ್ಹರಾಗಿರುವ ವಿದ್ಯಾರ್ಥಿಗಳು ಪರಿಸರ ಸಂಶೋಧನೆಗೆ(environmental research) ಸಂಬಂಧಿಸಿದ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರಬೇಕು ಅಥವಾ ತಮ್ಮ ಅಧ್ಯಯನವನ್ನು ಅಂತಿಮಗೊಳಿಸಿರಬೇಕು.

ಅರ್ಜಿ ಸಲ್ಲಿಸಲು ಅಗತ್ಯ ಅರ್ಹತೆಗಳು:
  • ಅರ್ಜಿದಾರರು ಭಾರತೀಯ ನಾಗರಿಕರಾಗಿರಬೇಕು(Indian citizen).
  • ಎನ್ವೈರ್ನಮೆಂಟಲ್ ಸೈನ್ಸ್(Environmental Science) ಅಥವಾ ಅದರ ಸಂಬಂಧಿತ ಕ್ಷೇತ್ರದಲ್ಲಿ ಅಧ್ಯಯನ ಮಾಡುತ್ತಿರಬೇಕು (ಅಂಡರ್‌ಗ್ರಾಜುಯೇಟ್, ಸ್ನಾತಕೋತ್ತರ ಅಥವಾ ಪಿ.ಎಚ್.ಡಿ.).
  • 2024ರ ಡಿಸೆಂಬರ್ 31ಕ್ಕೆ(31st December 2024) ಅನ್ವಯವಾಗುವಂತೆ 18ರಿಂದ 25 ವರ್ಷದೊಳಗಿನ ವಯೋಮಾನದವರಾಗಿರಬೇಕು.
  • ಭಾರತದಲ್ಲಿ ಪರಿಸರ ಸಂರಕ್ಷಣೆ(Environmental protection) ಮತ್ತು ಅಭಿವೃದ್ಧಿಗೆ ಅದ್ವಿತೀಯ ಸಂಶೋಧನಾ ಕೊಡುಗೆ ನೀಡಿದ ವಿದ್ಯಾರ್ಥಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ.
ಸ್ಕಾಲರ್‌ಶಿಪ್ ಮೊತ್ತ ಎಷ್ಟು?:

ಅರ್ಹರಾದ ವಿದ್ಯಾರ್ಥಿಗಳಿಗೆ 25,000 ರೂಪಾಯಿ(25,000 rupees) ವರೆಗೆ ಸ್ಕಾಲರ್‌ಶಿಪ್ ಲಭ್ಯವಿರುತ್ತದೆ. ಇದು ವಿದ್ಯಾರ್ಥಿಗಳ ಸಂಶೋಧನಾ ಯೋಜನೆಗಳು ಮತ್ತು ಪರಿಸರ ಸುಧಾರಣೆಗೆ ಅವರ ಕೊಡುಗೆಗಳನ್ನು ಬೆಂಬಲಿಸಲು ನೆರವಾಗಲಿದೆ.

ಸ್ಕಾಲರ್‌ಶಿಪ್ ಗೆ ಅರ್ಜಿ ಸಲ್ಲಿಸುವುದು ಹೇಗೆ?:

ಆಸಕ್ತ ಹಾಗೂ ಅರ್ಹ ವಿದ್ಯಾರ್ಥಿಗಳು ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಅಧಿಕೃತ ಲಿಂಕ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು : ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವಾಗ?:

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15-02-2025 ಆಗಿದೆ. ಆದ್ದರಿಂದ, ಆಸಕ್ತ ವಿದ್ಯಾರ್ಥಿಗಳು ಶೀಘ್ರವಾಗಿ ಅರ್ಜಿ ಸಲ್ಲಿಸಲು ಮುಂದಾಗಬೇಕು.

ಈ ಅವಕಾಶವನ್ನು ಬಳಸಿಕೊಂಡು ವಿದ್ಯಾರ್ಥಿಗಳು ಪರಿಸರ ಸಂಶೋಧನೆ ಮತ್ತು ಅಭಿವೃದ್ದಿಗೆ ತಮ್ಮ ಕೊಡುಗೆಯನ್ನು ನೀಡಲು ಪ್ರೇರಿತರಾಗಬಹುದು.

ಈ ಮಾಹಿತಿಗಳನ್ನು ಓದಿ

 

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸು

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!