ಮೈಸೂರಿಗೆ ದೊರೆಯಲಿದೆ ಎರಡನೇ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ! ಈ ಹಳ್ಳಿಯಲ್ಲಿ 26 ಎಕರೆ ಭೂಮಿಯಲ್ಲಿ ನಿರ್ಮಾಣ.
ಮೈಸೂರಿನವರಿಗಾಗಿ ಮತ್ತೊಂದು ಸಿಹಿ ಸುದ್ದಿ (Gud news) ತಿಳಿದು ಬಂದಿದೆ. ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಂತೆಯೇ, ಮೈಸೂರಿನಲ್ಲಿ ಇದೀಗ ಎರಡನೇ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಮೈದಾನ (Second International level cricket stadium) ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ. ಕರ್ನಾಟಕದಲ್ಲಿ ಎರಡನೇ ಅಂತಾರಾಷ್ಟ್ರೀಯ ವೇದಿಕೆಯ ಸೌಲಭ್ಯ ಮೈಸೂರಿಗೇ ಒಲಿದಿದೆ. ಇದೊಂದು ದೀರ್ಘಕಾಲದ ಕನಸಾಗಿದ್ದರೂ, ಈಗ ಅದು ವಾಸ್ತವವಾಗುತ್ತಿದೆ. ಇದರಿಂದ ಕ್ರಿಕೆಟ್ ಅಭಿಮಾನಿಗಳ (Cricket fans) ಹರ್ಷಕ್ಕೆ ಕಡೇ ಇಲ್ಲದಂತಾಗಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧಿಕೃತ ಪ್ರಕಟಣೆ:
ಎಪ್ರಿಲ್ 24ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Chief Minister Siddaramayya) ಸುದ್ದಿಗೋಷ್ಠಿಯಲ್ಲಿ ಈ ಯೋಜನೆಗೆ ಸಂಬಂಧಿಸಿದಂತೆ ಅಧಿಕೃತ ಘೋಷಣೆ ನೀಡಿರುವ ಪ್ರಕಾರ, ಮೈಸೂರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣವಾಗಲಿದೆ. ಈಗಾಗಲೇ ಈ ನಿಟ್ಟಿನಲ್ಲಿ ಸ್ಥಳ ಗುರುತಿಸುವ ಕಾರ್ಯ ಆರಂಭವಾಗಿದೆ ಎಂದು ಅವರು ತಿಳಿಸಿದರು. ಎಲ್ಲ ಅಗತ್ಯ ಕ್ರಮಗಳನ್ನು ಬೇಗನೆ ಕೈಗೊಳ್ಳಲಾಗುವುದು ಎಂಬ ಭರವಸೆ ನೀಡಿದರು.
ಸರ್ಕಾರದ ಮಾಹಿತಿ ಪ್ರಕಾರ, ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ಈ ಭೂಮಿಯನ್ನು ಕರ್ನಾಟಕ ರಾಜ್ಯ (Karnataka state) ಕ್ರಿಕೆಟ್ ಸಂಸ್ಥೆಗೆ (KSCA) ಹಸ್ತಾಂತರಿಸಲಾಗುವುದು. ಈ ಕ್ರೀಡಾಂಗಣದ ನಿರ್ಮಾಣವು ಮೈಸೂರು ಅಭಿವೃದ್ಧಿಗೆ ಹೊಸ ಬಾಗಿಲು ತೆರೆದು ಕೊಡುವಂತಾಗಲಿದೆ.
ಹುಯಿಲಾಲು ಹಳ್ಳಿಯಲ್ಲಿ ಹೊಸ ಕ್ರೀಡಾಂಗಣ :
ಮೈಸೂರಿನ ಹತ್ತಿರವಿರುವ ಹುಯಿಲಾಲು ಗ್ರಾಮವನ್ನು ಹೊಸ ಕ್ರೀಡಾಂಗಣ (New stadium) ನಿರ್ಮಾಣದ ಸ್ಥಳವಾಗಿ ಆಯ್ಕೆ ಮಾಡಲಾಗಿದೆ ಎಂಬ ಸುದ್ದಿ ಲಭಿಸಿದೆ. ಈ ಯೋಜನೆಗಾಗಿ ಸುಮಾರು 26 ಎಕರೆ ಭೂಮಿಯನ್ನು ಮೀಸಲಿಟ್ಟಿದ್ದಾರೆ ಎನ್ನಲಾಗಿದೆ. ಮೊದಲು ಸಾತಗಳ್ಳಿಯಲ್ಲಿ ಯೋಜನೆ ರೂಪಿಸಲಾಗಿದ್ದರೂ, ಅಲ್ಲಿ ಸರೋವರವಿರುವ ಕಾರಣದಿಂದ ಪರಿಸರ ಸಂಬಂಧಿತ ಸಮಸ್ಯೆಗಳ ಸಾಧ್ಯತೆಯಿಂದ ಯೋಜನೆಯು ಪರಿಷ್ಕೃತವಾಗಿದೆ. ಹೀಗಾಗಿ, ಎಲ್ಲಾ ಅಡಚಣೆಗಳಿಲ್ಲದ ಹುಯಿಲಾಲು ಹಳ್ಳಿಯೇ (Huyilalu village) ಅಂತಿಮಗೊಳಿಸಲಾಗಿದೆ.
ಸಚಿವ ಸಂಪುಟಕ್ಕೂ ಮೊದಲು ಮಾಡಿದ ಒತ್ತಾಯ:
ಈ ಘೋಷಣೆಗೆ ಹಿಂದೆ ಮೈಸೂರು ಮಾಜಿ ಸಂಸದ ಪ್ರತಾಪ್ ಸಿಂಹ ಅವರ ಶ್ರಮ ಅಸಾಧಾರಣವಾಗಿದೆ. ಅವರು ಈ ಘೋಷಣೆಗೆ ಒಂದು ದಿನ ಮುಂಚಿತವಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಮೈಸೂರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಂಗಣ (International level stadium in Mysore) ಅಗತ್ಯವಿದೆ ಎಂದು ಸಮರ್ಥವಾಗಿ ವಿವರಿಸಿದರು. ಸಂಸ್ಥೆಗಳು, ಆಟಗಾರರು ಹಾಗೂ ಅಭಿಮಾನಿಗಳ ದೃಷ್ಟಿಯಿಂದ ಈ ರೀತಿಯ ವೇದಿಕೆ ಅವಶ್ಯಕತೆಯಾಗಿದೆ ಎಂದು ಅಭಿಪ್ರಾಯಪಟ್ಟರು.
ಕರ್ನಾಟಕದ ಕ್ರಿಕೆಟ್ ಭವಿಷ್ಯಕ್ಕೆ ದಿಟ್ಟ ಹೆಜ್ಜೆ:
ಇತರ ರಾಜ್ಯಗಳಾದ ಮಹಾರಾಷ್ಟ್ರ, ಗುಜರಾತ್, ಉತ್ತರ ಪ್ರದೇಶ, ಪಂಜಾಬ್, ತಮಿಳುನಾಡು, ಆಂಧ್ರ ಪ್ರದೇಶ, ಮಧ್ಯಪ್ರದೇಶ ಮತ್ತು ರಾಜಸ್ಥಾನಗಳು ಈಗಾಗಲೇ ಹಲವಾರು ಅಂತಾರಾಷ್ಟ್ರೀಯ ಕ್ರೀಡಾಂಗಣಗಳನ್ನು ಹೊಂದಿವೆ. ಈ ರಾಜ್ಯಗಳು ವಿವಿಧ ನಗರಗಳಲ್ಲಿ ಪಂದ್ಯಗಳನ್ನು ಆಯೋಜಿಸಿ, ಆರ್ಥಿಕತೆ ಮತ್ತು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಿದ್ದಾರೆ.
ಕರ್ನಾಟಕದಲ್ಲೂ ಕ್ರಿಕೆಟ್ ಕ್ಷೇತ್ರದಲ್ಲಿ ಉತ್ತಮ ನಾಯಕತ್ವ ಇರುವುದರಿಂದ, ಬೆಂಗಳೂರಿನ ಹೊರತಾಗಿ ಮತ್ತೊಂದು ಅಂತಾರಾಷ್ಟ್ರೀಯ ವೇದಿಕೆಯಾಗಿರುವ ಮೈಸೂರಿನ ಈ ಹೊಸ ಕ್ರೀಡಾಂಗಣ, ಪ್ರತಿಭಾಶಾಲಿ ಆಟಗಾರರಿಗೆ ಅವಕಾಶಗಳ ಬಾಗಿಲು ತೆರೆಯಲಿದೆ.
ಇನ್ನು ಮುಂದೆ ಮೈಸೂರಿನ ಮತ್ತು ಸುತ್ತಮುತ್ತಲಿನ ಕ್ರಿಕೆಟ್ ಅಭಿಮಾನಿಗಳು ಬೆಂಗಳೂರಿಗೆ ತೆರಳದೇ ಇಲ್ಲಿಯೇ ಮಹತ್ವದ ಪಂದ್ಯಾವಳಿಗಳನ್ನು ಆನಂದಿಸಬಹುದು. ಜೊತೆಗೆ ಯುವ ಕ್ರಿಕೆಟಿಗರಿಗೆ (New cricketer’s) ಉತ್ತಮ ತರಬೇತಿ ಹಾಗೂ ಆಟವಾಡಲು ಅವಕಾಶ ದೊರೆಯಲಿದೆ.
ಕರ್ನಾಟಕ ಸರ್ಕಾರದ (Karnataka government) ಈ ಮಹತ್ವಾಕಾಂಕ್ಷಿ ಯೋಜನೆ, ಮೈಸೂರಿನ ಕ್ರೀಡಾ ಜಗತ್ತಿಗೆ ಹೊಸ ಉಜ್ವಲತೆಯನ್ನು ತರುವುದರಲ್ಲಿ ಸಂಶಯವಿಲ್ಲ. ಅಂತಾರಾಷ್ಟ್ರೀಯ ಮಟ್ಟದ ಈ ವೇದಿಕೆ ಮೂಲಕ ಮೈಸೂರು ನಗರವು ಕ್ರೀಡಾ ಪ್ರವಾಸೋದ್ಯಮ, ಆರ್ಥಿಕ ಪ್ರಗತಿ ಹಾಗೂ ಸಾಂಸ್ಕೃತಿಕ ಹೆಗ್ಗಳಿಕೆಯಲ್ಲಿ ಮಿಂಚಲಿದೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.