ಏಪ್ರಿಲ್‌ನಲ್ಲಿ(April) ಭಾರತಕ್ಕೆ ಹೊಸ ಕಾರುಗಳು: 2025ರ ಎಕ್ಸ್‌ಕ್ಲೂಸಿವ್ ಕಾರುಗಳು, ಬೆಲೆ ಹಾಗೂ ವೈಶಿಷ್ಟ್ಯಗಳು ಹೀಗಿವೆ:
ಭಾರತೀಯ ಆಟೋಮೊಬೈಲ್(Automobile) ಮಾರುಕಟ್ಟೆ ದಿನೇದಿನೇ ವಿಸ್ತರಿಸುತ್ತಿದ್ದು, ಕಳೆದ ಐದು ವರ್ಷಗಳಲ್ಲಿ ಕಾರು ಖರೀದಿಸುವವರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ವಿಶೇಷವಾಗಿ ಮಧ್ಯಮ ವರ್ಗದ ಖರೀದಿದಾರರಿಗೆ ತಲುಪುವ ದರದಲ್ಲಿ ಐಷಾರಾಮಿ ಮತ್ತು ತಂತ್ರಜ್ಞಾನದಿಂದ(technology) ಕೂಡಿದ ಕಾರುಗಳನ್ನು ಕಾರು ತಯಾರಕರು ಪರಿಚಯಿಸುತ್ತಿದ್ದಾರೆ. ಈ ಬದಲಾವಣೆಯಿಂದಾಗಿ ಭಾರತದ ಬಹುತೇಕ ಕಾರು ತಯಾರಿಕಾ ಬ್ರಾಂಡ್‌ಗಳು(Brand) ಹೊಸ ಮಾದರಿಗಳನ್ನು ಪರಿಚಯಿಸುತ್ತಿದ್ದಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಹೌದು, ಮಾರ್ಚ್(March)ತಿಂಗಳಲ್ಲಿ ಹಲವಾರು ಐಷಾರಾಮಿ ಕಾರುಗಳು ಬಿಡುಗಡೆಯಾಗಿದ್ದರೆ, ಏಪ್ರಿಲ್(April) ತಿಂಗಳು ಸಾಮಾನ್ಯ ಗ್ರಾಹಕರಿಗೆ ಸೂಕ್ತವಾದ ನೂತನ ಎಸ್‌ಯುವಿಗಳನ್ನು ಪರಿಚಯಿಸಲು ಸಿದ್ಧವಾಗಿದೆ. ಇದರಲ್ಲಿ ಮಾರುತಿ ಸುಜುಕಿ, ಕಿಯಾ, ಸ್ಕೋಡಾ, ಫೋಕ್ಸ್‌ವ್ಯಾಗನ್ ಹಾಗೂ ಬಿಎಂಡಬ್ಲ್ಯು ನಂತಹ ಪ್ರಮುಖ ಬ್ರಾಂಡ್‌ಗಳ ಕಾರುಗಳು ಇದ್ದು, ಹೊಸ ತಂತ್ರಜ್ಞಾನ, ಸುಧಾರಿತ ವಿನ್ಯಾಸ ಹಾಗೂ ಆಧುನಿಕ ಫೀಚರ್‌ಗಳೊಂದಿಗೆ(features) ಮಾರುಕಟ್ಟೆಗೆ ಪ್ರವೇಶಿಸುತ್ತಿವೆ. ಹಾಗಿದ್ದರೆ ಈ ಕಾರುಗಳ ವಿಶೇಷತೆಗಳೇನು? ಎಷ್ಟು ಬೆಲೆಗೆ ಕಾರುಗಳು ಸಿಗಲಿವೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
1. ಮಾರುತಿ ಇ-ವಿಟಾರಾ(Maruti E-Vitara) – ಮಾರುತಿ ಸುಜುಕಿ ಎಲೆಕ್ಟ್ರಿಕ್ ಎಸ್‌ಯುವಿ:

ಮಾರುತಿ ಸುಜುಕಿ ತನ್ನ ಮೊದಲ ಎಲೆಕ್ಟ್ರಿಕ್ ಎಸ್‌ಯುವಿ, ಇ-ವಿಟಾರಾವನ್ನು 2025ರ ಏಪ್ರಿಲ್ ಅಂತ್ಯದ ವೇಳೆಗೆ ಲಾಂಚ್ ಮಾಡುವ ನಿರೀಕ್ಷೆಯಿದೆ. ಈ ಕಾರು ಹಿಂದಿನ ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್ ಗೆ(Hyundai Creta Electric) ಪೈಪೋಟಿ ನೀಡಲಿದೆ. ಭಾರತದೆಲ್ಲೆಡೆ ಕೆಲವು ಡೀಲರ್‌ಶಿಪ್‌ಗಳಿಗೆ ಈಗಾಗಲೇ ಈ ಕಾರು ತಲುಪಿದ್ದರೂ, ಅಧಿಕೃತ ಬಿಡುಗಡೆ ದಿನಾಂಕವನ್ನು ಕಂಪನಿಯು ಇನ್ನೂ ಘೋಷಿಸಿಲ್ಲ.
ಇ-ವಿಟಾರಾ ಸುಮಾರು ₹17 ಲಕ್ಷ (ಎಕ್ಸ್ ಶೋರೂಮ್) ಬೆಲೆಯಲ್ಲಿ ಲಭ್ಯವಾಗುವ ಸಾಧ್ಯತೆಯಿದ್ದು, ಗ್ರಾಹಕರಿಗೆ ಎರಡು ಬಲಿಷ್ಟ ಬ್ಯಾಟರಿ ಆಯ್ಕೆಗಳನ್ನು ನೀಡಲಿದೆ – 48.8 ಕಿಲೋವ್ಯಾಟ್ ಮತ್ತು 61.1 ಕಿಲೋವ್ಯಾಟ್. ಇದರ ಅಧಿಕೃತ ರೇಂಜ್ 500 ಕಿ.ಮೀ. ಗಿಂತ ಹೆಚ್ಚಿದೆ. ಇದು ದೈನಂದಿನ ಬಳಕೆಗಾಗಿ ಅತ್ಯುತ್ತಮ ಆಯ್ಕೆಯಾಗುತ್ತದೆ.
ನೂತನ ತಂತ್ರಜ್ಞಾನವನ್ನು ಹೊಂದಿರುವ ಈ ಎಲೆಕ್ಟ್ರಿಕ್ ಎಸ್‌ಯುವಿಯಲ್ಲಿ ತ್ರೀ-ಪೀಸ್ ಎಲ್‌ಇಡಿ ಡಿಆರ್‌ಎಲ್‌ಗಳು(LED DRLs), ಏರೋ-ಡೈನಾಮಿಕ್ 18-ಇಂಚಿನ ಅಲಾಯ್ ಚಕ್ರಗಳು, ಮತ್ತು ಸ್ಮಾರ್ಟ್ ಲುಕ್ ನೀಡುವ ಕನೆಕ್ಟೆಡ್ ಎಲ್‌ಇಡಿ ಟೈಲ್ ಲೈಟ್ಸ್ ಲಭ್ಯವಿರುತ್ತವೆ. ಇದಲ್ಲದೆ, ಇನ್ನು, ಸುಧಾರಿತ ವಿನ್ಯಾಸ ಮತ್ತು ಹೈ-ಟೆಕ್ ಇನ್ಫೋಟೈನ್ಮೆಂಟ್ ಸಿಸ್ಟಂ ಸಹ ಇದರಲ್ಲಿ ಅಳವಡಿಸಲಾಗಿದೆ. ಇದು ಭಾರತದಲ್ಲಿ ಮಾರುತಿ ಸುಜುಕಿಯ ಎಲೆಕ್ಟ್ರಿಕ್ ವಾಹನ ಮಾರಾಟದ ಹೊಸ ಯುಗಕ್ಕೆ ಚಾಲನೆ ನೀಡಲಿದೆ.
2. 2025 ಸ್ಕೋಡಾ ಕೊಡಿಯಾಕ್(2025 Skoda Kodiaq) – ಐಷಾರಾಮಿ 7-ಸೀಟರ್ ಎಸ್‌ಯುವಿ:

ಸ್ಕೋಡಾ ತನ್ನ ಜನಪ್ರಿಯ ಎಸ್‌ಯುವಿಯಾದ ಕೊಡಿಯಾಕ್‌ನ ಹೊಸ ತಲೆಮಾರಿನ ಆವೃತ್ತಿಯನ್ನು ಏಪ್ರಿಲ್ ಅಂತ್ಯದೊಳಗೆ ಬಿಡುಗಡೆ ಮಾಡುವುದನ್ನು ಖಚಿತಪಡಿಸಿದೆ. ಈ ಹೊಸ ಆವೃತ್ತಿಯಲ್ಲಿ ವಿನ್ಯಾಸ ಪರಿವರ್ತನೆಗಳು ಹಾಗೂ ಅತ್ಯಾಧುನಿಕ ಇಂಟೀರಿಯರ್ ಫೀಚರ್‌ಗಳು ಲಭ್ಯವಿವೆ.
ಇದನ್ನು ಎರಡು ವೇರಿಯೆಂಟ್‌ಗಳಲ್ಲಿ ಬಿಡುಗಡೆ ಮಾಡಲಾಗಿದ್ದು, ಎಕ್ಸ್-ಶೋರೂಂ ಬೆಲೆಯು ಸುಮಾರು ₹40 ಲಕ್ಷ ಆಗಿರಬಹುದು. ಈ ಎಸ್‌ಯುವಿಯು 2.0-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಹೊಂದಿದ್ದು, 204 ಪಿಎಸ್ ಪವರ್ ಉತ್ಪಾದಿಸುತ್ತದೆ. 7-ಸ್ಪೀಡ್ ಡಿಸಿಟಿ (DCT) ಗಿಯರ್‌ಬಾಕ್ಸ್ ಮತ್ತು ಆಲ್-ವೀಲ್ ಡ್ರೈವ್ (AWD) ವ್ಯವಸ್ಥೆಯನ್ನು ಒಳಗೊಂಡಿದೆ.
ಇನ್ನು, ಇದರ ವಿಶೇಷತೆಗಳನ್ನು ನೋಡುವುದಾದರೆ, 13-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ನವೀಕರಿಸಿದ ಎಸಿ ಕಂಟ್ರೋಲ್ ಡಯಲ್‌ಗಳು, ಮತ್ತು ಹೈ-ಕ್ವಾಲಿಟಿ ಸೀಟ್ ಅಪ್‌ಹೋಲ್ಸ್ಟರಿ ಸೇರಿವೆ. ಹೊಸ ತಂತ್ರಜ್ಞಾನ ಮತ್ತು ಆಧುನಿಕ ವಿನ್ಯಾಸದೊಂದಿಗೆ, ಕೊಡಿಯಾಕ್ ಪ್ರೀಮಿಯಂ ಎಸ್‌ಯುವಿ ವಿಭಾಗದಲ್ಲಿ ತನ್ನ ಸ್ಥಾನವನ್ನು ಬಲಪಡಿಸಲಿದೆ.
3. ಫೋಕ್ಸ್‌ವ್ಯಾಗನ್ ಟಿಗುವಾನ್ ಆರ್-ಲೈನ್(Volkswagen Tiguan R-Line) – ಸ್ಪೋರ್ಟಿ ಎಸ್‌ಯುವಿ:

ಫೋಕ್ಸ್ ವ್ಯಾಗನ್ 2025ರ ಏಪ್ರಿಲ್ 14ರಂದು ಟಿಗುವಾನ್ ಆರ್-ಲೈನ್(Tiguan R-Line) ಆವೃತ್ತಿಯನ್ನು ಭಾರತದಲ್ಲಿ ಬಿಡುಗಡೆ ಮಾಡಲು ಸಿದ್ಧವಾಗಿದೆ. ಇದು ಸುಮಾರು ₹50 ಲಕ್ಷ (ಎಕ್ಸ್-ಶೋರೂಂ) ಬೆಲೆಯುಳ್ಳ ಸಂಪೂರ್ಣ ನಿರ್ಮಿತ ಘಟಕ (CBU) ರೂಪದಲ್ಲಿ ದೇಶಕ್ಕೆ ಪ್ರವೇಶಿಸಲಿದೆ.
ಹೊಸ ಟಿಗುವಾನ್ ಆರ್-ಲೈನ್ 2.0-ಲೀಟರ್ ಟರ್ಬೋ-ಪೆಟ್ರೋಲ್ ಎಂಜಿನ್ ಹೊಂದಿದ್ದು, 190 ಪಿಎಸ್ ಪವರ್ ಮತ್ತು 320 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. 7-ಸ್ಪೀಡ್ ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಹೊಂದಿರುವ ಈ ಎಸ್‌ಯುವಿ ಪವರ್ ಹಾಗೂ ಸ್ಪೋರ್ಟಿ ಕಾರ್ಯಕ್ಷಮತೆಯ ಸಮತೋಲನವನ್ನು ಒದಗಿಸುತ್ತದೆ.
ಇನ್ನು, ಇದರ ವಿಶೇಷತೆಗಳನ್ನು ನೋಡುವುದಾದರೆ ಬ್ಲಾಕ್ ಥೀಮ್ ಮತ್ತು ರೆಡ್ ಆಕ್ಸೆಂಟ್‌ನೊಂದಿಗೆ ಪ್ರೀಮಿಯಂ ಫಿನಿಶ್ ಹೊಂದಿದೆ. ಹೊಸ ಆರ್-ಲೈನ್ ಆಕರ್ಷಕ ‘R’ ಬ್ಯಾಡ್ಜಿಂಗ್ ಮತ್ತು ನವೀಕರಿಸಿದ ವಿನ್ಯಾಸವನ್ನು ಒಳಗೊಂಡಿದೆ. ಟಿಗುವಾನ್ ಆರ್-ಲೈನ್ ಭಾರತದಲ್ಲಿ ಸ್ಪೋರ್ಟಿ ಹಾಗೂ ಪ್ರೀಮಿಯಂ ಎಸ್‌ಯುವಿ ಮಾರುಕಟ್ಟೆಯಲ್ಲಿ ತನ್ನದೇ ಆದ ಸ್ಥಾನ ನಿರ್ಮಿಸಲಿದೆ.
4. 2025 ಬಿಎಂಡಬ್ಲ್ಯು 2 ಸೀರಿಸ್(2025 BMW 2 Series) – ಎಂಟ್ರಿ ಲೆವೆಲ್ ಐಷಾರಾಮಿ ಸೆಡಾನ್:

ಬಿಎಂಡಬ್ಲ್ಯು 2025ರ 2 ಸೀರಿಸ್ ಸೆಡಾನ್ ಅನ್ನು ಈ ಏಪ್ರಿಲ್‌ನಲ್ಲಿ ಭಾರತದಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಜಾಗತಿಕವಾಗಿ, ಈ ಹೊಸ ತಲೆಮಾರಿನ ಮಾದರಿಯನ್ನು ಅಕ್ಟೋಬರ್ 2024ರಲ್ಲಿ ಅನಾವರಣಗೊಳಿಸಲಾಗಿತ್ತು. ಭಾರತದಲ್ಲಿ ಇದರ ಎಕ್ಸ್-ಶೋರೂಂ ಪ್ರಾರಂಭಿಕ ಬೆಲೆ ಸುಮಾರು ₹46 ಲಕ್ಷ ಆಗಿರಬಹುದು.
ಹೊಸದಾಗಿ ವಿನ್ಯಾಸಗೊಳ್ಳುವ 2 ಸೀರಿಸ್ ಕೆಲವು ಪ್ರಮುಖ ನವೀಕರಣಗಳೊಂದಿಗೆ ಬರುತ್ತದೆ. ಇದರಲ್ಲಿ ಟ್ವೀಕ್ ಮಾಡಿದ ಕಿಡ್ನಿ ಗ್ರಿಲ್, ನವೀಕರಿಸಿದ ಎಲ್‌ಇಡಿ ಟೇಲ್ ಲೈಟ್ ವ್ಯವಸ್ಥೆ, ಮತ್ತು 18-ಇಂಚಿನ ಅಲಾಯ್ ಚಕ್ರಗಳು ಅಳವಡಿಸಲಾಗಿದೆ (ಜಾಗತಿಕವಾಗಿ 19-ಇಂಚು ವರೆಗೆ ನವೀಕರಿಸಬಹುದಾಗಿದೆ). ಹಳೆಯ ಮಾದರಿಯೊಂದಿಗೆ ಹೋಲಿಸಿದರೆ, 2025 2 ಸೀರಿಸ್‌ನ ಉದ್ದ 20 ಮಿಮೀ ಮತ್ತು ಎತ್ತರ 25 ಮಿಮೀ ಹೆಚ್ಚಾಗಿದೆ.
ಭಾರತ-ಸ್ಪೆಕ್ ಮಾಡಲ್‌ನಲ್ಲಿ 2.0-ಲೀಟರ್ ಟರ್ಬೋ-ಪೆಟ್ರೋಲ್ ಮತ್ತು 2.0-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಗಳನ್ನು ನೀಡುವ ನಿರೀಕ್ಷೆಯಿದೆ. ಈ ಎಂಜಿನ್‌ಗಳು ಉತ್ತಮ ಪವರ್ ಮತ್ತು ದಕ್ಷತೆಯನ್ನು ಒದಗಿಸುತ್ತವೆ.
ಇನ್ನು, ಈ ಕಾರನ್ನು ಬಹುಮಟ್ಟಿಗೆ ಅಪ್‌ಗ್ರೇಡ್ ಮಾಡಲಾಗಿದ್ದು, 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ಮಲ್ಟಿ-ಕಲರ್ ಆಂಬಿಯೆಂಟ್ ಲೈಟಿಂಗ್, ಮತ್ತು ಪವರ್ಡ್ ಮುಂಭಾಗದ ಸಾಲಿನ ಆಸನಗಳಂತಹ ಪ್ರೀಮಿಯಂ ವೈಶಿಷ್ಟ್ಯಗಳನ್ನು ಹೊಂದಿದೆ. ಈ ನವೀಕರಣಗಳೊಂದಿಗೆ, 2025 ಬಿಎಂಡಬ್ಲ್ಯು 2 ಸೀರಿಸ್ ತನ್ನ ಸೆಗ್ಮೆಂಟ್‌ನಲ್ಲಿ ಹೆಚ್ಚು ಆಕರ್ಷಕ ಮತ್ತು ಶಕ್ತಿಯುತ ಸೆಡಾನ್ ಆಗಲಿದೆ.
5. 2025 ಕಿಯಾ ಕ್ಯಾರೆನ್ಸ್(2025 Kia Carens) – ಕುಟುಂಬಕ್ಕೆ ಸೂಕ್ತವಾದ ಎಂಪಿವಿ:

2025 ಕಿಯಾ ಕ್ಯಾರೆನ್ಸ್ ಫೇಸ್‌ಲಿಫ್ಟ್ ಅನ್ನು ಈ ಏಪ್ರಿಲ್ ಅಂತ್ಯದೊಳಗೆ ಭಾರತದಲ್ಲಿ ಬಿಡುಗಡೆಯಾಗಲಿದ್ದು, 2025ರ ಜೂನ್ ವೇಳೆಗೆ ಬೆಲೆ ಘೋಷಣೆಯ ನಿರೀಕ್ಷೆಯಿದೆ. ಇದರ ಎಕ್ಸ್-ಶೋರೂಂ ಪ್ರಾರಂಭಿಕ ಬೆಲೆ ಸುಮಾರು ₹11 ಲಕ್ಷ ಆಗಿರಬಹುದು.
ಇನ್ನು, ಈ ಕಾರು ಹೊಸ ಕ್ಯಾರೆನ್ಸ್ ಮೂರು ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿರಲಿದೆ – ಎರಡು ಪೆಟ್ರೋಲ್ ಮತ್ತು ಒಂದು ಡೀಸೆಲ್ ಪವರ್‌ಟ್ರೇನ್. ಇದು ಮಾರುತಿ ಎರ್ಟಿಗಾ, ಮಾರುತಿ XL6, ಮತ್ತು ಟೊಯೋಟಾ ರುಮಿಯಾನ್ ಗೆ ಪೈಪೋಟಿ ನೀಡಲಿದೆ.
2025 ಕ್ಯಾರೆನ್ಸ್ ಫೇಸ್‌ಲಿಫ್ಟ್(2025 Carens facelift) ನವೀಕರಿಸಿದ ಬಾಹ್ಯ ವಿನ್ಯಾಸವನ್ನು ಪಡೆಯಲಿದೆ, ಇದರಲ್ಲಿ ಮರುವಿನ್ಯಾಸಗೊಳಿಸಿದ ಎಲ್‌ಇಡಿ ಡಿಆರ್‌ಎಲ್‌ಗಳು, ಪರಿಷ್ಕೃತ ಮುಂಭಾಗದ ಬಂಪರ್, ಹೊಸ ಅಲಾಯ್ ಚಕ್ರಗಳು, ಮತ್ತು ಎಲ್‌ಇಡಿ ಟೈಲ್‌ಲೈಟ್‌ಗಳು ಅಳವಡಿಸಲಾಗಿದೆ. ಇದಲ್ಲದೆ, ಸುಧಾರಿತ ಒಳಾಂಗಣ ಮತ್ತು ಹೊಸ ತಂತ್ರಜ್ಞಾನ ಸೌಲಭ್ಯಗಳೊಂದಿಗೆ, ಹೊಸ ಕ್ಯಾರೆನ್ಸ್ ತನ್ನ ವಿಭಾಗದಲ್ಲಿ ಆಕರ್ಷಕ ಆಯ್ಕೆಯಾಗಲಿದೆ.
ಈ ಎಲ್ಲಾ ಹೊಸ ಕಾರುಗಳು ತಮ್ಮದೇ ಆದ ವಿಶೇಷತೆಗಳನ್ನು ಹೊಂದಿದ್ದು, ಕಾರುಪ್ರೇಮಿಗಳಿಗೆ ಉತ್ತಮ ಆಯ್ಕೆಗಳನ್ನು ನೀಡಲಿವೆ. ಭಾರತದಲ್ಲಿ ವಾಹನ ಕ್ಷೇತ್ರವು ಪ್ರಗತಿಯಲ್ಲಿರುವುದರಿಂದ, ಈ ಕಾರುಗಳು ಗ್ರಾಹಕರ ಮನಸೂರೆಗೊಳ್ಳುವ ನಿರೀಕ್ಷೆಯಿದೆ.
ಹೊಸದಾಗಿ ಕಾರು ಖರೀದಿಸುವ ಉದ್ದೇಶವಿದ್ದರೆ, ಈ ಹೊಸ ಲಾಂಚ್‌ಗಳ ಪೈಕಿ ನಿಮ್ಮ ಅಗತ್ಯಗಳಿಗೆ ತಕ್ಕ ಅನುಕೂಲಕರ ಕಾರ್ ಆಯ್ಕೆ ಮಾಡಿಕೊಳ್ಳಬಹುದು!
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.