Shrama Shakti Scheme – ಮಹಿಳೆಯರು ಉಚಿತ 25,000 ರೂ. ಪಡೆಯಲು ರಾಜ್ಯ ಸರ್ಕಾರದಿಂದ ಅರ್ಜಿ ಆಹ್ವಾನ

WhatsApp Image 2023 09 22 at 7.29.05 PM 1

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ಮಹಿಳೆಯರು ಉಚಿತವಾಗಿ 25 ಸಾವಿರಗಳ ಸಾಲವನ್ನು ಹೇಗೆ ಪಡೆಯುವುದು ಎಂಬುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಹೌದು, ಕರ್ನಾಟಕದ ಎಲ್ಲಾ ಮಹಿಳೆಯರಿಗೆ ರಾಜ್ಯ ಸರ್ಕಾರ(state government)ವು ಒಂದು ಹೊಸ ಯೋಜನೆಯನ್ನು ಜಾರಿಗೆ ತರುವುದರ ಮೂಲಕ ಗುಡ್ ನ್ಯೂಸ್ ಅನ್ನು ನೀಡಿದೆ . ಅದೇನೆಂದರೆ ಮಹಿಳೆಯರಿಗೆಂದೆ ಶ್ರಮಶಕ್ತಿ ವಿಶೇಷ ಮಹಿಳಾ ಯೋಜನೆ (Shrama Shakti vishesha mahila Scheme)ಯನ್ನು ಸರ್ಕಾರವು ಜಾರಿಗೆ ತಂದಿದೆ. ಈ ಯೋಜನೆಯ ವಿಶೇಷಗಳೇನು?, ಯಾರೆಲ್ಲಾ ಈ ಯೋಜನೆಗೆ ಅರ್ಹರು?, ಈ ಸಾಲ(loan)ವನ್ನು ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ?, ಎಂಬುದರ ಸಂಪೂರ್ಣ ಮಾಹಿತಿಯನ್ನು ನಿಮಗೆ ಈ ಲೇಖನದ ಮೂಲಕ ತಿಳಿಸಿಕೊಡಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ

ಶ್ರಮಶಕ್ತಿ ವಿಶೇಷ ಮಹಿಳಾ ಯೋಜನೆ (Shrama Shakti vishesha mahila Scheme) 2023:

ಈಗಾಗಲೇ ರಾಜ್ಯ ಸರ್ಕಾರದಿಂದ ಗೃಹಲಕ್ಷ್ಮಿ ಯೋಜನೆ(gruhalakshmi scheme) ಜಾರಿಗೆ ಬಂದು ಅನೇಕ ಮಹಿಳೆಯರು ಅದರ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದಾರೆ. ಅದರ ಜೊತೆ ಜೊತೆಯಲಿ ಸರ್ಕಾರವು ಇನ್ನೊಂದು ಯೋಜನೆಯನ್ನು ಮಹಿಳೆಯರಿದಂದೆ ಪ್ರಾರಂಭಿಸಿದೆ. ಈ ಯೋಜನೆ ಅಡಿಯಲ್ಲಿ, ಮಹಿಳೆಯರು ತಮ್ಮದೇ ಆಗಿರುವ ವೃತ್ತಿ ಅಥವಾ ಉದ್ಯೋಗವನ್ನು(Own Business) ಆರಂಭಿಸುವುದಾದರೆ ಸರ್ಕಾರದಿಂದ ಸಾಲ ಸೌಲಭ್ಯ ಕೂಡ ಸಿಗುತ್ತದೆ. ಇನ್ನೊಂದು ವಿಶೇಷ ಏನಪ್ಪಾ ಅಂದರೆ ಈ ಯೋಜನೆ ಅಡಿ ಸಾಲವನ್ನು ತೆಗೆದುಕೊಂಡರೆ ಅರ್ಧದಷ್ಟು ಹಣವನ್ನು ಸರ್ಕಾರವೇ ಹಿಂತಿರುಗಿ ಕಟ್ಟುತ್ತದ್ದೆ, ಬರೀ ಅರ್ಧ ಸಾಲ(loan)ವನ್ನು ನೀವು ಕಟ್ಟಿದರೆ ಸಾಕು. ಮಹಿಳೆಯರು ಈ ಯೋಜನೆ ಅಡಿ ಕೇವಲ 4% ಬಡ್ಡಿ ದರದಂತೆ ರೂ. 50,000ಗಳನ್ನು ಸಾಲವನ್ನಾಗಿ ಪಡೆಯಬಹುದು. ಸಾಲವನ್ನು ಪಡೆದುಕೊಂಡು ಮೂರು ವರ್ಷದಲ್ಲಿ 50% ಅಷ್ಟು ಸಾಲವನ್ನು ಹಿಂತಿರುಗಿಸಿದರೆ ಸಾಕು.

whatss

ಈ ಸಾಲವನ್ನು ಪಡೆಯಲು ಬೇಕಾಗಿರುವ ಅರ್ಹತೆಗಳು :

ಅರ್ಜಿದಾರರು ಸರ್ಕಾರಿ ಆದೇಶದಲ್ಲಿ ವಿವರಿಸಿದಂತೆ ಧಾರ್ಮಿಕ ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದವರಾಗಿರಬೇಕು.
ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
ಅರ್ಜಿದಾರರ ವಯಸ್ಸು 18 ರಿಂದ 55 ವರ್ಷಗಳ ನಡುವೆ ಇರಬೇಕು.
ಎಲ್ಲಾ ಮೂಲಗಳಿಂದ ಕುಟುಂಬದ ವಾರ್ಷಿಕ ಆದಾಯ ರೂ. 3,50,000/- ಗಿಂತ ಕಡಿಮೆ ಇರಬೇಕು.
ಅರ್ಜಿದಾರರ ಕುಟುಂಬದ ಯಾವುದೇ ಸದಸ್ಯರು ಕೇಂದ್ರ/ರಾಜ್ಯ ಸರ್ಕಾರಿ ನೌಕರರಾಗಿರಬಾರದು.
ಕಳೆದ 05 ವರ್ಷಗಳಲ್ಲಿ ಅರ್ಜಿದಾರ ಅಥವಾ ಅವನ/ಅವಳ ಕುಟುಂಬದ ಸದಸ್ಯರು ಸರ್ಕಾರದ / ನಿಗಮದ ಯಾವುದೇ ಇತರ ಯೋಜನೆಯಡಿಯಲ್ಲಿ(ಅರಿವು ಯೋಜನೆ ಹೊರತುಪಡಿಸಿ) ಸಾಲ ಸೌಲಭ್ಯಗಳನ್ನು ಪಡೆದಿರಬಾರದು.

ಯಾವೆಲ್ಲ ವ್ಯಾಪಾರಗಳನ್ನು ಶುರು ಮಾಡಬಹುದು :

ಟೈಲರಿಂಗ್, ಹೂವಿನ ವ್ಯಾಪಾರ, ಚಹಾ ಅಂಗಡಿಯ ವ್ಯಾಪಾರ, ಹಣ್ಣಿನ ವ್ಯಾಪಾರ, ಮೀನು ಅಥವಾ ಮಾಂಸಗಳ ವ್ಯಾಪಾರ, ಹಾಲಿನ ವ್ಯಾಪಾರ ಹೀಗೆ ಹಲವಾರು ಸಣ್ಣ ಪುಟ್ಟ ವ್ಯಾಪಾರಗಳನ್ನು ಶುರು ಮಾಡಬಹುದಾಗಿದೆ.

ಬೇಕಾಗಿರುವ ದಾಖಲೆಗಳು :

ಯೋಜನಾ ವರದಿ
ಸಕ್ಷಮ ಪ್ರಾಧಿಕಾರದಿಂದ ನೀಡಲಾದ ಜಾತಿ/ಅಲ್ಪಸಂಖ್ಯಾತ ಪ್ರಮಾಣಪತ್ರ
ಸಕ್ಷಮ ಪ್ರಾಧಿಕಾರದಿಂದ ನೀಡಲಾದ ಆದಾಯ ಪ್ರಮಾಣಪತ್ರ
ಆಧಾರ್ ಕಾರ್ಡ್ ಪ್ರತಿ (ನಿವಾಸದ ಪುರಾವೆ)
ಬ್ಯಾಂಕ್ ಪಾಸ್ ಬುಕ್ ಪ್ರತಿ
ಖಾತರಿ ನೀಡುವವರ ಸ್ವಯಂ ಘೋಷಣೆ ಪತ್ರ
ಸ್ವಯಂ ಘೋಷಣೆ ಪತ್ರ

ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ

app download

ಅರ್ಜಿಯನ್ನು ಸಲ್ಲಿಸುವ ವಿಧಾನ :

ಹಂತ 1: ಅರ್ಜಿಯನ್ನು ಸಲ್ಲಿಸಲು ಮೊದಲಿಗೆ ಸರ್ಕಾರದ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಬೇಕು ಅದಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹಂತ 2: ನಂತರ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ

ಹಂತ 3: ನಂತರ ಮೊಬೈಲ್ ಪರಿಶೀಲನೆ ಎಂಬ ಆಯ್ಕೆಯಲ್ಲಿ ನಿಮ್ಮ ಮೊಬೈಲ್ ನಂಬರನ್ನು ನೋಂದಾಯಿಸಿ ಓಟಿಪಿಯನ್ನು ಪಡೆದುಕೊಳ್ಳಬೇಕು.

ಹಂತ 4: ನಂತರ ಓಟಿಪಿಯನ್ನು ಹಾಕಿ ಕೇಳಲಾದ ಮಾಹಿತಿಯನ್ನು ಭರ್ತಿ ಮಾಡಿ.

ಹಂತ 5: ನಂತರ ಕೇಳಲಾದ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು.

ಹಂತ 6: ಕೊನೆಯದಾಗಿ ಸಲ್ಲಿಸು ಬಟನ್ ಮೇಲೆ ಕ್ಲಿಕ್ ಮಾಡುವ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ :

25 ಸೆಪ್ಟೆಂಬರ್, 2023

ಹೀಗೆ ಮಹಿಳೆಯರು 50,000ಗಳನ್ನು ಸಾಲವನ್ನಾಗಿ ತೆಗೆದುಕೊಂಡು, 25,000ಗಳನ್ನು ಸಹಾಯಧನವನ್ನಾಗಿ ಉಚಿತವಾಗಿ ಪಡೆದುಕೊಳ್ಳಬಹುದು. ಅಷ್ಟೇ ಅಲ್ಲದೆ ತಮ್ಮ ಸ್ವಂತ ವ್ಯಾಪಾರವನ್ನು ಶುರು ಮಾಡಿ ತಮ್ಮ ಕಾಲ ಮೇಲೆ ನಿಲ್ಲುವಂತಹ ಸುವರ್ಣ ಅವಕಾಶ ಇದಾಗಿದೆ. ಇಂತಹ ಉತ್ತಮ ಮಾಹಿತಿಯನ್ನು ಹೊಂದಿರುವ ಈ ಲೇಖನವನ್ನು ಕೂಡಲೇ ನಿಮ್ಮ ಎಲ್ಲಾ ಸ್ನೇಹಿತ ಮಿತ್ರರಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.

Picsart 23 07 16 14 24 41 584 transformed 1

ಇದನ್ನೂ ಓದಿ: 5 ನಿಮಿಷದಲ್ಲಿ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿ : How to link Aadhaar with Pan card

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ಲೇಖನ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube 

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

tel share transformed

 

WhatsApp Group Join Now
Telegram Group Join Now

Related Posts

2 thoughts on “Shrama Shakti Scheme – ಮಹಿಳೆಯರು ಉಚಿತ 25,000 ರೂ. ಪಡೆಯಲು ರಾಜ್ಯ ಸರ್ಕಾರದಿಂದ ಅರ್ಜಿ ಆಹ್ವಾನ

Leave a Reply

Your email address will not be published. Required fields are marked *

error: Content is protected !!