SIP ಮೂಲಕ 1 ಕೋಟಿಗೂ ಅಧಿಕ ಗಳಿಸಬೇಕೇ? ಹಾಗಾದರೆ, ತಿಳಿಯಿರಿ ಕೋಟ್ಯಾಧಿಪತಿ ಮ್ಯೂಚುವಲ್ ಫಂಡ್ ಯೋಜನೆ ಬಗ್ಗೆ..!
ಪ್ರಪಂಚ ಬದಲಾದಂತೆ ನಮ್ಮ ಜೀವನ ಕ್ರಮವು (Life style) ಬದಲಾಗಿದೆ. ಇಂದು ಎಲ್ಲರೂ ತಮ್ಮ ಭವಿಷ್ಯದ ಜೀವನಕ್ಕಾಗಿ ಹಲವಾರು ರೀತಿಯಲ್ಲಿ ಹಣವನ್ನು ಹೂಡಿಕೆ(invest) ಮಾಡಲು ಶುರು ಮಾಡಿದ್ದಾರೆ. ಎಲ್ಲರೂ ತಮ್ಮ ಭವಿಷ್ಯದ (Future) ಜೀವನ ಸುಖಕರವಾಗಿರಲು ಇಚ್ಛೆ ಪಡುತ್ತಾರೆ. ಅದಕ್ಕಾಗಿ ಹಲವಾರು ಕಡೆಗಳಲ್ಲಿ ಹೂಡಿಕೆ ಮಾಡಲು ಶುರು ಮಾಡುತ್ತಾರೆ.
ಮ್ಯೂಚುಯಲ್ ಫಂಡ್ ಯೋಜನೆ (Mutual fund scheme) :
ಇದೀಗ ನೋಡುವುದಾದರೆ, ಇತ್ತೀಚಿಗಿನ ದಿನಗಳಲ್ಲಿ ಮ್ಯೂಚ್‌ವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ. ಏಕೆಂದರೆ, ಮ್ಯೂಚ್‌ವಲ್ ಫಂಡ್ ಹೂಡಿಕೆದಾರರಿಂದ ಹಣ ಸಂಗ್ರಹಿಸಿ, ಆ ಹಣವನ್ನು ವಿವಿಧ ಷೇರುಗಳು, ಬಾಂಡ್‌ಗಳು, ಬಡ್ಡಿ ಸಾಧನಗಳು ಅಥವಾ ಇತರೆ ಹೂಡಿಕೆ ಸಲಹೆಗಳ ಮೂಲಕ ಹೂಡಿಕೆ ಮಾಡುವ ಕಂಪನಿಯು ನಡೆಸುವ ನಿಧಿಯಾಗಿದೆ. ಹೂಡಿಕೆದಾರರು ನೇರವಾಗಿ ಪ್ರತಿ ಹೂಡಿಕೆಗೆ ನಿಯಂತ್ರಣ ಇಲ್ಲದೆ, ಫಂಡ್ ವ್ಯವಸ್ಥಾಪಕದಿಂದ ಸಂಚಿತ ಬೋನಸ್ಸುಗಳನ್ನು ಪಡೆಯುತ್ತಾರೆ.
ಮ್ಯೂಚ್‌ವಲ್ ಫಂಡ್‌ಗಳು ಹೂಡಿಕೆಗೆ ನಿಗದಿತ ಮಟ್ಟದ ಬಡ್ತಿ ನೀಡುವ ಹಾಗೂ ಬಲವಾದ ಹೂಡಿಕೆ ತಂತ್ರಗಳನ್ನು ಅನುಸರಿಸುವ ಮೂಲಕ ಹೂಡಿಕೆಯನ್ನು ಹೆಚ್ಚು ಲಾಭದಾಯಕಗೊಳಿಸಲು ಪ್ರಯತ್ನಿಸುತ್ತವೆ. ಇನ್ನು ನಿವೃತ್ತಿ ಬಳಿಕ ಆದಾಯದ ಮೂಲ ಯಾವುದು ಎಂದು ಹೆಚ್ಚಿನವರು ಆತಂಕದ ಪರಿಸ್ಥಿತಿಯಲ್ಲಿ ಇರುತ್ತಾರೆ. ಅದರಲ್ಲೂ ಇತರರ ವಿಚಾರಕ್ಕೆ ಬರುವುದಾದರೆ ಯಾವುದೇ ಗುರಿ ಸಾಧನೆಗಾಗಿ ಉತ್ತಮ ಕಾರ್ಪಸ್ (Corpus) ಬಯಸುವ ಹೂಡಿಕೆದಾರರಿಗೆ ತಮ್ಮ ಗುರಿ ಈಡೇರಿಕೆಗೆ ಮ್ಯೂಚ್‌ವಲ್ ಫಂಡ್‌ಗಳು ಉತ್ತಮ ಹಾಗೂ ಸೂಕ್ತವಾದ ಮಾರ್ಗವಾಗಿದೆ. ಹಿಂದೆಯೇ ಇಂತಹ ಎಂಎಫ್ ಯೋಜನೆಗಳು ಉತ್ತಮ ಆದಾಯವನ್ನೇ ನೀಡಿದೆ. ವ್ಯಕ್ತಿಗಳಿಗೆ ಕೋಟಿ ರೂ. ಮೌಲ್ಯದ ಕಾರ್ಪಸ್ ಅನ್ನು ಮಾಡಲು ನೆರವು ನೀಡಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಹಲವಾರು ಇನ್ವೆಸ್ಟ್‌ಮೆಂಟ್‌ಗಳು (Investments) ಹೊಂದಿದೆ ಸ್ಮಾಲ್ ಕ್ಯಾಪ್ ಮ್ಯೂಚುವಲ್ ಫಂಡ್ :
ಸ್ಮಾಲ್ ಕ್ಯಾಪ್ ಮ್ಯೂಚುವಲ್ ಫಂಡ್ ಯೋಜನೆ (Small cap mutual fund scheme) ಯು 61,646 ಕೋಟಿ ರೂ.ಗಳ ನಿರ್ವಹಣೆಯ ಆಸ್ತಿಯನ್ನು ಹೊಂದಿದೆ. ಅದರಲ್ಲೂ ಇದು ಕೈಗಾರಿಕೆಗಳು, ಸಾಮಗ್ರಿಗಳು, ಹಣಕಾಸುಗಳಲ್ಲಿ ಹೆಚ್ಚಿನ ಹೂಡಿಕೆ ಮಾಡಿದೆ. ಅಲ್ಲದೆ ಉನ್ನತ ಮೌಲ್ಯಗಳ HDFC ಬ್ಯಾಂಕ್, MCX, ಕಿರ್ಲೋಸ್ಕರ್ ಬ್ರದರ್ಸ್, ಅಪರ್, ಟ್ಯೂಬ್ ಇನ್ವೆಸ್ಟ್‌ಮೆಂಟ್‌ಗಳು ಮುಂತಾದವುಗಳು ಕೂಡ ಇವುಗಳಲ್ಲಿ ಸೇರಿದೆ.
ಕೋಟ್ಯಾಧಿಪತಿ ಮ್ಯೂಚುವಲ್ ಫಂಡ್ ಯೋಜನೆಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ :
ನಿಪ್ಪಾನ್ ಇಂಡಿಯಾ ಸ್ಮಾಲ್ ಕ್ಯಾಪ್ ಫಂಡ್
ನಿಪ್ಪಾನ್ ಇಂಡಿಯಾ ಸ್ಮಾಲ್ ಕ್ಯಾಪ್ ಫಂಡ್ (Nippon India Small Cap Fund) ಒಂದು ಹೈ ರಿಸ್ಕ್ ಮತ್ತು ಹೈ ರಿಟರ್ನ್ ಹೋಲ್ಡ್ ಆಧಾರಿತ ಮ್ಯೂಚುಯಲ್ ಫಂಡ್ ಆಗಿದ್ದು, ಇದು ಸಾಮಾನ್ಯವಾಗಿ ಸ್ಮಾಲ್ ಕ್ಯಾಪ್ ಸ್ಟಾಕ್ಸ್ (ಹೆಚ್ಚು ಸ್ವತ್ತು ಬಲವಾದ ಕಂಪನಿಗಳು)ನಲ್ಲಿ ಹೂಡಿಕೆ ಮಾಡುತ್ತದೆ. ಈ ಫಂಡ್‌ನ ಮೂಲಕ ಹೂಡಿಕೆದಾರರು ಕಡಿಮೆ ಮಾರುಕಟ್ಟೆ ಬಲವನ್ನು ಹೊಂದಿರುವ ಸಂಸ್ಥೆಗಳಲ್ಲಿ ಹೂಡಿಕೆ ಮಾಡುವ ಮೂಲಕ ಉಚ್ಛವಾದ ಬೆಲೆಯ ಮೇಲೆ ಲಾಭ ಪಡೆಯಲು ಪ್ರಯತ್ನಿಸುತ್ತಾರೆ.
ಅಷ್ಟೇ ಅಲ್ಲದೆ ಈ ಯೋಜನೆಯು ಪ್ರಸಕ್ತ ವರ್ಷದ ನವೆಂಬರ್ 30ರ ಪ್ರಕಾರ 61,646 ಕೋಟಿ ಮೌಲ್ಯದ ನಿರ್ವಹಣೆಯ ಅಡಿಯಲ್ಲಿ ಸ್ವತ್ತುಗಳನ್ನು ಹೊಂದಿದೆ. ಇದು ಓಪನ್-ಎಂಡೆಡ್ ಇಕ್ವಿಟಿ ಯೋಜನೆ (Open ended Equity scheme) ಯಾಗಿದ್ದು, ಪ್ರಮುಖವಾಗಿ ಸ್ಮಾಲ್ ಕ್ಯಾಪ್ ಸ್ಟಾಕ್‌ಗಳಲ್ಲಿ ಹೂಡಿಕೆ ಮಾಡುತ್ತದೆ ಮತ್ತು ಕಳೆದ 14 ವರ್ಷಗಳಲ್ಲಿ ಹೂಡಿಕೆದಾರರ ಸಂಪತ್ತನ್ನು ಹಲವಾರು ಬಾರಿ ದುಪ್ಪಟ್ಟು ಮಾಡಿದೆ.
ನಿಪ್ಪಾನ್ ಇಂಡಿಯಾ ಸ್ಮಾಲ್ ಕ್ಯಾಪ್ ಫಂಡ್ ರಿಟರ್ನ್ಸ್ (Nippon India small cap fund returns) :
ನಿಪ್ಪಾನ್ ಇಂಡಿಯಾ ಸ್ಮಾಲ್ ಕ್ಯಾಪ್ ಫಂಡ್ ಕಳೆದ 1 ವರ್ಷದಲ್ಲಿ, ಯೋಜನೆಯು 31.10 ಪ್ರತಿಶತ ಆದಾಯವನ್ನು ನೀಡಿದೆ. ಕಳೆದ 3 ವರ್ಷಗಳಲ್ಲಿ 29.26 ಶೇ., ಕಳೆದ 5 ವರ್ಷಗಳಲ್ಲಿ 35.76 ಪರ್ಸೆಂಟ್ ರಿಟರ್ನ್ಸ್ ಒಟ್ಟಾರೆ ನೋಡುವುದಾದರೆ ಕಳೆದ 10 ವರ್ಷಗಳಲ್ಲಿ ಇದು 22.33 ರಷ್ಟು ಲಾಭವನ್ನು ನೀಡಿದೆ. ಉದಾಹರಣೆಗೆ ಹೇಳುವುದಾದರೆ ಒಂದು ವೇಳೆ ಯಾರಾದರೂ 14 ವರ್ಷಗಳವರೆಗೆ ಯೋಜನೆಯಲ್ಲಿ ರೂ 9000 ಮಾಸಿಕ SIP ಮಾಡಿದ್ದರೆ, ಅವರ ಹೂಡಿಕೆಯು 25.95 ಪ್ರತಿಶತ ವಾರ್ಷಿಕ ಆದಾಯದೊಂದಿಗೆ ರೂ 1,14,70,364 ಕ್ಕೆ ಏರಿಕೆಯಾಗುತ್ತದೆ.
ನಿಪ್ಪಾನ್ ಇಂಡಿಯಾ ಸ್ಮಾಲ್ ಕ್ಯಾಪ್ ಫಂಡ್ ನ ಮೊತ್ತವು 66,365 ರೂ.ಗಳ ಬೆಂಚ್ ಮಾರ್ಕ್ ಗುರಿಗಿಂತಲೂ ಹೆಚ್ಚಾಗಿದೆ :
ಯೋಜನೆಯ ದಾಖಲೆಗಳ ಪ್ರಕಾರ ಒಂದು ವೇಳೆ ಅದರಲ್ಲಿ ಕಳೆದ 5 ವರ್ಷಗಳಲ್ಲಿ ರೂ 10,000 ಹೂಡಿಕೆಯನ್ನು ಮಾಡಿರುತ್ತಿದ್ದರೆ ಮೊತ್ತವು 45,838 ರೂ.ಗೆ ಬೆಳೆದಿರುತ್ತದೆ. ಅದೇ ರೀತಿ ಕಳೆದ 14 ವರ್ಷಗಳಲ್ಲಿ 176,052 ರೂ.ಗೆ ಹೆಚ್ಚಳವಾಗಿರುತದೆ. ಅದರಲ್ಲೂ ಮುಖ್ಯವಾಗಿ ಈ ಮೊತ್ತವು 66,365 ರೂ.ಗಳ ಬೆಂಚ್ ಮಾರ್ಕ್ ಗುರಿಗಿಂತಲೂ ಹೆಚ್ಚಾಗಿದೆ.
ನಿಪ್ಪಾನ್ ಇಂಡಿಯಾ ಸ್ಮಾಲ್ ಕ್ಯಾಪ್ ಫಂಡ್ ಪೋರ್ಟ್‌ಪೋಲಿಯೊ (Nippon India small cap fund Portfolio) :
ನಿಪ್ಪಾನ್ ಇಂಡಿಯಾ ಸ್ಮಾಲ್ ಕ್ಯಾಪ್ ಫಂಡ್ಸ್ಮಾಲ್ ಕ್ಯಾಪ್ ಫಂಡ್ ನ MF ಯೋಜನೆಯು 61,646 ಕೋಟಿ ರೂ.ಗಳ ನಿರ್ವಹಣೆಯ ಅಡಿಯಲ್ಲಿ ಆಸ್ತಿಯನ್ನು ಹೊಂದಿದೆ. ಇದು ಕೈಗಾರಿಕೆಗಳು, ಸಾಮಗ್ರಿಗಳು, ಹಣಕಾಸುಗಳಲ್ಲಿ ಹೆಚ್ಚಿನ ಹೂಡಿಕೆ ಮಾಡಿದೆ. ಯೋಜನೆಯ ಪೋರ್ಟ್‌ಫೋಲಿಯೊದಲ್ಲಿನ ಉನ್ನತ ಸ್ಟಾಕ್‌ಗಳಲ್ಲಿ HDFC ಬ್ಯಾಂಕ್, MCX, ಕಿರ್ಲೋಸ್ಕರ್ ಬ್ರದರ್ಸ್, ಅಪರ್, ಟ್ಯೂಬ್ ಇನ್ವೆಸ್ಟ್‌ಮೆಂಟ್‌ಗಳು ಕೂಡ ಸೇರಿವೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.