ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ಎಲೆಕ್ಟ್ರಿಕ್ ಟ್ರಾಕ್ಟರ್ ಆದ ಸೋನಾಲಿಕಾ ಎಲೆಕ್ಟ್ರಿಕ್ ಟ್ರಾಕ್ಟರ್(Sonalika Electric Tractor )
ಬಗ್ಗೆ ಮಾಹಿತಿಯನ್ನು ತಿಳಿಸಿ ಕೊಡಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.
ಸೋನಾಲಿಕಾ ಎಲೆಕ್ಟ್ರಿಕ್ ಟ್ರಾಕ್ಟರ್ (Sonalika Electric Tractor ) 2023:
ಈಗಾಗಲೇ ಭಾರತ ಸೇರಿದಂತೆ ಪ್ರಪಂಚದಾದ್ಯಂತ ಎಲೆಕ್ಟ್ರಿಕ್ ಮೊಬಿಲಿಟಿಯ ಪ್ರವೃತ್ತಿಯನ್ನು ಪ್ರಚಾರ ಮಾಡಲಾಗುತ್ತಿದೆ. ಎಲೆಕ್ಟ್ರಿಕ್ ವಾಹನಗಳು ಮತ್ತು ಎಲೆಕ್ಟ್ರಿಕ್ ಮೋಟರ್ ಬೈಕ್‌ಗಳು ಜನರಿಗೆ ಆಸಕ್ತಿದಾಯಕವಲ್ಲದೆ, ಹೆಚ್ಚಿನ ಮಟ್ಟದಲ್ಲಿ ಖರೀದಿ ಕೂಡಾ ಆಗುತ್ತಿವೆ ಎಂದು ನಮಗೆಲ್ಲಾ ತಿಳಿದೇ ಇದೆ.
ಎಲೆಕ್ಟ್ರಿಕ್ ಸ್ಕೂಟರ್, ಎಲೆಕ್ಟ್ರಿಕಲ್ ಬೈಕ್, ಎಲೆಕ್ಟ್ರಿಕಲ್ ಬಸ್, ಎಲೆಕ್ಟ್ರಿಕಲ್ ಆಟೋಗಳನ್ನು ಎಲೆಕ್ಟ್ರಿಕ್ ಮೊಬಿಲಿಟಿಯ ಪ್ರವೃತ್ತಿ ಯಲ್ಲಿ ಕಂಡಿದ್ದೇವು, ಆದರೆ ಇದೀಗ ಎಲೆಕ್ಟ್ರಿಕಲ್ ಟ್ರಾಕ್ಟರ್ ಅನ್ನು ಕೂಡಾ ಕಾಣಬಹುದಾಗಿದೆ. ಅದುವೇ ಸೋನಾಲಿಕಾ ಎಲೆಕ್ಟ್ರಿಕ್ ಟ್ರಾಕ್ಟರ್. ಇದೀಗ ಇಂಟರ್ ನ್ಯಾಷನಲ್ ಟ್ರಾಕ್ಟರ್ ಲಿಮಿಟೆಡ್(International tractor limited)( ITL) ಅತ್ಯಂತ ಕಡಿಮೆ ಬೆಲೆಗೆ ಎಲೆಕ್ಟ್ರಿಕ್ ಟ್ರ್ಯಾಕ್ಟರ್ ಅನ್ನು ಬಿಡುಗಡೆ ಮಾಡಿದೆ. ಅದರ ಜೊತೆಗೆ ಇನ್ನೂ ಮುಂದಿನ ಮೂರು ವರ್ಷಗಳಲ್ಲಿ ವಿಶ್ವದಾದ್ಯಂತ ಬಿಡುಗಡೆ ಮಾಡಲು ಕಂಪನಿ ಯೋಜನೆ ರೂಪಿಸಿಕೊಂಡಿದೆ.ಐಟಿಎಲ್(ITL) ಸದ್ಯದಲ್ಲಿಯೇ ಐದು ಹೊಸ ಟ್ರ್ಯಾಕ್ಟರ್‌ಗಳನ್ನು ಕೂಡಾ ಬಿಡುಗಡೆ ಮಾಡಲಿದೆ ಎಂದು ತಿಳಿದಿದೆ.
ಸೋನಾಲಿಕಾ ಎಲೆಕ್ಟ್ರಿಕ್ ಟ್ರಾಕ್ಟರ್ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯನ್ನು ಹೊಂದಿರುವ ದೃಢವಾದ ಟ್ರಾಕ್ಟರ್‌ಗಳಲ್ಲಿ ಒಂದಾಗಿದೆ. ಅಲ್ಲದೆ, ಸೋನಾಲಿಕಾ ಎಲೆಕ್ಟ್ರಿಕ್ ಟ್ರಾಕ್ಟರ್ ಕೃಷಿ ಕಾರ್ಯಾಚರಣೆಗಳ ಸಮಯದಲ್ಲಿ ಹೆಚ್ಚಿನ ಕಾರ್ಯಕ್ಷಮತೆಯನ್ನು ನೀಡುವ ಸಾಮರ್ಥ್ಯವನ್ನು ಹೊಂದಿದೆ.
ಸೋನಾಲಿಕಾ ಎಲೆಕ್ಟ್ರಿಕ್ ಟ್ರಾಕ್ಟರ್ ವಿಶೇಷಣಗಳು :
ಸೋನಾಲಿಕಾ ಎಲೆಕ್ಟ್ರಿಕ್ ಟ್ರಾಕ್ಟರ್ ಅನ್ನು ಟ್ರಾನ್ಸ್ಮಿಷನ್ನೊಂದಿಗೆ ಅಳವಡಿಸಲಾಗಿದೆ.
ಸೋನಾಲಿಕಾ ಎಲೆಕ್ಟ್ರಿಕ್ ಟ್ರಾಕ್ಟರ್ ಕೇವಲ 3 ರಿಂದ 3 .5 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಆಗಲಿದೆ. ಮತ್ತು 8 ಗಂಟೆಗಳ ಬ್ಯಾಟರಿ ಬ್ಯಾಕಪ್‌ನಲ್ಲಿ ನೀಡಲಾಗಿದೆ. ಸೋನಾಲಿಕಾ ಎಲೆಕ್ಟ್ರಿಕ್ ಟ್ರಾಕ್ಟರ್ 24.93 Kmph ವೇಗವನ್ನು ಹೊಂದಿದೆ.
ಸೋನಾಲಿಕಾ ಎಲೆಕ್ಟ್ರಿಕ್ ಟ್ರಾಕ್ಟರ್ ಗೆ ಸಾಕಷ್ಟು ಇಂಧನ ಟ್ಯಾಂಕ್ ಅಳವಡಿಸಲಾಗಿದೆ. ಮತ್ತು ಸೋನಾಲಿಕಾ ಎಲೆಕ್ಟ್ರಿಕ್ ಟ್ರಾಕ್ಟರ್ 500 ಕೆಜಿ ಎತ್ತುವ ಸಾಮರ್ಥ್ಯವನ್ನು ಸಹ ಹೊಂದಿದೆ.
ಸೋನಾಲಿಕಾ ಎಲೆಕ್ಟ್ರಿಕ್ ಟ್ರಾಕ್ಟರ್ 6 ಗೇರ್ + 2 ಗೇರ್ ಹೊಂದಿದೆ.
ಸೋನಾಲಿಕಾ ಎಲೆಕ್ಟ್ರಿಕ್ ಟ್ರಾಕ್ಟರ್ ಅನ್ನು ಮ್ಯಾನುಯಲ್ ಸ್ಟೀರಿಂಗ್‌ನೊಂದಿಗೆ ಅಳವಡಿಸಲಾಗಿದೆ ಜೊತೆಗೆ, ಸೋನಾಲಿಕಾ ಎಲೆಕ್ಟ್ರಿಕ್ ಟ್ರಾಕ್ಟರ್ ಅನೇಕ ಅತ್ಯುತ್ತಮ ವೈಶಿಷ್ಟ್ಯಗಳೊಂದಿಗೆ ನಿರ್ಮಿಸಲಾಗಿದೆ.
ಸೋನಾಲಿಕಾ ಟೈಗರ್ ಇಟಿಕ್ಲಿಕ್ ಟ್ರಾಕ್ಟರ್ 5 ವರ್ಷಗಳ ವಾರಂಟಿಯನ್ನು ನೀಡಲಾಗಿದೆ.
ರೈತರಿಗೆ ಈ ಎಲಿಕ್ಟಿಕ್ ಟ್ರಾಕ್ಟರ್ ಅತಿ ಅಗ್ಗದ ಬೆಲೆಯಲ್ಲಿ ಲಭ್ಯವಾಗುತ್ತದೆ. ಇನ್ನೂ ಇದರ ಬೆಲೆಯ ಬಗ್ಗೆ ತಿಳಿಯುವುದಾದರೆ,
ಸೋನಾಲಿಕಾ ಎಲೆಕ್ಟ್ರಿಕ್ ಟ್ರಾಕ್ಟರ್ ಸುಮಾರು INR 5.91 ಲಕ್ಷ ದಿಂದ 6.22 ಲಕ್ಷದ ವರೆಗೂ (ಎಕ್ಸ್ ಶೋ ರೂಂ ಬೆಲೆ) ಪರಿಚಯಾತ್ಮಕ ಬೆಲೆಯಲ್ಲಿ ಬುಕಿಂಗ್‌ಗೆ ಲಭ್ಯವಿದೆ. ಇಂತಹ ಉತ್ತಮವಾದ ಮಾಹಿತಿ ಹೊಂದಿದ ಈ ಲೇಖನವನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ವರದಿ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ