Solar Eclipse 2024: ವರ್ಷದ ಮೊದಲ ಸೂರ್ಯಗ್ರಹಣ! ಭಾರತದಲ್ಲೂ ಕಾಣಿಸುತ್ತಾ? ಏಪ್ರಿಲ್ 8 ರಂದು, ಒಂದು ಅದ್ಭುತ ಖಗೋಳ ಘಟನೆ ನಡೆಯಲಿದೆ. ಹೀಗಿರುವಾಗ, ಈ ಗ್ರಹಣದ ನೆರಳು ಭಾರತಕ್ಕೆ ತಾಕುವುದೇ? ಎಂಬ ಪ್ರಶ್ನೆ ಸೃಷ್ಟಿಸುತ್ತದೆ. ಇವತ್ತಿನ ಈ ವರದಿಯಲ್ಲಿ ನಾವು ನಿಮಗೆ ಗ್ರಹಣ ಯಾವಾಗ ಶುರುವಾಗುತ್ತೆ?, ಯಾವಾಗ ಕೊನೆಗೂಳ್ಳುತ್ತೆ?,ಮತ್ತು ಜಗತ್ತಿನ ಯಾವ ಯಾವ ದೇಶಗಳಲ್ಲಿ ಗ್ರಹಣ ಗೋಚರಿಸುತ್ತದೆ?,ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡಲಿದ್ದೇವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ .
ವರ್ಷದ ಮೊದಲನೇ ಸೂರ್ಯ ಗ್ರಹಣ :
2024 ರ ಮೊದಲನೇಯ ಚಂದ್ರಗ್ರಹಣದ ನಂತರ, ಚಂದ್ರನ ನೆರಳಿನಲ್ಲಿ ಸೂರ್ಯನು ಮರೆಯಾಗುವ ಅದ್ಭುತ ಖಗೋಳ ಘಟನೆ, ಸೂರ್ಯಗ್ರಹಣ(Solar Eclipse)ವು ಏಪ್ರಿಲ್ 8, 2024 ರಂದು ಜರುಗಲಿದೆ. ಈ ಗ್ರಹಣವು 2024 ವರ್ಷದ ಮೊದಲ ಸೂರ್ಯಗ್ರಹಣವಾಗಿದ್ದು, ಜ್ಯೋತಿಷ್ಯ ಮತ್ತು ವೈಜ್ಞಾನಿಕ ಕ್ಷೇತ್ರಗಳಲ್ಲಿ ಗಮನಾರ್ಹ ಮಹತ್ವವನ್ನು ಹೊಂದಿದೆ.
ವಿಜ್ಞಾನದ ಭಾಷೆಯಲ್ಲಿ ಹೇಳುವುದಾದರೆ , ಏಪ್ರಿಲ್ 8, 2024 ರಂದು ಸಂಭವಿಸಲಿರುವ ವರ್ಷದ ಮೊದಲ ಸೂರ್ಯಗ್ರಹಣವು ಬಹಳ ಅಪರೂಪ. ಇಂತಹ ಸೂರ್ಯಗ್ರಹಣ ಹಲವು ವರ್ಷಗಳ ನಂತರ ಸಂಭವಿಸುತ್ತದೆ ಎಂದು ನಂಬಲಾಗಿದೆ. ಈ ವಿದ್ಯಮಾನವು 54 ವರ್ಷಗಳ ನಂತರ ಮೊದಲ ಬಾರಿಗೆ ಸಂಭವಿಸುತ್ತಿದೆ ಎಂದು ಹೇಳಲಾಗಿದೆ.
ಸೂರ್ಯಗ್ರಹಣ ಏಕೆ ಸಂಭವಿಸುತ್ತದೆ?
ಸೂರ್ಯಗ್ರಹಣ ಉಂಟಾಗಲು ಮುಖ್ಯ ಕಾರಣ ಚಂದ್ರನು ಸೂರ್ಯ ಮತ್ತು ಭೂಮಿಯ ಮಧ್ಯೆ ಬರುವುದು. ಚಂದ್ರನು ಸೂರ್ಯನ ಬೆಳಕನ್ನು ಭೂಮಿಗೆ ತಲುಪದಂತೆ ತಡೆಯುವುದರಿಂದ, ಭೂಮಿಯ ಕೆಲವು ಭಾಗಗಳಲ್ಲಿ ಸೂರ್ಯನು ಮರೆಯಾಗುತ್ತಾನೆ. ವರ್ಷದಲ್ಲಿ ಎರಡು ಬಾರಿ ಮಾತ್ರ ಈ ಘಟನೆ ಸಂಭವಿಸುತ್ತದೆ. ಈ ಸಮಯದಲ್ಲಿ, ಚಂದ್ರನು ಭೂಮಿಯ ನೆರಳಿನಲ್ಲಿ ಬೀಳುತ್ತಾನೆ ಮತ್ತು ಭೂಮಿಯಿಂದ ನೋಡಿದಾಗ ಸೂರ್ಯನ ಮುಖವನ್ನು ಪೂರ್ಣವಾಗಿ ಅಥವಾ ಭಾಗಶಃ ಮುಚ್ಚುತ್ತಾನೆ.
2024 ವರ್ಷದ ಮೊದಲ ಸೂರ್ಯಗ್ರಹಣ ಯಾವಾಗ ಸಂಭವಿಸಲಿದೆ?
2024 ರ ಏಪ್ರಿಲ್ 8 ರಂದು, ವರ್ಷದ ಮೊದಲ ಸೂರ್ಯಗ್ರಹಣವು ಭೂಮಿಯ ಮೇಲೆ ನೆರಳನ್ನು ಚೆಲ್ಲಲಿದೆ. ಈ ಖಗೋಳ ಘಟನೆಯು ವೈದಿಕ ದೃಷ್ಟಿಕೋನದಿಂದ ಕೆಲವು ಕಾಳಜಿಗಳನ್ನು ಉಂಟುಮಾಡುತ್ತದೆ, ಏಕೆಂದರೆ ಇದನ್ನು ಸಾಮಾನ್ಯವಾಗಿ ಅಶುಭವೆಂದು ಪರಿಗಣಿಸಲಾಗುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಗ್ರಹಣದ ಸಮಯದಲ್ಲಿ ನಕಾರಾತ್ಮಕ ಶಕ್ತಿಗಳು ಉಲ್ಬಣಗೊಳ್ಳುತ್ತವೆ, ಜನರಿಗೆ ಋಣಾತ್ಮಕ ಪ್ರಭಾವಗಳನ್ನು ಉಂಟುಮಾಡುವ ಸಾಧ್ಯತೆ ಹೆಚ್ಚು.
ಗ್ರಹಣದ ಸಮಯ ಯಾವಾಗ?
ಭಾರತೀಯ ಕಾಲಮಾನದ ಪ್ರಕಾರ, ಗ್ರಹಣವು ಏಪ್ರಿಲ್ 8, ಸೋಮವಾರ ರಂದು ರಾತ್ರಿ 9:12 PM IST ಕ್ಕೆ ಪ್ರಾರಂಭವಾಗುತ್ತದೆ ಮತ್ತು ಮಧ್ಯರಾತ್ರಿ (ಏಪ್ರಿಲ್ 9) ರಂದು 2:22 AM IST ಕ್ಕೆ ಕೊನೆಗೊಳ್ಳುತ್ತದೆ.
ಜಗತ್ತಿನ ಯಾವ ಭಾಗಗಳಲ್ಲಿ ಸೂರ್ಯಗ್ರಹಣ ಗೋಚರಿಸುತ್ತದೆ?
2024 ರ ಮೊದಲ ಸೂರ್ಯಗ್ರಹಣ ಉತ್ತರ ಅಮೆರಿಕಾ, ಯುರೋಪ್ ಮತ್ತು ಕೆರಿಬಿಯನ್(Caribbean) ಪ್ರದೇಶದ ಕೆಲವು ಭಾಗಗಳಲ್ಲಿ ಕಂಡುಬರುತ್ತದೆ. ಈ ದೇಶಗಳಲ್ಲಿ ವೀಕ್ಷಿಸಬಹುದು:
ಉತ್ತರ ಅಮೆರಿಕಾ: ಕೆನಡಾ, ಮೆಕ್ಸಿಕೋ(Mexico), ಯುನೈಟೆಡ್ ಸ್ಟೇಟ್ಸ್(US)
ಯುರೋಪ್: ಐರ್ಲೆಂಡ್, ಐಸ್ಲ್ಯಾಂಡ್, ನಾರ್ವೆ, ರಷ್ಯಾ, ಸ್ಪೇನ್, ಯುನೈಟೆಡ್ ಕಿಂಗ್ಡಮ್
ಕೆರಿಬಿಯನ್: ಅರುಬಾ, ಬರ್ಮುಡಾ, ಕೆರಿಬಿಯನ್ ನೆದರ್ಲ್ಯಾಂಡ್ಸ್(Caribbean Netherlands), ಕೊಲಂಬಿಯಾ, ಕೋಸ್ಟರಿಕಾ, ಕ್ಯೂಬಾ, ಡೊಮಿನಿಕಾ, ಗ್ರೀನ್ಲ್ಯಾಂಡ್(Greenland), ಜಮೈಕಾ(Jamaica), ನಿಕರಾಗುವಾ, ಪನಾಮ, ಪೋರ್ಟೊ ರಿಕೊ, ಮಾರ್ಟಿನ್(Puerto Rico Martin), ಬಹಾಮಾಸ್, ವೆನೆಜುವೆಲಾ(Venezuela)
ಭಾರತಕ್ಕೆ ಗ್ರಹಣದ ಪ್ರಭಾವ ಬಿರುವುದಿಲ್ಲ :
ಚಂದ್ರಗ್ರಹಣ ಸಂಭಾವಿಸಿದಂತೆಯೇ, ಸೂರ್ಯಗ್ರಹಣದ ನೆರಳು ಭಾರತದ ಮೇಲೆ ಬಿರುವುದಿಲ್ಲ, ಏಕೆಂದರೆ ಸೂರ್ಯಗ್ರಹಣ ಸಂಭವಿಸುವುದು ರಾತ್ರಿ ಹೊತ್ತು(Night). ಹಾಗಾಗಿ ವರ್ಷದ ಮೊದಲ ಸೂರ್ಯಗ್ರಹಣವು ಭಾರತದಲ್ಲಿ ಕಾಣುವುದಿಲ್ಲ. ಗ್ರಹಣದ ಸೂತಕ ಸಮಯವು ಸೂರ್ಯಗ್ರಹಣದ 12 ಗಂಟೆಗಳ ಮುಂಚೆ ಶುರುವಾಗುತ್ತದೆ ಮತ್ತು ಗ್ರಹಣದ ನಂತರ ಮುಂದುವರಿಯುತ್ತದೆ. ಆದರೆ ಈ ಸೂರ್ಯಗ್ರಹಣವು ಭಾರತದಲ್ಲಿ ಗೋಚರಿಸದಿರುವ ಕಾರಣ, ಭಾರತದಲ್ಲಿ ಗ್ರಹಣದ ಸೂತಕ ಅವಧಿಯು ಅಮಾನ್ಯವಾಗಿರುತ್ತದೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
- ಮತ್ತಷ್ಟು ಏರಿಕೆಯಾದ ಚಿನ್ನದ ಬೆಲೆ, ಇಂದು ಬರೋಬ್ಬರಿ 1300 ರೂಪಾಯಿ ಏರಿಕೆ, ಇಂದಿನ ಚಿನ್ನದ ಬೆಲೆ ಇಲ್ಲಿದೆ
- ಈಗ ಮೊಬೈಲ್ನಲ್ಲೇ ಹಳೆಯ ವೋಟರ್ ಕಾರ್ಡ್ ಡೌನ್ಲೋಡ್ ಮಾಡಿ, ಇಲ್ಲಿದೆ ಲೈವ್ ವಿಡಿಯೋ @voters.eci.gov.in
- 2024 ರ ಮತದಾರರ ಪಟ್ಟಿ ಬಿಡುಗಡೆ. ಮೊಬೈಲ್ ನಲ್ಲಿ ನೋಡುವುದು ಹೇಗೆ? Karnataka Voter List Download 2024
- ಗೃಹಲಕ್ಷ್ಮಿ ಯೋಜನೆಯ 7ನೇ ಕಂತಿನ 2000/- ಹಣ ಜಮಾ ಆಗಿದೆ. ನಿಮ್ಮ ಖಾತೆಗೆ ಬರದೇ ಇದ್ರೆ ಹೀಗೆ ಮಾಡಿ!
- ಸ್ವಂತ ಮನೆ ಕಟ್ಟಲು ಸಾಲ ಮತ್ತು ಸಬ್ಸಿಡಿ ಯೋಜನೆಗೆ ಹೀಗೆ ಅರ್ಜಿ ಸಲ್ಲಿಸಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.