ಭಾರತ ಅಷ್ಟೇ ಅಲ್ಲ ಅಮೆರಿಕದಲ್ಲೂ ಈ ಗ್ರಹಣಕ್ಕೆ ಭಯ ಪಡ್ತಿದಾರೆ ಜನ! ಯಾಕೆ ಗೊತ್ತಾ?

solar eclipse

ಏಪ್ರಿಲ್ 8ರಂದು ಕೋಚರಿಸುವ ವರ್ಷದ ಮೊದಲ ಸೂರ್ಯ ಗ್ರಹಣ(solar eclipse) ಎಲ್ಲರಲ್ಲಿಯೂ ಆತಂಕವನ್ನು ಸೃಷ್ಟಿ ಮಾಡಿದೆ. ಆತಂಕ ಪಡಲು ಒಂದು ದೃಢವಾದ ಕಾರಣವೂ ಕೂಡ ಇದೆ ಅದೇನೆಂದರೆ ಕಳೆದ 50 ವರ್ಷಗಳಿಗಿಂತ ಈ ವರ್ಷದ ಈ ಸೂರ್ಯಗ್ರಹಣವು ದೀರ್ಘಕಾಲಗಳ ವರೆಗೂ ಗೋಚರಿಸುತ್ತದೆ. ಸುಮಾರು ನಾಲ್ಕು ಗಂಟೆ 25 ನಿಮಿಷಗಳ ಕಾಲ ಈ ವರ್ಷದ ಮೊದಲನೇ ಸೂರ್ಯ ಗ್ರಹಣವು ಗೋಚರಿಸಲಿದೆ. ಆದರೆ ಭಾರತೀಯರಾದ ನಾವು ಅಷ್ಟೇನೂ ಆತಂಕವನ್ನು ಪಡಬೇಕಾಗಿಲ್ಲ. ಏಕೆಂದರೆ, ಭಾರತದಲ್ಲಿ ಸೂರ್ಯ ಗ್ರಹಣವು ಗೋಚರಿಸುವುದಿಲ್ಲ. ರಾತ್ರಿಯ ಸಮಯ ಸೂರ್ಯ ಗ್ರಹಣವು ಗೋಚರಿಸುವುದರಿಂದ ಅಮೆರಿಕ ದೇಶದ ಮೇಲೆ ಇದರ ಪ್ರಭಾವ ಜಾಸ್ತಿ ಆಗಿರುತ್ತದೆ. ಆದ ಕಾರಣ ಅಲ್ಲಿಯ ಶಾಲಾ ಮಕ್ಕಳುಗಳಿಗೆ ರಜೆಯನ್ನು ಕೂಡ ಘೋಷಿಸಿದ್ದಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಗ್ರಹಣದ ದಿನ ಅಮೆರಿಕದಲ್ಲಿ ಶಾಲಾ-ಕಾಲೇಜು ರಜ :

ಅಮೇರಿಕಾ ಕೆನಡಾ ಹಾಗೂ ಇನ್ನಿತರ ದೇಶಗಳಲ್ಲಿ ಸೂರ್ಯ ಗ್ರಹಣವು ಗೋಚರಿಸುವುದರಿಂದ ಸ್ವಲ್ಪ ಸಮಯದ ಕಾಲ ಕತ್ತಲು ಆವರಿಸಿರುತ್ತದೆ. ಇದರಿಂದಾಗಿ ಅಮೆರಿಕದ ಶಾಲೆಗಳಿಗೆ ಹಾಗೂ ಇನ್ನಿತರ ವ್ಯಾಪಾರ ಚಟುವಟಿಕೆಗಳಿಗೆ ರಜೆಯನ್ನು ಘೋಷಿಸಲಾಗಿದೆ. ಅಮೆರಿಕಾದಲ್ಲಿ ಭಾರತೀಯರು ನೆಲೆಸಿರುವುದರ ಕಾರಣ ಅವರಿಗೂ ಕೂಡ ಗ್ರಹಣದ ಭಯ ಕಾಡುತ್ತಿದೆ ಎಂದು ಹೇಳಬಹುದು. ಏಕೆಂದರೆ ಗ್ರಹಣದ ಮುಂದಿನ ದಿನವೇ ಯುಗಾದಿ ಹಬ್ಬ ಇರುವುದರಿಂದ ಸೂತಕ ಆವರಿಸುತ್ತದೆಯೇ ಎಂಬ ಭಯದಲ್ಲಿದ್ದಾರೆ.

ವರ್ಷದ ಮೊದಲನೇ ಸೂರ್ಯ ಗ್ರಹಣ :

2024 ರ ಮೊದಲನೇಯ ಚಂದ್ರಗ್ರಹಣದ ನಂತರ, ಚಂದ್ರನ ನೆರಳಿನಲ್ಲಿ ಸೂರ್ಯನು ಮರೆಯಾಗುವ ಅದ್ಭುತ ಖಗೋಳ ಘಟನೆ, ಸೂರ್ಯಗ್ರಹಣ(Solar Eclipse)ವು ಏಪ್ರಿಲ್ 8, 2024 ರಂದು ಜರುಗಲಿದೆ. ಈ ಗ್ರಹಣವು 2024 ವರ್ಷದ ಮೊದಲ ಸೂರ್ಯಗ್ರಹಣವಾಗಿದ್ದು, ಜ್ಯೋತಿಷ್ಯ ಮತ್ತು ವೈಜ್ಞಾನಿಕ ಕ್ಷೇತ್ರಗಳಲ್ಲಿ ಗಮನಾರ್ಹ ಮಹತ್ವವನ್ನು ಹೊಂದಿದೆ.

ವಿಜ್ಞಾನದ ಭಾಷೆಯಲ್ಲಿ ಹೇಳುವುದಾದರೆ , ಏಪ್ರಿಲ್ 8, 2024 ರಂದು ಸಂಭವಿಸಲಿರುವ ವರ್ಷದ ಮೊದಲ ಸೂರ್ಯಗ್ರಹಣವು ಬಹಳ ಅಪರೂಪ. ಇಂತಹ ಸೂರ್ಯಗ್ರಹಣ ಹಲವು ವರ್ಷಗಳ ನಂತರ ಸಂಭವಿಸುತ್ತದೆ ಎಂದು ನಂಬಲಾಗಿದೆ. ಈ ವಿದ್ಯಮಾನವು 54 ವರ್ಷಗಳ ನಂತರ ಮೊದಲ ಬಾರಿಗೆ ಸಂಭವಿಸುತ್ತಿದೆ ಎಂದು ಹೇಳಲಾಗಿದೆ.

ಸೂರ್ಯಗ್ರಹಣ ಏಕೆ ಸಂಭವಿಸುತ್ತದೆ?

ಸೂರ್ಯಗ್ರಹಣ ಉಂಟಾಗಲು ಮುಖ್ಯ ಕಾರಣ ಚಂದ್ರನು ಸೂರ್ಯ ಮತ್ತು ಭೂಮಿಯ ಮಧ್ಯೆ ಬರುವುದು. ಚಂದ್ರನು ಸೂರ್ಯನ ಬೆಳಕನ್ನು ಭೂಮಿಗೆ ತಲುಪದಂತೆ ತಡೆಯುವುದರಿಂದ, ಭೂಮಿಯ ಕೆಲವು ಭಾಗಗಳಲ್ಲಿ ಸೂರ್ಯನು ಮರೆಯಾಗುತ್ತಾನೆ. ವರ್ಷದಲ್ಲಿ ಎರಡು ಬಾರಿ ಮಾತ್ರ ಈ ಘಟನೆ ಸಂಭವಿಸುತ್ತದೆ. ಈ ಸಮಯದಲ್ಲಿ, ಚಂದ್ರನು ಭೂಮಿಯ ನೆರಳಿನಲ್ಲಿ ಬೀಳುತ್ತಾನೆ ಮತ್ತು ಭೂಮಿಯಿಂದ ನೋಡಿದಾಗ ಸೂರ್ಯನ ಮುಖವನ್ನು ಪೂರ್ಣವಾಗಿ ಅಥವಾ ಭಾಗಶಃ ಮುಚ್ಚುತ್ತಾನೆ.

2024 ವರ್ಷದ ಮೊದಲ ಸೂರ್ಯಗ್ರಹಣ ಯಾವಾಗ ಸಂಭವಿಸಲಿದೆ?

2024 ರ ಏಪ್ರಿಲ್ 8 ರಂದು, ವರ್ಷದ ಮೊದಲ ಸೂರ್ಯಗ್ರಹಣವು ಭೂಮಿಯ ಮೇಲೆ ನೆರಳನ್ನು ಚೆಲ್ಲಲಿದೆ. ಈ ಖಗೋಳ ಘಟನೆಯು ವೈದಿಕ ದೃಷ್ಟಿಕೋನದಿಂದ ಕೆಲವು ಕಾಳಜಿಗಳನ್ನು ಉಂಟುಮಾಡುತ್ತದೆ, ಏಕೆಂದರೆ ಇದನ್ನು ಸಾಮಾನ್ಯವಾಗಿ ಅಶುಭವೆಂದು ಪರಿಗಣಿಸಲಾಗುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಗ್ರಹಣದ ಸಮಯದಲ್ಲಿ ನಕಾರಾತ್ಮಕ ಶಕ್ತಿಗಳು ಉಲ್ಬಣಗೊಳ್ಳುತ್ತವೆ, ಜನರಿಗೆ ಋಣಾತ್ಮಕ ಪ್ರಭಾವಗಳನ್ನು ಉಂಟುಮಾಡುವ ಸಾಧ್ಯತೆ ಹೆಚ್ಚು.

whatss

ಗ್ರಹಣದ ಸಮಯ ಯಾವಾಗ?

ಭಾರತೀಯ ಕಾಲಮಾನದ ಪ್ರಕಾರ, ಗ್ರಹಣವು ಏಪ್ರಿಲ್ 8, ಸೋಮವಾರ ರಂದು ರಾತ್ರಿ 9:12 PM IST ಕ್ಕೆ ಪ್ರಾರಂಭವಾಗುತ್ತದೆ ಮತ್ತು ಮಧ್ಯರಾತ್ರಿ (ಏಪ್ರಿಲ್ 9) ರಂದು 2:22 AM IST ಕ್ಕೆ ಕೊನೆಗೊಳ್ಳುತ್ತದೆ.

ಜಗತ್ತಿನ ಯಾವ ಭಾಗಗಳಲ್ಲಿ ಸೂರ್ಯಗ್ರಹಣ ಗೋಚರಿಸುತ್ತದೆ?

2024 ರ ಮೊದಲ ಸೂರ್ಯಗ್ರಹಣ ಉತ್ತರ ಅಮೆರಿಕಾ, ಯುರೋಪ್ ಮತ್ತು ಕೆರಿಬಿಯನ್(Caribbean) ಪ್ರದೇಶದ ಕೆಲವು ಭಾಗಗಳಲ್ಲಿ ಕಂಡುಬರುತ್ತದೆ. ಈ ದೇಶಗಳಲ್ಲಿ ವೀಕ್ಷಿಸಬಹುದು:
ಉತ್ತರ ಅಮೆರಿಕಾ: ಕೆನಡಾ, ಮೆಕ್ಸಿಕೋ(Mexico), ಯುನೈಟೆಡ್ ಸ್ಟೇಟ್ಸ್(US) ಕೆರಿಬಿಯನ್: ಅರುಬಾ, ಬರ್ಮುಡಾ, ಕೆರಿಬಿಯನ್ ನೆದರ್ಲ್ಯಾಂಡ್ಸ್(Caribbean Netherlands), ಕೊಲಂಬಿಯಾ, ಕೋಸ್ಟರಿಕಾ, ಕ್ಯೂಬಾ, ಡೊಮಿನಿಕಾ, ಗ್ರೀನ್ಲ್ಯಾಂಡ್(Greenland), ಜಮೈಕಾ(Jamaica), ನಿಕರಾಗುವಾ, ಪನಾಮ, ಪೋರ್ಟೊ ರಿಕೊ, ಮಾರ್ಟಿನ್(Puerto Rico Martin), ಬಹಾಮಾಸ್, ವೆನೆಜುವೆಲಾ(Venezuela)

ಭಾರತಕ್ಕೆ ಗ್ರಹಣದ ಪ್ರಭಾವ ಬಿರುವುದಿಲ್ಲ :

ಚಂದ್ರಗ್ರಹಣ ಸಂಭಾವಿಸಿದಂತೆಯೇ, ಸೂರ್ಯಗ್ರಹಣದ ನೆರಳು ಭಾರತದ ಮೇಲೆ ಬಿರುವುದಿಲ್ಲ, ಏಕೆಂದರೆ ಸೂರ್ಯಗ್ರಹಣ ಸಂಭವಿಸುವುದು ರಾತ್ರಿ ಹೊತ್ತು(Night). ಹಾಗಾಗಿ ವರ್ಷದ ಮೊದಲ ಸೂರ್ಯಗ್ರಹಣವು ಭಾರತದಲ್ಲಿ ಕಾಣುವುದಿಲ್ಲ. ಗ್ರಹಣದ ಸೂತಕ ಸಮಯವು ಸೂರ್ಯಗ್ರಹಣದ 12 ಗಂಟೆಗಳ ಮುಂಚೆ ಶುರುವಾಗುತ್ತದೆ ಮತ್ತು ಗ್ರಹಣದ ನಂತರ ಮುಂದುವರಿಯುತ್ತದೆ. ಆದರೆ ಈ ಸೂರ್ಯಗ್ರಹಣವು ಭಾರತದಲ್ಲಿ ಗೋಚರಿಸದಿರುವ ಕಾರಣ, ಭಾರತದಲ್ಲಿ ಗ್ರಹಣದ ಸೂತಕ ಅವಧಿಯು ಅಮಾನ್ಯವಾಗಿರುತ್ತದೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

tel share transformed

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ..

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!