ಪ್ರಸಕ್ತ ಸಾಲಿನ ಎಸ್‌ಎಸ್ ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟವಾಗಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ವೆಬ್‌ಸೈಟ್ https://karresults.nic.in ನಲ್ಲಿ ಫಲಿತಾಂಶ ವೀಕ್ಷಿಸಬಹುದು.
ಈ ಬಾರಿಯ ಪರೀಕ್ಷೆಯಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಉಡುಪಿ ಜಿಲ್ಲೆ ಮೊದಲ ಸ್ಥಾನ ಪಡೆದಿದ್ದರೆ, ದಕ್ಷಿಣ ಕನ್ನಡ ಜಿಲ್ಲೆ ಎರಡನೇ ಸ್ಥಾನದಲ್ಲಿದೆ. ಉಡುಪಿ ಜಿಲ್ಲೆಯಲ್ಲಿ 94% ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 92.12% ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕೊನೆಯ ಸ್ಥಾನ ಗಳಿಸಿದ ಯಾದಗಿರಿ ಜಿಲ್ಲೆಯಲ್ಲಿ ಶೇ 50.59 ರಷ್ಟು ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ.
ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು ಮೊಬೈಲ್‌ನಲ್ಲಿ ನೋಡಲು ಇಲ್ಲಿದೆ ಟಿಪ್ಸ್
- ನಿಮ್ಮ ಮೊಬೈಲ್, ಕಂಪ್ಯೂಟರ್, ಲ್ಯಾಪ್‌ಟಾಪ್‌ನಲ್ಲಿ ಗೂಗಲ್ ಕ್ರೋಮ್ ಓಪನ್ ಮಾಡಿ.
- ನಂತರ ಅಧಿಕೃತ ವೆಬ್ಸೈಟ್ https://karresults.nic.in/ ಗೆ ಭೇಟಿ ನೀಡಿ
- ಮುಖಪುಟದಲ್ಲಿ SSLC Results 2024 ಲಿಂಕ್ ಅನ್ನು ಕ್ಲಿಕ್ ಮಾಡಿ
- ಹೊಸ ಲಾಗಿನ್ ಪುಟವು ತೆರೆಯುತ್ತದೆ
- ನಿಮ್ಮ ಅಪ್ಲಿಕೇಶನ್ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ
- ಆಗ ಫಲಿತಾಂಶ ಕಾಣಿಸಿಕೊಳ್ಳುತ್ತದೆ
- ಅಲ್ಲಿ ಡೌನ್ಲೋಡ್ ಮಾಡುವ ಅವಕಾಶವಿದೆ
- 1 ಗಂಟೆಯ ನಂತ್ರ ಅಧಿಕೃತ ಜಾಲತಾಣದಲ್ಲಿ ಫಲಿತಾಂಶ ನೋಡಬಹುದು
ಫಲಿತಾಂಶ ಪರಿಶೀಲಿಸುವಾಗ ಎರರ್ ಬಂದ್ರೆ ಏನು ಮಾಡಬೇಕು?
ನೀವು ಮೊದಲು ನಿಮ್ಮ ಮೊಬೈಲ್‌ನಲ್ಲಿ ಕರ್ನಾಟಕ ಶಾಲಾ ಪರೀಕ್ಷೆಯ ಅಧಿಕೃತ ವೆಬ್‌ಸೈಟ್ karresults.nic.in ಅಂತಾ ಟೈಪ್ ಮಾಡಿ ಗೂಗಲ್‌ನಲ್ಲಿ ಸರ್ಚ್ ಮಾಡಿ. ನಂತರ ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ ಲಿಂಕ್ ಅನ್ನು ಕ್ಲಿಕ್ ಮಾಡಿ. ಅಲ್ಲಿ ನಿಮ್ಮ ವಿವರಗಳನ್ನು ಹಾಕಿ ಕ್ಲಿಕ್ ಮಾಡಿದರೆ ನಿಮ್ಮ ಫಲಿತಾಂಶ ಸಾಮಾನ್ಯವಾಗಿ ಕಾಣಬೇಕು. ಆದರೆ ಕೆಲವೊಬ್ಬರಿಗೆ ರಿಸಲ್ಟ್ ಕಾಣದೇ ಎರರ್, ಮತ್ತೊಮ್ಮೆ ಪ್ರಯತ್ನಿಸಿ ಅಥವಾ ಇನ್ಯಾವುದಾದರೂ ಸಂದೇಶ ಕಾಣಿಸುತ್ತದೆ. ಆಗ ನೀವು ಧೃತಿಗೆಡಬಾರದು.
ಸಾಮಾನ್ಯವಾಗಿ ರಿಸಲ್ಟ್ ಚೆಕ್ ಮಾಡುವ ಆತುರದಿಂದ ತಪ್ಪಾದ ಸಂಖ್ಯೆಗಳು ಅಥವಾ ವಿವರಗಳನ್ನು ಹಾಕಿರುವ ಸಾಧ್ಯತೆ ಇರುತ್ತದೆ. ಹೀಗಾಗಿ ನೀವು ನಿಮ್ಮ ರಿಜಿಸ್ಟರ್ ನಂಬರ್ ಅನ್ನು ಸರಿಯಾಗಿ ಹಾಕಿದ್ದೀರಾ ಎಂದು ಕ್ರಾಸ್ ಚೆಕ್ ಮಾಡಿ. ನಂತರ ನೀವು ನಿಮ್ಮ ಇತರ ವಿವರಗಳನ್ನು ಸರಿಯಾಗಿ ಹಾಕಿದ್ದೀರಾ ಎಂದು ಪರಿಶೀಲನೆ ಮಾಡಿ ಪುನಃ ಫಲಿತಾಂಶ ಚೆಕ್ ಮಾಡಿ. ಆಗಲೂ ನಿಮಗೆ ಇದೇ ರೀತಿ ಎರರ್ ಕಾಣಿಸಿಕೊಂಡರೆ ನೀವು ಹೊಸದಾಗಿ ಗೂಗಲ್ ಪುಟ ಓಪನ್ ಮಾಡಿ ಶುರುವಿನಿಂದ ಸರ್ಚ್ ಮಾಡಿ. ಆಗ ಖಂಡಿತವಾಗಿಯೂ ನಿಮಗೆ ಫಲಿತಾಂಶ ಕಾಣಸಿಗುತ್ತದೆ.
ಎಸ್ ಎಲ್ ಸಿ ನಂತರ ಮುಂದೇನು ಎನ್ನುವ ವಿದ್ಯಾರ್ಥಿಗಳಿಗೆ ಒಳ್ಳೆಯ ಭವಿಷ್ಯ ಆಯ್ಕೆ ಮಾಡುವ ಒಂದಿಷ್ಟು ಬೆಸ್ಟ್ ಕೋರ್ಸ್ಗಳ ಪಟ್ಟಿ ಮಾಡಿ ಕೆಳಗೆ ಸಂಪೂರ್ಣವಾದ ಮಾಹಿತಿಯೊಂದಿಗೆ ಕೊಡಲಾಗಿದೆ ದಯವಿಟ್ಟು ಕೆಳಗಿನ ವರದಿಯನ್ನು ವರದಿಯನ್ನು ತಪ್ಪದೇ ಓದಿ ಮತ್ತು ನಿಮ್ಮ ಎಲ್ಲಾ ಸ್ನೇಹಿತ ಮಿತ್ರರು ಮತ್ತು ಪಾಲಕ ಪೋಷಕರಿಗೆ ಶೇರ್ ಮಾಡಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.