SSLC 2024: ಎಸ್‌ಎಸ್‌ಎಲ್‌ಸಿ ಫೇಲ್ ಆಗಿದೆಯಾ? ಭಯ ಬೇಡಾ ಇನ್ನೂ ಎರಡು ಪರೀಕ್ಷೆಗಳಿವೆ!

SSLC 2024

ಈಗಾಗಲೇ ಎಸ್‌ಎಸ್‌ಎಲ್‌ಸಿ ಪರೀಕ್ಷೆ ರಿಸಲ್ಟ್ ಹೊರ ಬಿದ್ದಿದೆ!. (SSLC Exam result) ಪರೀಕ್ಷೆ ಏನಾದರೂ ಆಗಲಿ ವಿದ್ಯಾರ್ಥಿಗಳ ಜೊತೆ ಇದೆ ವಿದ್ಯಾರ್ಥಿ ಸ್ನೇಹಿ ಪರೀಕ್ಷಾ ವ್ಯವಸ್ಥೆ.

ಪರೀಕ್ಷೆ (exam) ಎನ್ನುವುದು ವಿದ್ಯಾರ್ಥಿಗಳ ಜೀವನದಲ್ಲಿ ಒಂದು ಪ್ರಮುಖ ಘಟ್ಟವಾಗಿದೆ. 1ನೇ ತರಗತಿಯಿಂದ 9ನೇ ತರಗತಿಯವರೆಗೂ 9 ಪರೀಕ್ಷೆಗಳನ್ನು ಎದುರಿಸಿ ಬಂದಿರುತ್ತೇವೆ,ಆದರೆ ಆ ಎಲ್ಲಾ ಪರೀಕ್ಷೆಗಳಲ್ಲಿಯೂ ರಿಸಲ್ಟ್  ನ ಭಯ ಇರುವುದಿಲ್ಲ. ಆದರೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಿಂದ (SSLC Exam) ಕ್ಷಣ ನಮಗೆ ಹೆಚ್ಚು ಭಯವಾಗುತ್ತದೆ ಹಾಗೂ ಮುಂದೆ ಏನು ಮಾಡುವುದು ಫೇಲ್ ಆದ್ರೆ ಎನ್ನುವ ಆತಂಕ ಕೂಡ ಹೆಚ್ಚಿನ  ವಿದ್ಯಾರ್ಥಿಗಳಲ್ಲಿ ಕಾಡಬಹುದು. ಯಾಕೆಂದರೆ ಎಸ್‌ಎಸ್‌ಎಲ್‌ಸಿ ಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ನಮ್ಮ ಮುಂದಿನ ಶಿಕ್ಷಣ ಹಾಗೂ ಬದುಕು ನಿಂತಿರುತ್ತದೆ. ಹಾಗೂ ಈ ಒಂದು ಪರೀಕ್ಷೆ ಮೇಲೆಯೇ ನಾವು ಯಾವ ಕಾಲೇಜಿಗೆ ಸೇರಬಹುದು ಹಾಗೆ ಯಾವ ಕಾಲೇಜಿನಲ್ಲಿ ನಮಗೆ ಪ್ರವೇಶ ಸಿಗಬಹುದು ನ್ನುವುದು ತಿಳಿಯುತ್ತದೆ. ಹಿಂದಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಫೇಲಾದರೆ ಒಂದು ವರ್ಷಗಳ ಕಾಲ ಕಾಯಬೇಕಾಗಿತ್ತು, ಆದರೆ ಈಗ ಕಾಲ ಬದಲಾಗಿದೆ ಕಾಲಕ್ಕೆ ತಕ್ಕಂತೆ ಪರೀಕ್ಷಾ ನಿಯಮಗಳನ್ನು (exam rules) ಕೂಡ ಬದಲಿಸಲಾಗಿದೆ. ಇನ್ನು ಈ ನಿಟ್ಟಿನಲ್ಲಿ ಕರ್ನಾಟಕ ಶಾಲಾ ಪರಿಕ್ಷೆ (Karnataka school exam) ಹಾಗೂ ಮೌಲ್ಯ ನಿರ್ಣಯ ಮಂಡಳಿಯು ವಿದ್ಯಾರ್ಥಿ ಸ್ನೇಹ ವ್ಯವಸ್ಥೆಯನ್ನು ಜಾರಿಗೊಳಿಸಿದೆ. ಏನಿದು ವಿದ್ಯಾರ್ಥಿನಿ ಪರೀಕ್ಷಾ ವ್ಯವಸ್ಥೆ ಯಾವ ರೀತಿಯಲ್ಲಿ ವಿದ್ಯಾರ್ಥಿಗಳಿಗೆ ಉಪಯುಕ್ತವಾಗುತ್ತದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಈಗಾಗಲೇ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಬಂದಿದೆ. ಈ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಅಂಕ ಕಡಿಮೆ ಬಂದರೆ ಅಥವಾ ವಿದ್ಯಾರ್ಥಿಗಳೆನಾದರೂ ಫೇಲ್ ಆದರೆ ಭಯ ಪಡಬೇಡಿ. ನಿಮ್ಮ ಮುಂದೆ ಇನ್ನು ಎರೆಡು ಪರೀಕ್ಷೆಗಳಿವೆ. ಈ ಎರಡೂ ಪರೀಕ್ಷೆಗಳು ನಿಮ್ಮ ಅಂಕಗಳನ್ನು ಉತ್ತಮಪಡಿಸಿಕೊಳ್ಳಲು ಹಾಗೂ ಅನುತ್ತೀರ್ಣರಾದರೆ ಉತ್ತೀರ್ಣರಾಗಲೆಂದೇ ಕರ್ನಾಟಕ ಶಾಲಾ ಪರೀಕ್ಷೆ ಹಾಗೂ ಮೌಲ್ಯ ನಿರ್ಣಯ ಮಂಡಳಿ ಮೇ ಹಾಗೂ ಜೂನ್‌ ನಲ್ಲಿ ಇನ್ನೂ ಎರಡು ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ (SSLC exam) ಆಯೋಜಿಸಲಿದೆ.

ಹಿಂದೆಲ್ಲಾ ಯಾವ ರೀತಿ ಇರುತ್ತಿತ್ತು ಎಸ್ ಎಸ್ ಎಲ್ ಸಿ ಪರೀಕ್ಷೆ?

ಹಿಂದೆಲ್ಲ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಫೇಲ್ (fail) ಆದರೆ ಮರು ಪರೀಕ್ಷೆಗಳನ್ನು ಬರೆಯಲು ಒಂದು ವರ್ಷ ಬೇಕಿತ್ತು. ಭವಿಷ್ಯ (future) ಅರ್ಧಕ್ಕೆ ನಿಂತೋಗಿರುವ ಎಷ್ಟೋ ಘಟನೆಗಳು ಸಂಭವಿಸಿವೆ. ಎಸ್ ಎಸ್ ಎಲ್ ಸಿ ರಿಸಲ್ಟ್ ಬಂದ ನಂತರ ನಾಲ್ಕು ತಿಂಗಳಾದ ಮೇಲೆ ಸಪ್ಲಿಮೆಂಟರಿ ಪರೀಕ್ಷೆಗಳನ್ನು ನೀಡಲಾಗುತ್ತಿತ್ತು. ಇನ್ನು ಈ ಸಪ್ಲಿಮೆಂಟರಿ (supplementary) ಫೇಲ್ ಆದರೆ ಒಂದು ವರ್ಷ ಅಂತೂ ಬೇಕೇ ಬೇಕಾಗಿತ್ತು. ಆದ್ದರಿಂದ ಹಲವಾರು ವಿದ್ಯಾರ್ಥಿಗಳಿಗೆ ಅನಾನುಕೂಲ ಆಗಿದೆ. ಇನ್ನೂ ಕೆಲವರು ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಒಂದು ವರ್ಷದ ನಂತರ ಮತ್ತೆ ಮುಖ್ಯ ಪರೀಕ್ಷೆಗಳನ್ನು ಬರೆದಿರುವ ಉದಾರಣೆಗಳು ಇವೆ. ಈ ರೀತಿಯ ಎಲ್ಲ ಸಮಸ್ಯೆಗಳನ್ನು ದೂರ ಮಾಡಲು ಕರ್ನಾಟಕ ಶಾಲಾ ಪರೀಕ್ಷಾ ಹಾಗೂ ಮೌಲ್ಯ ನಿರ್ಣಯ ಮಂಡಳಿ ((Karnataka School Examination and Valuation Board) ವಿದ್ಯಾರ್ಥಿ ಸ್ನೇಹಿ ಮೂರು ಪರೀಕ್ಷೆಗಳ ವ್ಯವಸ್ಥೆಯನ್ನು ಮಾಡಿಕೊಟ್ಟಿದೆ.

ವಿದ್ಯಾರ್ಥಿ ಸ್ನೇಹಿ ಪರೀಕ್ಷೆಯನ್ನು (student-friendly exam) ಹೇಗೆ ನೆಡೆಸಲಾಗುತ್ತದೆ?

ಹಲವಾರು ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ನಿರ್ಭೀತಿಯವಾದ ವಾತಾವರಣವನ್ನು ಸೃಷ್ಟಿಸಿ ಕೊಡಲಾಗಿದೆ. ವಿದ್ಯಾರ್ಥಿನಿ ಪರೀಕ್ಷೆ ಅಡಿಯಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ಇನ್ನು ಎರಡು ಬಾರಿ ಮಾಡಲಾಗುತ್ತದೆ. ಅಂದರೆ ಮೇ ಹಾಗೂ ಜೂನ್ ನಲ್ಲಿ (june) ಎರಡು ಬಾರಿ ಎಸ್ ಎಲ್ ಸಿ ಪರೀಕ್ಷೆಯನ್ನು ಆಯೋಜಿಸಲಾಗುತ್ತದೆ. ಇದರಿಂದ ಅಂಕಗಳೇನಾದರೂ ಕಡಿಮೆ ಬಂದಿದ್ದರೆ ಅಥವಾ ಅಂತವರಿಗೆ ಈ ಎರಡು ಪರೀಕ್ಷೆಗಳು ಉಪಯುಕ್ತವಾಗಲಿವೆ. ಒಟ್ಟಾರೆಯಾಗಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ಮೂರು ಬಾರಿ ಪರೀಕ್ಷೆಯನ್ನು ಬರೆಯುತ್ತಾರೆ. ರಿಸಲ್ಟ್ ಏನಾದರೂ ಅವರ ನಿರೀಕ್ಷೆಗೆ ತಕ್ಕಂತೆ ಬರೆದಿದ್ದರೆ ಅಂತವರು, ಇನ್ನುಳಿದ ಎರಡು ಪರೀಕ್ಷೆಗಳನ್ನು ಬಳಸಿಕೊಳ್ಳಬಹುದು. ಹಾಗೂ ಅನುತ್ತೀರ್ಣರಾದವರು ಕೂಡ ಎರಡೂ ಪರೀಕ್ಷೆಗಳನ್ನು ಎದುರಿಸಲು ಅವಕಾಶವಿದೆ. ಈ ಮೂರು ಪರೀಕ್ಷೆಗಳ ಪೈಕಿ ಯಾವ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದಿರುತ್ತಾರೋ ಆ ಅಂಕಗಳನ್ನು ಪರಿಗಣಿಸಲಾಗುತ್ತದೆ. ಈ ಒಂದು ಅವಕಾಶವನ್ನು ಮೊದಲ ಬಾರಿಗೆ ಕರ್ನಾಟಕ ಶಾಲಾ ಪರೀಕ್ಷೆ ಹಾಗೂ ಮೌಲ್ಯ ನಿರ್ಣಯ ಮಂಡಳಿ (Karnataka School Examination and Valuation Board) ನೀಡಿದೆ.

ಈ ಮಾಹಿತಿಗಳನ್ನು ಓದಿ


WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!