Subsidy Scheme: ತೋಟಗಾರಿಕೆ ಇಲಾಖೆಯ ವಿವಿಧ ಸಬ್ಸಿಡಿ ಮತ್ತು ಧನಸಹಾಯ ಪಡೆಯಲು ಅರ್ಜಿ ಆಹ್ವಾನ!

IMG 20240814 WA0003

ತೋಟಗಾರಿಕೆ ಇಲಾಖೆಯಿಂದ ಮಿನಿ ಟ್ರ್ಯಾಕ್ಟರ್ ಸಬ್ಸಿಡಿ (Mini Tractor subsidy) ಸೇರಿದಂತೆ ಇತರೆ ಸೌಲಭ್ಯಗಳಿಗಾಗಿ ಅರ್ಜಿ ಆಹ್ವಾನ ಕರೆಯಲಾಗಿದೆ. ರಾಷ್ಟ್ರೀಯ ತೋಟಗಾರಿಕೆ ಮಿಷನ್ (NHM) (National Horticulture mission ) ಯೋಜನೆ  ರೈತರಿಗೆ ಬಹುಮುಖ ಸಹಾಯಧನ ನೀಡುತ್ತಿದೆ.

ಕನ್ನಡ ರಾಜ್ಯದ ತೋಟಗಾರಿಕೆ ಇಲಾಖೆಯಿಂದ, ತೋಟಗಾರಿಕೆ ಬೆಳೆಯುವ ರೈತರಿಗೆ ವಿವಿಧ ಯಂತ್ರೋಪಕರಣಗಳಿಗೆ ಹಾಗೂ ಮಿನಿ ಟ್ರ್ಯಾಕ್ಟರ್ ಸಬ್ಸಿಡಿ (Mini Tractor subsidy) ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. ಈ ಯೋಜನೆಯು 2005ರಲ್ಲಿ ಕರ್ನಾಟಕದಲ್ಲಿ “ರಾಷ್ಟ್ರೀಯ ತೋಟಗಾರಿಕೆ ಮಿಷನ್” ಯೋಜನೆಯಡಿಯಲ್ಲಿ (NHM- National Horticulture mission yojana)  ಜಾರಿಗೆ ತರಲಾಯಿತು. ಈ ಯೋಜನೆಯು ರೈತರಿಗೆ ತಮ್ಮ ಜಮೀನಿನಲ್ಲಿ ತೋಟಗಾರಿಕೆ ಬೆಳೆಯನ್ನು ಬೆಳೆಸಲು ಅಗತ್ಯವಾದ ಸೌಲಭ್ಯಗಳನ್ನು ಹೊಂದಲು ಮತ್ತು ತೋಟಗಾರಿಕೆ ಬೆಳೆಗೆ ಉತ್ತೇಜನ ನೀಡಲು ಅನುದಾನ ಒದಗಿಸುತ್ತದೆ.

ತೋಟಗಾರಿಕೆ ಇಲಾಖೆಯಿಂದ ವಿವಿಧ ಯಂತ್ರೋಪಕರಣಗಳಿಗೆ (Mini Tractor subsidy) ಸೇರಿದಂತೆ ಇತರೆ ಸೌಲಭ್ಯ ಪಡೆಯಲು ಅರ್ಹ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲೆಗಳೇನು? ಇತ್ಯಾದಿ ಮಾಹಿತಿಯನ್ನು ತಿಳಿಯಲು ಈ ವರದಿಯನ್ನು ಸಂಪೂರ್ಣವಾಗಿ ಓದಿ ತಿಳಿಯಿರಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಅರ್ಜಿ ಆಹ್ವಾನಗೊಂಡಿರುವ ಸೌಲಭ್ಯಗಳು:

ಮಿನಿ ಟ್ರ್ಯಾಕ್ಟರ್ ಸಬ್ಸಿಡಿ: ಸಣ್ಣ ಟ್ರ್ಯಾಕ್ಟರ್‌ಗಳಿಗೆ ಅನುಮೋದಿತ ಸಹಾಯಧನ.

ಡ್ರಾಗನ್ ಪೂಟ್ ಬೆಳೆ: ಡ್ರಾಗನ್ ಪೂಟ್(Dragon fruit) ಬೆಳೆಗಳಿಗೆ ಸಹಾಯಧನ ಹಾಗೂ ಈರುಳ್ಳಿ ಶೇಖರಣಾ ಘಟಕ.

ತೋಟಗಾರಿಕೆ ಬೆಳೆ ಪ್ರಾಥಮಿಕ ಸಂಸ್ಕರಣಾ ಘಟಕ: ಅಡಿಕೆ, ಕಾಳುಮೆಣಸು, ಕೋಕೋ ಮುಂತಾದ ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಿರುವ ಪರಿಶಿಷ್ಟ ಜಾತಿಯ ರೈತರಿಗೆ ಪ್ರಾಥಮಿಕ ಸಂಸ್ಕರಣಾ ಘಟಕ ಸ್ಥಾಪಿಸಲು ಸಹಾಯಧನ.

ಹಸಿರು ಮನೆ(green house) ನಿರ್ಮಾಣ: ಎಲ್ಲಾ ವರ್ಗದ ರೈತರಿಗೆ ಹಸಿರು ಮನೆ ನಿರ್ಮಿಸಲು ಮತ್ತು 900 ಸಿಎಂಟಿ ಸಾಮರ್ಥ್ಯದ ನೀರು ಸಂಗ್ರಹಣಾ ಘಟಕ ನಿರ್ಮಾಣಕ್ಕೆ ಸಹಾಯಧನ.

ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು:

ಅಧಾರ್ ಕಾರ್ಡ್: ಅರ್ಜಿದಾರರ ಅಧಾರ್ ಕಾರ್ಡ್ ಪ್ರತಿ.
ಬ್ಯಾಂಕ್ ಪಾಸ್ ಬುಕ್: ಬ್ಯಾಂಕ್ ಪಾಸ್ ಬುಕ್ ಪ್ರತಿ.
ಪೋಟೋ: ಅರ್ಜಿದಾರರ ಪೋಟೋ.
ಪಹಣಿ/ಉತಾರ್/RTC: ಜಮೀನು ಸಂಬಂಧಿತ ದಾಖಲೆಗಳು.
ರೇಷನ್ ಕಾರ್ಡ್: ರೇಷನ್ ಕಾರ್ಡ ಪ್ರತಿ.
ಜಂಟಿ ಮಾಲೀಕರ ಖಾತೆ: ಜಂಟಿ ಮಾಲೀಕರ ಖಾತೆಯಿದಲ್ಲಿ ಎಲ್ಲಾ ಮಾಲೀಕರ ಒಪ್ಪಿಗೆ ಪ್ರಮಾಣ ಪತ್ರ.

ಆಯ್ಕೆ ವಿಧಾನ:

ಅನುದಾನ ಲಭ್ಯತೆ ಆಧಾರದ ಮೇಲೆ, ಅರ್ಜಿ ಪರಿಶೀಲನೆ ನಂತರ, ಅರ್ಹ ಫಲಾನುಭವಿಗಳನ್ನು ಗುರುತಿಸಿ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ:

ಆಸಕ್ತ ರೈತರು ತಮ್ಮ ತಾಲ್ಲೂಕಿನ ಹಿರಿಯ ತೋಟಗಾರಿಕೆ ನಿರ್ದೇಶಕರ ಕಚೇರಿ ಅಥವಾ ತೋಟಗಾರಿಕೆ ಇಲಾಖೆಯ ಕಚೇರಿಯನ್ನು (karnataka horticulture department) ನೇರವಾಗಿ ಭೇಟಿ ಮಾಡಿ, ಅಗತ್ಯ ದಾಖಲೆಗಳನ್ನು ಸಲ್ಲಿಸಿ ಅರ್ಜಿ ಹಾಕಬಹುದು.

ಹೆಚ್ಚಿನ ಮಾಹಿತಿಗಾಗಿ:

ತೋಟಗಾರಿಕೆ ಇಲಾಖೆಯ ಅಧಿಕೃತ ವೆಬ್‌ಸೈಟ್ ಗೆ ಭೇಟಿ ಮಾಡಿ: horticulturedir.karnataka.gov.in
ಮತ್ತು ಇಂತಹ ಉತ್ತಮವಾದ  ಮಾಹಿತಿ  ಹೊಂದಿದ ಈ ಲೇಖನವನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.

ಈ ಮಾಹಿತಿಗಳನ್ನು ಓದಿ

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!