ರೈತರಿಗೆ ಸರ್ಕಾರದ ಭರ್ಜರಿ ಕೊಡುಗೆ: ತೋಟಗಾರಿಕೆಯಲ್ಲಿ ಆಧುನಿಕತೆಯತ್ತ ರೈತರ ಹೆಜ್ಜೆ, ತೋಟಗಾರಿಕೆಗೆ ಶೇ. 50 ರವರೆಗೆ ಸಬ್ಸಿಡಿ!
ರೈತರ ಆದಾಯವನ್ನು ದ್ವಿಗುಣಗೊಳಿಸಲು ಮತ್ತು ತೋಟಗಾರಿಕೆಯಲ್ಲಿ ತಂತ್ರಜ್ಞಾನ ಆಧಾರಿತ ಕೃಷಿಯನ್ನು ಉತ್ತೇಜಿಸಲು ರಾಷ್ಟ್ರೀಯ ತೋಟಗಾರಿಕೆ ಮಂಡಳಿ (National Horticulture Council) ಹಲವಾರು ಆಕರ್ಷಕ ಸಬ್ಸಿಡಿ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ, ರೈತರು ಶೇಡ್ ನೆಟ್, ಹಸಿರು ಮನೆ(Greenhouse), ಪಾಲಿಹೌಸ್ ಕೃಷಿ(Polyhouse farming), ಶೀತಲೀಕರಣ ಘಟಕ(Cold storage units) ಮತ್ತು ಅಣಬೆ ಕೃಷಿ(Mushroom farming) ಸ್ಥಾಪನೆಗೆ ಶೇಕಡಾ 50 ರವರೆಗೆ ಸಬ್ಸಿಡಿ ಪಡೆಯುವ ಅವಕಾಶವನ್ನು ಪಡೆಯಬಹುದು. ಈ ಮೂಲಕ, ತೋಟಗಾರಿಕೆಯಲ್ಲಿ ಆಧುನಿಕತೆ ಹಾಗೂ ನವೀನ ಪ್ರಯೋಗಗಳನ್ನು ಅಳವಡಿಸಿಕೊಳ್ಳಲು ರೈತರಿಗೆ ಪ್ರೇರಣೆ ಸಿಗುತ್ತಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಯಾವೆಲ್ಲಾ ಸೌಲಭ್ಯಗಳು ಲಭ್ಯವಿದೆ?(What facilities are available?
ಶೇಡ್ ನೆಟ್, ಹಸಿರು ಮನೆ ಮತ್ತು ಪಾಲಿಹೌಸ್ ಕೃಷಿ(Shade net, greenhouse and polyhouse farming):
ತಾಪಮಾನ ನಿಯಂತ್ರಿತ ಪರಿಸರದಲ್ಲಿ ಉತ್ತಮ ಉತ್ಪಾದನೆಗಾಗಿ ಶೇಡ್ ನೆಟ್, ಹಸಿರು ಮನೆ ಹಾಗೂ ಪಾಲಿಹೌಸ್ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಶೇಕಡಾ 50 ರವರೆಗೆ ಸಬ್ಸಿಡಿ ಲಭ್ಯ.
ತೆರೆದ ಜಮೀನಿನಲ್ಲಿ ಹಣ್ಣಿನ ಕೃಷಿ(Fruit cultivation in open fields):
ನೆಲ್ಲಿಕಾಯಿ, ಮಾವು, ಪೇರಲ ಮತ್ತು ಇತರ ವಾಣಿಜ್ಯ ಹಣ್ಣುಗಳ ಬೆಳೆಗೆ ಶೇಕಡಾ 40 ರವರೆಗೆ ಸಬ್ಸಿಡಿ ನೀಡಲಾಗುತ್ತಿದೆ.
ಶೀತಲೀಕರಣ ಘಟಕ ಮತ್ತು ಅಣಬೆ ಕೃಷಿ(Cold storage units and mushroom cultivation):
ಕೃಷಿ ಉತ್ಪನ್ನಗಳ ಶೇಖರಣೆ ಮತ್ತು ಗುಣಮಟ್ಟ ಕಾಪಾಡಲು ಶೀತಲೀಕರಣ ಘಟಕಗಳ ಸ್ಥಾಪನೆಗೆ ಶೇಕಡಾ 30 ರಿಂದ 50 ರವರೆಗೆ ಸಬ್ಸಿಡಿ. ಅಲ್ಲದೆ, ಅಣಬೆ ಕೃಷಿಗೆ ಶೇಕಡಾ 40 ರವರೆಗೆ ಆರ್ಥಿಕ ನೆರವು.
ಆರೊಮ್ಯಾಟಿಕ್ ಮತ್ತು ಔಷಧೀಯ ಸಸ್ಯಗಳ ಕೃಷಿ(Cultivation of aromatic and medicinal plants):
ಹಣ್ಣು, ಹೂವು, ಮತ್ತು ಔಷಧೀಯ ಸಸ್ಯಗಳ ಕೃಷಿಗೆ ಸಹ ಶೇಕಡಾ 40 ರವರೆಗೆ ಸಬ್ಸಿಡಿ ನೀಡಲಾಗುತ್ತಿದೆ.
ಕೃಷಿ ಆಧಾರಿತ ಉದ್ಯಮಗಳು ಮತ್ತು ಸ್ಟಾರ್ಟ್‌ಅಪ್ಗಳಿಗೆ ನೆರವು(Assistance to agri-based enterprises and startups):
ಕೃಷಿ ಸಂಬಂಧಿತ ಉದ್ಯಮಿಗಳು, ಯುವ ಸ್ಟಾರ್ಟ್‌ಅಪ್ಗಳು ಮತ್ತು ಸಹಕಾರಿ ಸಂಸ್ಥೆಗಳಿಗೆ ಕೃಷಿ ಆಧಾರಿತ ಉದ್ಯಮಗಳನ್ನು ಸ್ಥಾಪಿಸಲು ಸರ್ಕಾರವು ಪ್ರೋತ್ಸಾಹ ನೀಡುತ್ತಿದೆ.
ಅರ್ಜಿ ಸಲ್ಲಿಸುವ ವಿಧಾನ(How to apply):
ರೈತರು ರಾಷ್ಟ್ರೀಯ ತೋಟಗಾರಿಕೆ ಮಂಡಳಿ (NHB)ಯ ಅಧಿಕೃತ ವೆಬ್‌ಸೈಟ್ www.nhb.gov.in ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಜಿ ಶುಲ್ಕ:
ಯೋಜನೆಯ ವೆಚ್ಚಕ್ಕೆ ಅನುಗುಣವಾಗಿ ಅರ್ಜಿ ಶುಲ್ಕ ಪಾವತಿಸಬೇಕು.
ಬೇಕಾಗುವ ಪ್ರಮುಖ ದಾಖಲೆಗಳು(Important documents required):
ಪ್ಯಾನ್ ಕಾರ್ಡ್
ಮತದಾರರ ಗುರುತಿನ ಚೀಟಿ
ಆಧಾರ್ ಕಾರ್ಡ್
ಪಾಲುದಾರಿಕೆ ಸಂಸ್ಥೆಯ ನೋಂದಣಿ (ಅನ್ವಯಿಸಿದರೆ)
ಕಂಪನಿ, ಸೊಸೈಟಿ, ಟ್ರಸ್ಟ್ ಇತ್ಯಾದಿಗಳ ನೋಂದಣಿ (ಅನ್ವಯಿಸಿದರೆ)
ಹೆಚ್ಚಿನ ಮಾಹಿತಿಗೆ(For Further more information):
ರೈತರು ಹತ್ತಿರದ ತೋಟಗಾರಿಕೆ ಇಲಾಖೆ ಕಚೇರಿl ಅಥವಾ NHB ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು.
ರೈತರಿಗಾಗಿ ಆಧುನಿಕ ತಂತ್ರಜ್ಞಾನ – ಹೆಚ್ಚು ಆದಾಯ, ಹೆಚ್ಚು ಯಶಸ್ಸು!
ಈ ಸಬ್ಸಿಡಿ ಯೋಜನೆಯು ತೋಟಗಾರಿಕೆಯಲ್ಲಿ ಆಧುನಿಕತೆಯನ್ನು ತರುತ್ತದೆ ಮತ್ತು ರೈತರು ತಮ್ಮ ಆದಾಯವನ್ನು ದ್ವಿಗುಣಗೊಳಿಸಬಹುದು. ಶೇಡ್ ನೆಟ್, ಹಸಿರು ಮನೆ, ಪಾಲಿಹೌಸ್ ಮತ್ತು ಶೀತಲೀಕರಣ ಘಟಕಗಳಂತಹ ಆಧುನಿಕ ತಂತ್ರಜ್ಞಾನಗಳ ಅಳವಡಿಕೆಯಿಂದ ಉತ್ಪಾದನಾ ಮಟ್ಟವನ್ನು ಸುಧಾರಿಸಬಹುದು. ಇದಲ್ಲದೇ, ಹಣ್ಣು, ಹೂವು ಮತ್ತು ಔಷಧೀಯ ಸಸ್ಯಗಳ ಕೃಷಿಗೆ ಸಹ ಆರ್ಥಿಕ ಸಹಾಯ ದೊರೆಯುವುದರಿಂದ ಭವಿಷ್ಯದ ಕೃಷಿ ಕ್ಷೇತ್ರವನ್ನು ಬಲಪಡಿಸಲು ಈ ಯೋಜನೆ ಬಹಳ ಉಪಯುಕ್ತ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.