ರಾಜ್ಯದಲ್ಲಿ ಟಾಟಾ ರಿಯಾಲ್ಟಿ ಬಿಸಿನೆಸ್ ಪಾರ್ಕ್‌ಗೆ ಸರ್ಕಾರ ಅಸ್ತು 5,500 ಉದ್ಯೋಗ ನೇಮಕಾತಿ.

Picsart 25 04 20 23 53 14 817

WhatsApp Group Telegram Group

ಉದ್ಯಮ ಹಾಗೂ ಉದ್ಯೋಗ ವಿಸ್ತಾರಕ್ಕೆ ಮತ್ತೊಂದು ಹೆಜ್ಜೆ: ಟಾಟಾ ರಿಯಾಲ್ಟಿ ಬಿಸಿನೆಸ್ ಪಾರ್ಕ್‌ಗೆ ಸರ್ಕಾರದಿಂದ ಅನುಮೋದನೆ

ರಾಜ್ಯದ ರಾಜಧಾನಿ ಬೆಂಗಳೂರಿನ ತಂತ್ರಜ್ಞಾನ ಕ್ಷೇತ್ರ (Technology field) ಮತ್ತಷ್ಟು ಬಲಿಷ್ಠವಾಗಲಿದೆ ಎಂಬುದು ಈಗ ಸ್ಪಷ್ಟವಾಗಿದೆ. ಖ್ಯಾತ ಸಂಸ್ಥೆಯಾದ ಟಾಟಾ ರಿಯಾಲ್ಟಿ ಅಂಡ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ (TRIL) ನಡೆಸಲಿರುವ ಹೊಸ ಬಿಸಿನೆಸ್ ಪಾರ್ಕ್ (Business park) ಯೋಜನೆಗೆ ಕರ್ನಾಟಕ ಸರ್ಕಾರ ಅನುಮೋದನೆ ನೀಡಿದ್ದು, ಇಂದಿನ ಆಧುನಿಕ ಕರ್ನಾಟಕದ ಬೆಳವಣಿಗೆಗೊಂದು ಮಹತ್ವದ ಹೆಜ್ಜೆಯಾಗಿ ಪರಿಗಣಿಸಲಾಗಿದೆ. ಐಟಿ ಮತ್ತು ಐಟಿಇಎಸ್ ಕ್ಷೇತ್ರದಲ್ಲಿ (IT and ITES Field) ಈ ಯೋಜನೆ ಮಹತ್ತರವಾದ ಮುಂದಿನ ಹಂತವನ್ನು ಸೂಚಿಸುತ್ತಿದ್ದು, ರಾಜ್ಯದಲ್ಲಿ ಉದ್ಯೋಗ ಸೃಷ್ಟಿಗೆ ಖಾಸಗಿ ಹೂಡಿಕೆಯು ಹೇಗೆ ನೆರವಾಗಬಲ್ಲದು ಎಂಬುದರ ಉತ್ತಮ ಉದಾಹರಣೆಯಾಗಿದೆ. ಹೊಸ ಬಿಸಿನೆಸ್ ಪಾರ್ಕ್ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ರೂ. 3,273 ಕೋಟಿ ವೆಚ್ಚದ ಬೃಹತ್ ಯೋಜನೆಗೆ ಹಸಿರು ನಿಶಾನೆ:

ಟಾಟಾ ಇಂಟೆಲಿಯನ್ ಬಿಸಿನೆಸ್ ಪಾರ್ಕ್‌ (TATA Intelian Business park) ಎಂಬ ಹೆಸರಿನಲ್ಲಿ ಈ ಯೋಜನೆಯನ್ನು ಬೆಂಗಳೂರು ನಗರದ ವೈಟ್‌ಫೀಲ್ಡ್‌ನಲ್ಲಿ ಸ್ಥಾಪಿಸಲು TRIL ಮುಂದಾಗಿದೆ. ಸುಮಾರು ರೂ. 3,273 ಕೋಟಿ ವೆಚ್ಚದ ಈ ಯೋಜನೆ, 25.5 ಎಕರೆ ವಿಸ್ತೀರ್ಣದ ಪ್ರದೇಶದಲ್ಲಿ ಅಭಿವೃದ್ಧಿಯಾಗಲಿದ್ದು, ದೊಡ್ಡನೆಕ್ಕುಂದಿ ಕೈಗಾರಿಕಾ ಪ್ರದೇಶದಲ್ಲಿ ಈ ಪಾರ್ಕ್‌ ನಿರ್ಮಾಣಗೊಳ್ಳಲಿದೆ. ಈ ಬಗ್ಗೆ ಏಪ್ರಿಲ್ 17ರಂದು ರಾಜ್ಯ ಸರ್ಕಾರ ತನ್ನ ಅಧಿಕೃತ ಅಧಿಸೂಚನೆಯಲ್ಲಿ ವಿವರಿಸಿದೆ.

5,500ಕ್ಕೂ ಹೆಚ್ಚು ಉದ್ಯೋಗಾವಕಾಶಗಳ ನಿರೀಕ್ಷೆ:

ಈ ಪಾರ್ಕ್‌ನಲ್ಲಿ ಐಟಿ, ಐಟಿಇಎಸ್ ಹಾಗೂ ಸಂಬಂಧಿತ ಚಟುವಟಿಕೆಗಳಿಗೆ ಅಗತ್ಯವಿರುವ ಮೂಲಸೌಕರ್ಯಗಳನ್ನು ಸಜ್ಜುಗೊಳಿಸಲಾಗುವುದು. ಈ ಮೂಲಕ ಅಂದಾಜು 5,500 ನೇರ ಹಾಗೂ ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ನಿರೀಕ್ಷಿಸಲಾಗಿದೆ. ರಾಜ್ಯದ ತಂತ್ರಜ್ಞಾನ ಕ್ಷೇತ್ರದ (Technology field) ಪರಿಣಿತರಿಗಿದು ಹೊಸ ಆವಕಾಶದ ಬಾಗಿಲು ತೆರೆದು ಕೊಡಲಿದೆ.

ಈ ಯೋಜನೆಗೆ ಸಂಬಂಧಿಸಿದ ಭೂಸ್ವಾಮ್ಯವನ್ನು TRIL ಆಗಸ್ಟ್ 2023ರಲ್ಲಿ ಗ್ರಾಫೈಟ್ ಇಂಡಿಯಾ ಲಿಮಿಟೆಡ್‌ನಿಂದ (Graphite India Limited) ಸುಮಾರು ರೂ. 986 ಕೋಟಿಗೆ ಖರೀದಿಸಿದೆ. ಇದೊಂದು ಪ್ರಮುಖ ಹಂತವಾಗಿದ್ದು, ಯೋಜನೆಯ ತಾತ್ಕಾಲಿಕ ತಂತ್ರಜ್ಞಾನ ರೂಪರೇಖೆ ಹಾಗೂ ವಿಸ್ತರಣೆಯ ಗುರಿಯನ್ನು ಸ್ಪಷ್ಟಪಡಿಸಿತು.

ಅನುಮೋದನೆಗೂ ಒಂದಷ್ಟು ಷರತ್ತುಗಳಿದ್ದೇ ಇವೆ:

ಯೋಜನೆಗೆ ಅನುಮೋದನೆ ನೀಡಿದ ರಾಜ್ಯ ಸರ್ಕಾರ (State government), ಹಲವಾರು ಷರತ್ತುಗಳನ್ನು ಲಗತ್ತಿಸಿದೆ. ಸ್ಥಳೀಯರಿಗೆ ಉದ್ಯೋಗಾವಕಾಶ ನೀಡುವುದು, ತರಬೇತಿ ಅವಕಾಶ ಕಲ್ಪಿಸುವುದು, ಸ್ಥಳೀಯ ಮಾರಾಟಗಾರರ ಅಭಿವೃದ್ಧಿಗೆ ಸಹಕಾರ ನೀಡುವುದು, ಮತ್ತು ಸಾಮಾಜಿಕ ಮೂಲಸೌಕರ್ಯ ಅಭಿವೃದ್ಧಿಗೆ (For the development of social infrastructure) ಮುಂದಾಗುವುದು ಎಂಬ ಷರತ್ತುಗಳನ್ನು ಪಾಲಿಸುವ ಅಗತ್ಯವಿದೆ. ಈ ಮೂಲಕ ಉದ್ಯಮದೊಂದಿಗೆ ಸಮುದಾಯದ ಶ್ರೇಯೋಭಿವೃದ್ಧಿಯ ಚಿಂತನೆಯೂ ಇದೆ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಿದೆ.

ಈ ಯೋಜನೆ, ಕರ್ನಾಟಕದ ಉದ್ಯಮೋನ್ನತಿಗೆ ಮತ್ತೊಂದು ಮುನ್ನುಡಿ ಬರೆಯುತ್ತಿದೆ. ಟಾಟಾ ಗ್ರೂಪ್‌ನಂತಹ (TATA group) ಸಂಸ್ಥೆಗಳ ಹೂಡಿಕೆ ಹಾಗೂ ಸರ್ಕಾರದ ಪ್ರೋತ್ಸಾಹದಿಂದ, ರಾಜ್ಯದ ತಂತ್ರಜ್ಞಾನ, ಉದ್ಯೋಗ, ಮೂಲಸೌಕರ್ಯ ಮತ್ತು ಸಾಮಾಜಿಕ ಅಭಿವೃದ್ಧಿಗೆ ಹೊಸ ದಿಕ್ಕು ದೊರೆಯಲಿದೆ.
ಈ ಬಿಸಿನೆಸ್ ಪಾರ್ಕ್ ಯೋಜನೆ, ಸಮಗ್ರ ಅಭಿವೃದ್ಧಿಗೆ ಮಾರ್ಗದರ್ಶಕವಾಗುವ ನಿರೀಕ್ಷೆಯಿದೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!