ವಿದ್ಯಾವಂತರು ಕಾನೂನು, ಪೊಲೀಸರ ಸಹಾಯ ಪಡೆದು ನ್ಯಾಯವನ್ನು ಪಡೆಯುತ್ತಾರೆ. ಆದರೆ ಉಳಿದವರೆಲ್ಲರೂ ಈ ರೀತಿ ಮಾಡಲು ಸಾಧ್ಯವಾಗದೆ ಇರಬಹುದು. ಹಾಗಾಗಿ ಪ್ರತಿಯೊಬ್ಬರೂ ತಮ್ಮ ಹಕ್ಕುಗಳ ಬಗ್ಗೆ ಅರಿತುಕೊಳ್ಳುವುದು ಬಹಳ ಮುಖ್ಯ ಹಾಗೂ ಎಲ್ಲರ ಹಕ್ಕುಗಳನ್ನು ಗೌರವಿಸಿ ಸಮಾನ ಭಾವನೆಯಿಂದ ನೋಡಿದರೆ ಮಾತ್ರ ಸಮಾಜವು ಶೋಷಣೆ ಮುಕ್ತವಾಗಲು ಸಾಧ್ಯ.
ವರದಕ್ಷಿಣೆ ಕೊಟ್ಟು, ಮದುವೆ ಮಾಡಿದ್ದೇವೆ. ಹೀಗಾಗಿ ಆಸ್ತಿಯಲ್ಲಿ ಪಾಲು ನೀಡುವುದಿಲ್ಲ ಎಂಬ ಸಬೂಬು ಕಾನೂನು ಒಪ್ಪುವುದಿಲ್ಲ. ತವರು ಮನೆಯವರು ಸ್ಥಿತಿವಂತರಿದ್ದು, ತನ್ನ ಗಂಡನ ಮನೆ ಬಡತನದಲ್ಲಿದ್ದರೆ ತವರಿನ ಆಸ್ತಿಯಲ್ಲಿ ಪಾಲು ಪಡೆಯಬಹುದು ಎಂದು ಹಲವರ ಅಭಿಪ್ರಾಯ, ಆದರೆ ಕಾನೂನು ಏನು ಹೇಳುತ್ತದೆ ಮದುವೆಯಾದ ನಂತರ ಎಷ್ಟು ವರ್ಷಗಳವರೆಗೆ ಆಸ್ತಿಯಲ್ಲಿ ಪಾಲು ಕೇಳಬಹುದು? ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಪಾಲಿದೆಯೇ? ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಸಾಮಾನ್ಯವಾಗಿ ಭಾರತದಲ್ಲಿ ಆಸ್ತಿ ವಿತರಣೆಗೆ ಸಂಬಂಧಿಸಿದ ನಿಯಮಗಳನ್ನ ರೂಪಿಸಲಾಗಿದ್ದು, ಈ ನಿಬಂಧನೆಗಳ ಪ್ರಕಾರ, ಭಾರತದಲ್ಲಿ ಆಸ್ತಿ ವಿತರಣೆಗೆ ಸಂಬಂಧಿಸಿದಂತೆ 1965ರಲ್ಲಿ ಹಿಂದೂ ಉತ್ತರಾಧಿಕಾರ ಕಾಯ್ದೆಯನ್ನ(Hindu Succession Act) ಅಂಗೀಕರಿಸಲಾಗಿದೆ. ಇದರ ಅಡಿಯಲ್ಲಿ ಉತ್ತರಾಧಿಕಾರ ಮತ್ತು ಉತ್ತರಾಧಿಕಾರಕ್ಕೆ ಸಂಬಂಧಿಸಿದಂತೆ ಹಾಗೂ ಹಿಂದೂಗಳು, ಬೌದ್ಧರು, ಜೈನರು ಮತ್ತು ಸಿಖ್ಖರ ನಡುವೆ ಆಸ್ತಿಯ ವಿತರಣೆ, ಈ ರೀತಿಯ ಕಾನೂನುಗಳನ್ನ ರೂಪಿಸಲಾಗಿದೆ.
ಹೆಣ್ಣು ಮಕ್ಕಳಿಗೂ ಆಸ್ತಿಯಲ್ಲಿ ಹಕ್ಕಿದೆ :
2005ಕ್ಕೂ ಮೊದಲು ಕೇವಲ ಗಂಡು ಮಕ್ಕಳಿಗೆ ಮಾತ್ರ (Only for boys) ಆಸ್ತಿಯಲ್ಲಿ ಪಾಲು ನೀಡಲಾಗುತ್ತಿತ್ತು. ಆದರೆ 2005ರಲ್ಲಿ ಉತ್ತರಾಧಿಕಾರ ಕಾನೂನಿನ ಅಡಿಯಲ್ಲಿ ಹೆಣ್ಣು ಮಕ್ಕಳಿಗೂ ಆಸ್ತಿಯಲ್ಲಿ ಪಾಲು ನೀಡಲಾಗುತ್ತದೆ ಎಂದು ಹೊಸ ಕಾನೂನನ್ನು ರೂಪಿಸಲಾಯಿತು. ಇಲ್ಲಿಂದ ಮುಂದಕ್ಕೆ ಮಗನಿಗೆ ನೀಡಿದಂತೆಯೇ ಮಗಳಿಗೂ ಕೂಡ ಆಸ್ತಿಯಲ್ಲಿ ಪಾಲು ನೀಡಬೇಕಾಗುತ್ತದೆ. ಇನ್ನು ಈ ಕಾನೂನು ಹಲವಾರು ಹೆಣ್ಣುಮಕ್ಕಳಿಗೆ ಸಹಾಯ ಮಾಡಿದೆ. ತಮ್ಮ ಜೀವನದಲ್ಲಿ ಬರುವ ಕಷ್ಟಗಳಿಗೆ ಇದು ಉಪಯೋಗವಾಗಿದೆ.
ಮದುವೆಯಾದ ಎಷ್ಟು ವರ್ಷಗಳ ತನಕ ಮಗಳಿಗೆ ಆಸ್ತಿಯಲ್ಲಿ ಪಾಲು ಕೇಳಲು ಹಕ್ಕಿದೆ:
2005ರಲ್ಲಿ ಹಿಂದೂ ಉತ್ತರಾಧಿಕಾರ ಕಾಯ್ದೆಗೆ ತಿದ್ದುಪಡಿ ಮಾಡಿದ ನಂತರ, ಮಗಳನ್ನು ಆಸ್ತಿಯ ಸಮಾನ ಉತ್ತರಾಧಿಕಾರಿ ಎಂದು ಪರಿಗಣಿಸಲಾಗುತ್ತದೆ. ಅದರಲ್ಲೂ ಮದುವೆಯ ನಂತರವೂ ಮಗಳಿಗೆ ಆಸ್ತಿಯಲ್ಲಿ ಪಾಲು ಕೇಳಲು ಹಕ್ಕಿದೆ. ಮಗಳಿಗೆ ಮದುವೆಯಾಗಿ ಎಷ್ಟೇ ವರ್ಷ ಕಳೆದಿದ್ದರೂ ಕೂಡ ಮಗಳು ಬೇಕೆಂದಾಗ ಆಸ್ತಿಯಲ್ಲಿ ಪಾಲನ್ನು ಕೇಳಬಹುದು. ಇದಕ್ಕೆ ಯಾವುದೇ ವರ್ಷಗಳ ಮಿತಿ ಇಲ್ಲ. ಮಗನಷ್ಟೇ ಮಗಳು ಕೂಡ ಯಾವಾಗಲೂ ಆಸ್ತಿಯ ಮೇಲೆ ಹಕ್ಕನ್ನು ಹೊಂದಿರುತ್ತಾಳೆ.
ಮಕ್ಕಳಿಗೆ ತಂದೆಯ ಯಾವ ಆಸ್ತಿಯ ಮೇಲೆ ಹಕ್ಕಿಲ್ಲ :
ಹಿಂದೂ ಉತ್ತರಾಧಿಕಾರ ಕಾಯ್ದೆಯಡಿಯಲ್ಲ ಆಸ್ತಿಯಲ್ಲಿ ಎರಡು ಭಾಗಗಳನ್ನು ಮಾಡಲಾಗಿದೆ. ಒಂದು ಪಿತ್ರಾರ್ಜಿತ (Inheritance) ಇನ್ನೊಂದು ಸ್ವಯಾರ್ಜಿತ(independent). ಪಿತ್ರಾಜಿತ ಎಂದರೆ ತಲೆತಲಾಂತರದಿಂದ ಬಂದಂತಹ ಆಸ್ತಿ. ಅಂದರೆ ಅಪ್ಪನ ಆಸ್ತಿ ಮಗನಿಗೆ, ಮಗನ ಆಸ್ತಿ ಅವನ ಮಕ್ಕಳಿಗೆ ಹೀಗಿ ಆಸ್ತಿಯ ಪಾಲು (Share of property) ಹಂಚಿತವಾಗಿರುತ್ತದೆ. ಸ್ವಯಾರ್ಚಿತ ಎಂದರೆ ತಂದೆ ಅಥವಾ ತಾಯಿ ತಮ್ಮ ಆಸ್ತಿಯನ್ನು ತಾವೇ ದುಡಿದು ಸಂಪಾದಿಸಿರುತ್ತಾರೆ. ಈ ಸ್ವಯಾರ್ಜಿತ ಆಸ್ತಿಯ ಮೇಲೆ ಮಗನಿಗಾಗಲಿ ಅಥವಾ ಮಗಳಿಗಾಗಲಿ ಯಾವುದೇ ರೀತಿಯ ಹಕ್ಕು ಇರುವುದಿಲ್ಲ. ಕೇವಲ ಪಿತ್ರಾರ್ಜಿತ ಆಸ್ತಿಯಲ್ಲಿ ಮಾತ್ರ ಮಗ ಅಥವಾ ಮಗಳಿಗೆ ಆಸ್ತಿಯ ಮೇಲೆ ಹಕ್ಕಿರುತ್ತದೆ.
ತಂದೆಯ ಇಚ್ಛೆ ಇದ್ದರೆ ಮಕ್ಕಳಿಗೆ ಸ್ವಯಾರ್ಜಿತ ಆಸ್ತಿಯಲ್ಲಿ ಹಕ್ಕಿರುತ್ತದೆ :
ಸ್ವಯಾರ್ಜಿತ ಆಸ್ತಿ ತಾನು ಸಂಪಾದಿಸಿರುವ ಆಸ್ತಿ ಆಗಿರುವುದರಿಂದ ಒಂದು ವೇಳೆ ತಂದೆ ಮನಸ್ಸು ಮಾಡಿದರೆ, ಆಸ್ತಿಯನ್ನು ಮಗ ಅಥವಾ ಮಗಳಿಗೆ ಸಮಾನವಾಗಿ ಹಂಚಬಹುದು ಅಥವಾ ಯಾರಿಗಾದರೂ ಒಬ್ಬರಿಗೆ ನೀಡಬಹುದು. ಒಂದು ವೇಳೆ ತಂದೆ ತನ್ನ ಆಸ್ತಿಯನ್ನ ವಿಭಜಿಸದೆ ಮೃತಪಟ್ಟರೆ, ಮಗ ಮತ್ತು ಮಗಳು ಇಬ್ಬರೂ ಆಸ್ತಿಯ ಕಾನೂನುಬದ್ಧ ವಾರಸುದಾರರಾಗಿರುತ್ತಾರೆ. ಅಥವಾ ಆತನ ಪತ್ನಿ ಬದುಕಿದ್ದರೆ ಆಕೆಯೂ ಕೂಡ ಆಸ್ತಿಯಲ್ಲಿ ಪಾಲನ್ನು ಪಡೆಯಬಹುದು.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.