ಕೆಲಸದಲ್ಲಿ ಬ್ಯುಸಿಯಾಗಿರುವ ಸಂದರ್ಭದಲ್ಲಿ ನಿಮಗೆ ಕರೆ ಮಾಡುತ್ತಿರುವವರು ಯಾರು ಎಂದು ತಿಳಿದುಕೊಳ್ಳಬೇಕೆ? ಹಾಗಿದ್ದಲ್ಲಿ ಈ ಸೆಟ್ಟಿಂಗ್(setting) ಆನ್ ಮಾಡಿ.
ನಿಮ್ಮ ಫೋನ್‌ಗೆ ಕರೆ(phone call) ಬಂದಾಗ, ಕರೆ ಮಾಡಿದವರ ಹೆಸರನ್ನು ಫೋನ್ ಸ್ವಯಂ ಹೇಳುವಂತೆ ಮಾಡಬಹುದು. ಅನೇಕ ಬಾರಿ ನಾವು ಕೆಲಸದ ಒತ್ತಡದಲ್ಲಿ ಇರುತ್ತೇವೆ. ಆ ಸಮಯದಲ್ಲಿ ನಮೆಗೆ ಯಾರು ಕರೆ ಮಾಡಿದ್ದಾರೆ ಎನ್ನುವುದನ್ನು ನೋಡುವಷ್ಟು ಸಮಯವಾಗಲಿ ತಾಳ್ಮೆಯಾಗಲಿ ಇರುವುದಿಲ್ಲ. ಆದರೆ ಕೆಲವೊಮ್ಮೆ ನಮಗೆ ತುಂಬಾ ಅಗತ್ಯವಿರುವ ಸಂದೇಶವನ್ನು(message) ಹೇಳವ ಸಲುವಾಗಿ ಹಲವರು ನಮಗೆ ಕರೆ ಮಾಡುತ್ತಾರೆ. ಅಂಥಹ ಸಮಯದಲ್ಲಿ ನಾವು ಕರೆಯನ್ನು ಸ್ವೀಕರಿಸುವುದು ಬಹಳ ಮುಖ್ಯ. ಅದರಲ್ಲೂ ನಾವು ಡ್ರೈವ್(drive) ಮಾಡುತ್ತಿರುವ ಸಂಧರ್ಭದಲ್ಲಿ ನಮಗೆ ಕರೆ ಮಾಡುತ್ತಿರುವ ವ್ಯಕ್ತಿ ಯಾರು ಎಂದು ತಿಳಿದುಕೊಂಡು ನಂತರ ಉತ್ತರಿಸಬಹುದು. ನಮ್ಮ ಮೊಬೈಲ್ಗೆ ಕಾಲ್ ಬಂದ ತಕ್ಷಣ ಅದು ಯಾರದ್ದು ಎಂದು ಹೇಗೆ ತಿಳಿದುಕೊಳ್ಳುವುದು ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಹೌದು, ನೀವು ಕೆಲಸದ ಒತ್ತಡ ಅಥವಾ ಕರೆ ಸ್ವೀಕರಿಸಲು ಸಾಧ್ಯವಿರದ ಸಮಯದಲ್ಲಿ ನಿಮಗೆ ಕರೆ ಮಾಡಿರುವವರು ಯಾರು ಎಂದು ತಿಳಿದುಕೊಳ್ಳಬಹುದು. ಆದರೆ ಮೊಬೈಲ್ ನಲ್ಲಿ ನೇರವಾಗಿ ಈ ಆಯ್ಕೆಯನ್ನು ನೀಡಿಲ್ಲ, ಪ್ಲೇ ಸ್ಟೋರ್(play store) ಅಥವಾ ಆ್ಯಪ್ ಸ್ಟೋರ್ನಲ್ಲಿ(app store) ಥರ್ಡ್ ಪಾರ್ಟಿ ಅಪ್ಲಿಕೇಶನ್ (third party application) ಟ್ರೂಕಾಲರ್‌ನಲ್ಲಿ ಕರೆ ಮಾಡುತ್ತಿರುವವರು ಯಾರು ಎಂದು ತಿಳಿದುಕೊಳ್ಳ ಬಹುದು. ಈ ಅಪ್ಲಿಕೇಶನ್ ಸೆಟ್ (application set) ಮಾಡಿದ ನಂತರ ನಮಗೆ ಕರೆ ಮಾಡುತ್ತಿರುವವರು ಯಾರು ಎಂದು ತಿಳಿದುಕೊಳ್ಳ ಬಹುದು. ಇಲ್ಲಿ ನಮಗೆ ರಿಂಗ್‌ಟೋನ್(ringtone) ಬದಲಿಗೆ ಕರೆ ಮಾಡಿದವರ ಹೆಸರು ಕೇಳಿಸಿಕೊಳ್ಳಬಹುದು.
ಟ್ರೂಕಾಲರ್‌ನಲ್ಲಿ ‘ಕಾಲ್ ಅನೌನ್ಸ್’ ಫೀಚರ್ ಅನ್ನು ಸಕ್ರಿಯಗೊಳಿಸುವ ವಿಧಾನ:
ಟ್ರೂಕಾಲರ್ ಅಪ್ಲಿಕೇಶನ್ ಡೌನ್‌ಲೋಡ್ ಮತ್ತು ಇನ್‌ಸ್ಟಾಲ್ ಮಾಡಿ: ನಿಮ್ಮ ಫೋನ್‌ನಲ್ಲಿ ಟ್ರೂಕಾಲರ್ ಅಪ್ಲಿಕೇಶನ್ ಇಲ್ಲದಿದ್ದರೆ, ಗೂಗಲ್ ಪ್ಲೇ ಸ್ಟೋರ್ ಅಥವಾ ಆಪ್ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿ ಮತ್ತು ಇನ್‌ಸ್ಟಾಲ್ ಮಾಡಿ.
ಅಪ್ಲಿಕೇಶನ್ ತೆರೆಯಿರಿ ಮತ್ತು ಲಾಗಿನ್ ಮಾಡಿ: ಟ್ರೂಕಾಲರ್ (Truecaller)ಅಪ್ಲಿಕೇಶನ್ ತೆರೆಯಿರಿ ಮತ್ತು ನಿಮ್ಮ ಖಾತೆಗೆ ಲಾಗಿನ್ ಮಾಡಿ ಅಥವಾ ಹೊಸ ಖಾತೆಯನ್ನು ರಚಿಸಿ.
ಸೆಟ್ಟಿಂಗ್‌ಗಳಿಗೆ ಹೋಗಿ: ಅಪ್ಲಿಕೇಶನ್‌ನ ಮೇಲ್ಭಾಗದ ಬಲ ಮೂಲೆಯಲ್ಲಿ ಇರುವ ಪ್ರೊಫೈಲ್ ಐಕಾನ್ ಮೇಲೆ ಟ್ಯಾಪ್ ಮಾಡಿ ಮತ್ತು ಸೆಟ್ಟಿಂಗ್‌ಗಳನ್ನು ಆಯ್ಕೆಮಾಡಿ.
‘ಕಾಲ್ಸ್’ ವಿಭಾಗವನ್ನು ತೆರೆಯಿರಿ: ಸೆಟ್ಟಿಂಗ್‌ಗಳಲ್ಲಿ ‘ಕಾಲ್ಸ್’ ವಿಭಾಗವನ್ನು ಆಯ್ಕೆಮಾಡಿ.
‘ಕಾಲ್ ಅನೌನ್ಸ್’ ಆಯ್ಕೆಯನ್ನು ಸಕ್ರಿಯಗೊಳಿಸಿ: ‘ಕಾಲ್ಸ್’ ವಿಭಾಗದಲ್ಲಿ ಕೆಳಗೆ ಸ್ಕ್ರೋಲ್ ಮಾಡಿ ಮತ್ತು ‘ಕಾಲ್ ಅನೌನ್ಸ್’ ಆಯ್ಕೆಯನ್ನು ಹುಡುಕಿ. ಅದನ್ನು ಸಕ್ರಿಯಗೊಳಿಸಲು ಟಾಗಲ್ ಸ್ವಿಚ್ ಅನ್ನು ಆನ್ ಮಾಡಿ.
ಈ ಹಂತಗಳನ್ನು ಅನುಸರಿಸಿದ ನಂತರ, ನಿಮಗೆ ಯಾರಾದರು ಕರೆ ಮಾಡಿದಾಗ, ಫೋನ್ ಸ್ವತಃ ಕರೆ ಮಾಡಿದವರ ಹೆಸರನ್ನು ಉಚ್ಚರಿಸುತ್ತದೆ. ನಂಬರ್ ನಿಮ್ಮ ಸಂಪರ್ಕ ಪಟ್ಟಿಯಲ್ಲಿ (contact list) ಉಳಿಸಲಾಗದಿದ್ದರೆ, ಫೋನ್ ಸಂಖ್ಯೆಯನ್ನು (phone number ) ಉಚ್ಚರಿಸುತ್ತದೆ. ಒಂದು ವೇಳೆ ಆನೌನ್ ನಂಬರ್(unknown) ಅಂದರೆ ಯಾರದ್ದಾದರೂ ನಂಬರ್ ಸೇವ್ ಆಗದೇ ಇದ್ದು, ಅವರು ಕರೆ ಮಾಡಿದಾಗ ಅವರ ಸಂಖ್ಯೆಯನ್ನು ಕೂಡ ಇದು ಉಚ್ಚರಿಸುತ್ತದೆ.
ಗಮನಿಸಿ:
ಈ ಫೀಚರ್ ಬಳಸಲು, ಟ್ರೂಕಾಲರ್ ಅಪ್ಲಿಕೇಶನ್‌ಗೆ(Truecaller application) ಸಂಪರ್ಕ ಪಟ್ಟಿಗೆ ಪ್ರವೇಶ ಮತ್ತು ಕರೆಗಳ ನಿರ್ವಹಣೆಯ ಅನುಮತಿಗಳನ್ನು ನೀಡಬೇಕು.
ಟ್ರೂಕಾಲರ್ ಅಪ್ಲಿಕೇಶನ್‌ನ ಇತ್ತೀಚಿನ ಆವೃತ್ತಿಯನ್ನು ಬಳಸುವುದು ಉತ್ತಮ.
ಈ ಫೀಚರ್ ಸಕ್ರಿಯಗೊಳಿಸಿದಾಗ, ಫೋನ್‌ನಲ್ಲಿ ಇತರ ಅಪ್ಲಿಕೇಶನ್‌ಗಳು ಅಥವಾ ಸೆಟ್ಟಿಂಗ್‌ಗಳು ಈ ಕಾರ್ಯಕ್ಷಮತೆಯನ್ನು ಅಡ್ಡಿಪಡಿಸದಂತೆ ನೋಡಿಕೊಳ್ಳಿ.
ಈ ಫೀಚರ್‌ನ್ನು ಬಳಸುವುದರಿಂದ, ನೀವು ಫೋನ್‌ನ್ನು ನೋಡದೆ ಯಾರು ಕರೆ ಮಾಡುತ್ತಿದ್ದಾರೆಂದು ತಿಳಿದುಕೊಳ್ಳಬಹುದು, ಇದು ಚಾಲನೆ ಮಾಡುವಾಗ ಅಥವಾ ಇತರ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವಾಗ ಬಹಳ ಉಪಯುಕ್ತವಾಗಿದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.