Earning ideas : ಮನೆಯ ಛಾವಣಿಯಲ್ಲಿ ಕೆಲ್ಸ ಮಾಡಿ ಕೈ ತುಂಬಾ ಹಣ ಗಳಿಸಿ! ಇಲ್ಲಿದೆ ವಿವರ

IMG 20241203 WA0002

ಮನೆಯ ಟೆರೆಸ್(Terrace) ಮೇಲೂ ಕಡಿಮೆ ಹೂಡಿಕೆಯಲ್ಲಿ ಉತ್ತಮ ಲಾಭ ಸಿಗುವ ವ್ಯವಾಹರ(business) ಮಾಡಬಹುದು!.

ಮನೆಯ ಟೆರೆಸ್‌ನ್ನು ಉಪಯೋಗಿಸಿಕೊಳ್ಳುವುದು ಇಂದು ಅತಿದೊಡ್ಡ ಅವಕಾಶಗಳಲ್ಲಿ ಒಂದು. ಕಡಿಮೆ ಹೂಡಿಕೆ(Low investment) ಮಾಡಿ ಉತ್ತಮ ಲಾಭ ಪಡೆಯಲು ಇದು ಸೂಕ್ತ ಸ್ಥಳವಾಗಿದೆ. ನಮ್ಮ ಪಾರಂಪರಿಕ ಹೊಲಗಳಿಗೆ ಸ್ಥಳದ ಕೊರತೆ, ನೀರಿನ ಸಮಸ್ಯೆ ಮತ್ತು ನಗರೀಕರಣದಿಂದಾಗಿ ನಾವು ಇಂದು ಹೆಚ್ಚು ಹೂಡಿಕೆ ಮಾಡಿ ಕಡಿಮೆ ಲಾಭ ಗಳಿಸುತ್ತಿದ್ದೇವೆ. ಆದರೆ ಮನೆಯ ಟೆರೆಸ್ ಅರ್ಥಪೂರ್ಣವಾಗಿ ಬಳಸಿ ಕಡಿಮೆ ಹೂಡಿಕೆ ಮಾಡಿ ಹೆಚ್ಚಿನ ಲಾಭ ಪಡೆಯಬಹುದು. ಯಾವೆಲ್ಲ ಮಾರ್ಗಗಳನ್ನು ಅನುಸರಿಸಿ ಲಾಭ ಪಡೆಯಬಹುದು(more profit) ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಮನೆಯ ಛವಾಣಿ ಮೇಲೆ ಕಡಿಮೆ ಹೂಡಿಕೆಯಲ್ಲಿ ಹೆಚ್ಚಿನ ಲಾಭ ಪಡೆಯುವ ಹಲವು ಉದ್ಯಮಗಳನ್ನು ಮಾಡಬಹುದು. ಟೆರೆಸ್ ಗಾರ್ಡನಿಂಗ್, ಸುಲಭ ಕೃಷಿ ವಿಧಾನಗಳು, ಮತ್ತು ಸಣ್ಣ ಪ್ರಮಾಣದ ಉದ್ಯಮಗಳು, ಇಂತಹ ಹಲವು ಆಯ್ಕೆಗಳು ಇಲ್ಲಿ ಲಭ್ಯವಿದ್ದು, ಟೆರೆಸ್‌ ಬಳಸಿಕೊಂಡು ಸ್ಥಿರ ಆದಾಯವನ್ನು ಖಾತ್ರಿಪಡಿಸಬಹುದು. ಒಟ್ಟಾರೆಯಾಗಿ ಈ ನಾಲ್ಕು ಉದ್ಯಮಗಳನ್ನು ಮಾಡುವ ಮೂಲಕ ಲಕ್ಷ ಸಂಪಾದನೆ ಮಾಡಬಹುದು.
ತಾರಸಿ ಕೃಷಿ
ಸೌರ ಫಲಕಗಳು
ಮೊಬೈಲ್ ಟವರ್‌ಗಳು
ಹೋರ್ಡಿಂಗ್‌ಗಳು ಮತ್ತು ಬ್ಯಾನರ್‌ಗಳು

ತಾರಸಿ ಕೃಷಿ (Terrace Gardening):

ಟೆರೆಸ್ ಮೇಲೆ ತಾರಸಿ ಕೃಷಿ ಮಾಡಿಕೊಂಡು ಒಳ್ಳೆಯ ಲಾಭವನ್ನು ಪಡೆಯಬಹುದು. ತಾರಸಿ ಕೃಷಿ ಎಂದರೆ ಮನೆಯ ಮೇಲೆ ಮಾಡುವ ಕೃಷಿ ಎಂದರ್ಥ. ಟೆರೆಸ್‌ ಮೇಲೆ ಸಸ್ಯಯುಕ್ತ ತೋಟವನ್ನು ಸೃಷ್ಟಿಸಬಹುದು, ಇದರಿಂದ ತಾಜಾ ತರಕಾರಿಗಳು ಮತ್ತು ಹಣ್ಣುಗಳು(Fresh vegetables and fruits) ಲಭ್ಯವಾಗುತ್ತವೆ. ಈ ಗಾರ್ಡನ್‌ಗಳಿಂದ ಆರೋಗ್ಯಕರ ಆಹಾರವನ್ನು ಪೂರೈಸಿಕೊಳ್ಳಬಹುದು, ಜೊತೆಗೆ ಹೆಚ್ಚುವರಿ ಉತ್ಪಾದನೆಯನ್ನು ಮಾರಾಟ ಮಾಡುವ ಮೂಲಕ ಆದಾಯವನ್ನೂ ಗಳಿಸಬಹುದು. ಅತಿದೊಡ್ಡ ಲಾಭವೆಂದರೆ, ಇದು ಪರಿಸರ ಸ್ನೇಹಿ(Environmental friendly) ವಿಧಾನವಾಗಿದೆ ಮತ್ತು ನಾವು ಬೆಳೆಯುವ ಉತ್ಪನ್ನಗಳು ವಿಷರಹಿತವಾಗಿರುತ್ತವೆ. ಟೆರೆಸ್ ಮೇಲೆ ವಾತಾವರಣ ತಾಪಮಾನ ನಿಯಂತ್ರಿಸುತ್ತದೆ. ತಾರಸಿ ಕೃಷಿಯಲ್ಲಿ ತರಕಾರಿಗಳನ್ನು ಪಾಲಿಬ್ಯಾಗ್‌ಗಳಲ್ಲಿ(polybags) ಬೆಳೆಯುತ್ತಾರೆ. ಡ್ರಿಪ್ ವ್ಯವಸ್ಥೆಯ(Drip system) ಮೂಲಕ ನೀರುಣಿಸಲಾಗುತ್ತದೆ ಇದರಿಂದ ನೀರನ್ನು ಸಂರಕ್ಷಿಸಬಹುದು. ಹಾಗೂ ಈ ತೋಟ ಮನಸ್ಸಿಗೆ ಆನಂದ ನೀಡುತ್ತದೆ. ಕಡಿಮೆ ಜಾಗದಲ್ಲಿ ಹೆಚ್ಚು ಉತ್ಪಾದನೆ ಮಾಡಬಹುದಾದ ಅನುಕೂಲಕರ ವಿಧಾನ ಇದು.

ಸೌರ ಫಲಕಗಳು(Solar panels):

ಟೆರೆಸ್ ಮೇಲೆ ಸೌರ ಫಲಕಗಳನ್ನು ಸ್ಥಾಪಿಸಲು ಮುಂಚಿತವಾಗಿ ಪ್ಲಾನ್ ಮಾಡಬೇಕು, ವೃತ್ತಿಪರ ತಜ್ಞರಿಂದ(professional experts) ಸಲಹೆಗಳನ್ನು ತೆಗೆದುಕೊಳ್ಳ ಬೇಕು. ಇನ್ನು ಸೌರ ಫಲಕಗಳನ್ನು(Solar panels) ಅಳವಡಿಸಿಕೊಳ್ಳುವುದರಿಂದ ಉತ್ತಮ ಲಾಭವನ್ನು ಪಡೆದುಕೊಳ್ಳಬಹುದು. ಆದರೆ ನೇರವಾಗಿ ಹಣ ನಿಮ್ಮ ಕೈಗೆ ಸಿಗುವುದಿಲ್ಲ ಅದರ ಬದಲಿಗೆ ಪರೋಕ್ಷವಾಗಿ ವಿದ್ಯುತ್ ಖರ್ಚು(Power consumption) ತಗ್ಗಿಸುತ್ತದೆ. ಪ್ರತಿ ತಿಂಗಳು ಬರುವ ವಿದ್ಯುತ್ ಬಿಲ್ ಸ್ಥಗಿತವಾಗುತ್ತದೆ. ಸೌರ ಫಲಕಗಳನ್ನು ನಿರ್ಮಿಸಲು ಸ್ವಲ್ಪ ಮಟ್ಟಿನ ಹೂಡಿಕೆಯನ್ನು ಮಾಡಬೇಕು. ಅದಕ್ಕಾಗಿ ಸರ್ಕಾರ ಸೌರ ಫಲಕಗಳನ್ನು ನಿರ್ಮಿಸಲು  ಅನುದಾನವನ್ನೂ ಕೂಡ ನೀಡುತ್ತಿದೆ.

ಮೊಬೈಲ್ ಟವರ್‌ಗಳು(Mobile towers):

ಟೆರೆಸ್ ಮೇಲೆ ಮೊಬೈಲ್ ಟವರ್(Mobile towers) ಸ್ಥಾಪಿಸಲು ಮೊದಲು ಟೆಲಿಕಾಂ ಕಂಪನಿಗಳ(telecom companies) ಅನುಮತಿ ತೆಗೆದುಕೊಳ್ಳುವುದು ಅಗತ್ಯ. ಖಾಲಿ ಇರುವ ಮನೆಯ ಟೆರೆಸ್ ಅನ್ನು ಮೊಬೈಲ್ ಕಂಪನಿಗಳಿಗೆ ಬಾಡಿಗೆಗೆ ನೀಡುವ ಮೂಲಕ ಒಳ್ಳೆಯ ಲಾಭವನ್ನು ಪಡೆದುಕೊಳ್ಳಬಹುದು. ಮೊಬೈಲ್ ಕಂಪನಿಗಳು  ಮೊಬೈಲ್ ಟವರ್‌ಗಳನ್ನು ಸ್ಥಾಪಿಸುವ ಮುನ್ನ ಕಟ್ಟಡದ ಶಕ್ತಿ ಮತ್ತು ಸ್ಥಿರತೆಯನ್ನು ಪರೀಕ್ಷಿಸುತ್ತವೆ. ಟೆರೆಸ್ ಮೇಲೆ ಮೊಬೈಲ್ ಟವರ್ ಸ್ಥಾಪಿಸುವುದರಿಂದ ಮನೆಯ ಮಾಲಿಕ ಒಳ್ಳೆಯ ಲಾಭವನ್ನುಗಳಿಸಬಹುದು.

ಹೋರ್ಡಿಂಗ್‌ಗಳು ಮತ್ತು ಬ್ಯಾನರ್‌ಗಳು(Hoardings and banners):

ಟೆರೆಸ್ ಮುಖ್ಯ ಅಥವಾ ದೂರದ ರಸ್ತೆಗೆ ಸುಲಭವಾಗಿ ಕಾಣುವಂತೆ ಇದ್ದರೆ ನಾವು ಅಲ್ಲಿ ಹೋರ್ಡಿಂಗ್‌ಗಳು ಮತ್ತು ಬ್ಯಾನರ್‌ಗಳ ಅಳವಡಿಕೆಯನ್ನು ಮಾಡಬಹುದು. ಟೆರೆಸ್ ಮೇಲೆ ಹೋರ್ಡಿಂಗ್‌ಗಳು ಮತ್ತು ಬ್ಯಾನರ್‌ಗಳನ್ನು(Hoardings and banners) ಅಳವಡಿಸುವುದರಿಂದ ವ್ಯಾಪಾರ ಅಥವಾ ಕಾರ್ಯಕ್ರಮಗಳಿಗೆ ಪ್ರಚಾರವನ್ನು(Promotion) ಸುಲಭವಾಗಿ ಮಾಡಬಹುದು. ಇದು ಹೆಚ್ಚು ಜನರ ಗಮನ ಸೆಳೆಯುವ ಮೂಲಕ ಬ್ರಾಂಡ್‌(Brand) ದೃಷ್ಟಿಯ ಹೆಚ್ಚಳಕ್ಕೆ ಸಹಾಯ ಮಾಡುತ್ತದೆ. ಪ್ರಾದೇಶಿಕ ಸ್ಥಳಗಳಲ್ಲಿ(regional locations) ಗಮನಾರ್ಹ ಮಾರ್ಕೆಟಿಂಗ್‌ಗೆ(marketing) ಇದು ಕಡಿಮೆ ವೆಚ್ಚದ, ಪರಿಣಾಮಕಾರಿ ಮಾರ್ಗವಾಗಿದೆ. ಆದರೆ ಇದ್ದಕ್ಕಾಗಿ ಹೋರ್ಡಿಂಗ್ ಕಂಪನಿಗಳನ್ನು(Hoarding companies) ಸಂಪರ್ಕಿಸಬೇಕು.

ಈ ಮಾಹಿತಿಗಳನ್ನು ಓದಿ

 


ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!