ಇದೀಗ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ(Druva sarja) ರವರ ಹೊಸ ಸಿನೆಮಾ ಮಾರ್ಟಿನ್(Martin) ತೆರೆ ಕಾಣಲು ಸಜ್ಜಾಗಿದೆ. ದ್ರುವ ಸರ್ಜಾ ಅಭಿಮಾನಿಗಳು ಕಾತುರದಿಂದ ಸಿನೆಮಾ ನೋಡಲು ಕಾಯುತ್ತಿದ್ದಾರೆ. ಹೇಳಿ ಕೇಳಿ ‘ಮಾರ್ಟಿನ್’ ಧ್ರುವ ಸರ್ಜಾ ರವರ ಸಿನಿಮಾ. ಈ ಸಿನಿಮಾದ ಬಗ್ಗೆ ಒಂದಿಷ್ಟು ಕಿರುಪರಿಚಯ ಬೇಕೇ ಹಾಗಿದ್ದಲ್ಲಿ ವರದಿಯನ್ನು ಸಂಪೂರ್ಣವಾಗಿ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.
ಹಾಗಿದ್ಮೇಲೆ ಈ ಸಿನಿಮಾದಲ್ಲಿ ಖಡಕ್ ಲುಕ್, ಭರ್ಜರಿ ಡೈಲಾಗ್ಸ್, ಮಸ್ತ್ ಆಕ್ಷನ್‌ಅನ್ನು ನೋಡಲು ಅಭಿಮಾನಿಗಳು ನಿರೀಕ್ಷೆ ಮಾಡೇ ಮಾಡ್ತಾರೆ. ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆ ‘ಮಾರ್ಟಿನ್’ ಫಸ್ಟ್ ಲುಕ್ ಟೀಸರ್ ಖಡಕ್ ಆಗಿದೆ. ಮಾರ್ಟಿನ್ ಆಗಿ ಹೊಸ ಲುಕ್‌ನಲ್ಲಿ ಧ್ರುವ ಸರ್ಜಾ ಕಾಣಿಸಿಕೊಂಡಿದ್ದಾರೆ. ಟೀಸರ್‌ನಲ್ಲಿರುವ ‘ಇಟ್ಸ್ ನಾಟ್ ಎ ಜೋಕ್’ ಡೈಲಾಗ್ ಎಂಬ ಡೈಲಾಗ್ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ‘ಅದ್ಧೂರಿ’ ನಂತರ ‘ಮಾರ್ಟಿನ್’ ಮೂಲಕ ಧ್ರುವ ಸರ್ಜಾ ರವರ ಇನ್ನೊಂದು ಹೊಸ ಸಿನಿಮಾ ಸ್ಯಾಂಡಲ್‌ವುಡ್‌ನಲ್ಲಿ ಹೈಪ್ ಕ್ರಿಯೇಟ್ ಮಾಡಲು ರೆಡಿ ಆಗಿದೆ.
ವಿದೇಶಕ್ಕೆ ಹಾರಲು ಲಗೇಜ್ ಪ್ಯಾಕ್ ಮಾಡಿದ ಧ್ರುವ ಸರ್ಜಾ :
ಈ ಸಿನೆಮಾ ದ ಹಲವು ವಿಶೇಷ ತುಣುಕುಗಳಿಗಾಗಿ ಈಗಾಗಲೇ ಧ್ರುವ ಸರ್ಜಾ ವಿದೇಶಕ್ಕೆ ಹೊರಡಲು ಲಗೇಜ್ ಪ್ಯಾಕ್ ಮಾಡಿ ರೆಡಿಯಾಗಿದ್ದಾರೆ. ವಿಶ್ವದ ದುಬಾರಿ ಕಾರುಗಳಲ್ಲಿ ಧ್ರುವ ಸವಾರಿ ಮಾಡಲು ಮತ್ತು ಶೂಟ್ ಮಾಡಲು ರೆಡಿಯಾಗಿದ್ದಾರೆ. 500 ಮಾಡೆಲ್ಸ್, ಸೂಪರ್ ಕಾರು, ಸ್ಪೀಡ್ ಬೋಟ್, ಮತ್ತು ಚಾಪರ್ ಗಳು ರೇಡಿಯಾಗಿವೆ.
ಮಾರ್ಟಿನ್ ಸಿನೆಮಾದ ಫೈನಲ್ ಶೂಟ್ ಇದಾಗಿದ್ದು. ಮಾರ್ಟಿನ್ ಸಿನಿಮಾದ ಒಂದು ಹಾಡಿಗೆ ಕೋಟಿ ಕೋಟಿ ಬಂಡವಾಳ ಹಾಕ್ತಿದ್ದಾರೆ ನಿರ್ಮಾಪಕ ಉದಯ್ ಮೆಹ್ತಾ. ಮಲೇಶಿಯಾದಲ್ಲಿ ಮಾರ್ಟಿನ್ ಇಂಟ್ರೊಡಕ್ಷನ್ ಸಾಂಗ್ ಶೂಟ್ ಮಾಡಲು ಪ್ಲ್ಯಾನ್ ಆಗಿದೆ. 500 ಜನ ಟಾಪ್ ಮಾಡೆಲ್ಸ್ ಈ ಹಾಡಿನಲ್ಲಿ ಕುಣಿಯಲು ರೆಡಿಯಾಗಿದ್ದಾರೆ. ಅಷ್ಟೇ ಅಲ್ಲದೆ ಜಗತ್ತಿನ ವಿಶೇಷ ಕಾಸ್ಟ್ಲಿ ಕಾರುಗಳನ್ನ ಈ ಸಾಂಗ್ ಶೂಟ್‌ನಲ್ಲಿ ಬಳಸಲಾಗ್ತಿದೆ.
ಮಾರ್ಟಿನ್ ಸಿನಿಮಾದಲ್ಲಿ ಹೊಸ ರೀತಿಯ ಆ್ಯಕ್ಷನ್ ಸೀನ್‌ಗಳಿವೆ. ಇವುಗಳನ್ನ ಅಷ್ಟೇ ಎಫೆಕ್ಟಿವ್ ಆಗಿಯೇ ತೋರಿಸೋ ಕೆಲಸವು ಈಗಾಗಲೇ ಶುರು ಆಗಿದೆ. ಸಿನಿಮಾದಲ್ಲಿ ಬರುವ ಪ್ರಮುಖ ಆ್ಯಕ್ಷನ್ ದೃಶ್ಯಗಳಿಗೆ ಹೈ ಕ್ವಾಲಿಟಿ VFX ಕೆಲಸ ನಡೆಯುತ್ತಿದೆ. ಸಿನಿಮಾದಲ್ಲಿ ಬೈಕ್ ಚೇಜಿಂಗ್ ಕೂಡ ಇದೆ. ಇದರ ರೋಮಾಂಚಕ ದೃಶ್ಯಗಳಿಗೆ ಇದೀಗ VFX ಸ್ಪರ್ಶ ನೀಡಲಾಗುತ್ತಿದೆ.
ಮಾರ್ಟಿನ್’ ಸಿನೆಮಾದ ಕಥೆ :
ಕಾಲೇಜ್ ಬ್ಯಾಕ್‌ಡ್ರಾಪ್‌ನಲ್ಲಿ ನಡೆಯುವ ಕಥೆ ಹೊಂದಿರುವ ಸಿನಿಮಾ ‘ಮಾರ್ಟಿನ್’. ಇದು ಔಟ್ ಅಂಡ್ ಔಟ್ ಕಮರ್ಶಿಯಲ್ ಆಕ್ಷನ್ ಥ್ರಿಲ್ಲರ್ ಸಿನಿಮಾ. ಈ ಚಿತ್ರದಲ್ಲಿ ನವಿರಾದ ಪ್ರೇಮಕಥೆಯೂ ಇರಲಿದೆ. ಲವ್ ಸ್ಟೋರಿ ಹಾಗೂ ಥ್ರಿಲ್ಲರ್ ಅಂಶಗಳನ್ನು ಸೇರಿಸಿ ಚಿತ್ರಕಥೆಯನ್ನು ಸಿದ್ಧಪಡಿಸಲಾಗಿದೆ.
ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ
ಐದು ಭಾಷೆಗಳಲ್ಲಿ ಬಿಡುಗಡೆ :
ಮಾರ್ಟಿನ್’ ಚಿತ್ರ ಸದ್ಯದಲ್ಲೇ ತೆರೆ ಕಾಣಲಿದ್ದು, ಡಿಸೆಂಬರ್ 20 ರೊಳಗೆ ಶೂಟಿಂಗ್ ಕಂಪ್ಲೀಟ್ ಮಾಡಲು ಚಿತ್ರತಂಡ ಪ್ಲಾನ್ ಹಾಕಿಕೊಂಡಿದೆ. ನಾಲ್ಕು ತಿಂಗಳೊಳಗೆ ಬ್ಯಾಕ್-ಟು-ಬ್ಯಾಕ್ ಶೆಡ್ಯೂಲ್‌ಗಳಲ್ಲಿ ‘ಮಾರ್ಟಿನ್’ ಶೂಟಿಂಗ್ ನಡೆಯಲಿದೆ. ‘ಮಾರ್ಟಿನ್’ ಸಿನಿಮಾ ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಗಳಲ್ಲಿ ತೆರೆಗೆ ಬರಲಿದೆ.
ಇದನ್ನೂ ಓದಿ: Navaratri Festival – ನವರಾತ್ರಿಯ ಉಪವಾಸ ಮಾಡುವವರಿಗೆ ಇದು ಗೊತ್ತಿರಲೇ ಬೇಕು..! ಇಲ್ಲಿದೆ ಮಾಹಿತಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ಲೇಖನ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ