ರಾಜ್ಯ ಸರ್ಕಾರದಿಂದ ಆಸ್ತಿ ತೆರಿಗೆ ಪಾವತಿಗೆ ಹೊಸ ಕ್ರಮ ಜಾರಿ, ಇಲ್ಲಿದೆ ಸಂಪೂರ್ಣ ಮಾಹಿತಿ  

Picsart 25 03 04 23 36 43 0101

WhatsApp Group Telegram Group

ಕರ್ನಾಟಕ ಸರ್ಕಾರದಿಂದ ಹೊಸ ಕ್ರಮ: ಗ್ರಾಮೀಣ ಜನತೆಗೆ ಆಸ್ತಿ ತೆರಿಗೆ ಪಾವತಿಗೆ ಆನ್‌ಲೈನ್ ಸೌಲಭ್ಯ

ರಾಜ್ಯದ ಗ್ರಾಮೀಣ ಜನತೆಗೆ ಕರ್ನಾಟಕ ಸರ್ಕಾರವು (State government) ಮಹತ್ವದ ಸೌಲಭ್ಯ ಒದಗಿಸಿದ್ದು, ಇನ್ಮುಂದೆ ಯುಪಿಐ (Unified Payments Interface) ಮೂಲಕವೇ ಆಸ್ತಿ ತೆರಿಗೆ ಪಾವತಿಸುವ ಅವಕಾಶ ಲಭ್ಯವಾಗಿದೆ. ಈ ನಿರ್ಧಾರವು ಗ್ರಾಮೀಣ ಪ್ರದೇಶದ ಜನರಿಗೆ ನೇರ ಲಾಭ ನೀಡಲಿದ್ದು, ಸರ್ಕಾರಿ ಸೇವೆಗಳನ್ನು ಡಿಜಿಟಲ್ ಪ್ಲಾಟ್‌ಫಾರ್ಮ್ ಮೂಲಕ ಸುಗಮಗೊಳಿಸಲು ಸಹಾಯ ಮಾಡಲಿದೆ. ಹಾಗಿದ್ದರೆ ಡಿಜಿಟಲ್ ಪ್ಲಾಟ್‌ಫಾರ್ಮ್ ಮೂಲಕ ಆಸ್ತಿ ತೆರಿಗೆ ಪಾವತಿಸುವ ವಿಧಾನ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಇದು ಭಾರತೀಯ ಗಣರಾಜ್ಯ ಸರ್ಕಾರದ ಡಿಜಿಟಲ್ ಇಂಡಿಯಾ ಯೋಜನೆಗೆ (For the Digital India project of the Government of the Republic of India) ಸಹಕಾರ ನೀಡುವ ಒಂದು ದೊಡ್ಡ ಹೆಜ್ಜೆಯಾಗಿದ್ದು, ಗ್ರಾಮೀಣ ಜನತೆಗೆ ಆಧುನಿಕ ಪಾವತಿ ವ್ಯವಸ್ಥೆಯ ಸೌಲಭ್ಯವನ್ನು ಬಳಕೆ ಮಾಡಿಕೊಳ್ಳಲು ಪ್ರೋತ್ಸಾಹಿಸುತ್ತದೆ. ಇದರಿಂದ ಗ್ರಾಮ ಪಂಚಾಯಿತಿಗಳಿಗೆ ತೆರಿಗೆ ಸಂಗ್ರಹದ ವ್ಯವಸ್ಥೆ ಸುಲಭವಾಗಲಿದೆ ಮತ್ತು ಪಾರದರ್ಶಕತೆ ಹೆಚ್ಚಾಗಲಿದೆ.

ಡಿಜಿಟಲ್ ಪ್ಲಾಟ್‌ಫಾರ್ಮ್ (Digital platform) ಮೂಲಕ ಆಸ್ತಿ ತೆರಿಗೆ ಪಾವತಿಸುವ ವಿಧಾನಗಳು ಹೀಗಿವೆ :

ಗ್ರಾಮೀಣ ಪ್ರದೇಶದ ನಿವಾಸಿಗಳು ಮೂರು ರೀತಿಯ ವಿಧಾನಗಳ ಮೂಲಕ ತಮ್ಮ ಆಸ್ತಿ ತೆರಿಗೆ ಪಾವತಿಸಬಹುದು:

1. ಬಾಪೂಜಿ ಸೇವಾ ಕೇಂದ್ರ (BSK) ಮೂಲಕ:
ನಿಮ್ಮ ಗ್ರಾಮ ಪಂಚಾಯತಿಯ ಬಾಪೂಜಿ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಮತ್ತು ನೇರವಾಗಿ ಪಾವತಿ ಮಾಡಿ. ಅಧಿಕಾರಿಗಳು ನಿಮ್ಮ ಆಸ್ತಿ ವಿವರ ಪರಿಶೀಲಿಸಿ, ಪಾವತಿ ಪ್ರಕ್ರಿಯೆಯನ್ನು ಸುಗಮಗೊಳಿಸುತ್ತಾರೆ.

2. ಬಾಪೂಜಿ ಸೇವಾ ಕೇಂದ್ರದ ಅಧಿಕೃತ ವೆಬ್‌ಸೈಟ್ (Website) :
https://bsk.karnataka.gov.in ವೆಬ್‌ಸೈಟ್ ಗೆ ಭೇಟಿ ನೀಡಿ.
ಸೇವೆಗಳ (Services) ಐಕಾನ್ ಮೇಲೆ ಕ್ಲಿಕ್ ಮಾಡಿ.
ಆಸ್ತಿ ಸಂಬಂಧಿತ ವಿಭಾಗ ಆಯ್ಕೆ ಮಾಡಿ.
“ಆಸ್ತಿ ತೆರಿಗೆ ಪಾವತಿ” ಆಯ್ಕೆಯನ್ನು ಸಿಲೆಕ್ಟ್ ಮಾಡಿ.
ನಿಮ್ಮ ಆಸ್ತಿ ಐಡಿ (Property ID) ನಮೂದಿಸಿ ಮತ್ತು ಪಾವತಿಸಿರಿ.

3. ಯುಪಿಐ ಆ್ಯಪ್‌ಗಳ ಮೂಲಕ (PhonePe, Paytm, BHIM):
ಗ್ರಾಮೀಣ ಜನತೆ ಈಗ ತಮ್ಮ ಸ್ಮಾರ್ಟ್‌ಫೋನ್‌ನಲ್ಲಿ PhonePe, Paytm ಅಥವಾ BHIM ಆ್ಯಪ್ ಬಳಸಿ, ನೇರವಾಗಿ ಆಸ್ತಿ ತೆರಿಗೆ ಪಾವತಿಸಬಹುದು. ಇದರಲ್ಲಿ ಸರ್ವಿಸ್ ಗಳು ಕ್ಯಾಶ್‌ಲೆಸ್ ಹಾಗೂ ವೇಗವಾಗಿ ಲಭ್ಯವಾಗುವಂತೆ ಮಾಡುತ್ತದೆ.

ಬಾಪೂಜಿ ಸೇವಾ ಕೇಂದ್ರ ಮೊಬೈಲ್ ಆಪ್ ಬಳಸಿ ಸೇವೆ ಪಡೆಯುವ ವಿಧಾನ :

ಈಗ ಬಾಪೂಜಿ ಸೇವಾ ಕೇಂದ್ರದ ಅಧಿಕೃತ ಮೊಬೈಲ್ ಅಪ್ಲಿಕೇಶನ್ ಗೂಗಲ್ ಪ್ಲೇಸ್ಟೋರ್‌ (Mobile Apllication google playstore) ನಲ್ಲಿ ಲಭ್ಯವಿದೆ.
“Bapuji Seva Kendra” ಎಂದು Google Play Store ನಲ್ಲಿ ಹುಡುಕಿ.
ಆಪ್ ಡೌನ್‌ಲೋಡ್ ಮಾಡಿ ಮತ್ತು ನಿಮ್ಮ ಮೊಬೈಲ್ ಸಂಖ್ಯೆ ಮತ್ತು OTP ಮೂಲಕ ಲಾಗಿನ್ ಆಗಿ.
ಇದರಿಂದ ಬಾಪೂಜಿ ಸೇವಾ ಕೇಂದ್ರದ (Bapuji Seva Kendra) ವಿವಿಧ ಸೇವೆಗಳನ್ನು ನಿಮ್ಮ ಮೊಬೈಲ್‌ನಲ್ಲಿ ನೇರವಾಗಿ ಪಡೆಯಬಹುದು.

ಆಸ್ತಿ ತೆರಿಗೆ ರಸೀದಿ ಡೌನ್‌ಲೋಡ್ ಮಾಡುವುದು ಹೇಗೆ?:

https://bsk.karnataka.gov.in ವೆಬ್‌ಸೈಟ್‌ಗೆ ಭೇಟಿ ನೀಡಿ.
ಸೇವೆಗಳ (Services) ಐಕಾನ್ ಮೇಲೆ ಕ್ಲಿಕ್ ಮಾಡಿ.
“ಆಸ್ತಿ ತೆರಿಗೆ ರಶೀದಿ ಡೌನ್ಲೋಡ್” ಆಯ್ಕೆ ಮಾಡಿ.
ನಿಮ್ಮ ಆಸ್ತಿ ಐಡಿ (Property ID) ನಮೂದಿಸಿ.
ಆಸ್ತಿ ತೆರಿಗೆ ಪಾವತಿ ವಿವರಗಳನ್ನು ಪರಿಶೀಲಿಸಿ ಮತ್ತು ರಸೀದಿಯನ್ನು ಡೌನ್‌ಲೋಡ್ ಮಾಡಿ.

ಗ್ರಾಮೀಣ ಜನತೆಗೆ ಡಿಜಿಟಲ್ ವ್ಯವಸ್ಥೆಯು (Digital System) ಯಾವ ರೀತಿಯ ಲಾಭಗಳನ್ನು ಮಾಡಿಕೊಡಲಿದೆ: 

ಈ ಹೊಸ ವ್ಯವಸ್ಥೆಯು ಗ್ರಾಮೀಣ ಜನತೆಗೆ ಹಲವು ಲಾಭಗಳನ್ನು ನೀಡುತ್ತಿದ್ದು, ಇದರಲ್ಲಿ ಹಳೆಯ ಕಾಲದಂತೆ ಮ್ಯಾನುಯಲ್ ಹಣ ಪಾವತಿ ತಂತ್ರವನ್ನು ಅನುಸರಿಸದೆ, ನೇರವಾಗಿ ಡಿಜಿಟಲ್ ಪಾವತಿ (Digital payment) ಮಾಡಬಹುದು.
ಯಾವುದೇ ಮಧ್ಯವರ್ತಿಗಳ ಅವಶ್ಯಕತೆ ಇಲ್ಲದೆ, ಸ್ವತಃ ಭದ್ರ ಮತ್ತು ಸುಲಭ ಪಾವತಿ ವ್ಯವಸ್ಥೆ ಲಭ್ಯವಿದೆ.
ಗ್ರಾಮೀಣ ಪ್ರದೇಶದ ಜನತೆ ನಗದು ಕಡಿಮೆ ಬಳಸಲು ಪ್ರೋತ್ಸಾಹ ನೀಡಲಿದ್ದು,  ಡಿಜಿಟಲ್ ಪಾವತಿ ಪರಂಪರೆಗೆ ಬೆಂಬಲ ನೀಡಲಿದೆ.
ಮೊಬೈಲ್ ಆಪ್, ವೆಬ್‌ಸೈಟ್ ಅಥವಾ ನೇರವಾಗಿ ಗ್ರಾಮ ಪಂಚಾಯತಿ (Gram Panchayath) ಕೇಂದ್ರದಲ್ಲಿ ಸೇವೆ ಪಡೆಯುವ ಆಯ್ಕೆ.
ಲಘು ಪಾವತಿ ವಿಧಾನದಿಂದ ಸಮಯದ ಉಳಿತಾಯ ಮತ್ತು ಸರಳೀಕೃತ ಪಾವತಿ ವ್ಯವಸ್ಥೆಗೆ ಅನುವು ಮಾಡಿಕೊಡಲಾಗಿದೆ.

ಕರ್ನಾಟಕ ಸರ್ಕಾರದ ಈ ಹೊಸ ನೀತಿಯು ಗ್ರಾಮೀಣ ಜನತೆಗೆ ಆಸ್ತಿ ತೆರಿಗೆ ಪಾವತಿಸಲು ಅನುವು ಮಾಡಿಕೊಡುವುದರೊಂದಿಗೆ, ಡಿಜಿಟಲ್ ವ್ಯವಸ್ಥೆಯ ಬಳಕೆಯನ್ನು ಉತ್ತೇಜಿಸುತ್ತದೆ. ಇದು ಕೇವಲ ತೆರಿಗೆ ಪಾವತಿ ವ್ಯವಸ್ಥೆಯ ಸುಧಾರಣೆಯಷ್ಟೇ ಅಲ್ಲ, ಡಿಜಿಟಲ್ ಆರ್ಥಿಕತೆಯನ್ನು (Digital Economic) ಹಳ್ಳಿಗಳ ಮಟ್ಟದಲ್ಲಿಯೂ ಬೆಳೆಸುವ ಗುರಿಯನ್ನೂ ಹೊಂದಿದೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!