ಹೊಸ ಆರ್ಥಿಕ ವರ್ಷ ಆರಂಭವಾಗುತ್ತಿದ್ದಂತೆ, ಜನರು ತಮ್ಮ ಬ್ಯಾಂಕಿಂಗ್ ಕಾರ್ಯಗಳ(Banking related works) ಯೋಜನೆಯನ್ನು ಮುಂಚಿತವಾಗಿ ಮಾಡಿಕೊಳ್ಳುವುದು ಅವಶ್ಯಕ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಮಾರ್ಚ್ 2025ರ ಬ್ಯಾಂಕ್ ರಜೆಗಳ ಪಟ್ಟಿಯನ್ನು (March 2025 bank holiday list ) ಪ್ರಕಟಿಸಿದೆ, ಇದರಲ್ಲಿ ಒಟ್ಟು 13 ರಜೆಗಳು ಇವೆ. ರಾಜ್ಯಕ್ಕನುಗುಣವಾಗಿ ಹಬ್ಬಗಳು ಮತ್ತು ವಿಶೇಷ ದಿನಗಳ ಹಿನ್ನೆಲೆಯಲ್ಲಿ ಈ ರಜೆಗಳನ್ನು ನಿರ್ಧರಿಸಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಮಾರ್ಚ್ 2025: ಬ್ಯಾಂಕ್ ರಜೆಗಳ ಸಂಪೂರ್ಣ ಲಿಸ್ಟ್:
ಮಾರ್ಚ್ 2 (ಭಾನುವಾರ)
ದೇಶದಾದ್ಯಂತ ಎಲ್ಲಾ ಬ್ಯಾಂಕ್‌ಗಳಿಗೆ ರಜೆ.
ಮಾರ್ಚ್ 7 (ಶುಕ್ರವಾರ) – ಚಾಪ್ಚರ್ ಕುಟ್
ಮಿಜೋರಂ (ಐಜ್ವಾಲ್) ನಲ್ಲಿ ಈ ಹಬ್ಬದ ಕಾರಣ ಬ್ಯಾಂಕ್‌ಗಳು ಮುಚ್ಚಿರುತ್ತವೆ.
ಮಾರ್ಚ್ 9 (ಎರಡನೇ ಶನಿವಾರ)
ಎಲ್ಲಾ ರಾಜ್ಯಗಳಲ್ಲಿಯೂ ಶನಿವಾರದ ರಜೆ ಅನ್ವಯವಾಗುತ್ತದೆ.
ಮಾರ್ಚ್ 13 (ಗುರುವಾರ) – ಹೋಳಿಕಾ ದಹನ್
ಡೆಹ್ರಾಡೂನ್, ಕಾನ್ಪುರ, ಲಕ್ನೋ, ರಾಂಚಿ, ತಿರುವನಂತಪುರಂ ಬ್ಯಾಂಕ್‌ಗಳಿಗೆ ರಜೆ.
ಮಾರ್ಚ್ 14 (ಶುಕ್ರವಾರ) – ಹೋಳಿ ಹಬ್ಬ
ದೇಶದ ಬಹುತೇಕ ರಾಜ್ಯಗಳಲ್ಲಿ ಬ್ಯಾಂಕ್‌ಗಳಿಗೆ ರಜೆ.
ಮಾರ್ಚ್ 15 (ಶನಿವಾರ) – ಯಾವೋಸಿಂಗ್ ದಿನ
ಭುವನೇಶ್ವರ, ಇಂಫಾಲ್, ಪಾಟ್ನಾ ಹಾಗೂ ಇನ್ನಿತರ ನಗರಗಳಲ್ಲಿ ರಜೆ.
ಮಾರ್ಚ್ 16 (ಭಾನುವಾರ)
ಭಾರತದೆಲ್ಲೆಡೆ ಬ್ಯಾಂಕ್‌ಗಳು ಮುಚ್ಚಿರುತ್ತವೆ.
ಮಾರ್ಚ್ 22 (ನಾಲ್ಕನೇ ಶನಿವಾರ)
ಎಲ್ಲಾ ಬ್ಯಾಂಕ್‌ಗಳಿಗೂ ಮಾಸಿಕ ಶನಿವಾರದ ರಜೆ.
ಮಾರ್ಚ್ 23 (ಭಾನುವಾರ)
ನಿಯಮಿತ ಭಾನುವಾರದ ರಜೆ.
ಮಾರ್ಚ್ 27 (ಗುರುವಾರ) – ಶಬ್-ಎ-ಖಾದ್ರ್
ಜಮ್ಮು ಮತ್ತು ಶ್ರೀನಗರ ನಲ್ಲಿ ಬ್ಯಾಂಕ್‌ಗಳಿಗೆ ರಜೆ.
ಮಾರ್ಚ್ 28 (ಶುಕ್ರವಾರ) – ಜಮಾತ್-ಉಲ್-ವಿದಾ
ಜಮ್ಮು ಮತ್ತು ಶ್ರೀನಗರ ನಲ್ಲಿ ಮತ್ತೊಂದು ರಜೆ.
ಮಾರ್ಚ್ 30 (ಭಾನುವಾರ)
ಎಲ್ಲ ರಾಜ್ಯಗಳಲ್ಲಿಯೂ ಭಾನುವಾರದ ರಜೆ ಅನ್ವಯವಾಗುತ್ತದೆ.
ಮಾರ್ಚ್ 31 (ಸೋಮವಾರ) – ರದ್ದು ಮಾಡಲಾದ ರಜೆ.ಮೊದಲಿಗೆ RBI ಈ ದಿನ ರಜೆ ಘೋಷಿಸಿತ್ತು, ಆದರೆ ಇದನ್ನು ಈಗ ರದ್ದು ಮಾಡಲಾಗಿದೆ. ಹಾಗಾಗಿ ಬ್ಯಾಂಕ್‌ಗಳು ಕಾರ್ಯ ನಿರ್ವಹಿಸಲಿವೆ.
ನಿಮ್ಮ ಬ್ಯಾಂಕಿಂಗ್ ಕಾರ್ಯಗಳನ್ನು ಮುಂಚಿತವಾಗಿ ಯೋಜನೆ ಮಾಡಿಕೊಳ್ಳಿ, ಹೌದು ಏಕೆಂದರೆ
ಮಾರ್ಚ್ ತಿಂಗಳಲ್ಲಿ ಒಟ್ಟು 13 ದಿನಗಳ ರಜೆಗಳು ಇರುವುದರಿಂದ, ಬ್ಯಾಂಕ್ ಸಂಬಂಧಿತ ಕಾರ್ಯಗಳನ್ನು ಮುಂಚಿತವಾಗಿ ಪೂರ್ಣಗೊಳ್ಳಿಸುವುದು ಉತ್ತಮ. ವಿಶೇಷವಾಗಿ ಹೋಳಿ ಹಬ್ಬದ (Holi festival) ಸಮಯದಲ್ಲಿ ಎರಡು ದಿನಗಳ ರಜೆ, ಶನಿವಾರ-ಭಾನುವಾರದ ನಿರಂತರ ರಜೆಗಳು, ಮತ್ತು ಜಮ್ಮು-ಕಾಶ್ಮೀರದಲ್ಲಿ ಹೆಚ್ಚುವರಿ ರಜೆಗಳು ಇವೆ.
ಅತ್ಯಾವಶ್ಯಕ ಬ್ಯಾಂಕಿಂಗ್ ಕಾರ್ಯಗಳು ಇದ್ದರೆ, ನೀಡುವ ದಿನಾಂಕಗಳ ಬಗ್ಗೆ ಗಮನವಿಟ್ಟು ಯೋಜನೆ ಮಾಡಿಕೊಳ್ಳಿ. ಮೊಬೈಲ್ ಬ್ಯಾಂಕಿಂಗ್ (mobile banking) ಮತ್ತು ಇಂಟರ್ನೆಟ್ ಬ್ಯಾಂಕಿಂಗ್ (Internet banking) ಸೌಲಭ್ಯಗಳು ಇದರಲ್ಲಿ ಸಹಾಯಕರಾಗಬಹುದು.ಮತ್ತು ಇಂತಹ ಉತ್ತಮವಾದ ಮಾಹಿತಿಯನ್ನು ನೀವು ತಿಳಿದಮೇಲೆ ಈ ಮಾಹಿತಿಯನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.