ಕೃಷಿ ಭೂಮಿ ಖರೀದಿಗೆ ಈ ಹೊಸ ಪ್ರಮುಖ ದಾಖಲೆಗಳು ಕಡ್ಡಾಯ..! ತಪ್ಪದೇ ಪರಿಶೀಲಿಸಿ.

Picsart 25 04 02 22 38 38 174

WhatsApp Group Telegram Group

ಭೂಮಿಯ ದಾಖಲೆಗಳ ಪರಿಶೀಲನೆ ಹೇಗೆ? ಸಂಪೂರ್ಣ ಮಾಹಿತಿ ಇಲ್ಲಿದೆ!

ಭೂಮಿಯ ಖರೀದಿ(land Purchase) ಎಂದರೆ ಒಂದು ಮಹತ್ವದ ನಿರ್ಧಾರ. ಅದೂ ವಿಶೇಷವಾಗಿ ಕೃಷಿ ಭೂಮಿ ಖರೀದಿ ಮಾಡುವಾಗ ಹೆಚ್ಚು ಜಾಗರೂಕತೆಯಿಂದ ವರ್ತಿಸಬೇಕಾಗುತ್ತದೆ. ಕಳೆದ ಕೆಲವು ವರ್ಷಗಳಲ್ಲಿ ಭೂಮಿಯ ಬೆಲೆ ನಿರಂತರವಾಗಿ ಏರುತ್ತಿದ್ದು, ರೈತರಷ್ಟೇ ಅಲ್ಲ, ಹೂಡಿಕೆದಾರರೂ ಕೃಷಿ ಭೂಮಿಯತ್ತ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ. ಆದರೆ, ಸರಿಯಾದ ಮಾಹಿತಿ ಇಲ್ಲದೆ ಭೂಮಿಯ ವ್ಯವಹಾರದಲ್ಲಿ ಕೈ ಹಾಕಿದರೆ ಭವಿಷ್ಯದಲ್ಲಿ ಕಾನೂನು ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಇರುತ್ತದೆ. ಹಾಗಿದ್ದರೆ ಭೂ ದಾಖಲೆಗಳನ್ನು ಪರಿಶೀಲನೆ ಮಾಡುವುದು ಹೇಗೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಹೌದು, ಕರ್ನಾಟಕದಲ್ಲಿ(Karnataka) ಕೃಷಿ ಭೂಮಿ ಖರೀದಿಗೆ ಇರುವ ಕಠಿಣ ನಿಯಮಗಳನ್ನು ಸರಕಾರವು ಸಡಿಲಗೊಳಿಸಿದ್ದರೂ, ಈಗಲೂ ಈ ವ್ಯವಹಾರದ ಬಗ್ಗೆ ಪೂರ್ತಿ ತಿಳಿದಿರುವುದು ಅತ್ಯಗತ್ಯ. ಭೂಮಿಯ ಮಾಲೀಕತ್ವ, ಹಕ್ಕುಗಳು, ಹಳೆಯ ದಾಖಲೆಗಳು, ಸಾಲಗಳ ದಾಖಲೆಗಳು, ಭೂಮಿಯ ಪ್ರಸ್ತುತ ಸ್ಥಿತಿ ಹಾಗೂ ಬಳಕೆ ಇತ್ಯಾದಿಗಳನ್ನು ಪೂರ್ಣ ಪ್ರಮಾಣದಲ್ಲಿ ಪರಿಶೀಲಿಸಿದಾಗ ಮಾತ್ರ ಒಂದು ಸುರಕ್ಷಿತ ಖರೀದಿ ಸಾಧ್ಯ.

ಭೂಮಿಯ ವರ್ಗೀಕರಣ(CLASSIFICATION OF LAND) ಯಾವ ರೀತಿ ಮಾಡಲಾಗಿದೆ?:

ಕೃಷಿ ಭೂಮಿ ಖರೀದಿಸುವ ಮೊದಲು ಅದರ ವರ್ಗೀಕರಣವನ್ನು ಅರ್ಥಮಾಡಿಕೊಳ್ಳುವುದು ಅಗತ್ಯ. ಕರ್ನಾಟಕದಲ್ಲಿ ಭೂಮಿಯನ್ನು ಹಲವು ರೀತಿ ವಿಭಜಿಸಲಾಗುತ್ತದೆ. ಮುಖ್ಯವಾಗಿ,
1. ಕೃಷಿ ಭೂಮಿ(Agricultural land): ಕೃಷಿಗೆ ಅನುವಾಗಿರುವ ಭೂಮಿಯನ್ನು ಈ ವರ್ಗದಲ್ಲಿ ಸೇರಿಸಲಾಗುತ್ತದೆ. ಇವುಗಳನ್ನು ಕೃಷಿಕರು ಅಥವಾ ಸರಕಾರದಿಂದ ಅನುಮೋದಿತ ವ್ಯಕ್ತಿಗಳು ಮಾತ್ರ ಖರೀದಿಸಬಹುದು.
2. ಖರಾಬು ಭೂಮಿ: ಇದು ಎರಡು ವಿಧಗಳಾಗಿರುತ್ತವೆ:
ಎ ಖರಾಬು: ಹಳ್ಳಗಳು, ಕಲ್ಲು ಮುಂತಾದ ಕಾರಣಗಳಿಂದ  ಕೃಷಿಗೆ ಸೂಕ್ತವಲ್ಲದ ಖಾಸಗಿ ಒಡೆತನದ ಭೂಮಿಯಾಗಿರುತ್ತದೆ.
ಬಿ ಖರಾಬು: ಸರ್ಕಾರಿ ಭೂಮಿಗಳು, ಸಾರ್ವಜನಿಕ ಉದ್ದೇಶಗಳಿಗಾಗಿ ಕಾಯ್ದಿರಿಸಿದ ಪ್ರದೇಶಗಳು (ರಸ್ತೆ, ಸ್ಮಶಾನ, ಒಳಚರಂಡಿ ವ್ಯವಸ್ಥೆ ಇತ್ಯಾದಿ). ಇವುಗಳನ್ನು ಖಾಸಗಿ ಸ್ವಾಮ್ಯದ ಭೂಮಿಗಳಾಗಿ ಪರಿವರ್ತಿಸಲು ಅವಕಾಶ ಇಲ್ಲ.

ಭೂಮಿಯ ದಾಖಲೆಗಳ ಪರಿಶೀಲನೆ ಮಾಡುವುದು ಹೇಗೆ?:

ಭೂಮಿ ಖರೀದಿ ಮಾಡುವ ಮೊದಲು ಕೆಳಕಂಡ ಪ್ರಮುಖ ದಾಖಲೆಗಳನ್ನು ಪರಿಶೀಲಿಸುವುದು ಕಡ್ಡಾಯ,
1. ಮಾರಾಟ ಪತ್ರ(Sales letter): ಮಾಲೀಕತ್ವದ ಪರಿವರ್ತನೆ ಕುರಿತು ವಿವರ ನೀಡುವ ಈ ದಾಖಲೆ, ಭೂಮಿಯ ಹಳೆಯ ಮಾಲೀಕರ ಮಾಹಿತಿಯನ್ನು ಒದಗಿಸುತ್ತದೆ.
2. ಎನ್ಕಂಬರೆನ್ಸ್ ಪ್ರಮಾಣಪತ್ರ (EC): 30-35 ವರ್ಷಗಳ ಇತಿಹಾಸವನ್ನು ಪರಿಶೀಲಿಸುವ ಮೂಲಕ ಭೂಮಿಯ ಮೇಲೆ ಸಾಲ ಅಥವಾ ಕಾನೂನು ತೊಡಕುಗಳ ಬಗ್ಗೆ ತಿಳಿಯಬಹುದು.
3. ಆರ್‌ಟಿಸಿ (ಹಕ್ಕುಗಳು, ಬಾಡಿಗೆ ಮತ್ತು ಬೆಳೆಗಳ ದಾಖಲೆ) ಅಥವಾ ಪಹಣಿ: ಭೂಮಿಯ ಮಾಲೀಕತ್ವ, ಹಂಚಿಕೆ ಮತ್ತು ಬೆಳೆಗಳ ವಿವರವನ್ನು ಹೊಂದಿರುತ್ತದೆ.
4. ಆಕರ್ಬಂದ್ ಮತ್ತು ಟಿಪ್ಪಣಿ: ಭೂಮಿಯ ಗಡಿ ನಿರ್ಧಾರ ಮತ್ತು ಅಳತೆಗಳ ವಿವರಗಳನ್ನು ಒದಗಿಸುತ್ತದೆ.
5. ಗ್ರಾಮ ನಕ್ಷೆ(Village map): ಭೂಮಿಯ ಭೌಗೋಳಿಕ ಸ್ಥಿತಿಯನ್ನು ವಿವರಿಸುತ್ತದೆ.
6. ಪವರ್ ಆಫ್ ಅಟಾರ್ನಿ(Power of Attorney): ಭೂಮಿಯ ಮಾರಾಟಕ್ಕೆ ಸಂಬಂಧಿಸಿದ ಪರ್ಯಾಯ ಅಧಿಕಾರದ ಅಸ್ತಿತ್ವವನ್ನು ದೃಢೀಕರಿಸುತ್ತದೆ.
7. ಆಕ್ಷೇಪಣೆ ರಹಿತ ಪ್ರಮಾಣಪತ್ರ (NOC): ಯಾವುದೇ ಕಾನೂನು ತೊಡಕುಗಳಿಲ್ಲ ಎಂಬುದನ್ನು ದೃಢಪಡಿಸುತ್ತದೆ.
8. ಭೂಮಿ ಅಡಮಾನಗೊಂಡಿದೆಯಾ ಎಂಬುದರ ಪರಿಶೀಲನೆ: ಭೂಮಿಯ ಮೇಲಿನ ಸಾಲ ಅಥವಾ ಕಾನೂನು ವ್ಯಾಜ್ಯಗಳ ಕುರಿತು ತಿಳಿಯುವುದು.

ಕೃಷಿ ಭೂಮಿ ಖರೀದಿಯು ಸಣ್ಣ ನಿರ್ಧಾರವಲ್ಲ. ಇದರಲ್ಲಿ ಲಾಭದಾಯಕ ಹೂಡಿಕೆ ಅಥವಾ ಭವಿಷ್ಯದ ಕಾನೂನು ತೊಂದರೆ ಎನ್ನುವ ಅಂಶಗಳು ನಿರ್ಧಾರವನ್ನು ಪ್ರಭಾವಿಸುತ್ತದೆ. ಭೂಮಿಯ ದಾಖಲಾತಿಗಳನ್ನು ಸಮಗ್ರವಾಗಿ ಪರಿಶೀಲಿಸಿ, ಸರಿಯಾದ ಹಂತಗಳಲ್ಲಿ ಸಾಗಿದರೆ ಭೂಮಿಯ ಖರೀದಿ ಸುರಕ್ಷಿತವಾಗಿರಬಹುದು.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!