ಹೊಸ ಮಾದರಿಯ QLED ಟಿವಿ ಮತ್ತು ಸೆಮಿ ಅಟೋಮ್ಯಾಟಿಕ್ ಆಕ್ವಾ ಮ್ಯಾಜಿಕ್ ಗ್ರಾಂಡೆ ಸರಣಿಯ ವಾಶಿಂಗ್ ಮೆಷಿನ್ ಅನ್ನು ಬಿಡುಗಡೆ ಮಾಡಿದ ಥಾಮ್ಸನ್!
ಇಂದು ಮಾರುಕಟ್ಟೆಯಲ್ಲಿ ಹಲವಾರು ಕಂಪನಿಗಳ ಸ್ಮಾರ್ಟ್ ಟಿವಿಗಳು, ಹಾಗೂ ಇನ್ನಿತರ ಎಲೆಕ್ಟ್ರಾನಿಕ್
ವಸ್ತುಗಳಾದ ವಾಷಿಂಗ್ ಮಷೀನ್, ಫ್ರಿಡ್ಜ್ ಮುಂತಾದವುಗಳನ್ನು ಕಾಣುತ್ತೇವೆ. ಎಲೆಕ್ಟ್ರಾನಿಕ್ ವಸ್ತುಗಳ (electronic things) ತಯಾರಿಕ ಕಂಪನಿಗಳು ದಿನ ಕಳೆದಂತೆ ವಿವಿಧ ರೀತಿಯ ತಂತ್ರಜ್ಞಾನ ಅಳವಡಿತ ವಸ್ತುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿರುತ್ತಾರೆ. ಅತಿ ಕಡಿಮೆ ಬೆಲೆಗೆ ಉತ್ತಮ ವೈಶಿಷ್ಟಗಳುಳ್ಳ ವಸ್ತುಗಳನ್ನು ನಾವು ಖರೀದಿಸಬಹುದು. ಜನಪ್ರಿಯ ಕಂಪನಿಯಾದ ಥಾಮ್ಸನ್ (Thomson) ಇದೀಗ ತನ್ನ ಹೊಸ QLED ಟಿವಿ ಸರಣಿ ಮತ್ತು ಸೆಮಿ ಅಟೋಮ್ಯಾಟಿಕ್ ಆಕ್ವಾ ಮ್ಯಾಜಿಕ್ ಗ್ರಾಂಡೆ ಸರಣಿಯ ವಾಶಿಂಗ್ ಮೆಷಿನ್ ಅನ್ನು ಬಿಡುಗಡೆ ಮಾಡಿದೆ. ಅವುಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
AI ವೈಶಿಷ್ಟ್ಯಗಳೊಂದಿಗೆ ಲಭ್ಯವಿದೆ QLED ಟಿವಿ ಸರಣಿಗಳು :
ಥಾಮ್ಸನ್ ತನ್ನ ಹೊಸ QLED ಟಿವಿ ಸರಣಿ ಮತ್ತು ಸೆಮಿ ಅಟೋಮ್ಯಾಟಿಕ್ ಆಕ್ವಾ ಮ್ಯಾಜಿಕ್ ಗ್ರಾಂಡೆ ಸರಣಿಯ ವಾಶಿಂಗ್ ಮೆಷಿನ್ ಅನ್ನು ಬಿಡುಗಡೆ ಮಾಡಿದೆ. ಕಂಪನಿಯು ಸುಧಾರಿತ AI ವೈಶಿಷ್ಟ್ಯಗಳೊಂದಿಗೆ (AI features) 75-ಇಂಚಿನ ಮತ್ತು 32-ಇಂಚಿನ ಸ್ಮಾರ್ಟ್ ಟಿವಿಗಳನ್ನು ಪರಿಚಯಿಸಿದ್ದು, ಈ ಸ್ಮಾರ್ಟ್ ಟಿವಿಗಳು ಜುಲೈ 19 ರಿಂದ ಫ್ಲಿಪ್‌ಕಾರ್ಟ್‌ನಲ್ಲಿ ಮಾರಾಟಕ್ಕೆ ಲಭ್ಯವಿರುತ್ತವೆ.
ಥಾಮ್ಸನ್ ತನ್ನ ಹೊಸ QLED ಟಿವಿ ಸರಣಿಯ (Thomson QLED TVs) ವೈಶಿಷ್ಟತೆಗಳು :
ಥಾಮ್ಸನ್ ನ 75-ಇಂಚಿನ QLED ಸ್ಮಾರ್ಟ್ ಟಿವಿ :
ಥಾಮ್ಸನ್ ನ 75-ಇಂಚಿನ QLED ಸ್ಮಾರ್ಟ್ ಟಿವಿ 4K ಡಿಸ್ಪ್ಲೇ ಮತ್ತು ಬೆಜೆಲ್-ಲೆಸ್ ವಿನ್ಯಾಸದೊಂದಿಗೆ ಬರುತ್ತದೆ. ಇದು Dolby Vision HDR 10+, Dolby Atmos, Dolby Digital Plus, DTS TrueSurround ಗೆ ಬೆಂಬಲವನ್ನು ಹೊಂದಿದೆ. 40 ವ್ಯಾಟ್ ಡಾಲ್ಬಿ ಆಡಿಯೊ ಸ್ಟಿರಿಯೊ ಬಾಕ್ಸ್ ಸ್ಪೀಕರ್, 2 GB RAM, 16 GB ROM ಮತ್ತು ಡ್ಯುಯಲ್ ಬ್ಯಾಂಡ್ (2.4 + 5 GHz) Wi-Fi ಮತ್ತು Google TV ನಂತಹ ಉತ್ತಮ ವೈಶಿಷ್ಟ್ಯಗಳನ್ನು ಹೊಂದಿದೆ.
ಈ ಸ್ಮಾರ್ಟ್ ಟಿವಿ Netflix, Prime Video, Hotstar, Zee5, Apple TV, Voot, Sony Liv ಮತ್ತು Google Play Store ನಂತಹ ಪ್ಲಾಟ್‌ಫಾರ್ಮ್‌ಗಳಿಂದ 500,000 ಟಿವಿ ಶೋಗಳೊಂದಿಗೆ 10,000 ಕ್ಕೂ ಹೆಚ್ಚು ಅಪ್ಲಿಕೇಶನ್‌ಗಳು ಮತ್ತು ಗೇಮ್ ಗಳನ್ನೂ ಹೊಂದಿದೆ.
ಥಾಮ್ಸನ್ ನ 32 -ಇಂಚಿನ QLED ಸ್ಮಾರ್ಟ್ ಟಿವಿ :
32-ಇಂಚಿನ ಮಾದರಿಯು ವೇಗವಾದ 1366 x 768 ಪಿಕ್ಸೆಲ್ ರೆಸಲ್ಯೂಶನ್ ಮತ್ತು 550 ನಿಟ್ಸ್ ಬ್ರೈಟ್ ನೆಸ್ ಅನ್ನು ಹೊಂದಿದೆ. Google ನ Android TV ಯಲ್ಲಿ ಚಾಲನೆಯಲ್ಲಿರುವ ಈ ಟಿವಿ Netflix, YouTube, Disney+Hotstar ಮತ್ತು Prime Videoಗಳನ್ನು ಸುಲಭವಾಗಿ ರನ್ ಮಾಡುತ್ತದೆ. ಇದು ಮೂರು HDMI ಪೋರ್ಟ್‌ಗಳು, ಎರಡು USB ಪೋರ್ಟ್‌ಗಳು, Wi-Fi ಮತ್ತು Dolby Digital Plus ಸೌಂಡ್ ತಂತ್ರಜ್ಞಾನದೊಂದಿಗೆ 48 ವ್ಯಾಟ್‌ಗಳ ಉತ್ಪಾದನೆಯನ್ನು ಹೊಂದಿದೆ.
ಥಾಮ್ಸನ್ ತನ್ನ ಹೊಸ QLED ಟಿವಿ ಸರಣಿಯ ಬೆಲೆ (Price) :
75 ಇಂಚಿನ QLED ಸ್ಮಾರ್ಟ್ ಟಿವಿ ಬೆಲೆ 79,999 ರೂಪಾಯಿ ಆಗಿದ್ದರೆ, 32 ಇಂಚಿನ ಮಾದರಿಯ ಬೆಲೆ 11,499 ರೂ. ಅನ್ನು ಹೊಂದಿದೆ.
ಸೆಮಿ ಅಟೋಮ್ಯಾಟಿಕ್ ಆಕ್ವಾ ಮ್ಯಾಜಿಕ್ ಗ್ರಾಂಡೆ ಸರಣಿಯ ವಾಶಿಂಗ್ ಮೆಷಿನ್ (Thomson Washing Machine) :
ಥಾಮ್ಸನ್ ಅವರ ಹೊಸ ಆಕ್ವಾ ಮ್ಯಾಜಿಕ್ ಗ್ರಾಂಡೆ ಸರಣಿನಲ್ಲಿ 7 ಕೆಜಿ, 8 ಕೆಜಿ, 8.5 ಕೆಜಿ, 10 ಕೆಜಿ ಮತ್ತು 12 ಕೆಜಿ ಸೆಮಿ ಆಟೋಮ್ಯಾಟಿಕ್ ವಾಶಿಂಗ್ ಮೆಷಿನ್ ಅನ್ನು ಒಳಗೊಂಡಿದೆ. ಈ ಹೊಸ ವಾಷಿಂಗ್ ಮೆಷಿನ್‌ಗಳ ಬೆಲೆ 8,999 ರೂ.ನಿಂದ ಪ್ರಾರಂಭವಾಗುತ್ತದೆ. ಇದು ಕೂಡಾ ಜುಲೈ 19 ರಿಂದ ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಿರುತ್ತವೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.