Business tips: ರೈಲು ಟಿಕೆಟ್‌ ಬುಕ್‌ ಮಾಡಿ ತಿಂಗಳಿಗೆ 50 ಸಾವಿರ ಗಳಿಸುವುದು ಹೇಗೆ?

IMG 20241023 WA0002

ಐಆರ್‌ಸಿಟಿಸಿ(IRCTC) ಅಧಿಕೃತ ಟಿಕೆಟ್‌ ಏಜೆಂಟ್‌(Ticket Agent) ಆಗುವ ಮೂಲಕ ತಿಂಗಳಿಗೆ ಸಾವಿರಾರು ರೂಪಾಯಿ ಹಣ ಗಳಿಸಬಹುದು.! ಹಣಗಳಿಸುವುದು ಹೇಗೆ? ಇಲ್ಲಿದೆ ಮಾಹಿತಿ.

ಇಂದು ಜನರು ವಿದ್ಯಾವಂತರಾಗಿ ಒಳ್ಳೆಯ ಕೆಲಸದಲ್ಲಿದ್ದರೂ ಕೂಡ ತಾವು ಮಾಡುವ ಕೆಲಸದ ಜೊತೆಗೆ ಸೈಡ್ ಬಿಸಿನೆಸ್ (Side business) ಮಾಡಬೇಕೆಂಬ ಆಶಯವನ್ನು ಇಟ್ಟುಕೊಂಡು ಅವರ ಸಮಯಕ್ಕೆ ಸರಿದೂಗುವಂತಹ ಇನ್ನೊಂದು ಕೆಲಸವನ್ನು ಕೂಡ ಹುಡುಕುತ್ತಿರುತ್ತಾರೆ. ಈಗಾಗಲೇ ಮಾಡುತ್ತಿರುವ ಕೆಲಸಕ್ಕೆ ಈ ಸೈಡ್ ಬಿಸಿನೆಸ್ ಯಾವುದೇ ರೀತಿಯ ತೊಂದರೆಯನ್ನುಂಟು ಮಾಡಬಾರದು ಎಂಬ ಯೋಚನೆಯನಿಟ್ಟುಕೊಂಡು ಹಲವಾರು ರೀತಿಯ ಕೆಲಸಗಳನ್ನು ಮಾಡಲು ಮುಂದಾಗಿರುತ್ತಾರೆ. ಸೈಡ್ ಬಿಸಿನೆಸ್ ಅಥವಾ ತಾವು ಮಾಡುವ ಕೆಲಸದ ಜೊತೆಗೆ ಇನ್ನೊಂದು ಕೆಲಸವನ್ನು ಮಾಡಿದರೆ ಹೆಚ್ಚಿನ ಲಾಭಗಳಿಸಿ ತಮ್ಮ ಜೀವನವನ್ನು ಸುಖಕರವಾಗಿರಿಸಿಕೊಳ್ಳಬಹುದು ಎಂದು ಯೋಚಿಸಿರುತ್ತಾರೆ. ಅಂಥವರಿಗೆ ಇಲ್ಲಿದೆ ಒಂದು ಶುಭ ಸುದ್ದಿ. ನೀವು ಐಆರ್‌ಸಿಟಿಸಿ ಟಿಕೆಟ್‌ ಏಜೆಂಟ್‌(IRCTC Ticket Agent) ಆಗುವುದರಿಂದ ಒಳ್ಳೆಯ ಕಮಿಷನ್ (Commission) ಪಡೆಯಬಹುದು. ಈ ಕೆಲಸ ಈಗಾಗಲೇ ನೀವು ಮಾಡುತ್ತಿರುವ ಕೆಲಸಕ್ಕೆ ಯಾವುದೇ ರೀತಿಯ ಅಡ್ಡಿಯನ್ನುಂಟು ಮಾಡುವುದಿಲ್ಲ. ಐಆರ್‌ಸಿಟಿಸಿ ಟಿಕೆಟ್‌ ಏಜೆಂಟ್‌ ಎಂದರೇನು? ಇದರಿಂದ ಎಷ್ಟು ಲಾಭ ಸಿಗಲಿದೆ? ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ ಟಿಕೆಟ್ ಬುಕಿಂಗ್ ಏಜೆಂಟ್ ಆಗಿ ಸುಲಭವಾಗಿ ಹಣ ಗಳಿಸಬಹುದು. ಇದರಲ್ಲಿ ನೀವು ಬುಕ್ ಮಾಡುವ ಪ್ರತೀ ಟಿಕೆಟ್ ಗೂ ಕೂಡ ಒಳ್ಳೆಯ ಕಮಿಷನ್ ಸಿಗುತ್ತದೆ. ದಿನಕ್ಕೆ ಎಷ್ಟು ಟಿಕೆಟ್ ಆದರೂ ಬುಕ್ ಮಾಡಬಹುದು ಅಂದರೆ ಲಿಮಿಟ್ ಇಲ್ಲದೆ ಟಿಕೆಟ್ ಬುಕ್ ಮಾಡಿ ಹೆಚ್ಚಿನ ಹಣ ಗಳಿಸಬಹುದು. ಐಆರ್‌ಸಿಟಿಸಿ ಟಿಕೆಟ್ ಬುಕಿಂಗ್ ಏಜೆಂಟ್ ನ ಬಹಳ ಮುಖ್ಯ ಜವಾಬ್ದಾರಿ ಪ್ರಯಾಣಿಕರಿಗೆ ಟಿಕೆಟ್ ಕಾಯ್ದಿರಿಸುವುದಾಗಿರುತ್ತದೆ. ಈ ಏಜೆಂಟ್ ಯಾವುದೇ ಆಫೀಸಿಗೆ ಹೋಗಿ ಈ ಕೆಲಸವನ್ನು ಮಾಡಬೇಕೆಂದೇನಿಲ್ಲ, ತಾವು ಇರುವ ಜಾಗದಿಂದಲೇ ಈ ಕೆಲಸವನ್ನು ಮಾಡಿ ಹಣ ಗಳಿಸಬಹುದು. ಐಆರ್‌ಸಿಟಿಸಿ ಏಜೆಂಟ್ ಬುಕ್ ಮಾಡುವ ಪ್ರತಿ ಟಿಕೆಟ್ಗು ಕಮಿಷನ್ ಪಡೆಯುತ್ತಾನೆ.

ಐಆರ್‌ಸಿಟಿಸಿ(IRCTC) ಅಧಿಕೃತ ಏಜೆಂಟ್ ಎಂದರೇನು?:

ಐಆರ್‌ಸಿಟಿಸಿ(IRCTC) ಅಧಿಕೃತ ಏಜೆಂಟ್ ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮದಿಂದ (IRCTC) ಅನುಮತಿ ಅಥವಾ ಮಾನ್ಯತೆ ಪಡೆದ ಮಾಧ್ಯಮವರ್ತಿಯಾಗಿ (As a mediator) ಕಾರ್ಯನಿರ್ವಹಿಸುತ್ತಾರೆ. ಈ ಏಜೆಂಟ್ ಗಳು ರೈಲು ಟಿಕೆಟ್ ಬುಕಿಂಗ್ (Train ticket booking) ಹಾಗೂ ಅದಕ್ಕೆ ಸಂಬಂಧಿಸಿದ ಸೇವೆಗಳಿಗೆ ಸಹಾಯ ಮಾಡುತ್ತಾರೆ. ಪ್ರಯಾಣಿಕರಿಗೆ ವಿಶ್ವಾಸಾರ್ಹ ಸುವ್ಯವಸ್ಥಿತ ಟಿಕೆಟ್ ಖಚಿತಪಡಿಸುವಲ್ಲಿ ಇವರು ಕಾರ್ಯ ನಿರ್ವಹಿಸುತ್ತಾರೆ.

ಐಆರ್‌ಸಿಟಿಸಿ(IRCTC) ಅಧಿಕೃತ ಏಜೆಂಟ್ ಆಗುವುದು ಹೇಗೆ 😕

IRCTC ಏಜೆಂಟ್ ಆಗಲು ಬಯಸುವವರು ಕೆಲವು ಹಂತಗಳ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಈ ಪ್ರಕ್ರಿಯೆಯನ್ನು ಆನ್ಲೈನ್ ಮೂಲಕವೂ ಪೂರ್ಣಗೊಳಿಸಬಹುದು.
ಮೊದಲಿಗೆ IRCTC ಏಜೆಂಟ್ ನೋಂದಣಿ ಫಾರ್ಮ್ ಅನ್ನು ಡೌನ್‌ಲೋಡ್ ಮಾಡಿ ಮತ್ತು ಭರ್ತಿ ಮಾಡಿ.
ಆನ್‌ಲೈನ್ IRCTC ಏಜೆಂಟ್ ನೋಂದಣಿ ಫಾರ್ಮ್ ಅನ್ನು ಯಶಸ್ವಿಯಾಗಿ ಸಲ್ಲಿಸಿದ ನಂತರ, ಆನ್‌ಲೈನ್‌ನಲ್ಲಿ  ನೋಂದಣಿ ಶುಲ್ಕವನ್ನು ಪಾವತಿಸಬೇಕು.
ತದನಂತರ ಅಗತ್ಯವಿರುವ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕು.
ಈ ಎಲ್ಲಾ ಹಂತಗಳನ್ನು ಪೂರ್ಣಗೊಳಿಸಿದ ನಂತರ ಕಾರ್ಯನಿರ್ವಾಹಕರು ದಾಖಲೆಗಳನ್ನು ಪರಿಶೀಲಿಸಲು 3-4 ದಿನಗಳನ್ನು ತೆಗೆದುಕೊಳ್ಳುತ್ತದೆ.
ಪರಿಶೀಲನೆ ಪ್ರಕ್ರಿಯೆ ಮುಗಿದ ನಂತರ IRCTC ಏಜೆಂಟ್ ಲಾಗಿನ್ ಅನ್ನು ನೀವು ಪಡೆಯುತ್ತೀರಿ.
ಲಾಗಿನ್ ಹೈಪರ್‌ಲಿಂಕ್ ಸಕ್ರಿಯಗೊಳಿಸಿದ ಬಳಿಕ ನಿಮ್ಮ ವ್ಯಾಲೆಟ್ ಬಳಸಿ ಟಿಕೆಟ್‌ಗಳನ್ನು ಬುಕ್ ಮಾಡಬಹುದು.

IRCTC ಏಜೆಂಟ್ ಆಗಲುಬೇಕಾಗಿರುವ ದಾಖಲೆಗಳು:

ಆಧಾರ್ ಕಾರ್ಡ್.
ಫೋಟೋ.
ಮೊಬೈಲ್ ಸಂಖ್ಯೆ( ಈ ಸಂಖ್ಯೆಯನ್ನು ಪರಿಶೀಲನೆಗಾಗಿ ಬಳಸಲಾಗುತ್ತದೆ. IRCTC ಯಲ್ಲಿ ನೋಂದಾಯಿಸಿರಬಾರದು).
ಮಾನ್ಯವಾಗಿರುವ ಇಮೇಲ್ ಐಡಿ (ಈ ಐಡಿಯನ್ನು ಪರಿಶೀಲನೆಗಾಗಿ ಬಳಸಲಾಗುತ್ತದೆ.ಐಆರ್‌ಸಿಟಿಸಿಯಲ್ಲಿ ನೋಂದಾಯಿಸಿರಬಾರದು).
ಪ್ಯಾನ್ ಕಾರ್ಡ್.

IRCTC ಏಜೆಂಟ್ ಆಗುವುದರ ಪ್ರಯೋಜನಗಳು:

IRCTC ಏಜೆಂಟ್ ಆಗುವುದರ ಬಹಳ ಮುಖ್ಯ ಪ್ರಯೋಜನವೆಂದರೆ ಅನಿಯಮಿತ (unlimited) ಸಂಖ್ಯೆಯ IRCTC ಇ-ಟಿಕೆಟ್‌ಗಳನ್ನು ಬುಕ್ ಮಾಡಲು ಏಜೆಂಟ್‌ಗಳಿಗೆ ಅನುಮತಿಸಲಾಗಿರುವುದು.
IRCTC ಏಜೆಂಟ್‌ಗಳು ಪ್ರತಿ ಟಿಕೆಟ್ ಬುಕಿಂಗ್‌ಗೆ ಇಂತಿಷ್ಟು ಕಮಿಷನ್ ಕೂಡ ಪಡೆಯುತ್ತಾರೆ.
ರೂ.80,000 ವರೆಗೆ ಮಾಸಿಕ ಆದಾಯವನ್ನು IRCTC ಟಿಕೆಟ್ ಏಜೆಂಟ್ ಗಳು ಗಳಿಸಬಹುದು.

ಐಆರ್‌ಸಿಟಿಸಿ(IRCTC) ಅಧಿಕೃತ ಟಿಕೆಟ್‌ ಏಜೆಂಟ್‌ ಗಳಿಗೆ ಕಮಿಷನ್ ಯಾವ ರೀತಿ ಸಿಗಲಿದೆ :

ಎಸಿ ಕ್ಲಾಸ್ ಟಿಕೆಟ್‌ಗಳು (AC Class Tickets)ಹಾಗೂ ನಾನ್-ಎಸಿ ಟಿಕೆಟ್‌ಗಳಿಗೆ(non-AC tickets) ಬೇರೆ ರೀತಿಯ ಕಮಿಷನ್ ನೀಡಲಾಗುತ್ತದೆ. ಎಸಿ ಕ್ಲಾಸ್ ಟಿಕೆಟ್‌ಗಳು ಎಷ್ಟು ಬೆಲೆಯ ಟಿಕೆಟ್ ಗಳು ಎಂಬ ಆಧಾರದ ಮೇಲೆ 40 ರೂಪಾಯಿ ಕಮೀಷನ್‌ ಸಿಗುತ್ತದೆ. ಹಾಗೂ ನಾನ್-ಎಸಿ ಟಿಕೆಟ್‌ಗಳಲ್ಲಿ ಪ್ರತಿ ಟಿಕೆಟ್ ಗೆ 20 ರೂಪಾಯಿ ಕಮಿಷನ್ ಸಿಗಲಿದೆ. ಇದರ ಜೊತೆ ಜೊತೆಯಲ್ಲಿ ಕಮೀಷನ್‌ ಭಾಗವಾಗಿ ಟಿಕೆಟ್ ದರದ ಶೇಕಡಾವಾರು ಮೊತ್ತವನ್ನು ಸ್ವೀಕರಿಸುತ್ತಾರೆ. ಐಆರ್‌ಸಿಟಿಸಿ(IRCTC) ಅಧಿಕೃತ ಟಿಕೆಟ್‌ ಏಜೆಂಟ್‌ ಒಂದು ತಿಂಗಳಿಗೆ 100 ಟಿಕೆಟ್ ಗಳನ್ನು ನೀಡಿದರೆ 10 ರೂಪಾಯಿ ಕಮೀಷನ್‌ ಸಿಗುತ್ತದೆ. ಹಾಗೂ 101 ನೇ ಟಿಕೆಟ್ ನಿಂದ 300 ಟಿಕೆಟ್ ಬುಕ್ ಮಾಡಿದರೆ ಪ್ರತಿ ಟಿಕೆಟ್ ಗೆ 8 ರೂ. ಕಮಿಷನ್ ಸಿಗುತ್ತದೆ. ಇದರ ಹೊರತಾಗಿ ರಜಾ ದಿನಗಳು ಅಥವಾ ಹಬ್ಬದ ದಿನಗಳಲ್ಲಿ ನೀವು ಟಿಕೆಟ್ ಬುಕ್ ಮಾಡಿದರೆ ನಿಮ್ಮ ಆದಾಯ ಹೆಚ್ಚಾಗುತ್ತದೆ. ಉದಾಹರಣೆಗೆ, ತಿಂಗಳಿಗೆ 100 ಎಸಿ ಕ್ಲಾಸ್ ಟಿಕೆಟ್‌ಗಳನ್ನು ಬುಕ್ ಮಾಡಿದರೆ 2 ಸಾವಿರ ರೂಪಾಯಿ ಕಮಿಷನ್‌ ಪಡೆಯಬಹುದು.

ಗಮನಿಸಿ :

ಐಆರ್‌ಸಿಟಿಸಿ(IRCTC) ಅಧಿಕೃತ ಟಿಕೆಟ್‌ ಏಜೆಂಟ್‌ ಆಗ ಬಯಸುವವರು ಶುಲ್ಕವನ್ನು(fee) ಪಾವತಿಸಬೇಕಾಗುತ್ತದೆ. ಕೇವಲ 1 ವರ್ಷಕ್ಕೆ(For 1 year) ಏಜೆಂಟ್‌ ಆಗ ಬಯಸಿದರೆ 3999 ರೂಪಾಯಿ ಹಾಗೂ 2 ವರ್ಷಗಳ(for 2 years) ಏಜೆಂಟ್ ಆಗ ಬಯಸುವವರು 6999 ರೂಪಾಯಿ ಪಾವತಿ ಮಾಡಬೇಕಾಗುತ್ತದೆ.

ಈ ಮಾಹಿತಿಗಳನ್ನು ಓದಿ

 


ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!