ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ಹುಲಿಯ ಉಗುರಿನ ಪದಕವನ್ನು ಏಕೆ ಧರಿಸುತ್ತಾರೆ ಎನ್ನುವುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ತಮಗೆಲ್ಲರಿಗೂ ಈಗಾಗಲೇ ತಿಳಿದಿರುವ ಹಾಗೆ ಬಿಗ್ ಬಾಸ್ (Bigg Boss) ಶೋ ಸ್ಪರ್ಧಿ ವರ್ತೂರು ಸಂತೋಷ್ ಹುಲಿಯ ಉಗುರಿನ ಪದಕ(Pendent) ಧರಿಸಿದ್ದಾಕ್ಕಾಗಿ ಅರೆಸ್ಟ್ (Arrest) ಆಗಿದ್ದು, ಈಗ ಈ ಪ್ರಕರಣದಲ್ಲಿ ಹಲವಾರು ಸೆಲೆಬ್ರೇಟಿಗಳ (Celebrity) ಹೆಸರು ಹೊರಬೀಳುತ್ತೀವೆ. ಯಾಕೆ ಜನರಲ್ಲಿ ಹುಲಿ ಉಗುರಿನ ಆಭರಣಗಳ ಮೇಲೆ ಇಷ್ಟು ಒಲವು, ಇಷ್ಟು ಕ್ರೇಜ್ ? ಇದರ ಉಪಯೋಗಗಳಾದರೂ ಏನು? ಏನಿರಬಹುದು ಹುಲಿಯ ಅಂಗಾಂಗಳ ಈ ವರದಿಯಲ್ಲಿ ತಾವುಗಳು ಪಡೆಯುತ್ತಿರಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.
ಹುಲಿಯ ಉಗುರಿನ ಮಹತ್ವ :
ಬಿಗ್ ಬಾಸ್ ಶೋ ಸ್ಪರ್ಧಿ ವರ್ತೂರ್ ಸಂತೋಷ್(varthur Santhosh) ಹುಲಿಯ ಉಗುರಿನ ಪದಕ ಧರಿಸಿದ್ದಾಕ್ಕಾಗಿ ಅರೆಸ್ಟ್ (Arrest) ಆಗಿದ್ದ ಸಂಗತಿ ಸೋಶಿಯಲ್ ಮೀಡಿಯಾ(Social media) ದಲ್ಲಿ ವೈರಲ್ ಆಗಿದೆ. ಈ ಪ್ರಕರಣ ಆದ್ಮೇಲೆ ಅಂತೂ ಹುಲಿ ಉಗುರಿನ ಲಾಕೆಟ್ ಧರಿಸಿದ ಸ್ವಾಮಿಜಿ, ರಾಜಕಾರಣಿಗಳು ಮತ್ತು ಸೆಲೆಬ್ರಿಟಿಗಳ ಫೋಟೋ ಮತ್ತು ವಿಡಿಯೋ ಚಿತ್ರಗಳು ಸಕತ್ ವೈರಲ್ ಆಗ್ಬಿಟ್ಟಿದೆ. ಜನರು ಕಾನೂನು-ಕಟ್ಟುಪಾಡುಗಳನ್ನು ಮೀರಿ ಈ ರೀತಿಯ ವ್ಯವಹಾರವನ್ನು ಮಾಡುತ್ತಿದ್ದಾರೆ. ಕೇವಲ ಹುಲಿಯ ಉಗುರು ಮಾತ್ರವಲ್ಲದೆ ಇನ್ನಿತರೇ ಪ್ರಾಣಿಗಳನ್ನು ಬೇಟೆಯಾಡಿ ಚರ್ಮ, ಮೂಳೆ, ಕೊಂಬು, ಕೂದಲು ಇತ್ಯಾದಿ ಅಂಗಾಂಗಗಳನ್ನು ಸಂಗ್ರಹಣೆ ಮಾಡುತ್ತಿದ್ದಾರೆ. ರಾಜ ಮಹಾರಾಜರ ಕಾಲದಿಂದಲು ಈ ಭೇಟಿಯಾಡುವ ಪರಂಪರೆ ನಡೆಯುತ್ತಲೇ ಇದೆ. ಹೀಗಿರುವಾಗ ಯಾಕೆ ಜನ ಹುಲಿಯ ಉಗುರುಗಳ ಆಭರಣಗಳನ್ನು ಧರಿಸುತ್ತಾರೆ. ಹುಲಿ ಉಗುರು ಉಪಯೋಗ ಏನು ಎಂದು ತಿಳಿಯಲು ಪೂರ್ಣವಾಗಿ ಲೇಖನವನ್ನು ಓದಿ.
ಹುಲಿಯ ಉಗುರು ಪೌರುಷದ ಸಂಕೇತ :
ಜನರಿಗೆ ಹುಲಿ ಉಗುರು ಆಭರಣಗಳ ಮೇಲೆ ಯಾಕಿಷ್ಟು ಒಲವು ಎಂಬ ಕುತೂಹಲ ಸಹಜ, ಇದರ ಉಪಯೋಗಗಳು ಹೀಗಿವೆ. ಹುಲಿಯನ್ನು ಪೌರುಷ ಸಂಕೇತವಾಗಿ ಜನ ಕಾಣುತ್ತಾರೆ. ಭಾರತದ ಅನೇಕ ಭಾಗಗಳಲ್ಲಿ, ಹುಲಿ ಉಗುರುಗಳನ್ನು ದುಷ್ಟ ಶಕ್ತಿಗಳ ಹೊಡೆದೋಡಿಸುವ ಮಾಂತ್ರಿಕ ಶಕ್ತಿಯುಳ್ಳವು ಅದೃಷ್ಟದಾಯಿ ಎಂದು ನಂಬಲಾಗಿದೆ. ಹುಲಿ ಉಗುರುಗಳನ್ನು ಧರಿಸಿದವರಲ್ಲಿ ಧೈರ್ಯ ಹೆಚ್ಚು ಎಂಬ ನಂಬಿಕೆಯೂ ಇದೆ. ರೋಗ ಅಥವಾ ಅನಾರೋಗ್ಯದಿಂದ ದೂರವಿರಲು ಸಹಾಯ ಮಾಡುವುದರ ಜೊತೆಗೆ ಮಾನಸಿಕ ಆರೋಗ್ಯವನ್ನು ಸಹ ಸುಧಾರಿಸುತ್ತದೆ ಎನ್ನುವ ನಂಬಿಕೆ ಜನರಲ್ಲಿ ಇದೆ.
ಇದನ್ನೂ ಓದಿ – ಗೃಹಲಕ್ಷ್ಮಿ ಅರ್ಜಿ ಜೊತೆ ದಾಖಲೆ ಕೊಟ್ರು 10 ಲಕ್ಷ ಮಂದಿಗೆ ಸಿಕ್ಕಿಲ್ಲ ಹಣ, ನಿಮಗೂ ಹಣ ಬಂದಿಲ್ವಾ?? ಇಲ್ಲಿದೆ ವಿವರ
ಆದರೆ ಇತ್ತೀಚಿನ ಕಾಲದಲ್ಲಿ ಹುಲಿಗಳ ಅಂಗಾಂಗಗಳು ಅಪರೂಪವಾದದ್ದು ಮತ್ತು ವಿಶೇಷವಾದದ್ದು. ಹೀಗಿರುವಾಗ ಜನರು ತಮ್ಮ ವರ್ಚಸ್ಸು ಹೆಚ್ಚಿಸಲು ಈ ರೀತಿಯ ವಸ್ತುಗಳನ್ನು ಸಂಗ್ರಹಿಸುತ್ತಾರೆ ಎಂದು ವಿವಾದಗಳಿವೆ. ಅದರಲ್ಲೂ ಹುಲಿಯ ಉಗುರಿನ ಡಾಲರ್ ಜನರಲ್ಲಿ ಆಕರ್ಷಣೆಯನ್ನು ಹೆಚ್ಚಿಸುತ್ತದೆ ಮತ್ತು ಇದು ಫ್ಯಾಷನ್ ಆಗಿ ಕೂಡ ಕಾಣುತ್ತದೆ.
ಆನಾದಿ ಕಾಲದಿಂದ ಋಷಿಗಳು ಸಹ ತಾವು ಧ್ಯಾನ ಮಾಡಲು ಕುಳಿತುಕೊಂಡಾಗ ಹುಲಿಯ ಚರ್ಮವನ್ನು ಬಳಕೆ ಮಾಡುತ್ತಿದ್ದರು. ಈ ಹುಲಿಯ ಚರ್ಮವು ಖುಷಿಗಳು ಧ್ಯಾನ ಮಾಡುವಾಗ ಬೆನ್ನುಹುರಿಯ ಉದ್ದಕ್ಕೂ ಶಾಖವನ್ನು ಹೆಚ್ಚಿಸುತ್ತದೆ, ಇದು ಅವರ ಧ್ಯಾನ ಮಾಡುವ ಸ್ಥಾನ ಬೆಚ್ಚಗಿಡಲು ಸಹಾಯ ಮಾಡುತ್ತದೆ. ಹುಲಿ ಚರ್ಮ, ಹುಲಿಯ ಉಗುರು ಅಥವಾ ಇನ್ನಿತರೇ ಅಂಗಾಂಗಗಳಿರುವ ಸ್ಥಳವನ್ನು ಹುಲಿ ಇರುವ ಸ್ಥಳ ಅಂತಲೇ ಅಂದುಕೊಂಡು, ಉಳಿದ ಕ್ರೂರ ಪ್ರಾಣಿಗಳು ಆ ವಸ್ತುಗಳು ಇರುವ ಕಡೆಗೆ ಹೋಗುವುದಿಲ್ಲ. ಈ ಕಾರಣದಿಂದ ಋಷಿಗಳು ಇತರೆ ಪ್ರಾಣಿಗಳನ್ನು ದೂರವಿರಿಸಲು ಹುಲಿಗೆ ಸಂಬಂಸಿದ ವಸ್ತುಗಳನ್ನು ತಮ್ಮ ಹತ್ತಿರ ಇಟ್ಟುಕೊಳ್ಳುತ್ತಿದ್ದರು.
ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅಡಿಯಲ್ಲಿ:
ಭಾರತದಲ್ಲಿ ವನ್ಯಜೀವಿ ಸಂರಕ್ಷಣಾ ಅಡಿಯಲ್ಲಿ ಹುಲಿಗಳ ಉಗುರಿನ ಆಭರಣ ಧರಿಸುವುದು, ಮಾರಾಟ ಮಾಡುವುದು ಮತ್ತು ಅದನ್ನು ತಯಾರಿಸುವುದು ಅಪರಾಧ(offense) ಎಂದು ಕಾನೂನು ಘೋಷಿಸಿದೆ. ಯಾವದೇ ವನ್ಯ ಜೇವಿಯ ಚರ್ಮ, ಮೂಳೆ, ಕೊಂಬು, ಕೂದಲು ಇತ್ಯಾದಿ ವಸ್ತುಗಳ ಸಂಗ್ರಹ ತಪ್ಪು. ಆದರೆ ಇವತ್ತಿಗೂ ಜನಸಾಮನ್ಯರಲ್ಲಿ ಹುಲಿ ಉಗುರು, ಹಲ್ಲು, ಆನೆ ಬಾಲದ ಕೂದಲು, ದಂತ ಇವುಗಳ ಸಂಗ್ರಹಣೆ ಅಗೋಚರ ಶಕ್ತಿ ಸಿಕ್ಕಿಬಿಡುತ್ತದೆ ಎಂದು ವಿಚಿತ್ರವಾದ ಹಾಗೂ ಯಾವುದೇ ಆಧಾರವಿಲ್ಲದ ನಂಬಿಕೆ ಬೆಳೆದಿದೆ. ಆದರೆ ಹೀಗೆ ವನ್ಯಜೀವಿಗಳ ವಸ್ತುಗಳನ್ನು ಸಂಗ್ರಹಣೆ ಮಾಡುವುದು ಕಾನೂನು ಅಪರಾಧ. ಹಾಗಾಗಿ ಇದನ್ನು ತಡೆಗಟ್ಟಲು ಸರ್ಕಾರಗಳು ಕಠಿಣ ಕಾನೂನು ಕ್ರಮಗಳನ್ನು ತರುತ್ತಿದೆ. ಪ್ರಾಣಿಗಳ ವಸ್ತುಗಳನ್ನು ಸಂಗ್ರಹ ಮಾಡಿದ್ದೇ ಆದಲ್ಲಿ ಕೂಡಲೇ ಇಲಾಖೆಗೆ ಒಪ್ಪಿಸಬೇಕು ಇಲ್ಲವೇ ಸೂಕ್ತವಾದ ಪ್ರಮಾಣ ಪತ್ರವನ್ನು ಇಲಾಖೆಯಿಂದ ಪಡೆಯಬೇಕು. ನಿಯಮ ಉಲ್ಲಂಘಿಸಿದರೆ 3 ರಿಂದ 7 ವರ್ಷ ಕಾರಾಗೃಹ ಶಿಕ್ಷೆ ವಿಧಿಸಬಹುದು ಮತ್ತು ಕನಿಷ್ಠ 10000 ರೂ ದಂಡ ವಿಧಿಸುವ ಸಾಧ್ಯತೆ ಕೂಡ ಇದೆ.
ಇದನ್ನೂ ಓದಿ – ಕರ್ನಾಟಕ ರಾಜ್ಯಕ್ಕೆ 50 ವರ್ಷಗಳ ಸಂಭ್ರಮ: ಕನ್ನಡ ರಾಜ್ಯೋತ್ಸವದ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ!
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ವರದಿ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ