Today Gold Rate: ಸತತ 3ನೇ ದಿನ ಚಿನ್ನದ ಬೆಲೆ ಭಾರಿ ಏರಿಕೆ.! ಇಲ್ಲಿದೆ ಇಂದಿನ ದರ ಪಟ್ಟಿ.

Picsart 25 04 12 07 17 02 505

WhatsApp Group Telegram Group
ಜಾಗತಿಕ ಆರ್ಥಿಕ ಬೆಳವಣಿಗೆಗಳ ಪರಿಣಾಮ: ಜನವರಿಯಿಂದ ಎಪ್ರಿಲ್ 11ರವರೆಗೆ ಚಿನ್ನದ ಬೆಲೆಯಲ್ಲಿ 22% ಏರಿಕೆ

ಇತ್ತೀಚಿನ ದಿನಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಕಂಡುಬಂದಿರುವ ಭಾರೀ ಏರಿಕೆ ಆರ್ಥಿಕ ಜಗತ್ತಿನಲ್ಲಿ ಸದ್ದು ಮಾಡುತ್ತಿದೆ. ಭಾರತೀಯರ ಆರ್ಥಿಕ ಮತ್ತು ಸಾಂಸ್ಕೃತಿಕ ಜೀವನದಲ್ಲಿ ಚಿನ್ನವು ವಿಶಿಷ್ಟ ಸ್ಥಾನ ಹೊಂದಿರುವುದರಿಂದ, ಇದರ ಬೆಲೆ ಏರಿಕೆ ನೇರವಾಗಿ ಸಾರ್ವಜನಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ(Internationally) ಉಂಟಾದ ರಾಜಕೀಯ ಮತ್ತು ಆರ್ಥಿಕ ಬೆಳವಣಿಗೆಗಳ(Political and economic developments) ಪರಿಣಾಮವಾಗಿ ಚಿನ್ನದ ಬೆಲೆಯು ಇತ್ತೀಚೆಗೆ ದಾಖಲೆಮಟ್ಟದಲ್ಲಿ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಏಪ್ರಿಲ್ 11, 2025ರಂದು ಚಿನ್ನವು ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದ್ದು, ವ್ಯಾಪಾರ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಹಾಗಿದ್ದರೆ ಇಂದಿನ ಚಿನ್ನದ ಬೆಲೆ ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಚಿನ್ನ-ಬೆಳ್ಳಿ (Gold and silver ) ಬೆಲೆ ಇಂದು, ಏಪ್ರಿಲ್ 12, 2025: Gold Price Today

ಏಪ್ರಿಲ್ ತಿಂಗಳ(April month) ಆರಂಭದಲ್ಲಿ ಚಿನ್ನದ ದರ ಕೊಂಚ ಏರಿದರೂ ಕೂಡ ತದನಂತರದ ದಿನಗಳಲ್ಲಿ ಚಿನ್ನದ ದರದಲ್ಲಿ ನಾವು ಇಳಿಕೆಯನ್ನು ಕಂಡೆವು. ಮೂರ್ನಾಲ್ಕು ದಿನಗಳ ಕಾಲ ಇಳಿಕೆಯನ್ನು ಕಂಡ ಚಿನ್ನದ ದರ ಇತ್ತೀಚಿಗೆ ಭಾರಿ ಏರಿಕೆಯನ್ನು ಕಾಣುತ್ತಿದೆ. ಈ ಏರಿಕೆಯನ್ನು ಗಮನಿಸಿದ ಗ್ರಾಹಕರು ಹಾಗೂ ಹೂಡಿಕೆದಾರರು ಚಿನ್ನ ಖರೀದಿಸುವ ಮುನ್ನ ಮೂರ್ನಾಲ್ಕು ಬಾರಿ ಯೋಚಿಸುತ್ತಿದ್ದಾರೆ. ಪ್ರತಿದಿನ ಚಿನ್ನದ ದರವನ್ನು ಗಮನಿಸುತ್ತಿದ್ದಾರೆ. ಹಾಗಿದ್ದರೆ, ಏಪ್ರಿಲ್ 12, 2025ರಂದು ಚಿನ್ನದ ಬೆಲೆಯಲ್ಲಿ (Gold rate) ಯಾವ ರೀತಿಯ ಬದಲಾವಣೆಗಳು (Changes) ಆಗಿವೆ ಎಂಬುದನ್ನು ನೋಡೋಣ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ : 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8, 736 ಆಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹9,541 ಆಗಿದ್ದು, 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 6,704 ಆಗಿದೆ. ನಿನ್ನಗೆ ಹೋಲಿಸಿದರೆ 266 ರೂ. ನಷ್ಟು ಏರಿಕೆಯಾಗಿದೆ. ಇನ್ನು,10 ಗ್ರಾಂ ಬೆಳ್ಳಿ ಬೆಲೆ: 97,200. ರೂ ನಷ್ಟಿದ್ದು.  ನಿನ್ನಗೆ ಹೋಲಿಸಿದರೆ  ರೂ., 200  ನಷ್ಟು  ಏರಿಕೆಯಾಗಿದೆ.

ಚಿನ್ನದ ಬೆಲೆ ಇತಿಹಾಸದ ಗರಿಷ್ಠಕ್ಕೆ ಏರಿಕೆ:

ಟ್ರಂಪ್ ಆಡಳಿತದ(Trump administration) ತೆರಿಗೆ ನಿರ್ಧಾರದಲ್ಲಿ 90 ದಿನಗಳ ವಿಳಂಬವಾಗಿರುವುದರಿಂದ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಮೇಲೆ ಹೆಚ್ಚಿದ ನಂಬಿಕೆ, ಭಾರತದಲ್ಲಿಯೂ ಅದೇ ಪ್ರಭಾವ ಬೀರಿದೆ. ಇಂಡಿಯಾ ಬುಲಿಯನ್ ಮತ್ತು ಜ್ಯುವೆಲ್ಲರ್ಸ್ ಅಸೋಸಿಯೇಶನ್ (IBJA) ನೀಡಿದ ಮಾಹಿತಿ ಪ್ರಕಾರ, ಏಪ್ರಿಲ್ 11 (ಶುಕ್ರವಾರ)ರಂದು 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ₹2,913 ರಷ್ಟು ಏರಿಕೆಯಾಗಿ ₹93,074 ಕ್ಕೆ ತಲುಪಿದೆ. ಹಿಂದಿನ ದರ ₹90,161 ಇತ್ತು. ಇದೇ ವೇಳೆ, ಬೆಳ್ಳಿಯ ದರ ಕೂಡ ₹1,958 ರಷ್ಟು ಏರಿಕೆಯಾಗಿ ಕೆಜಿಗೆ ₹92,627 ಕ್ಕೆ ತಲುಪಿದೆ.

ಇತ್ತೀಚಿಗೆ ಬೆಲೆಯಲ್ಲಿ ಆದ ಬದಲಾವಣೆಗಳು ಹೀಗಿವೆ:

ಮಾರ್ಚ್ 28 ರಂದು ಬೆಳ್ಳಿ ₹1,00,934 ಕ್ಕೆ ತಲುಪಿತ್ತು.
ಏಪ್ರಿಲ್ 3 ರಂದು ಚಿನ್ನ ₹91,205 ಕ್ಕೆ ತಲುಪಿತ್ತು.
ಜನವರಿ 1 ರಿಂದ ಎಪ್ರಿಲ್ 11 ರವರೆಗೆ ಚಿನ್ನದ ಬೆಲೆಯಲ್ಲಿ ₹16,912 (ಅಂದರೆ 22%)ರಷ್ಟು ಏರಿಕೆ ಕಂಡುಬಂದಿದೆ.
ಈ ಅವಧಿಯಲ್ಲಿ ಬೆಳ್ಳಿಯ ದರವೂ ₹6,610 (7%)ರಷ್ಟು ಏರಿಕೆಯಾಗಿದೆ.

ಎಪ್ರಿಲ್ 11 ಚಿನ್ನದ ದರ ಹೀಗಿದೆ:

24 ಕ್ಯಾರೆಟ್ (10 ಗ್ರಾಂ): ₹93,074
22 ಕ್ಯಾರೆಟ್ (10 ಗ್ರಾಂ): ₹85,256
18 ಕ್ಯಾರೆಟ್ (10 ಗ್ರಾಂ): ₹69,806

ಚಿನ್ನ ಖರೀದಿಸುವಾಗ ಗಮನಿಸಬೇಕಾದ ಮೂರು ಪ್ರಮುಖ ಅಂಶಗಳು ಯಾವುವು?:

1. ಪ್ರಮಾಣೀಕೃತ (Hallmarked) ಚಿನ್ನವನ್ನು ಮಾತ್ರ ಖರೀದಿಸಿ:
ಯಾವಾಗಲೂ BIS (Bureau of Indian Standards) ಪ್ರಮಾಣೀಕೃತ ಚಿನ್ನವನ್ನು ಖರೀದಿಸಿ. ಇದರಲ್ಲಿ 6-ಅಂಕಿಯ ಹಾಲ್‌ಮಾರ್ಕ್ ಕೋಡ್ ಇರುವಂತೆ ನೋಡಿಕೊಳ್ಳಿ. ಉದಾ: AZ4524. ಇದು HUID (Hallmark Unique Identification) ಸಂಖ್ಯೆ ಎಂದು ಪರಿಚಿತವಾಗಿದೆ.
2. ಬೆಲೆಯನ್ನು ನಿಖರವಾಗಿ ಪರಿಶೀಲಿಸಿ
ಖರೀದಿಯ ದಿನದ ಚಿನ್ನದ ತೂಕ ಹಾಗೂ ಬೆಲೆಯನ್ನು ವಿವಿಧ ಮೂಲಗಳಿಂದ ಖಚಿತಪಡಿಸಿಕೊಳ್ಳಿ. IBJA ವೆಬ್‌ಸೈಟ್ ಅಥವಾ ಅಧಿಕೃತ ಆಪ್(Official App) ಮೂಲಕ ಮಾಹಿತಿ ಪಡೆಯಬಹುದು. 24 ಕ್ಯಾರೆಟ್ ಅತ್ಯಂತ ಶುದ್ಧವಾದ ಚಿನ್ನವಾದರೂ, ಅದು ನಷ್ಟಕ್ಕೆ ಒಳಪಡುವ ಸಾಧ್ಯತೆ ಇರುವುದರಿಂದ ಆಭರಣ ತಯಾರಿಕೆಗೆ ಸಾಮಾನ್ಯವಾಗಿ 22 ಕ್ಯಾರೆಟ್ ಅಥವಾ 18 ಕ್ಯಾರೆಟ್ ಬಳಸಲಾಗುತ್ತದೆ.
3. ನಗದು ಪಾವತಿ ಮಾಡಬೇಡಿ, ಬಿಲ್ ಪಡೆದುಕೊಳ್ಳಿ:
ಡಿಜಿಟಲ್ ಪಾವತಿ ವಿಧಾನಗಳನ್ನು(Digital payment methods) ಬಳಸುವುದು ಸುರಕ್ಷಿತ. ಪಾವತಿ ಮಾಡಿದ ನಂತರ ಬಿಲ್ ಕಡ್ಡಾಯವಾಗಿ ಪಡೆದುಕೊಳ್ಳಿ. ಆನ್‌ಲೈನ್‌ನಲ್ಲಿ ಖರೀದಿಸಿದರೆ ಪ್ಯಾಕೇಜಿಂಗ್ ಪರಿಶೀಲನೆ ಕೂಡ ಅಗತ್ಯವಿರುತ್ತದೆ.

ಚಿನ್ನದ ಬೆಲೆಯ ಈ ಭಾರೀ ಏರಿಕೆಗೆ ಜಾಗತಿಕ ಆರ್ಥಿಕ ಭೀತಿಗಳು, ರಾಜಕೀಯ ತಿರುವುಗಳು, ಹಾಗೂ ಭದ್ರ ಬಂಡವಾಳದ ಮೇಲೆ ಬಿದ್ದ ನಂಬಿಕೆ ಕಾರಣವಾಗಿವೆ. ಈ ಸಂದರ್ಭ, ಗ್ರಾಹಕರು ವೈಯಕ್ತಿಕ ಹಣಕಾಸು ನಿರ್ಧಾರಗಳಲ್ಲಿ ಹೆಚ್ಚು ಎಚ್ಚರಿಕೆ ವಹಿಸಬೇಕು. ಪ್ರಮಾಣಿತ ಚಿನ್ನ ಖರೀದಿ, ನಿಖರ ದರ ಪರಿಶೀಲನೆ ಮತ್ತು ಸರಿಯಾದ ಪಾವತಿ ವಿಧಾನಗಳಿಂದ ಚಿನ್ನ ಖರೀದಿ ಮಾಡಿ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!