ಕೇಂದ್ರ ಸರ್ಕಾರ(central government) ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಎರಡು ರೂಪಾಯಿ ಇಳಿಕೆ ಮಾಡಿದೆ. ಹೊಸ ಬೆಲೆಗಳು ಮಾರ್ಚ್ 15, ಅಂದರೆ ಇಂದು ಬೆಳಿಗ್ಗೆ 6 ರಿಂದ ಜಾರಿಗೆ ಬಂದಿದೆ. ಇದರ ಬಗ್ಗೆ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಮಾಹಿತಿಯನ್ನು ತಿಳಿಸಿದೆ. ಈ ಪೆಟ್ರೋಲ್ ಹಾಗೂ ಡೀಸೆಲ್ ಅನಿಲಗಳ ನಿಖರವಾದ ಬೆಲೆಯನ್ನು ಹಾಗೂ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ಈ ವರದಿಯನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಪೆಟ್ರೋಲ್ ಬೆಲೆಯಲ್ಲಿ 2 ರೂಪಾಯಿ ಇಳಿಕೆ(Petrol price reduced by Rs 2) :
ವಾಹನ ಸಂಚಾಲಕರಿಗೆ ಇದೊಂದು ಖುಷಿಯ ವಿಷಯ ಎಂದೇ ಹೇಳಬಹುದು. ಲೋಕಸಭೆ ಚುನಾವಣೆಗೆ(lok sabha election) ಮುನ್ನ ಕೇಂದ್ರ ಸರ್ಕಾರ ದೇಶದ ಜನತೆಗೆ ಬೆಲೆ ಏರಿಕೆಯ ತತ್ತರದಿಂದ ಕೊಂಚ ನಿರಾಳತೆ ಎನಿಸುವ ಸುದ್ದಿಯನ್ನು ನೀಡಿದೆ, ದೇಶಾದ್ಯಂತ ಇಂದು ಶುಕ್ರವಾರದಿಂದ ಪೆಟ್ರೋಲ್ ಮತ್ತು ಡೀಸೆಲ್(diesel) ಬೆಲೆ ಲೀಟರ್‌ಗೆ 2 ರೂಪಾಯಿ ಇಳಿಕೆಯಾಗಿದೆ. ಈ ನಿರ್ಧಾರದ ಬಗ್ಗೆ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಪ್ರಧಾನಿ ಮೋದಿಯನ್ನು ಶ್ಲಾಘಿಸಿದ್ದಾರೆ. ಭಾರತವು ಇಂಧನ ಲಭ್ಯತೆ, ಕೈಗೆಟುಕುವಿಕೆ ಮತ್ತು ಸ್ಥಿರತೆಯನ್ನು ಕಾಪಾಡಿಕೊಂಡಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗದೆ, ಇಳಿಕೆ ಕಂಡಿರುವ ಏಕೈಕ ದೇಶ ಭಾರತ ಎಂದು ಸಚಿವರು ಬರೆದಿದ್ದಾರೆ. ಇಂದು ಕರ್ನಾಟಕದ ರಾಜಧಾನಿಯಾದ ನಮ್ಮ ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 99.94 ರೂಪಾಯಿ ಹಾಗೂ ಡೀಸೆಲ್ ಬೆಲೆ 85.89 ರೂಪಾಯಿಗೆ ಇಳಿಕೆಯನ್ನು ಕಂಡಿದೆ.
ಇತ್ತೀಚೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಇಳಿಕೆಯಾಗಿತ್ತು. ಅಲ್ಲದೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಎಲ್‌ಪಿಜಿ ಹಾಗೂ ಸಿಎನ್‌ಜಿ ಬೆಲೆಯಲ್ಲಿ ಕಡಿತವಾಗಿತ್ತು. ಇದೀಗ ಕೇಂದ್ರ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನೂ ಕಡಿತಗೊಳಿಸಿ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.
ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಬೆಲೆಯ ದರ :
ದೆಹಲಿಯಲ್ಲಿ 96.72 ರೂ.ನಿಂದ 94.72 ರೂ.ಗೆ ಇಳಿಕೆಯಾಗಿದೆ
ಬೆಂಗಳೂರಿನಲ್ಲಿ 101.94 ರೂ.ನಿಂದ 99.94 ರೂ.ಗೆ ಇಳಿಕೆಯಾಗಿದೆ
ಮುಂಬೈನಲ್ಲಿ ದರಗಳು 106.31 ರಿಂದ 104.21 ರೂ. ಗೆ ಇಳಿಕೆಯಾಗಿದೆ
ಕೋಲ್ಕತ್ತಾದಲ್ಲಿ ಪೆಟ್ರೋಲ್ ಬೆಲೆ 106.3 ರಿಂದ 103.94 ಕ್ಕೆ ಇಳಿಕೆಯಾಗಿದೆ
ಚೆನ್ನೈನಲ್ಲಿ ಪೆಟ್ರೋಲ್ ದರ 102.63 ರಿಂದ 100.75 ಕ್ಕೆ ಇಳಿಕೆಯಾಗಿದೆ
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
- ಲೋಕಸಭಾ ಚುನಾವಣೆ ದಿನಾಂಕ ಘೋಷಣೆ! ಇಲ್ಲಿದೆ ಮಾಹಿತಿ
- ಸೋಲಾರ್ ಪಂಪ್ ಸೆಟ್ ಖರೀದಿಗೆ 50% ಸಬ್ಸಿಡಿ ವಿತರಣೆಗೆ ಅರ್ಜಿ ಅಹ್ವಾನ. ಇಲ್ಲಿದೆ ಅರ್ಜಿ ಲಿಂಕ್
- ಉಚಿತ ಆಧಾರ್ ಕಾರ್ಡ್ ತಿದ್ದುಪಡಿ ಡೆಡ್ಲೈನ್ ವಿಸ್ತರಣೆ, ಮತ್ತೆ 3 ತಿಂಗಳು ಅವಕಾಶ
- ಬಿಜೆಪಿ ಅಭ್ಯರ್ಥಿಗಳ 2ನೇ ಪಟ್ಟಿ ಪ್ರಕಟ; ದಾವಣಗೆರೆಗೆ ಶ್ರೀಮತಿ ಗಾಯತ್ರಿ ಸಿದ್ದೇಶ್ವರ..! ಪ್ರತಾಪ್ ಸಿಂಹಗೆ ತಪ್ಪಿದ ಟಿಕೆಟ್
- ಗೃಹಲಕ್ಷ್ಮಿ ಯೋಜನೆಯ ಎಲ್ಲಾ ಪೆಂಡಿಂಗ್ ಹಣ ಬಿಡುಗಡೆ, 2000/- ಹಣ ಬರದೇ ಇದ್ದವರು ಹೀಗೆ ಮಾಡಿ!
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.