ಏ.1ರಿಂದ ರಾಜ್ಯದ ಟೋಲ್ ದರ(Toll rate) ಏರಿಕೆ: ಜನಸಾಮಾನ್ಯರ ಮೇಲೆ ಮತ್ತೊಂದು ಆರ್ಥಿಕ ಹೊರೆ!
ರಾಜ್ಯದಲ್ಲಿ ಈಗಾಗಲೇ ನಿರಂತರ ಬೆಲೆ ಏರಿಕೆಯಿಂದ ತತ್ತರಿಸುತ್ತಿರುವ ನಾಗರಿಕರಿಗೆ ಏಪ್ರಿಲ್(April) ತಿಂಗಳ ಮೊದಲ ದಿನದಿಂದ ಮತ್ತೊಂದು ಆರ್ಥಿಕ ಹೊರೆ ಬೀಳಲಿದೆ. ಇಂಧನ ದರ ಏರಿಕೆ, ಜೀವನಾವಶ್ಯಕ ವಸ್ತುಗಳ ದುಬಾರಿ ಮತ್ತು ವಸತಿ ಖರ್ಚುಗಳ ನಡುವೆಯೇ ಇದೀಗ ರಸ್ತೆ ಸಂಚಾರಕ್ಕೂ ಹೆಚ್ಚುವರಿ ಹಣ ತೆರಬೇಕು ಎಂಬುದರಿಂದ ಜನ ಸಾಮಾನ್ಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಏ.1ರಿಂದ ರಾಜ್ಯದ 66 ಟೋಲ್ ಪ್ಲಾಜಾಗಳಲ್ಲಿ(toll plazas) ದರ ಶೇ.3 ರಿಂದ ಶೇ.5ರಷ್ಟು ಹೆಚ್ಚಾಗಲಿದ್ದು, ಈ ಕುರಿತಂತೆ ಶೀಘ್ರದಲ್ಲಿಯೇ ಅಧಿಕೃತ ಅಧಿಸೂಚನೆ(Official notification) ಹೊರಡಿಸಲಿದೆ. ಹಾಗಿದ್ದರೆ ಟೋಲ್ ಏಕೆ ಏರಿಕೆಯಾಗುತ್ತಿದೆ? ಟೋಲ್ ಹೆಚ್ಚಳದ ಹಿಂದಿನ ಲೆಕ್ಕಾಚಾರವೇನು ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು ಸೇರಿದಂತೆ ಪ್ರಮುಖ ಹೆದ್ದಾರಿಗಳಲ್ಲೂ ದರ ಹೆಚ್ಚಳ:
ಈ ದರ ಹೆಚ್ಚಳ ರಾಜ್ಯದ ಬಹುತೇಕ ಪ್ರಮುಖ ಹೆದ್ದಾರಿಗಳ ಟೋಲ್ ಪ್ಲಾಜಾಗಳಿಗೂ ಅನ್ವಯವಾಗಲಿದೆ. ಮುಖ್ಯವಾಗಿ,
ಬೆಂಗಳೂರು-ಮೈಸೂರು ಹೆದ್ದಾರಿ(Bangalore-Mysore Highway): ಕಣಿಮಿಣಿಕೆ ಮತ್ತು ಶೇಷಗಿರಿಹಳ್ಳಿ ಟೋಲ್ ಪ್ಲಾಜಾ.
ಬೆಂಗಳೂರು-ತಿರುಪತಿ ಹೆದ್ದಾರಿ(Bangalore-Tirupati Highway): ನಂಗ್ಲಿ ಟೋಲ್ ಪ್ಲಾಜಾ.
ಬೆಂಗಳೂರು-ಹೈದರಾಬಾದ್ ಹೆದ್ದಾರಿ(Bangalore-Hyderabad Highway): ಬಾಗೇಪಲ್ಲಿ ಟೋಲ್ ಪ್ಲಾಜಾ.
ಬೆಂಗಳೂರು ವಿಮಾನ ನಿಲ್ದಾಣ ಮಾರ್ಗ(Bangalore Airport Route): ಸಾದಹಳ್ಳಿ ಟೋಲ್ ಪ್ಲಾಜಾ.
ಸ್ಯಾಟಲೈಟ್ ಟೌನ್ ರಿಂಗ್ ರಸ್ತೆ (STRR): ಹುಲಿಕುಂಟೆ ಮತ್ತು ನಲ್ಲೂರು ದೇವನಹಳ್ಳಿ ಟೋಲ್ ಪ್ಲಾಜಾ.
ಈ ಎಲ್ಲ ಸ್ಥಳಗಳಲ್ಲಿ ವಾಹನ ಚಾಲಕರು ಹೆಚ್ಚುವರಿ ಟೋಲ್ ಶುಲ್ಕವನ್ನು(Toll charges) ಕಟ್ಟಬೇಕಾಗುತ್ತದೆ.
ಟೋಲ್ ಹೆಚ್ಚಳದ ಹಿಂದಿನ ಲೆಕ್ಕಾಚಾರವೇನು?:
ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ (MoRTH) ಪ್ರಕಾರ, ದೇಶದಲ್ಲಿ ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಟೋಲ್ ಸಂಗ್ರಹ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. 2023-24ರ ಹಣಕಾಸು ವರ್ಷದಲ್ಲಿ ದೇಶದಲ್ಲಿ ಒಟ್ಟು ₹64,809.86 ಕೋಟಿ ಟೋಲ್ ಸಂಗ್ರಹಗೊಂಡಿದ್ದು, ಇದು ಹಿಂದಿನ ವರ್ಷಕ್ಕಿಂತ 35% ಹೆಚ್ಚಾಗಿದೆ. 2019-20 ರಲ್ಲಿ ಈ ಸಂಗ್ರಹ ₹27,503 ಕೋಟಿ ಮಾತ್ರವಾಗಿತ್ತು.
ಟೋಲ್ ದರ ಏರಿಕೆ ಯಾಕೆ?:
2008ರ “ರಾಷ್ಟ್ರೀಯ ಹೆದ್ದಾರಿ ಶುಲ್ಕ (ದರಗಳು ಮತ್ತು ಸಂಗ್ರಹದ ನಿರ್ಣಯ) ನಿಯಮ” ಪ್ರಕಾರ, ಟೋಲ್ ದರಗಳು(Toll rates) ವರ್ಷಕ್ಕೊಮ್ಮೆ ಪರಿಷ್ಕರಿಸಲಾಗುತ್ತದೆ. ಈ ಪರಿಷ್ಕರಣೆ ಸಗಟು ಬೆಲೆ ಸೂಚ್ಯಂಕ (WPI) ಆಧರಿತವಾಗಿದ್ದು, ಕಳೆದ ವರ್ಷಗಳ ಅನ್ವಯ ನಿರ್ಧರಿಸಲಾಗುತ್ತದೆ. ಈ ನಿಯಮದ ಪ್ರಕಾರ, ಪ್ರತಿ ವರ್ಷ ಏಪ್ರಿಲ್ 1ರಂದು ಹೊಸ ದರಗಳು ಜಾರಿಗೆ ಬರುತ್ತವೆ.
ಇನ್ನು, ಕರ್ನಾಟಕ ರಾಜ್ಯ ಪ್ರಯಾಣ ನಿರ್ವಾಹಕರ ಸಂಘದ ಅಧ್ಯಕ್ಷ ರಾಧಾಕೃಷ್ಣ ಹೊಳ್ಳ(Radhakrishna Holla) ಅವರ ಪ್ರಕಾರ, ಟೋಲ್ ದರ ಹೆಚ್ಚಳದಿಂದ ಪ್ರವಾಸಿ ಕ್ಯಾಬ್, ಟ್ಯಾಕ್ಸಿ, ಲಾರಿಗಳು ಮತ್ತು ಬಸ್‌ಗಳ(Bus) ಸಂಚಾರ ವೆಚ್ಚ ಹೆಚ್ಚಲಿದೆ. ಇದರಿಂದಾಗಿ ಪ್ರಯಾಣಿಕರು ಹಾಗೂ ವ್ಯಾಪಾರ ಉದ್ಯಮಗಳ ಮೇಲೂ ಪರಿಣಾಮ ಬೀಳಲಿದೆ. “ನಾವು ಟ್ಯಾಕ್ಸಿಗಳನ್ನು(Taxis) ನಿರ್ವಹಿಸುತ್ತೇವೆ, ಆದರೆ ಟೋಲ್ ದರ ಏರಿಕೆಯಿಂದಾಗುವ ಹೆಚ್ಚುವರಿ ಖರ್ಚನ್ನು ಗ್ರಾಹಕರ ಮೇಲೆಯೇ ಹೇರಬೇಕಾಗುತ್ತದೆ,” ಎಂದು ಅವರು ಖಾಸಗಿ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ.
ನಾಗರಿಕರಿಗೆ ಸರ್ಕಾರದಿಂದ ಬಹುತೇಕ ಯಾವುದೇ ಭಾರಿ ರಿಯಾಯಿತಿ ದೊರೆಯದ ಹಿನ್ನೆಲೆಯಲ್ಲಿ ಟೋಲ್ ದರ ಏರಿಕೆ ಮತ್ತಷ್ಟು ಆರ್ಥಿಕ ಹೊರೆ ನೀಡಲಿದೆ. ದಿನನಿತ್ಯದ ಸಂಚಾರ ಮಾಡಬೇಕಾದ ವಾಹನ ಸವಾರರು ಇದರಿಂದ ಹೆಚ್ಚಿನ ಹಣ ವ್ಯಯಿಸಬೇಕಾದ ಅನಿವಾರ್ಯತೆಯಲ್ಲಿದ್ದಾರೆ. ಮುಂದಿನ ದಿನಗಳಲ್ಲಿ ಈ ದರ ಹೆಚ್ಚಳಕ್ಕೆ ಸಾರ್ವಜನಿಕ ಆಕ್ರೋಶ ಎಷ್ಟರ ಮಟ್ಟಿಗೆ ವ್ಯಕ್ತವಾಗಲಿದೆ ಎಂಬುದನ್ನು ಕಾದು ನೋಡಬೇಕು.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.