ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, 15000 ರೂ. ಗಳಲ್ಲಿ ಸಿಗುವ ಟಾಪ್ 5 ಬೆಸ್ಟ್ 5G ಸ್ಮಾರ್ಟ್ ಫೋನ್ ಗಳ(Top 5 Best 5G smart phones) ಕುರಿತು ಮಾಹಿತಿಯನ್ನು ತಿಳಿಸಿಕೊಡಲಾಗುತ್ತದೆ. ಆ ಬೆಸ್ಟ್ 5G ಸ್ಮಾರ್ಟ್ ಫೋನ್ಸ್ ಯಾವವು ಮತ್ತು ಅದರ ಬೆಲೆ ಎಷ್ಟಿರಬಹುದು ಎಂದು ತಿಳಿಯಲು ಈ ವರದಿಯನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.
15 ಸಾವಿರಗಳಲ್ಲಿ ಬೆಸ್ಟ್ 5ಜಿ ಸ್ಮಾರ್ಟ್ ಫೋನ್ :
ಸ್ನೇಹಿತರೆ, ನೀವು ಅಗ್ಗದ ಬೆಲೆಯಲ್ಲಿ ಉತ್ತಮ ಕ್ಯಾಮೆರಾ, ಡಿಸ್ಪ್ಲೇ ಮತ್ತು ಬ್ಯಾಟರಿಯನ್ನು ಹೊಂದಿರುವ ಸ್ಮಾರ್ಟ್ ಫೋನ್ ಹುಡಕುತ್ತಿದ್ದೀರಾ?, ಹಾಗಿದ್ದಲಿ ನಿಮ್ಮ ಹುಡುಕಾಟ ಇಲ್ಲಿಗೆ ಮುಕ್ತಯಾಗೊಂಡಿದೆ. ಇವತ್ತಿನ ನಮ್ಮ ಲೇಖನದಲ್ಲಿ ನೀವು ಒಂದು ಸ್ಮಾರ್ಟ್ ಫೋನ್ ನಲ್ಲಿ ಬಯಸುತ್ತಿರುವ ಉತ್ತಮ ಕ್ಯಾಮೆರಾ, ಡಿಸ್ಪ್ಲೇ ಮತ್ತು ಬ್ಯಾಟರಿ ಹಾಗೂ ಮುಖ್ಯವಾಗಿ ಬಜೆಟ್ – ಫ್ರೆಂಡ್ಲಿ ಟಾಪ್ ಬ್ರಾಂಡ್ ಸ್ಮಾರ್ಟ್ ಫೋನ್ ಗಳ ಕುರಿತು ತಿಳಿಸಿಕೊಡಲಿದ್ದೆವೆ.
Motorola G54 5G
Moto G54 ನ ಪ್ರಮುಖ ವೈಶಿಷ್ಟ್ಯಗಳೆಂದರ
ಇದು Mediatek ಡೈಮೆನ್ಸಿಟಿ 7020 ಪ್ರೊಸೆಸರ್‌ನೊಂದಿಗೆ ಬರುತ್ತದೆ. ಡಿಸ್ಪ್ಲೇ ನೋಡುವುದಾದ್ರೆ 6.5 ಇಂಚಿನ HD plus IPS LCD ಡಿಸ್ಪ್ಲೇ ಮತ್ತು 120 Hz ರಿಫ್ರೆಶ್ ದರವನ್ನು ಹೊಂದಿರುತ್ತದೆ. ಸ್ಟೋರೇಜ್ ನ ಎರಡು ರೂಪಾಂತರಗಳನ್ನು ನೀವು ನೋಡಬಹುದು 12GB RAM+256GB ಮತ್ತು 8GB RAM+128 GB. ಇನ್ನು ಇದರ ಕ್ಯಾಮೆರಾ ವನ್ನು ಗಮನಿಸಿದರೆ, ಇದು ಡುಯಲ್ ಕ್ಯಾಮೆರಾ 50-ಮೆಗಾಪಿಕ್ಸೆಲ್ ಮತ್ತು 8MP ಅಲ್ಟ್ರಾ ವೈಡ್ ಕ್ಯಾಮೆರಾ ಹೊಂದಿದೆ. ಮುಂಭಾಗದಲ್ಲಿ 16 MP ಸೆಲ್ಫಿ ಕ್ಯಾಮೆರಾ ಪಡೆಯುತ್ತಿರಿ. 6000 mAh ಬ್ಯಾಟರಿ ಬೆಂಬಲಿತವಾಗಿದೆ. ನೀವು ₹ 14,499 ಗಳಲ್ಲಿ 8GB RAM+128 GB ಸ್ಟೋರೇಜ್ ರೂಪಾಂತರವನ್ನು ಖರೀದಿಸಬುಹುದು.
Realme Nazro 60X 5G :
Realme Narzo 60x 5G ಅನ್ನು ಸೆಪ್ಟೆಂಬರ್ 6, 2023 ರಂದು ಪರಿಚಯಿಸಲಾಯಿತು. ಈ ಫೋನ್ 6.72-ಇಂಚಿನ ಟಚ್‌ಸ್ಕ್ರೀನ್ ಡಿಸ್ಪ್ಲೇಯನ್ನು 120 Hz ನ ಹೆಚ್ಚಿನ ರಿಫ್ರೆಶ್ ದರದೊಂದಿಗೆ ಬರುತ್ತದೆ. ಇದು ದೃಢವಾದ ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 6100+ ಪ್ರೊಸೆಸರ್‌ನಿಂದ ಚಾಲಿತವಾಗಿದೆ ಮತ್ತು 6GB RAM + 128 GB ಸ್ಟೋರೇಜ್ ಹೊಂದಿರುತ್ತದೆ. ಹಿಂಭಾಗದ 50-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ# ಮತ್ತು 2-ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಒಳಗೊಂಡಿದೆ. ಸೆಲ್ಫಿಗಳಿಗಾಗಿ, 8-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾ ಇದೆ. Realme Narzo 60x 5G Android 13 ನಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು 5000mAh ಬ್ಯಾಟರಿಯನ್ನು ಹೊಂದಿದೆ, 33W ನಲ್ಲಿ ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಈ ಸ್ಮಾರ್ಟ್ ಫೋನ್ ಬೆಲೆ ಕೇವಲ 13,499 ರೂ.
ಇದನ್ನೂ ಓದಿ – Bank Loan – ಬ್ಯಾಂಕ್ ನಲ್ಲಿ ಸಾಲ ಪಡೆಯುವವರಿಗೆ ಆರ್ ಬಿ ಐ ನಿಂದ ಹೊಸ ರೂಲ್ಸ್ ಜಾರಿ
Samsung Galaxy F14 5G :
ಹ್ಯಾಂಡ್‌ಸೆಟ್‌ನ ಡಿಸ್ಪ್ಲೇಯು ಗೊರಿಲ್ಲಾ ಗ್ಲಾಸ್ 5 ರಕ್ಷಣೆಯೊಂದಿಗೆ 6.6 ಇಂಚಿನ ಪೂರ್ಣ HD+ ಆಗಿದೆ. 25W ವೇಗದ ಚಾರ್ಜಿಂಗ್‌ಗೆ ಬೆಂಬಲವನ್ನು ಹೊಂದಿರುವ 6,000mAh ಬ್ಯಾಟರಿಯನ್ನು ಒಳಗೊಂಡಿದೆ. ಹಿಂಬದಿಯ ಕ್ಯಾಮರಾ ವೈಶಿಷ್ಟ್ಯಗಳು 50 MP+ 2 MP ಮತ್ತು ಸೆಲ್ಫಿಗಾಗಿ ಮುಂಬದಿಯಲ್ಲಿ 13MP ಒಳಗೊಂಡಿದೆ. 6GB RAM +128 GB ಸ್ಟೋರೇಜ್ ನೊಂದಿಗೆ ಈ ಸ್ಮಾರ್ಟ್ ಫೋನ್ ₹ 12,490 ಯಲ್ಲಿ ಖರೀದಿಸಬಹುದು.
Poco X5 5G :
Poco X5 6.67-ಇಂಚಿನ ಪೂರ್ಣ HD+ AMOLED ಡಿಸ್ಪ್ಲೇ ಜೊತೆಗೆ 120Hz ರಿಫ್ರೆಶ್ ದರ ಮತ್ತು ಗೊರಿಲ್ಲಾ ಗ್ಲಾಸ್ 3 ರಕ್ಷಣೆಯೊಂದಿಗೆ ಬರುತ್ತದೆ. Poco X5 ಸ್ನಾಪ್‌ಡ್ರಾಗನ್ 695 ಚಿಪ್‌ಸೆಟ್ ಅನ್ನು ಹೊಂದಿದೆ. ಇದು 33W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುವ 5,000mAh ಬ್ಯಾಟರಿಯನ್ನು ಒಳಗೊಂಡಿದೆ. ಹಿಂಬದಿಯಲ್ಲಿ 48 MP ಪ್ರಾಥಮಿಕ ಕ್ಯಾಮೆರಾ ಮತ್ತು 8MP ಅಲ್ಟ್ರಾ-ವೈಡ್ ಕ್ಯಾಮೆರಾ, 2MP ಮ್ಯಾಕ್ರೋ ಟ್ರಿಪ್ಪಲ್ ಕ್ಯಾಮೆರಾ ಸೆಟಪ್ ಮತ್ತು ಸೆಲ್ಫಿಗಾಗಿ ಮುಂಬದಿಯಲ್ಲಿ 16 MP ಒಳಗೊಂಡಿದೆ. 6GB RAM +128 GB ಸ್ಟೋರೇಜ್ ನೊಂದಿಗೆ ಈ ಸ್ಮಾರ್ಟ್ ಫೋನ್ ₹ 14,499 ಯಲ್ಲಿ ಖರೀದಿಸಬಹುದು.
Infinix hot 30 5G:
ಈ ಸ್ಮಾರ್ಟ್‌ಫೋನ್ 6000mAh ಬ್ಯಾಟರಿಯನ್ನು ಹೊಂದಿದೆ, 6.78-ಇಂಚಿನ FHD+ ಡಿಸ್‌ಪ್ಲೇ ಜೊತೆಗೆ 120Hz ರಿಫ್ರೆಶ್ ರೇಟ್, ಮತ್ತು MediaTek Dimensity 6020 ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. Infinix Hot 30 5G 50 ಮೆಗಾಪಿಕ್ಸೆಲ್ ಡ್ಯುಯಲ್ ಕ್ಯಾಮೆರಾ ಸೆಟಪ್ ಮತ್ತು 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾವನ್ನು ಒಳಗೊಂಡಿದೆ. 8GB RAM +128 GB ಸ್ಟೋರೇಜ್ ನೊಂದಿಗೆ ಈ ಸ್ಮಾರ್ಟ್ ಫೋನ್ ನ ಬೆಲೆ ₹ 12,499 ಆಗಿರುತ್ತದೆ.
ಈ ಮೇಲಿರುವ ಟಾಪ್ ಬ್ರಾಂಡ್ ಗಳಲ್ಲಿ ತಮಗೆ ಅನುಕೂಲವಾಗುವಂತಹ ಹಾಗೂ ಉತ್ತಮ ಫೀಚರ್ಸ್ ಹೊಂದಿರುವ ಸ್ಮಾರ್ಟ್ ಫೋನ್ ಅನ್ನು ನಿಮ್ಮದಾಗಿಸಿಕೊಳ್ಳಿ. ಹಾಗೆಯೇ ಇಂತಹ ಉತ್ತಮ ಸ್ಮಾರ್ಟ್ ಫೋನ್ ಗಳ ಮಾಹಿತಿಯನ್ನು ತಿಳಿಸಿಕೊಡುವ ಈ ವರದಿಯನ್ನು ನಿಮ್ಮ ಎಲ್ಲಾ ಸ್ನೇಹಿತರಲ್ಲಿ ಮತ್ತು ಬಂಧು- ಭಾಂದವರಲ್ಲಿ ಶೇರ್ ಮಾಡಲು ಮರಿಯಬೇಡಿ, ಧನ್ಯವಾದಗಳು.
ಇದನ್ನೂ ಓದಿ – ಕರ್ನಾಟಕ ರಾಜ್ಯಕ್ಕೆ 50 ವರ್ಷಗಳ ಸಂಭ್ರಮ: ಕನ್ನಡ ರಾಜ್ಯೋತ್ಸವದ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ!
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ವರದಿ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ