ಪ್ರವಾಸ ಪ್ರಿಯರಿಗೆ ಗುಡ್ ನ್ಯೂಸ್, ರಾಜ್ಯ ಸರ್ಕಾರದಿಂದ 3 ಭರ್ಜರಿ ಟೂರ್ ಪ್ಯಾಕೇಜ್ ಘೋಷಣೆ… ಇಲ್ಲಿದೆ ಸಂಪೂರ್ಣ ಮಾಹಿತಿ….!
ಪ್ರವಾಸೋದ್ಯಮ (Tourism) ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಸಣ್ಣ ಮಕ್ಕಳಿಂದ ಹಿಡಿದು ವಯಸ್ಕರ ವರೆಗೂ ಪ್ರಾವಾಸಕ್ಕೆ ತೆರಳಲು ಇಚ್ಛೆ ಪಡುತ್ತಾರೆ. ದಿನ ಬೆಳಗ್ಗೆ ಎದ್ದರೆ ಸಾಕು ಅದೇ ಕೆಲಸ ಕಾರ್ಯಗಳು, ದಿನನಿತ್ಯ ಜೀವನ ದಲ್ಲಿ ಇದನೆಲ್ಲ ನೋಡಿ ನೋಡಿ ಮನಸ್ಸಿಗೆ ಸ್ವಲ್ಪ ವಿಶ್ರಾಂತಿ ಪಡೆಯಲು ಎಲ್ಲಾದರೂ ದೂರ ಹೋಗಬೇಕು ಅನಿಸುತ್ತದೆ. ಆದರೆ ಇದಕ್ಕೆ ಹಲವು ಸಮಸ್ಯೆಗಳು ಎದುರಾಗುತ್ತವೆ. ಮೊದಲನೆಯದಾಗಿ ಆರ್ಥಿಕ ಸಮಸ್ಯೆ (Economic problem) ಇನ್ನು ಆರ್ಥಿಕವಾಗಿ ಇದ್ದರೂ ಕೂಡ ಯಾವ ಸ್ಥಳಗಳಿಗೆ ಪ್ರವಾಸ ಹೊರಡಬೇಕು? ಹೇಗೆ ಹೊರಡಬೇಕು? ಎಂಬ ಗೊಂದಲಗಳು ಇರುತ್ತವೆ.
ಆದರೆ ಇದೀಗ ಪ್ರವಾಸ ಹೋಗಲು ಇಚ್ಛೆ ಪಡುವವರು ಚಿಂತಿಸಬೇಕಾಗಿಲ್ಲ. ಹೌದು, ಯಾಕೆಂದರೆ ಕರ್ನಾಟಕ ಸರ್ಕಾರ ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ಗುಡ್ ನ್ಯೂಸ್‌ವೊಂದನ್ನು ನೀಡಿದೆ. ರಾಜ್ಯ ಸರ್ಕಾರವು (state government) ಮೂರು ಟೂರ್ ಪ್ಯಾಕೇಜ್‌ಗಳಿಗೆ ಭರ್ಜರಿ ಸಬ್ಸಿಡಿ ಘೋಷಣೆ ಮಾಡಿದೆ. ಹಾಗಾದರೆ ಎಲ್ಲೆಲ್ಲಿಗೆ ಪ್ರವಾಸ ಎಲ್ಲಿಂದ ಆರಂಭವಾಗಲಿದೆ ಹಾಗೂ ಸಮಯ, ದಿನಾಂಗಳ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಕರ್ನಾಟಕ ಸರ್ಕಾರವು (Karnataka government) ಯಾತ್ರೆ ಭಾಗ್ಯ ಯೋಜನೆಯಡಿ ಒಟ್ಟು ಮೂರು ಟೂರ್ ಪ್ಯಾಕೇಜ್ (Tour package) ಗಳಿಗೆ ಸಬ್ಸಿಡಿ (Subsidy) ಘೋಷಿಸಿದೆ. ಮೊದಲ ಬಾರಿ ದಕ್ಷಿಣ ಕ್ಷೇತ್ರಗಳ ಯಾತ್ರಾ, ದ್ವಾರಕ ಯಾತ್ರಾ, ಪುರಿ ಜಗನ್ನಾಥ್ ದರ್ಶನಕ್ಕೆ ಸಹಾಯಧನ ಘೋಷಿಸಿದೆ. ಈ ಮೂಲಕ ಧಾರ್ಮಿಕ ದತ್ತಿ ಇಲಾಖೆಯಿಂದ ಪುಣ್ಯ ಕ್ಷೇತ್ರಗಳ ದರ್ಶನ ಭಾಗ್ಯವನ್ನು ಕರುಣಿಸಲಿದೆ.
ದಕ್ಷಿಣ ಕ್ಷೇತ್ರಗಳ ಯಾತ್ರಾ (Southern places Tour) :
ಇಂದು ಎಲ್ಲರೂ ಕೂಡ ದೇವಸ್ಥಾನಗಳಿಗೆ, ಹರಕೆಯ ಸಲುವಾಗಿ ಅಥವಾ ಮುಪ್ಪಿನ ಸಮಯದಲ್ಲಿ ದೇವರ ದರ್ಶನಕ್ಕೆ ಹೆಚ್ಚು ಭೇಟಿ ನೀಡುತ್ತಾರೆ. ರಾಜ್ಯ ಸರ್ಕಾರದ ಟೂರ್ ಪ್ಯಾಕೇಜ್‌ಗಳ ಭರ್ಜರಿ ಸಬ್ಸಿಡಿಯಲ್ಲಿ ಮೊದಲನೆಯದಾಗಿ ರಾಮೇಶ್ವರ-ಕನ್ಯಕುಮಾರಿ- ಮಧುರೈ, ತಿರುವನಂತಪುರಂ ಇದು ಒಟ್ಟು ಆರು ದಿನಗಳ ತೀರ್ಥಯಾತ್ರೆ ಪ್ಯಾಕೇಜ್ ಆಗಿದೆ.
ದಕ್ಷಿಣ ಕ್ಷೇತ್ರಗಳ ಯಾತ್ರೆಗೆ ಒಟ್ಟು 25 ಸಾವಿರ ರೂಪಾಯಿ ವೆಚ್ಚ ಆಗಲಿದೆ :
ಈ ತೀರ್ಥ ಯಾತ್ರೆಗೆ ಒಟ್ಟು 25 ಸಾವಿರ ರೂಪಾಯಿ ವೆಚ್ಚ ಆಗಲಿದೆ. ಇದಕ್ಕೆ ಸರ್ಕಾರ 10,000 ರುಪಾಯಿ ಸಬ್ಸಿಡಿ ನೀಡಲಿದೆ. ವೈದ್ಯಕೀಯ ವೆಚ್ಚ ಸೇರಿದಂತೆ ಇತರೆ ವೆಚ್ಚ ಸೇರಿದಂತೆ 5,000 ಸಾವಿರ ಸಹಾಯಧನ ಸೇರಿ 15,000 ರೂಪಾಯಿ ಹಣವನ್ನು ಸರ್ಕಾರ ನೀಡಲಿದೆ. ಇನ್ನು ಯಾತ್ರಿಗಳು 10,000 ರೂಪಾಯಿ ಮಾತ್ರ ಪಾವತಿಸಬೇಕಾಗುತ್ತದೆ.
ದ್ವಾರಕಾ ಮತ್ತು ಪುರಿ ಜಗಾನ್ನಾಥ್ ಯಾತ್ರೆ (Dwaraka and Puri Jaganath Tour) :
ಇನ್ನು ಎರಡನೆಯದಾಗಿ ದ್ವಾರಕಾ -ನಾಗೇಶ್ವರ- ಸೋಮನಾಥ್-ತ್ರಯಂಬಕೇಶ್ವರ ಕ್ಷೇತ್ರಗಳನ್ನಯ ಒಳಗೊಂಡಂತೆ 8 ದಿನಗಳ ಯಾತ್ರಾ ಪ್ಯಾಕೇಜ್ ಇದಾಗಿದ್ದು, ಈ ಯಾತ್ರೆಯ ಪ್ಯಾಕೇಜ್‌ನ ಒಟ್ಟು ಮೊತ್ತ 32,500 ರೂಪಾಯಿ ಆಗಿದ್ದು, ಇದರಲ್ಲಿ ಸರ್ಕಾರ 17,500 ರೂಪಾಯಿ ಹಣ ನೀಡಲಿದೆ. ಉಳಿದ 15,000 ರೂಪಾಯಿ ಹಣವನ್ನು ಮಾತ್ರ ಯಾತ್ರಾರ್ಥಿಗಳು ನೀಡಬೇಕಾಗುತ್ತದೆ.
ಉತ್ತಮ ಆಹಾರದಿಂದ (Good food) ಹಿಡಿದು ವೈದ್ಯಕೀಯ ಸೇವೆಯ (Medical Services) ವ್ಯವಸ್ಥೆ ನೀಡಲಾಗುತ್ತದೆ :
ಪ್ರಯಾಣಿಕರು ಪ್ರಯಾಣ ಮಾಡುವಾಗ ಟ್ರೈನ್ ಪ್ಯಾಂಟ್ರಿ ಕಾರಿನಲ್ಲಿ ಉತ್ತಮ ಆಹಾರ ತಯಾರಿಸಿ ನೀಡಲಾಗುತ್ತದೆ. ಈ ಪ್ಯಾಕೇಜ್‌ನಲ್ಲಿ 3 ಟೈರ್ ಎಸಿ ರೈಲಿನಲ್ಲಿ ಪ್ರಯಾಣ,
ಊಟ, ವಸತಿ, ಸ್ಥಳೀಯ ಸಾರಿಗೆ ಮತ್ತು ದರ್ಶನ ವ್ಯವಸ್ಥೆ ಇರುತ್ತದೆ. ಯಾತ್ರಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ರೈಲಿನಲ್ಲಿ ವೈದ್ಯಕೀಯ ಸೇವೆಯ ವ್ಯವಸ್ಥೆ ಮಾಡಲಾಗುತ್ತದೆ.
ದಕ್ಷಿಣ ಕ್ಷೇತ್ರಗಳ ಯಾತ್ರಾ ರೈಲು (Train) ಹತ್ತುವ ಹಾಗೂ ಇಳಿಯುವ ಸ್ಥಳಗಳ ವಿವರ ಹೀಗಿದೆ :
ಈ ರೈಲು ಬೆಳವಾಗಿ, ಹುಬ್ಬಳ್ಳಿ, ಹಾವೇರಿ, ದಾವಣಗೆರೆ, ಬೀರೂರು, ತುಮಕೂರು, ಬೆಂಗಳೂರು ಸರ್.ಎಂ.ವಿಶ್ವೇಶ್ವರಯ್ಯ ರೈಲು ನಿಲ್ದಾಣ ಮೂಲಕ ಮೂಲಕ ಸಾಗಲಿದೆ. ಈ ರೈಲು 2025ರ ಜನವರಿ 25ರಂದು ಹೊರಡಲಿದ್ದು, ಜನವರಿ 30ಕ್ಕೆ ಹಿಂದಿರುಗಲಿದೆ.
ಪುರಿ ಜಗನ್ನಾಥ್ ದರ್ಶನ ಹಾಗೂ ದ್ವಾರಕ ಯಾತ್ರಾ ರೈಲು ಹತ್ತುವ ಹಾಗೂ ಇಳಿಯುವ ಸ್ಥಳಗಳ ವಿವರ ಹೀಗಿದೆ :
ಈ ರೈಲು ಬೆಂಗಳೂರು ಸರ್.ಎಂ.ವಿಶ್ವೇಶ್ವರಯ್ಯ ರೈಲು ನಿಲ್ದಾಣ, ತುಮಕೂರು, ಅರಸಿಕೆರೆ, ಬೀರೂರು, ದಾವಣಗೆರೆ, ಹಾವೇರಿ, ಬೆಳಗಾವಿ ಮೂಲಕ ಸಾಗಲಿದೆ. ದ್ವಾರಕ ಯಾತ್ರಾ ರೈಲು ಜನವರಿ 6, 2025ರಂದು ಹೊರಡಲಿದ್ದು, ಜನವರಿ 13ಕ್ಕೆ ಹಿಂದಿರುಗಲಿದೆ. ಪುರಿಜಗನ್ನಾಥ ದರ್ಶನಕ್ಕೆ ಹೊರಡುವ ರೈಲು ಫೆಬ್ರವರಿ 3ರಂದು ಹೊರಡಲಿದ್ದು, ಮತ್ತೆ ಫೆಬ್ರವರಿ 10ಕ್ಕೆ ಹಿಂದಿರುಗಲಿದೆ. ಅಷ್ಟೇ ಅಲ್ಲದೆ, ಈ ವರ್ಷ 1200 ಅರ್ಚಕರು ಹಾಗೂ 1200 ಅರ್ಚಕ ಕುಟುಂಬದ ಒಬ್ಬ ಸದಸ್ಯರು ಸೇರಿ 2,400 ಜನರನ್ನು ಉಚಿತವಾಗಿ ಯಾತ್ರೆಗೆ ಕಳುಹಿಸಲಾಗುತ್ತದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.