“IRCTC ಪರಿಚಯಿಸಿದ ‘ಬುಕ್ ನೌ, ಪೇ ಲೇಟರ್'(‘Book Now, Pay Later’) ಯೋಜನೆ – ಪ್ರಯಾಣಿಕರಿಗಾಗಿ ಸುಲಭ ಪಾವತಿ ಆಯ್ಕೆ!”
ಪ್ರಯಾಣವನ್ನು ಯೋಜಿಸುವಾಗ ಸಾಮಾನ್ಯವಾಗಿ ಎದುರಾಗುವ ಒಂದು ದೊಡ್ಡ ಸಮಸ್ಯೆ ಹಣದ ಕೊರತೆ. ಈ ಸಂದರ್ಭಗಳಲ್ಲಿ ಜನರು ಯೋಜನೆಯನ್ನು ಮುಂದೂಡಲು ಅಥವಾ ಪರ್ಯಾಯ ವ್ಯವಸ್ಥೆಗಳನ್ನು ಹುಡುಕಲು ಮುಂದಾಗುತ್ತಾರೆ. ಈ ಸಮಸ್ಯೆಯನ್ನು ಮನಗಂಡ ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ ಲಿಮಿಟೆಡ್ (IRCTC) ಈಗ ಪ್ರಯಾಣಿಕರಿಗೆ(passengers) ಹೊಸ ಮತ್ತು ಅನುಕೂಲಕರ ಆಯ್ಕೆಯನ್ನು ಪರಿಚಯಿಸಿದೆ. ‘ಬುಕ್ ನೌ, ಪೇ ಲೇಟರ್’(‘Book Now, Pay Later’) ಎಂಬ ಈ ಆಧುನಿಕ ಸೌಲಭ್ಯವು, ಯಾವುದೇ ಮುಂಗಡ ಪಾವತಿಯಿಲ್ಲದೆ ಟಿಕೆಟ್ಗಳನ್ನು ಬುಕ್ ಮಾಡಲು ಅನುಮತಿಸುತ್ತದೆ. ಈ ಹೊಸ ಕ್ರಮವು ನೂರಾರು ಪ್ರಯಾಣಿಕರಿಗೆ ಅನುಕೂಲಕರ ಮಾರ್ಗವಾಗಿದ್ದು, ತಕ್ಷಣವೇ ಪಾವತಿಸಲು ಅಸಮರ್ಥರಾದವರಿಗೂ ಟಿಕೆಟ್ ಬುಕ್( ticket Book ) ಮಾಡಲು ಅವಕಾಶ ಮಾಡಿಕೊಡುತ್ತದೆ. ‘ಬುಕ್ ನೌ, ಪೇ ಲೇಟರ್’ ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
‘ಬುಕ್ ನೌ, ಪೇ ಲೇಟರ್’ ಯೋಜನೆಯ ಮುಖ್ಯ ಅಂಶಗಳು ಯಾವುವು?:
IRCTC ಇದರಡಿ ಯಾವುದೇ ಮುಂಗಡ ಪಾವತಿಯನ್ನು ಮಾಡದೇ ನಿಮ್ಮ ರೈಲು ಟಿಕೆಟ್ ಅನ್ನು ಬುಕ್ ಆದರೆ ಈ ಯೋಜನೆಯನ್ನು ನೀವು ಬಳಸಿಕೊಳ್ಳಲು ಕೆಲವು ಷರತ್ತುಗಳು ಮತ್ತು ನಿಯಮಗಳನ್ನು ಪಾಲನೆ ಮಾಡಬೇಕು. ಟಿಕೆಟ್ ಬುಕ್ ಮಾಡಿದ 14 ದಿನಗಳ(14 days) ಒಳಗಾಗಿ ಪಾವತಿಯನ್ನು ಪೂರ್ಣಗೊಳಿಸಬೇಕು. ತಡವಾದಲ್ಲಿ 3.5% ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ.
‘ಬುಕ್ ನೌ, ಪೇ ಲೇಟರ್’ ಸೇವೆಯನ್ನು ಹೇಗೆ ಬಳಸುವುದು ?:
ಈ ಹೊಸ ಯೋಜನೆ ಅಳವಡಿಸಲು IRCTC ಪ್ಲಾಟ್ಫಾರ್ಮ್ನಲ್ಲಿ ಪ್ರಯಾಣಿಕರು ಈ ಕೆಳಗಿನ ಹಂತಗಳನ್ನು ಅನುಸರಿಸಬೇಕು:
1. IRCTC ಖಾತೆಗೆ ಲಾಗ್ ಇನ್ ಮಾಡಿ:
ನೀವು ಮೊದಲಿಗೆ ನಿಮ್ಮ IRCTC ಖಾತೆಗೆ ಲಾಗ್ ಇನ್ ಆಗಿ. ಖಾತೆ ಇಲ್ಲದಿದ್ದರೆ, ಹೊಸದಾಗಿ ಖಾತೆ ತೆರೆಯಿರಿ.
2. ‘ಬುಕ್ ನೌ’ ಆಯ್ಕೆ ಮಾಡಿ:
ನೀವು ಪ್ರಯಾಣ ವಿವರಗಳನ್ನು ಆಯ್ಕೆ ಮಾಡಿದ ನಂತರ, ‘ಬುಕ್ ನೌ’ ಆಯ್ಕೆಯನ್ನು ಕ್ಲಿಕ್(click) ಮಾಡಿ.
3. ಪ್ರಯಾಣಿಕರ ಮಾಹಿತಿಯನ್ನು ನಮೂದಿಸಿ:
ಹೊಸ ಪುಟದಲ್ಲಿ, ಪ್ರಯಾಣಿಕರ ವಿವರಗಳು ಮತ್ತು ಕ್ಯಾಪ್ಚಾ ಕೋಡ್(Captcha code) ನೀಡಲಾಗುತ್ತದೆ. ಇವುಗಳನ್ನು ಸರಿಯಾಗಿ ಪೂರ್ತಿಗೊಳಿಸಿ.
4. ಪಾವತಿ ವಿಧಾನವನ್ನು ಆಯ್ಕೆಮಾಡಿ:
ಪಾವತಿ ಪೇಜ್ಗೆ ಬರುವ ನಂತರ, ನೀವು ಕ್ರೆಡಿಟ್/ಡೆಬಿಟ್ ಕಾರ್ಡ್, BHIM ಅಪ್ಲಿಕೇಶನ್ ಅಥವಾ ನೆಟ್ ಬ್ಯಾಂಕಿಂಗ್(Net banking) ಮೂಲಕ ಪಾವತಿಸಲು ಆಯ್ಕೆ ಮಾಡಬಹುದು.
5. ಪೇ ಲೇಟರ್ ಸೇವೆಗೆ ನೋಂದಣಿ ಮಾಡಿ:
‘ಬುಕ್ ನೌ, ಪೇ ಲೇಟರ್’ ಆಯ್ಕೆಯನ್ನು ಬಳಸಲು ನೀವು ಮೊದಲು www.epaylater.in ಗೆ ಭೇಟಿ ನೀಡಿ ನೋಂದಾಯಿಸಬೇಕು.
6. ಪಾವತಿ ಪ್ರಕ್ರಿಯೆ ಪೂರ್ಣಗೊಳಿಸಿ:
ನೋಂದಣಿಯ ನಂತರ, ‘ಪೇ ಲೇಟರ್'(‘Pay Letter’) ಆಯ್ಕೆಯು ಲಭ್ಯವಾಗುತ್ತದೆ. ಇದನ್ನು ಆಯ್ಕೆ ಮಾಡಿದ ಬಳಿಕ, ಮುಂಗಡ ಪಾವತಿಯಿಲ್ಲದೆ ನಿಮ್ಮ ಟಿಕೆಟ್ ಬುಕ್ ಆಗುತ್ತದೆ.
ಪಾವತಿ ನಿಯಮಗಳು ಮತ್ತು ಶುಲ್ಕದ ವಿವರಗಳ ಮಾಹಿತಿ :
ಟಿಕೆಟ್ ಬುಕ್ ಮಾಡಿದ 14 ದಿನಗಳ ಒಳಗೆ ಪಾವತಿಯನ್ನು ಪೂರ್ಣಗೊಳಿಸಬೇಕು.
ಪಾವತಿಗೆ ತಡವಾದಲ್ಲಿ 3.5% ಸೇವಾ ಶುಲ್ಕವನ್ನು ವಿಧಿಸಲಾಗುತ್ತದೆ.
ಪಾವತಿಯನ್ನು ಸಮಯಕ್ಕೆ ಪೂರ್ಣಗೊಳಿಸಿದರೆ, ಯಾವುದೇ ಹೆಚ್ಚುವರಿ ಶುಲ್ಕ ಅನ್ವಯಿಸುವುದಿಲ್ಲ.
ಯೋಜನೆಯ ಪ್ರಯೋಜನಗಳೇನು?:
ತಕ್ಷಣ ಪಾವತಿಸಲು ಹಣವಿಲ್ಲದಿದ್ದರೂ, ಟಿಕೆಟ್ ಬುಕ್ ಮಾಡಬಹುದು.
ಸಂಪೂರ್ಣ ಪ್ರಕ್ರಿಯೆ ಡಿಜಿಟಲ್(Digital) ಆಗಿರುವುದರಿಂದ ಸಮಯ ಮತ್ತು ಶ್ರಮ ಉಳಿತಾಯ.
ಅತ್ಯಾವಶ್ಯಕ ಸಂದರ್ಭಗಳಲ್ಲಿ, ಹಣದ ಕೊರತೆಯ ಕಾರಣದಿಂದ ಪ್ರಯಾಣವನ್ನು ರದ್ದುಗೊಳಿಸುವುದನ್ನು ತಪ್ಪಿಸಬಹುದು.
ಭಾರತೀಯ ರೈಲ್ವೆಯ(Indian Railways) ಈ ಹೊಸ ಯೋಜನೆ, ಪ್ರಯಾಣಿಕರ ಕನಸುಗಳಿಗೆ ಹೊಸ ರೂಪವನ್ನು ಕೊಡುವಲ್ಲಿ ಸಹಾಯ ಮಾಡುತ್ತಿದ್ದು, ರೈಲು ಪ್ರಯಾಣಿಕರು ಇದರ ಮೂಲಕ ತಮ್ಮ ಟಿಕೆಟ್ಗಳನ್ನು ಸುಲಭವಾಗಿ ಬುಕ್ ಮಾಡಬಹುದು. ಆದರೂ, ತೀರ್ಮಾನಕ್ಕೂ ಮುನ್ನ ಯೋಜನೆಯ ಎಲ್ಲಾ ನಿಯಮಗಳು ಮತ್ತು ಷರತ್ತುಗಳನ್ನು ತಿಳಿದುಕೊಳ್ಳುವುದು ಅತ್ಯಗತ್ಯ.
ಈ ‘ಬುಕ್ ನೌ, ಪೇ ಲೇಟರ್’ (‘Book Now, Pay Later’)ಯೋಜನೆ ನಿಮ್ಮ ಮುಂದಿನ ಪ್ರಯಾಣವನ್ನು ಇನ್ನಷ್ಟು ಸುಂದರಗೊಳಿಸುವಲ್ಲಿ ಯಾವುದೇ ಸಂಶಯವಿಲ್ಲ!.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.