ನಥಿಂಗ್ ಕಂಪನಿಯ ಎರಡು ಹೊಸ ಮೊಬೈಲ್ ಭರ್ಜರಿ ಎಂಟ್ರಿ.! ಮುಗಿಬಿದ್ದ ಜನ 

Picsart 25 03 08 23 58 31 510

WhatsApp Group Telegram Group

ಮಾರುಕಟ್ಟೆಯಲ್ಲಿ ಬಿಡುಗಡೆ ಆಗಿದೆ ನಥಿಂಗ್ ಕಂಪನಿಯ ಎರಡು ಹೊಸ ಸ್ಮಾರ್ಟ್ ಫೋನ್ಸ್, ಇದರಲ್ಲಿವೆ ಬೆಚ್ಚಿ ಬೀಳಿಸುವ ಫೀಚರ್ಸ್!

ಇದು ಸ್ಮಾರ್ಟ್ ಯುಗವಾಗಿದ್ದರಿಂದ ಎಲ್ಲ ಕೆಲಸಗಳು ಅತೀ ಕಡಿಮೆ ಸಮಯದಲ್ಲಿ ಮಾಡಲಾಗುತ್ತವೆ. ಇದಕ್ಕೆಲ್ಲ ಕಾರಣ ಹೊಸ ತಂತ್ರಜ್ಞಾನ ಒಳಗೊಂಡ ಸ್ಮಾರ್ಟ್ ಫೋನ್ ಗಳು. ಹೌದು ಇಂದು ಎಲ್ಲಾ ಕೆಲಸಗಳನ್ನು ಅರೆ ಕ್ಷಣದಲ್ಲಿ ಸ್ಮಾರ್ಟ್ ಫೋನ್ ಗಳ ಮೂಲಕ ಮಾಡಿ ಮುಗಿಸುತ್ತೇವೆ. ಇಂದು ಸ್ಮಾರ್ಟ್ ಫೋನ್ (smart phone) ತಯಾರಿಕ ಕಂಪನಿಗಳು ಹೊಸ ಹೊಸ ತಂತ್ರಜ್ಞಾನ ಅಳವಡಿತ ಸ್ಮಾರ್ಟ್ ಫೋನ್ ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದ್ದಾರೆ. ಹಾಗೆಯೇ ಇದೀಗ ಪ್ರಸಿದ್ಧ ನಥಿಂಗ್ ಕಂಪನಿ ತನ್ನ ಹೊಸ ನಥಿಂಗ್ ಫೋನ್ 3a ಮತ್ತು ನಥಿಂಗ್ ಫೋನ್ 3a ಪ್ರೊ ಅನ್ನು ಬಿಡುಗಡೆ ಗೊಳಿಸಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ನಥಿಂಗ್ ಕಂಪನಿಯು ಕಳೆದ ವರ್ಷದ ಫೋನ್ (2a) ಮತ್ತು ಫೋನ್ (2a) ಪ್ಲಸ್‌ ಬಿಡುಗಡೆ ಆಗಿತ್ತು. ಈ ಸಾಲಿಗೆ ‘ಪ್ರೊ’ ಹೊಸ ಸೇರ್ಪಡೆಯಾಗಿದೆ. ಪ್ರಸಿದ್ಧ ನಥಿಂಗ್ ಕಂಪನಿ ತನ್ನ ಹೊಸ ನಥಿಂಗ್ ಫೋನ್ 3a ಮತ್ತು ನಥಿಂಗ್ ಫೋನ್ 3a ಪ್ರೊ ಅನ್ನು ಅನಾವರಣಗೊಳಿಸಿದೆ. ಈ ಫೋನ್‌ಗಳು ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 7s ಜೆನ್ 3 ಚಿಪ್‌ಸೆಟ್‌ (Powered by Qualcomm’s Snapdragon 7s Gen 3 chipset)ನಿಂದ ಚಾಲಿತವಾಗಿದ್ದು ಆಂಡ್ರಾಯ್ಡ್ 15-ಆಧಾರಿತ ನಥಿಂಗ್‌ ಓಎಸ್ 3.1 ನೊಂದಿಗೆ ಬರುತ್ತವೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

nothing
ನಥಿಂಗ್ ಫೋನ್ (3a) ಪ್ರೊ, ಫೋನ್ (3a) ಫೀಚರ್ಸ್ (Features) :

ಡಿಸ್‌ಪ್ಲೇ: 6.77-ಇಂಚಿನ FHD+ (1080 x 2392 ಪಿಕ್ಸೆಲ್‌ಗಳು) AMOLED ಡಿಸ್‌ಪ್ಲೇ, 120Hz ರಿಫ್ರೆಶ್ ದರ, 3,000 nits ಗರಿಷ್ಠ ಹೊಳಪು, ಪಾಂಡಾ ಗ್ಲಾಸ್ ಪ್ರೊಟೆಕ್ಷನ್ ಇದೆ.

ಚಿಪ್‌ಸೆಟ್ (Chipset) : ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 7s Gen 3 SoC.

ನಥಿಂಗ್ ಫೋನ್ (3a) ಪ್ರೊ ಕ್ಯಾಮೆರಾಗಳು (Camera) :
50MP ಪ್ರಾಥಮಿಕ ಕ್ಯಾಮೆರಾ, 50MP ಪೆರಿಸ್ಕೋಪ್ ಕ್ಯಾಮೆರಾ, 8MP ಅಲ್ಟ್ರಾ-ವೈಡ್ ಕ್ಯಾಮೆರಾ, 50MP ಮುಂಭಾಗದ ಕ್ಯಾಮೆರಾ.

ನಥಿಂಗ್ ಫೋನ್ (3a) ಕ್ಯಾಮೆರಾಗಳು: 50MP ಪ್ರಾಥಮಿಕ ಕ್ಯಾಮೆರಾ, 50MP ಟೆಲಿಫೋಟೋ ಕ್ಯಾಮೆರಾ, 8MP ಅಲ್ಟ್ರಾ-ವೈಡ್ ಕ್ಯಾಮೆರಾ, 32MP ಮುಂಭಾಗದ ಕ್ಯಾಮೆರಾ.

ಬ್ಯಾಟರಿ (Battery) :
5,000mAh ಬ್ಯಾಟರಿ, 50W ವೇಗದ ಚಾರ್ಜಿಂಗ್ ಬೆಂಬಲ.

ಸಾಫ್ಟ್‌ವೇರ್ (Software) :
ಆಂಡ್ರಾಯ್ಡ್ 15 ಆಧಾರಿತ ನಥಿಂಗ್ OS 3.1; 3 ವರ್ಷಗಳ OS ಅಪ್‌ಗ್ರೇಡ್‌ಗಳು, 6 ವರ್ಷಗಳ ಭದ್ರತಾ ನವೀಕರಣಗಳು.

ಇತರ ವೈಶಿಷ್ಟ್ಯಗಳು (Other features) :
ಗೂಗಲ್ ಪೇ (Google pay) ಬೆಂಬಲದೊಂದಿಗೆ NFC, ಗ್ಲಿಫ್ ಇಂಟರ್ಫೇಸ್, IP64 ಧೂಳು ಮತ್ತು ನೀರಿನ ಪ್ರತಿರೋಧ, ಮತ್ತು ಡ್ಯುಯಲ್ ಸ್ಟೀರಿಯೊ ಸ್ಪೀಕರ್‌ಗಳು.

nothing phone 3a
ನಥಿಂಗ್ ಫೋನ್ (3a) ಸರಣಿಯ ಬೆಲೆ (price) :

8GB RAM ಮತ್ತು 128GB ಸ್ಟೋರೇಜ್ ಹೊಂದಿರುವ ಮೂಲ ಮಾದರಿಯ ನಥಿಂಗ್ ಫೋನ್ (3a) ಬೆಲೆ 24,999 ರೂ. ಆಗಿದೆ. ಹಾಗೆಯೇ ನಥಿಂಗ್ ಫೋನ್ (3a) ಪ್ರೊ ಆರಂಭಿಕ ಬೆಲೆ ರೂ. 29,999 ಆಗಿದ್ದು, ಎರಡು ರೂಪಾಂತರಗಳಲ್ಲಿ ಗ್ರಾಹಕರಿಗೆ ಲಭ್ಯವಿದೆ.

ನಥಿಂಗ್ ಫೋನ್ (3a) ಸರಣಿಯ ಲಭ್ಯತೆ (availability) :

ನಥಿಂಗ್ ಫೋನ್ (3a) ಸರಣಿಯ ಮೊದಲ ಮಾರಾಟವು ಮಾರ್ಚ್ 11 ರಂದು ಮಧ್ಯಾಹ್ನ 12 ಗಂಟೆಗೆ ಫ್ಲಿಪ್‌ಕಾರ್ಟ್ ಮೂಲಕ ನಡೆಯಲಿದೆ.
ನೀವು ಪ್ರೊ ಮಾದರಿಯನ್ನು ಕಪ್ಪು ಮತ್ತು ಬಿಳಿ ಬಣ್ಣಗಳಲ್ಲಿ ಹಾಗೂ  (3a) ಅನ್ನು ಕಪ್ಪು, ಬಿಳಿ ಮತ್ತು ನೀಲಿ ಬಣ್ಣಗಳಲ್ಲಿ ಪಡೆಯಬಹುದು.

ನಥಿಂಗ್ ಫೋನ್ (3a) ಸರಣಿ: ಹೊಸದೇನಿದೆ?:

ಕಳೆದ ವರ್ಷದ ಫೋನ್ (2a) ಮತ್ತು ಫೋನ್ (2a) ಪ್ಲಸ್‌ ಬಿಡುಗಡೆ ಆಗಿತ್ತು. ಈ ಸಾಲಿಗೆ ‘ಪ್ರೊ’ ಹೊಸ ಸೇರ್ಪಡೆಯಾಗಿದೆ. ನಥಿಂಗ್ ಫೋನ್ (3a) ನಿಂದ ಪ್ರಾರಂಭಿಸಿ, ಇಲ್ಲಿ ಪ್ರಮುಖ ಅಪ್‌ಗ್ರೇಡ್ (Upgrade) ಎಂದರೆ ಟ್ರಿಪಲ್-ಕ್ಯಾಮೆರಾ ಸೆಟಪ್, ಇದು ಈಗ ಟೆಲಿಫೋಟೋ ಲೆನ್ಸ್ ಅನ್ನು ಒಳಗೊಂಡಿದೆ. ಇದರ ವಿನ್ಯಾಸವು ಟ್ರೈ-ಲೈಟ್ ಗ್ಲಿಫ್ ಇಂಟರ್ಫೇಸ್ ಮತ್ತು ಪಿಲ್-ಆಕಾರದ ಕ್ಯಾಮೆರಾ ಮಾಡ್ಯೂಲ್‌ನೊಂದಿಗೆ ಹೆಚ್ಚಾಗಿ ಒಂದೇ ಆಗಿರುತ್ತದೆ. ನಥಿಂಗ್ ಫೋನ್ (3a) ಪ್ರೊ, ಇದು ಪೆರಿಸ್ಕೋಪ್ ಲೆನ್ಸ್ ಅನ್ನು ಒಳಗೊಂಡಿರುವ ಟ್ರಿಪಲ್-ಕ್ಯಾಮೆರಾ ಸೆಟಪ್ ಅನ್ನು ಸಹ ಹೊಂದಿದೆ.

ಎರಡೂ ಫೋನ್‌ಗಳು ಟ್ರೂಲೆನ್ಸ್ ಎಂಜಿನ್ 3.0 (Trulence Engine 3.0) ಅನ್ನು ಒಳಗೊಂಡಿದ್ದು, ಇದು AI ಟೋನ್ ಮ್ಯಾಪಿಂಗ್ ಮತ್ತು ದೃಶ್ಯ ಪತ್ತೆಯನ್ನು ಬಳಸಿಕೊಂಡು “ರಿಯಲ್ ಫೋಟೋಗ್ರಫಿ” ಒದಗಿಸಲು ಸಹಾಯ ಮಾಡುತ್ತದೆ. ಕ್ರಿಯಾತ್ಮಕ, ನೈಜ್ಯ ಚಿತ್ರವನ್ನು ಸೆರೆಹಿಡಿಯಲು ಸಹಾಯ ಮಾಡುವ ಅಲ್ಟ್ರಾ XDR ನೊಂದಿಗೆ ಈ ಫೋನ್‌ ಬಂದಿದೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!