ಕೇಂದ್ರದ ಹೊಸ ಯೋಜನೆ, 3 ಲಕ್ಷ ರೂ. ಬಡ್ಡಿ ರಹಿತ ಸಾಲ ಯೋಜನೆ..!

IMG 20240624 WA0002

ಕೇವಲ ಮಹಿಳೆಯರಿಗೆ 3 ಲಕ್ಷ ರೂ. ವರೆಗಿನ ಬಡ್ಡಿರಹಿತ ಸಾಲ! ಮಹಿಳಾ ಉದ್ಯಮಿಗಳಾಗಲು ಸುವರ್ಣಾವಕಾಶ.

ಇಂದು ನಮ್ಮ ದೇಶ ಎಲ್ಲಾ ಕ್ಷೇತ್ರಗಳಲ್ಲಿಯೂ ಕೂಡ ಮುಂದೆ ಬರುತ್ತಿದೆ. ಹಾಗೆ ನೋಡಿದರೆ ಹೆಣ್ಣು ಮಕ್ಕಳು (women’s) ಕೂಡ ಇಂದು ಒಳ್ಳೆ ಒಳ್ಳೆಯ ಹುದ್ದೆಗಳಲ್ಲಿ ಕೆಲಸವನ್ನು ಮಾಡುತ್ತಿದ್ದಾರೆ. ಕೇವಲ ಮನೆ ಜವಾಬ್ದಾರಿಗಳನ್ನು ನಿಭಾಯಿಸುವುದಲ್ಲದೆ ಮನೆಯಿಂದ ಹೊರ ಬಂದು ಎಲ್ಲಾ ಕ್ಷೇತ್ರಗಳಲ್ಲಿಯೂ ಕೂಡ ತನ್ನನ್ನು ತಾನು ಗುರುತಿಸಿಕೊಂಡಿದ್ದಾಳೆ. ಮಹಿಳೆಯರು ಸ್ವಾವಲಂಬಿಯಾಗಿ (Women are self reliant) ಜೀವನ ನಡೆಸಲು, ಆರ್ಥಿಕವಾಗಿ ಸದೃಢರಾಗಲು, ಒಬ್ಬ ಯಶಸ್ವಿ ಉದ್ಯಮಿಯಾಗಿ (Successful entrepreneur) ರೂಪುಗೊಳ್ಳಲು ಹಣ ಎಂಬುದು ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಮಹಿಳೆಯರು ಸ್ವಂತ ಕಾಲಿನ ಮೇಲೆ ನಿಂತು ಉದ್ಯಮಿಗಳಾಗಲು ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲಿ ಕೇಂದ್ರ ಸರ್ಕಾರವು “ಉದ್ಯೋಗಿನಿ ಯೋಜನೆ”ಯನ್ನು (Udyogini Scheme) ಜಾರಿಗೆ ತಂದಿದೆ. ಬಡ ಮತ್ತು ಅನಕ್ಷರಸ್ಥ ಹಿನ್ನೆಲೆಯ ಮಹಿಳೆಯರಿಗೆ ಈ ಯೋಜನೆಯ ಮೂಲಕ ಬೆಂಬಲ ನೀಡಲಾಗುತ್ತದೆ. ಈ ಯೋಜನೆಯ ಲಾಭಗಳೇನು?  ಅರ್ಜಿ ಸಲ್ಲಿಸುವುದು ಹೇಗೆ? ಯೋಜನೆಯ ಲಾಭವನ್ನು ಯಾರೆಲ್ಲಾ ಪಡೆಯಬಹುದು ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

ಉದ್ಯೋಗಿನಿ ಯೋಜನೆ(Udyogini Scheme) ಎಂದರೇನು?

ದೇಶದ ಆರ್ಥಿಕ ಬೆಳವಣಿಗೆಗಾಗಿ ಸಣ್ಣ ಸಣ್ಣ ಉದ್ಯಮಗಳ ಸ್ಥಾಪನೆಗೆ ಪ್ರೋತ್ಸಾಹ ನೀಡಲು ಕೇಂದ್ರ ಸರ್ಕಾರದ  ಮಹಿಳಾ ಅಭಿವೃದ್ಧಿ ನಿಗಮ (Women Development Corporation )ಜಾರಿಗೆ ತಂದಿರುವ ಯೋಜನೆ ಇದಾಗಿದೆ. ಮಹಿಳೆಯರು ಸ್ವಂತ ಕಂಪನಿಗಳು ಮತ್ತು ಕಿರು ಉದ್ಯಮಗಳನ್ನು ಪ್ರಾರಂಭಿಸುವ ಮೂಲಕ ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಲು ಈ ಯೋಜನೆಯನ್ನು ಪರಿಚಯಿಸಲಾಯಿತು.

ಉದ್ಯೋಗಿನಿ ಯೋಜನೆಯ ಉದ್ದೇಶ (purpose) :

ಈ ಯೋಜನೆಯ ಉದ್ದೇಶಗಳೆಂದರೆ, ಲೇವಾದೇವಿಗಾರರಿಂದ ಹೆಚ್ಚಿನ ಬಡ್ಡಿದರದಲ್ಲಿ ಸಾಲ ಪಡೆಯುವುದನ್ನು ತಪ್ಪಿಸುವುದಾಗಿದೆ ಹಾಗೂ ಮಹಿಳೆಯರು ತಮ್ಮದೇ ಆದ ಕಂಪನಿಗಳು ಮತ್ತು ಕಿರು ಉದ್ಯಮಗಳನ್ನು ಪ್ರಾರಂಭಿಸುವ ಮೂಲಕ ಸ್ವಾವಲಂಬಿಯಾಗಲು ಸಹಾಯ ಮಾಡುವುದಾಗಿದೆ. ಕೇವಲ ಬಡ್ಡಿ ರಹಿತ ಸಾಲ ಸೌಲಭ್ಯವಲ್ಲದೆ ಕೌಶಲ್ಯ ಅಭಿವೃದ್ಧಿ ಕೋರ್ಸ್‌ಗಳನ್ನು ಈ ಮೂಲಕ ನೀಡಲಾಗುತ್ತದೆ.

ಉದ್ಯೋಗಿನಿ ಯೋಜನೆಯ ವೈಶಿಷ್ಟ್ಯಗಳೇನು (features) ?

ಅರ್ಹ ಮಹಿಳಾ ಫಲಾನುಭವಿಗಳಿಗೆ ತಾರತಮ್ಯವಿಲ್ಲದೆ ಬಡ್ಡಿ ರಹಿತ ಸಾಲವನ್ನು ನೀಡುವುದು.
ಲೇವಾದೇವಿಗಾರರಿಂದ ಇತರ ಹಣಕಾಸು ಸಂಸ್ಥೆಗಳಿಂದ ಹೆಚ್ಚಿನ ಬಡ್ಡಿಯ ಸಾಲ ಪಡೆಯುವುದನ್ನು ತಡೆಯುವುದು.
ಇಡಿಪಿ (EDP)ತರಬೇತಿಯ ಮೂಲಕ ಮಹಿಳಾ ಫಲಾನುಭವಿಗಳು ತಮ್ಮ ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳುವುದು.
SC/ST ಅಥವಾ ಇತರ ವಿಶೇಷ ವರ್ಗಗಳ ಅಡಿಯಲ್ಲಿ ಬರುವ ಮಹಿಳೆಯರಿಗೆ ಆರ್ಥಿಕ ಸಹಾಯವನ್ನು ಹೆಚ್ಚಿನ ಮಟ್ಟದಲ್ಲಿ ಕೈಗೆಟುಕುವಂತೆ ಮಾಡುವುದು.

ಉದ್ಯೋಗಿ ಯೋಜನೆಯ ಬಡ್ಡಿದರಗಳ ವಿವರಗಳು:

ಈ ಯೋಜನೆಯಡಿ 3 ಲಕ್ಷದವರೆಗೆ ಮಹಿಳೆಯರು ಸಾಲವನ್ನು ಪಡೆಯಬಹುದು. ಅಲ್ಲದೇ ಅಂಗವಿಕಲರು, ವಿಧವೆಯರು ಮತ್ತು ದಲಿತ ಮಹಿಳೆಯರಿಗೆ ಸಂಪೂರ್ಣ ಬಡ್ಡಿ ರಹಿತ ಸಾಲ ನೀಡಲಾಗುತ್ತದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ (Scheduled Castes and Scheduled Tribes) ಫಲಾನುಭವಿಗಳಿಗೆ ಕನಿಷ್ಠ 1 ಲಕ್ಷ ರೂಪಾಯಿಯಿಂದ ಗರಿಷ್ಠ 3 ಲಕ್ಷ ರೂಪಾಯಿವರೆಗೆ ಸಾಲ ಸೌಲಭ್ಯ ಸಿಗುತ್ತದೆ. ಇದಕ್ಕೆ ಶೇ.50ರಂತೆ ಗರಿಷ್ಠ 1.50 ಲಕ್ಷ ರೂ. ವರೆಗೆ ಸಹಾಯಧನ ಇರಲಿದೆ. ಆದರೆ ಕುಟುಂಬದ ವಾರ್ಷಿ‍ಕ ಆದಾಯ 2 ಲಕ್ಷ ರೂಪಾಯಿ ಮೀರಿರಬಾರದು ಎಂಬ ಷರತ್ತುಗಳಿವೆ. ಸಾಮಾನ್ಯ ವರ್ಗ ಮತ್ತು ವಿಶೇಷ ವರ್ಗದ (special category and general category) ಫಲಾನುಭವಿಗಳಿಗೆ ಸಾಲದ ಘಟಕ ವೆಚ್ಚವು ಗರಿಷ್ಠ 3 ಲಕ್ಷ ರೂಪಾಯಿ ಇದ್ದರೆ, ಶೇ. 30ರವರೆಗೆ ಅಂದರೆ  90,000 ರೂಪಾಯಿವರೆಗೂ ಸಹಾಯಧನ ಸಿಗಲಿದೆ. ಆದರೆ, ಕುಟುಂಬದ ವಾರ್ಷಿಕ ಆದಾಯದ 1.50 ಲಕ್ಷ ರೂಪಾಯಿ ಮೀರಿರಬಾರದು.

ಉದ್ಯೋಗಿನಿ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ  :

ಈ ಯೋಜನೆಯ ಲಾಭ ಪಡೆಯಲು ಅರ್ಜಿದಾರರು ಅಗತ್ಯವಿರುವ ಎಲ್ಲ ದಾಖಲಾತಿಗಳೊಂದಿಗೆ ಹತ್ತಿರದ ಬ್ಯಾಂಕ್‌ಗೆ ಭೇಟಿ ನೀಡಬೇಕು.
ಅಗತ್ಯ ಇರುವ ಎಲ್ಲಾ ದಾಖಲೆಗಳ ವಿವರಗಳನ್ನು ನಮೂದಿಸಿಬೇಕು.
ಫಾರ್ಮ್‌ನಲ್ಲಿ ನಮೂದಿಸಲಾದ ಎಲ್ಲಾ ದಾಖಲೆಗಳ ಫೋಟೋಕಾಪಿಯನ್ನು ಲಗತ್ತಿಸಿ. ಫಾರ್ಮ್ ಭರ್ತಿ ಮಾಡಿ ಬ್ಯಾಂಕ್‌ಗೆ ಸಲ್ಲಿಸಬೇಕು.
ಅಥವಾ ಉದ್ಯೋಗಿನಿ ಕಾರ್ಯಕ್ರಮದ ಅಡಿಯಲ್ಲಿ ಸಾಲ(loan) ನೀಡುವ ಬ್ಯಾಂಕ್‌ಗಳ ಅಧಿಕೃತ ವೆಬ್‌ಸೈಟ್‌ಗಳಿಗೆ ಭೇಟಿ ನೀಡಿ ಆನ್‌ಲೈನ್‌ನಲ್ಲಿ ಸಾಲದ ಅರ್ಜಿಯನ್ನು ತುಂಬಿ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು (documents):

ಜನನ ಪ್ರಮಾಣಪತ್ರ
ಆಧಾರ್ ಕಾರ್ಡ್
ಆದಾಯ ಪ್ರಮಾಣ ಪತ್ರ
ಜಾತಿ ಪ್ರಮಾಣ ಪತ್ರ
ಬ್ಯಾಂಕ್ ಖಾತೆ
ರೇಷನ್ ಕಾರ್ಡ್ ವಿವರ
ಪಾಸ್ ಪೋರ್ಟ್ ಅಳತೆಯ ಭಾವಚಿತ್ರ
ಸರಿಯಾಗಿ ಭರ್ತಿ ಮಾಡಿದ ಅರ್ಜಿ ನಮೂನೆ

ಉದ್ಯೋಗಿನಿ ಯೋಜನೆ ಪಡೆಯಲು ಬೇಕಾಗುವ ಅರ್ಹತೆಗಳು (qualifications) :

ಅಭ್ಯರ್ಥಿಯು ಮಹಿಳೆಯಾಗಿರಬೇಕು.
ಅರ್ಹ ಮಹಿಳೆಯ ವಯೋಮಿತಿ 18 ರಿಂದ 55 ರವರೆಗೆ ಇರಬೇಕು.
ಭಾರತೀಯರಾಗಿರಬೇಕು.
ಆದಾಯದ ಮಿತಿ 1.5 ಲಕ್ಷ ರೂ.
ಕುಟುಂಬದ ವಾರ್ಷಿಕ ಆದಾಯ, ಅಂಗವಿಕಲರು ಅಥವಾ ವಿಧವೆಯರಿಗೆ ವಯಸ್ಸಿನ ಮಿತಿಯಿಲ್ಲ.
ಮಹಿಳಾ ವ್ಯಾಪಾರ ಮಾಲೀಕರು ಮಾತ್ರ ವ್ಯಾಪಾರ ಸಾಲಗಳಿಗೆ ಅರ್ಹರಾಗಿರುತ್ತಾರೆ.
ಅರ್ಜಿದಾರರಿಗೆ ಅಗತ್ಯವಿರುವ ಸಾಲದ ಮೊತ್ತವು ₹ 3,00,000 ಮೀರಬಾರದು.
ಈ ಹಿಂದೆ ಯಾವುದೇ ಸಾಲ ಪಡೆದು ಮರುಪಾವತಿ ಮಾಡದೇ ಇದ್ದಲ್ಲಿ ಸಾಲ ನೀಡುವುದಿಲ್ಲ
ಈ ಯೋಜನೆಗೆ ಅರ್ಜಿ ಸಲ್ಲಿಸುವ ಮಹಿಳೆಯರು ತಮ್ಮ ಕ್ರೆಡಿಟ್ ಸ್ಕೋರ್ ಮತ್ತು CIBIL ಸ್ಕೋರ್ ಉತ್ತಮವಾಗಿದೆ ಎಂದು ಖಚಿತಪಡಿಸಿಕೊಳ್ಳಬೇಕು.

ಯಾವೆಲ್ಲ ಉದ್ದಿಮೆಗಳಿಗೆ ಸಾಲ (loan) ಪಡೆಯಬಹುದು?

ದಿನಸಿ ಅಂಗಡಿ,ಕಾಫಿ -ಟೀ ಅಂಗಡಿ, ಬಳೆ ಅಂಗಡಿ, ಚಪ್ಪಲಿ ಮಾರಾಟ ಮಳಿಗೆ, ಮ್ಯಾಚ್‌ ಬಾಕ್ಸ್‌ ತಯಾರಿಕೆ, ಡಿಟರ್ಜೆಂಟ್‌ ತಯಾರಿಕೆ, ನ್ಯಾಯಬೆಲೆ ಅಂಗಡಿ, ಅಗರ್‌ಬತ್ತಿ ತಯಾರಿಕೆ ಡಯೋಗ್ನೋಸ್ಟಿಕ್‌ ಲ್ಯಾಬರ್‌, ಲೀಫ್‌ ಕಪ್‌ಗಳ ತಯಾರಿಕೆ, ರಿಬ್ಬನ್‌ ತಯಾರಿಕೆ. ಬೇಕರಿ, ಮೀನು ಮಾರಾಟ,  ಉಪ್ಪಿನಕಾಯಿ,  ಟೈಲರಿಂಗ್, ಪೋಟೋ ಸ್ಟೂಡಿಯೋ, ಕಾಂಡಿಮೆಂಟ್ಸ್,  ಸೋಪ್‌ ಆಯಿಲ್‌, ಸೋಪ್‌ ಪೌಡರ್‌, ಎಸ್‌ಟಿಡಿ ಬೂತ್‌, ಬ್ಯೂಟಿ ಪಾರ್ಲರ್‌, ಕ್ಲಿನಿಕ್‌, ಜಿಮ್‌, ಹಿಟ್ಟಿನ ಗಿರಣಿ ಸೇರಿದಂತೆ 88ಕ್ಕೂ ಹೆಚ್ಚು ಪ್ರಮಾಣದ ಸಣ್ಣ ಉದ್ಯಮಗಳ ಆರಂಭಿಸಲು  3 ಲಕ್ಷ ರೂ. ವರೆಗಿನ ಬಡ್ಡಿರಹಿತ ಸಾಲವನ್ನು ಉದ್ಯೋಗಿನಿ ಯೋಜನೆಯಡಿ ನೀಡಲಾಗುತ್ತಿದೆ.

ಈ ಮಾಹಿತಿಗಳನ್ನು ಓದಿ

 


ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!