ಈ ಯೋಜನೆಯು ಆರ್ಥಿಕವಾಗಿ ದುರ್ಬಲ ವರ್ಗಕ್ಕೆ ಸೇರಿದ ಮಹಿಳೆಯರನ್ನು ಮೇಲೆತ್ತುವ ಉದ್ದೇಶವನ್ನು ಹೊಂದಿದೆ ಮತ್ತು ಆರ್ಥಿಕ ಸಹಾಯದೊಂದಿಗೆ ಅವರನ್ನು ಸಬಲೀಕರಣಗೊಳಿಸಲು ಉದ್ಯಮ ಮತ್ತು ಸೇವಾ ವಲಯದಲ್ಲಿ ಸ್ವಯಂ ಉದ್ಯೋಗಿಯಾಗಲು ಸಿದ್ಧರಿರುವ ಮಹಿಳೆಯರಿಗೆ ಬ್ಯಾಂಕ್ ತೆಗೆದುಕೊಳ್ಳಲು ಸಾಲಕ್ಕಾಗಿ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಮೂಲಕ ಸಹಾಯಧನವನ್ನು ನೀಡಲಾಗುತ್ತದೆ. ಈ ಯೋಜನೆಯ ಕುರಿತು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ಈ ವರದಿಯನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಉದ್ಯೋಗಿನಿ ಯೋಜನೆ(udyogini scheme) 2025:
ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ (KSWDC) ಮಹಿಳೆಯರಿಗೆ ತಮ್ಮ ವ್ಯವಹಾರಗಳಲ್ಲಿ ಸಹಾಯ ಮಾಡುವ ಯೋಜನೆಯನ್ನು ಪ್ರಾರಂಭಿಸಿದೆ. ಇದು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮಗಳಿಂದ ಬ್ಯಾಂಕುಗಳು ಮತ್ತು ಇತರೆ ಹಣಕಾಸು ಸಂಸ್ಥೆಗಳ ಮೂಲಕ ವ್ಯಾಪಾರ ಚಟುವಟಿಕೆಗಳ/ ಸಣ್ಣ ಉದ್ದಿಮೆಗಳನ್ನ ಕೈಗೊಳ್ಳಲು ಸಾಲದ ಮೇಲೆ ಸಹಾಯಧನವನ್ನು ಒದಗಿಸುತ್ತದೆ. Private ಬ್ಯಾಂಕ್ ಗಳು, ಜಿಲ್ಲಾ ಸಹಕಾರಿ ಬ್ಯಾಂಕ್ ಗಳು ಮತ್ತು ಪ್ರದೇಶಿಕ ಗ್ರಾಮೀಣ ಬ್ಯಾಂಕ್ ಗಳು (RRBs) ನಂತಹ ಹಣಕಾಸು ಸಂಸ್ಥೆಯ ಮೂಲಕ ಸಾಲವನ್ನು ತೆಗೆದುಕೊಳ್ಳಬಹುದು.
ನೀವು ಈ ಯೋಜನೆ ಮತ್ತು ಅದರ ಪ್ರಯೋಜನಗಳಲ್ಲಿ ಆಸಕ್ತಿ ಹೊಂದಿದ್ದರೆ ಮತ್ತು ಇನ್ನಷ್ಟು ಮಾಹಿತಿಯನ್ನು ತಿಳಿದುಕೊಳ್ಳಲು ಬಯಸಿದರೆ, ಇವತ್ತಿನ ನಮ್ಮ ಈ ಲೇಖನವನ್ನು ಕೊನೆಯವರೆಗೂ ಓದಿ!
ಉದ್ಯೋಗಿನಿ ಯೋಜನೆ ವೈಶಿಷ್ಟತೆಗಳು :
ಇದು ಹಿಂದುಳಿದ ಪ್ರದೇಶಗಳ ಮಹಿಳೆಯರನ್ನು ಉದ್ಯಮಿಗಳಾಗಲು ಪ್ರೇರೇಪಿಸುತ್ತದೆ ಮತ್ತು ಸಹಾಯ ಮಾಡುತ್ತದೆ.
ಈ ಯೋಜನೆಯು ಮಹಿಳೆಯರಿಗೆ ತಮ್ಮ ವ್ಯವಹಾರಗಳಿಗೆ ಸಹಾಯ ಮಾಡುವ ಕೌಶಲ್ಯ ತರಬೇತಿಯನ್ನು ಸಹ ನೀಡುತ್ತದೆ.
ಈ ಯೋಜನೆಯಡಿಯಲ್ಲಿ ಅಗ್ಯತ ಮಾನದಂಡಗಳನ್ನು ಪೂರೈಸಿ, 3 ಲಕ್ಷದವರೆಗೂ ಲೋನ್ ಪಡೆಯಬಹುದು.
ಸಣ್ಣ – ಪ್ರಮಾಣದ ಕೈಗಾರಿಕೆಗಳ ಅಡಿಯಲ್ಲಿ ವ್ಯಾವಾಹರಗಳನ್ನು ಪ್ರಾರಂಭಿಸಲು ಉದ್ಯೋಗಿನಿ ಯೋಜನೆಯ ಅಡಿಯಲ್ಲಿ ಸಾಲವನ್ನು ಪಡೆಯಬಹುದು.
ಅಂಗವಿಕಲತೆ, ವಿಧವೆ, ಮತ್ತು ದಲಿತ ಮಹಿಳೆಯರಿಗೆ ಬಡ್ಡಿ ರಹಿತ ಸಾಲವನ್ನು ನೀಡಲಾಗುವುದು, ಅಂದರೆ ಸಾಲಕ್ಕೆ ಯಾವುದೇ ತರಹದ ಬಡ್ಡಿ ಇರುವುದಿಲ್ಲ.
ಮಹಿಳೆಯರಿಗೆ ಮರುಪಾವತಿಯು ಸರಳವನ್ನಾಗಿರಿಸಲು ಸರ್ಕಾರವು ಈ ಯೋಜನೆಯಡಿಯಲ್ಲಿ ನೀಡಲಾದ ಸಾಲಗಳ ಮೇಲೆ ಶೇಕಡಾ.30ರಷ್ಟು ಸಹಾಯಧನವನ್ನು ನೀಡಲಾಗುವುದು.
ಉದ್ಯೋಗಿನಿ ಯೋಜನೆಯಡಿ ಸಾಲಗಳಿಗೆ ಅರ್ಹತೆಯ ಮಾನದಂಡ:
ಸಾಮಾನ್ಯ ಮತ್ತು ವಿಶೇಷ ವರ್ಗಕ್ಕೆ ಸೇರಿದ ಮಹಿಳೆಯರಿಗೆ ಕುಟುಂಬದ ಆದಾಯ ರೂ.1,50,000/- ಗಿಂತ ಕಡಿಮೆಯಿರಬೇಕು.
ವಯಸ್ಸಿನ ಮಿತಿ 18 ರಿಂದ 55 ವರ್ಷಗಳ ಮೀರಿರಬಾರದು.
ಅರ್ಜಿದಾರರು ಉತ್ತಮ ಕ್ರೆಡಿಟ್ ಸ್ಕೋರ್ ಮತ್ತು ಮರುಪಾವತಿ ಸಾಮರ್ಥ್ಯವನ್ನು ಹೊಂದಿರುವರಾಗಿರ್ಬೇಕು.
ಯಾವ ಉದ್ಯಮಗಳನ್ನು ಆರಂಭಿಸಲು ಸಾಲ ದೊರೆಯುತ್ತದೆ?:
88 ವಿಧದ ಸಣ್ಣ ಉದ್ಯಮಗಳನ್ನು ಮಾಡಲು ಸಾಲ ದೊರೆಯುತ್ತದೆ ಅವುಗಳಲ್ಲಿ ಪ್ರಮುಖವಾದವುಗಳು ಕೆಳಗಿನಂತಿವೆ :
ನರ್ಸರಿ ತೆರೆಯಲು ,
ಮಸಾಲೆ ಮಾಡಲು,
ಬೆಡ್ ಶೀಟ್ ಮತ್ತು ಹೊದಿಕೆಗಳನ್ನು ತಯಾರಿಸಲು,
ಪಡಿತರ ಅಂಗಡಿ ತೆರೆಯಲು,
ಬಳೆಗಳನ್ನು ಮಾಡಲು, ಕಾಫಿ ಅಥವಾ ಚಹಾ ಮಾಡಲು, ಉಡುಗೊರೆ ಅಂಗಡಿಗಾಗಿ,
ಬ್ಯೂಟಿ ಪಾರ್ಲರ್ ತೆರೆಯಲು,
ಫೋಟೋ ಸ್ಟುಡಿಯೋ
ಗಿರವಿ ಅಂಗಡಿ,
ಪುಸ್ತಕ ಬೈಂಡಿಂಗ್,
ಪ್ಲಾಸ್ಟಿಕ್ ವಸ್ತುಗಳ ಅಂಗಡಿ,
ಐಸ್ ಕ್ರೀಮ್ ಅಂಗಡಿ ತೆರೆಯಲು
ಮಡಿಕೆ ಅಂಗಡಿ,
ಡೈರಿ ಅಥವಾ ಕೋಳಿ ಸಾಕಣೆ,
ಗೃಹೋಪಯೋಗಿ ವಸ್ತುಗಳ ಅಂಗಡಿಗೆ,
ಟೇಲರ್ ಅಂಗಡಿ ,
ಕಬ್ಬಿನ ವ್ಯಾಪಾರಿ,
ಹತ್ತಿ ದಾರವನ್ನು ತಯಾರಿಸಲು,
ಹೂಗಳು ಅಂಗಡಿಗೆ,
ಕೇಟರಿಂಗ್ ಬಿಸಿನೆಸ್ ಮಾಡೋದು,
ಸಾಬೂನು ತಯಾರಿಸುವ ವ್ಯಾಪಾರ,
ಆಹಾರ ಮತ್ತು ಎಣ್ಣೆ ಅಂಗಡಿ ವ್ಯಾಪಾರ,
ಚಹಾ ಟ್ಯಾಪ್ ತೆರೆಯಲು,
ಧೂಪದ್ರವ್ಯವನ್ನು ತಯಾರಿಸಲು,
ಕರಕುಶಲ ವ್ಯಾಪಾರ,
ತೆಂಗಿನಕಾಯಿ ವ್ಯಾಪಾರ,
ಪ್ರಯಾಣ ಸಂಸ್ಥೆ,
ಬೇಕರಿ ತೆರೆಯಲು,
ಸಿಹಿ ಅಂಗಡಿ,
ಪ್ರಯಾಣ ಸಂಸ್ಥೆ,
ನೇಯ್ಗೆ ರೇಷ್ಮೆ,
ಚಪ್ಪಲಿ ಮಾಡುವ ವ್ಯಾಪಾರಕ್ಕಾಗಿ,
STD ಬೂತ್ ತೆರೆಯಲು,
ಮೇಣದ ಬಣ್ಣವನ್ನು ಮಾಡಲು,
ಹಳೆಯ ಪೇಪರ್ ಮಾರ್ಟ್ ಸಂಸ್ಥೆಯನ್ನು ತೆರೆಯಲು,
ವೈದ್ಯಕೀಯ ಪ್ರಯೋಗಾಲಯಕ್ಕಾಗಿ,
ಸ್ಟೇಷನರಿ ಅಂಗಡಿ ತೆರೆಯಲು,
ಪಾಪಡ್ ವ್ಯಾಪಾರ,
ತರಕಾರಿ ಮತ್ತು ಹಣ್ಣಿನ ಅಂಗಡಿ ತೆರೆಯಲು,
ಕಂಪ್ಯೂಟರ್ ಕಲಿಕೆ ಕೇಂದ್ರ,
ಕ್ಯಾಂಟೀನ್ ಅಥವಾ ಧಾಬಾ ತೆರೆಯಲು,
ನ್ಯೂಸ್ ಪೇಪರ್,
ಮ್ಯಾಗಜೀನ್ ಅಂಗಡಿ ತೆರೆಯಲು,
ಪಾನ್ ಮತ್ತು ಸಿಗರೇಟ್,
ಕ್ಲಿನಿಕ್ ತೆರೆಯಲು,
ಹಾಲಿನ ಡೈರಿ ತೆರೆಯಲು,
ಟ್ಯೂಟೋರಿಯಲ್ ವ್ಯವಹಾರ,
ಮಟನ್ ಮತ್ತು ಚಿಕನ್ ಅಂಗಡಿ ತೆರೆಯಲು,
ಹಾಸಿಗೆಗಳ ವ್ಯಾಪಾರ,
ಶಕ್ತಿ ಆಹಾರ ವ್ಯಾಪಾರ,
ಡ್ರೈ ಕ್ಲೀನಿಂಗ್,
ಚಾಪೆ ನೇಯುವ ವ್ಯಾಪಾರ,
ಗ್ರಂಥಾಲಯವನ್ನು ತೆರೆಯಲು ಸಾಲವನ್ನು ನೀಡಲಾಗುತ್ತದೆ.
ಉದ್ಯೋಗಿನಿ ಯೋಜನೆಯಡಿಯಲ್ಲಿ ನೀಡಲಾದ ಬಡ್ಡಿ ದರ :
ಅಂಗವಿಕಲತೆ, ವಿಧವೆ, ಮತ್ತು ದಲಿತ ಮಹಿಳೆಯರಿಗೆ ಬಡ್ಡಿ ರಹಿತ ಸಾಲವನ್ನು ನೀಡಲಾಗುವುದು, ಅಂದರೆ ಸಾಲ(loan)ಕ್ಕೆ ಯಾವುದೇ ತರಹದ ಬಡ್ಡಿ ಇರುವುದಿಲ್ಲ. ಇನ್ನು ಇತರೆ ವರ್ಗದ ಮಹಿಳೆಯರಿಗೆ 10 – 12% ಬಡ್ಡಿ ದರದಲ್ಲಿ ಸಾಲವನ್ನು ನೀಡಲಾಗುವುದು
ಉದ್ಯೋಗಿನಿ ಯೋಜನೆಯ ಅಡಿಯಲ್ಲಿ ಸಾಲಕ್ಕೆ ಅಗತ್ಯವಾದ ದಾಖಲೆಗಳು :
ಭರ್ತಿ ಮಾಡಿದ ಅರ್ಜಿಯೊಂದಿಗೆ 2 passport size ಫೋಟೋ
ಆಧಾರ್ ಕಾರ್ಡ್(Aadhar Card)
ಜನ್ಮ ಪ್ರಮಾಣ ಪತ್ರ (Birth certificate)
BPL ರೇಷನ್ ಕಾರ್ಡ್ ಪ್ರತಿ
ಆದಾಯ ಪ್ರಮಾಣ ಪತ್ರ
ಜಾತಿ ದೃಢೀಕರಣ ಪ್ರಮಾಣಪತ್ರ
ಬ್ಯಾಂಕ್ ಪಾಸ್ ಬುಕ್
ಅರ್ಜಿಯನ್ನು ಸಲ್ಲಿಸುವ ವಿಧಾನ :
ಹಂತ 1: ಮೊದಲಿಗೆ ಅಭ್ಯರ್ಥಿಗಳು ಯಾವ ಬ್ಯಾಂಕಿನಲ್ಲಿ ಸಾಲವನ್ನು ಪಡೆಯಬೇಕು ಆ ಬ್ಯಾಂಕಿನ ಅಧಿಕೃತ ಜಾಲತಾಣಕ್ಕೆ ತೆರಳಬೇಕು.
ಹಂತ 2: ನಂತರ ಅರ್ಜಿಯ ಪ್ರತಿಯನ್ನು ಡೌನ್ ಲೋಡ್ ಮಾಡಿಕೊಳ್ಳಬೇಕು.
ಹಂತ 3: ಮುಂದುವರೆದು, ಅರ್ಜಿಯ ಪ್ರತಿಯನ್ನು ಸಂಪೂರ್ಣವಾಗಿ ಭರ್ತಿ ಮಾಡಿ.
ಹಂತ 4: ಅರ್ಜಿಯ ಪ್ರತಿಯೊಂದಿಗೆ ಹೇಳಲಾದ ದಾಖಲೆಗಳನ್ನು ಲಗತ್ತಿಸಿ.
ಹಂತ 5: ಭರ್ತಿ ಮಾಡಿದ ಅರ್ಜಿ ಹಾಗೂ ದಾಖಲೆಗಳನ್ನು ಬ್ಯಾಂಕಿಗೆ ಸಲ್ಲಿಸಿ.
ಹಂತ 6: ಅರ್ಜಿ ಸಲ್ಲಿಸಿದ ನಂತರ, ಸಾಲದ ಅನುಮೋದನೆಯ ಕುರಿತು ವಿಚಾರಿಸಲು ನೀವು ನಿಯಮಿತವಾಗಿ ಬ್ಯಾಂಕ್‌ಗೆ ಭೇಟಿ ನೀಡಬೇಕು.
ಈ ಯೋಜನೆಯ ಸೌಲಭ್ಯವನ್ನು ಪಡೆಯಲು ಮಹಿಳೆಯರು ತಮ್ಮ ಹತ್ತಿರ ಪ್ರದೇಶದ ಬ್ಯಾಂಕುಗಳನ್ನು ಸಂಪರ್ಕಿಸಿಬೇಕು. ಹಾಗೆಯೇ Bajaj ಫೈನಾನ್ಸ್ ತರಹದ ಹಣಕಾಸು ಸಂಸ್ಥೆಗಳಲ್ಲಿ ಕೂಡ ಈ ಯೋಜನೆಯ ಸೌಲಭ್ಯವನ್ನು ಪಡೆಯಬಹುದು. ಇಂತಹ ಮುಖ್ಯವಾದ ಮಾಹಿತಿಯನ್ನು ಹೊಂದಿರುವ ಈ ಲೇಖನವನ್ನು ಕೂಡಲೇ ನಿಮ್ಮ ಎಲ್ಲಾ ಸ್ನೇಹಿತ ಮಿತ್ರರಿಗೆ, ಬಂಧುಗಳಿಗೆ ಹಾಗೂ ಮಹಿಳೆಯರಿಗೂ ಶೇರ್ ಮಾಡಿ, ಧನ್ಯವಾದಗಳು.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.